The Song of Sparrows: ದಿ ಸಾಂಗ್‌ ಆಫ್ ಸ್ಪ್ಯಾರೋಸ್‌

Team Udayavani, Jul 27, 2024, 5:15 PM IST

14-uv-fusion

ಇದು ಮತ್ತೂಂದು ಪರ್ಷಿಯನ್‌ ಭಾಷೆಯ ಚಲನಚಿತ್ರ. ಇರಾನ್‌ ದೇಶದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಮಜಿದ್‌ ಮಜಿದಿ ನಿರ್ದೇಶಿಸಿರುವ ಚಲನಚಿತ್ರ. ಮಜಿದ್‌ ಮಜಿದಿ ಸೂಕ್ಷ್ಮ ಗ್ರಹಿಕೆಯ ನಿರ್ದೇಶಕ. ಮುಖ್ಯವಾಗಿ ಮಾನವೀಯ ಭಾವನೆಗಳನ್ನು ಸಾಂದ್ರವಾಗಿ ಸಕ್ಕರೆ ಅಚ್ಚಿನಂತೆ ಕಟ್ಟಿಕೊಡುವ ಸಾಮರ್ಥ್ಯ ಮಜಿದ್‌ ಮಜಿದಿ ಅವರದ್ದು. ಹಾಗಾಗಿ ಇವರ ಸಿನಿಮಾಗಳ ಮೂಲಕವೇ ಹೆಚ್ಚಿನ ಸಿನಿಮಾ ಪ್ರೇಮಿಗಳು ವಿಶ್ವ ಸಿನಿಮಾ ಲೋಕವನ್ನು ಪ್ರವೇಶಿಸುತ್ತಾರೆ. ಇವರ ಸಿನಿಮಾಗಳ ಒಂದೇ ಸಿದ್ಧಾಂತ ಮತ್ತು ತತ್ತ್ವ ಬದುಕು ಮತ್ತು ಮಾನವತೆ. ಯಾವುದೇ ಸಿನಿಮಾದಲ್ಲೂ ಬದುಕೂ ಸೋಲುವುದಿಲ್ಲ, ಮಾನವತೆಯೂ ಸಾಯುವುದಿಲ್ಲ. ಸಾಮಾನ್ಯವಾಗಿ ಭರವಸೆಯ ಟಿಪ್ಪಣಿಯೊಂದಿಗೆ ಬಹುತೇಕ ಸಿನಿಮಾ ಮುಗಿಯುವುದು ವಿಶೇಷ.

ದಿ ಸಾಂಗ್‌ ಆಫ್ ಸ್ಪ್ಯಾರೋಸ್‌ 2008ರಲ್ಲಿ ರೂಪಿತವಾದುದು. ರೇಜಾ ನಾಜಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದರು. 96 ನಿಮಿಷಗಳ ಚಲನಚಿತ್ರ. ಹಲವಾರು ಪುರಸ್ಕಾರಗಳನ್ನು ಪಡೆದಿದೆ.

ಕಥಾನಾಯಕ ಕರೀಮ್‌ ಇರಾನಿನ ರಾಜಧಾನಿ ಟೆಹರಾನ್‌ನ ಒಂದು ಗ್ರಾಮದಲ್ಲಿ ಆಸ್ಟ್ರಿಚ್‌ ಪಕ್ಷಿಗಳನ್ನು ಸಾಕಿ ಜೀವನ ನಿರ್ವಹಿಸುತ್ತಿರುತ್ತಾನೆ. ಮೂರು ಮಕ್ಕಳು. ಬದುಕಿನ ನಾನಾ ಸಂದರ್ಭಗಳಿಗೆ ಸಿಕ್ಕು ಗಳಿಕೆ ಮತ್ತು ಪ್ರಾಮಾಣಿಕತೆಯ ಮಧ್ಯೆ ದ್ವಂದ್ವಕ್ಕೆ ಸಿಲುಕಿ ಕೊನೆಗೆ ಬದುಕಿನಲ್ಲಿ ಖುಷಿ, ಸಂತೋಷ ತಂದು ಕೊಡುವುದು ಪ್ರಾಮಾಣಿಕತೆಯೇ ಎನ್ನುವುದನ್ನು ಮನಗಂಡು ತನ್ನ ಹಳೆಯ ಬದುಕಿಗೇ ಮರಳುತ್ತಾನೆ. ಇಲ್ಲಿ ನಿರ್ದೇಶಕ ಕರೀಮನ ಹಳೆಯ ಮತ್ತು ಹೊಸ (ಹೊಂದಲು ಬಯಸಿದ) ಜೀವನವನ್ನು ಹಳ್ಳಿಯ ಮತ್ತು ನಗರದ ಬದುಕಿನ ಉಪಮೆಗಳಾಗಿ ಬಳಸಿದ್ದಾರೆ.

ಗಳಿಕೆಯ ಹಿಂದೆ ಓಡುವಾಗ ನಾವು ಏನನ್ನು ಕಳೆದುಕೊಳ್ಳುತ್ತೇವೆ ಮತ್ತು ಕಳೆದುಕೊಳ್ಳಬಾರದು ಎಂಬುದರ ಅರಿವು ಇರಬೇಕು. ಇಲ್ಲವಾದರೆ ಮೌಲ್ಯಗಳ ರಹಿತ ಜೀವನವಾಗಿ ಬಿಡುವ ಅಪಾಯವನ್ನೂ ಚಿತ್ರ ಹೇಳುತ್ತದೆ. ಅದರೊಟ್ಟಿಗೇ ಬದುಕಿಗೆ ಹಣಕ್ಕಿಂತ ನೆಮ್ಮದಿ, ಸಂತೋಷವೇ ಮುಖ್ಯ. ಅದು ಬದುಕನ್ನು ಉಲ್ಲಾಸಿತವಾಗಿಡಬಲ್ಲದು.

ಮಜಿದ್‌ ಮಜಿದಿ ಖುಷಿ ಕೊಡುವುದೂ ಸಣ್ಣಸಂಗತಿಗಳನ್ನು ದೊಡ್ಡದಾಗಿ ತೋರಿಸುವುದು.

ಇದೂ ಸಹ ತಪ್ಪದೇ ನೋಡುವ ಚಲನಚಿತ್ರ.

– ಅಪ್ರಮೇಯ

ಟಾಪ್ ನ್ಯೂಸ್

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್‌?

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚುರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ

Court-1

Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ

1-horoscope

Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.