College Corridor: ನೆನಪಿನಂಗಳದಲ್ಲಿ ಕಾಲೇಜು ಕಾರಿಡಾರ್‌


Team Udayavani, Nov 3, 2024, 2:30 PM IST

16

ಕಾಲೇಜು ಎಂಬುದು ಎಲ್ಲರ ಬದುಕಿನಲ್ಲಿ ಒಂದು ನೆನಪುಗಳ ಪುಟವಿದ್ದ ಹಾಗೆ. ಅದು ತಿರುವಿ ಹೋದರೂ, ಕಳೆದು ಹೋದರೂ ಬದುಕಿಗೆ ಹೊತ್ತು ಕೊಟ್ಟ ನೆನಪುಗಳು ಎಂದಿಗೂ ಮರೆಯಾಗುವುದಿಲ್ಲ. ಸ್ನೇಹಿತರನ್ನು ಭೇಟಿಯಾದಾಗ ಸಿಗುವ ಖುಷಿ, ಕಾಲೇಜಿನ ಕಾರ್ಯಕ್ರಮಗಳಲ್ಲಿದ್ದ ಉತ್ಸಾಹ, ಕುತೂಹಲ, ಒಂದೇ ಎರಡೇ ಕಾಲೇಜಿನ ಅನುಭವಗಳು. ಮೌನವಾಗಿ ಕುಳಿತ ಕಾಲೇಜಿನ ಗೇಟಿನಿಂದ ಹಿಡಿದು ಗಿಜಿ ಗಿಜಿ ಶಬ್ದ ಗುನುಗುವ ತರಗತಿಯ ಗೋಡೆಗಳ ವರೆಗೂ ಎಲ್ಲವೂ ಯಾರದೋ ಬದುಕಿನ ಸುಂದರ ಕ್ಷಣಗಳು.

ಹರೆಯದ ಹೊಸ್ತಿಲಿನಲ್ಲಿ ಕಾಲೇಜಿನಲ್ಲಿ ಹೊಸ ಕನಸುಗಳ ಬೀಜ ಬಿತ್ತುವಾಗ ಅವುಗಳಿಗೆ ಮೂಕಸಾಕ್ಷಿಯಾಗುವುದೇ ಈ ಕಾರಿಡಾರ್‌ಗಳು. ಸದ್ದಿಲ್ಲದೇ ಹುದುಗಿ ಹೋದ ಸಾವಿರ ಲಕ್ಷ ಕಥೆಗಳನ್ನು ಇದು ಕೇಳುತ್ತದೆ. ತನ್ನಲ್ಲೇ ಅಡಗಿಸಿಟ್ಟುಕೊಳ್ಳುತ್ತದೆ. ಯಾರದೋ ಮೌನಕ್ಕೆ, ಮತ್ಯಾರಧ್ದೋ ಸಂಭ್ರಮಕ್ಕೆ, ಮಗದೊಬ್ಬರ ಪ್ರೇಮಕ್ಕೆ ಇದು ಜತೆಯಾಗುತ್ತದೆ. ತನ್ನಲ್ಲೇ ನವಿರಾದ ಲಕ್ಷ ಲಕ್ಷ ಭಾವಗಳನ್ನು ಬಚ್ಚಿಟ್ಟುಕೊಳ್ಳುತ್ತಾ, ಹಳಬರನ್ನು ಬೀಳ್ಕೊಡುತ್ತಾ ಹೊಸಬರ ಸ್ವಾಗತಕ್ಕೆ ನಿಲ್ಲುತ್ತದೆ. ನಾವು ನಡೆದ ಪ್ರತೀ ಹೆಜ್ಜೆ ಗುರುತಿಗೂ ಲೆಕ್ಕ ತಪ್ಪದಂತೆ ಸುಂದರ ಕ್ಷಣಗಳನ್ನು ಕಟ್ಟಿ ಕೊಡುತ್ತಾ ಹೋಗುತ್ತದೆ.

ಸೂಕ್ಷ್ಮವಾಗಿ ಕಾಲೇಜಿನ ಕಾರಿಡಾರ್‌ ಗಮನಿಸಿದರೂ ಸಾಕು ಅಲ್ಲಿ ಲಕ್ಷ ಲಕ್ಷ ಭಾವಗಳು, ಸಾವಿರಾರು ಕಥೆಗಳು, ನೂರಾರು ಸನ್ನೆಗಳು, ಕನಿಷ್ಠ ಪಕ್ಷ ಹತ್ತಾದರೂ ಶತ್ರು ನೋಟಗಳ ಬೆಂಕಿ ಉಂಡೆಗಳು ಕಾಣಸಿಗುತ್ತದೆ. ಸ್ನೇಹಿತರ ಗುಂಪಿನಲ್ಲಾಗುವ ಮನಸ್ತಾಪಗಳಿಗೆ ಇದೇ ಮೂಕಪ್ರೇಕ್ಷಕ. ಅಪರಿಚಿತರಲ್ಲಿ ಪರಿಚಯದ ನಗು ಸೂಸಲು ಇದೇ ವೇದಿಕೆ, ಹರಟೆ ಹೊಡೆಯಲು ವಿದ್ಯಾರ್ಥಿಗಳಿಗೆ ಇದೇ ಕಟ್ಟೆ ಪಂಚಾಯ್ತಿ, ಅಷ್ಟೇ ಏಕೆ ಒಮ್ಮೆ ನೆನಪು ಮಾಡಿಕೊಳ್ಳಿ ಅದೆಷ್ಟು ಬಾರಿ ತರಗತಿಯನ್ನು ಮುಗಿಸಿ ಇಲ್ಲಿ ನಿಟ್ಟುಸಿರು ಚೆಲ್ಲಿಲ್ಲ? ಅದೆಷ್ಟು ಬಾರಿ ಶಿಕ್ಷಕರ ಪಾಠವನ್ನು ಇಲ್ಲಿ ವಿಮರ್ಶಿಸಿಲ್ಲ? ಪರೀಕ್ಷೆಯ ದಿನ ಪಾಠಗಳನ್ನು ಸ್ನೇಹಿತರಿಗೆ ಹೇಳಿಕೊಟ್ಟಿಲ್ಲ? ಪ್ರಿನ್ಸಿಪಾಲರ ಭಯವಿದ್ದರೂ ಕದ್ದು ಮುಚ್ಚಿ ಇದೇ ಜಾಗದಲ್ಲಿ ಅದೆಷ್ಟು ಬಾರಿ ಮೊಬೈಲ್‌ ಬಳಸಿಲ್ಲ?

ಆ ಸರ್‌ ಅಂತೂ ಕ್ಲಾಸ್‌ ಬಿಡೋದೇ ಇಲ್ಲ ಕಣೇ, ಆ ಮ್ಯಾಮ್‌ ಯಾವಾಗ್ಲೂ ಬೈತಾನೇ ಇರ್ತಾರೆ, ಮಗಾ ಇವತ್ತು ಒಂದಿನ ಕ್ಲಾಸ್‌ ಬಂಕ್‌ ಮಾಡೋಣ, ನಿನ್ನೆ ಮ್ಯಾಚ್‌ ನೋಡಿದ್ಯಾ?, ನಂಗೊತ್ತಿತ್ತು ಹೀಗೆ ಆಗತ್ತೆ ಅಂತ… ಹೀಗೆ ಹತ್ತು ಹಲವು ವಾಕ್ಯಗಳ ಪ್ರಯೋಗಗಳನ್ನು ಒಂದೇ ಸೂರಿನಡಿಯಲ್ಲಿ ಕೇಳ ಸಿಗುವುದೆಂದರೆ ಅದು ಕಾರಿಡಾರ್‌ನಲ್ಲಿ ಮಾತ್ರ. ಇಲ್ಲಿ ಹುಡುಗಿಯರ ಹರಟೆ, ಹುಡುಗರ ಚಿತ್ರ ವಿಚಿತ್ರ ತುಂಟಾಟ ಎಲ್ಲವೂ ನಡೆಯುತ್ತವೆ. ಎಷ್ಟೋ ಬಾರಿ ತರಗತಿಯನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಶಿಕ್ಷಕರು ಕೂಡ ಕಾರಿಡಾರ್‌ನಲ್ಲಿ ನಡೆಯುವ ಗಲಾಟೆಗಳಿಗೆ, ಅವಾಂತರಗಳಿಗೆ ತಲೆ ಮೇಲೆ ಕೈ ಹೊತ್ತು ಕುಳಿತುಬಿಡುತ್ತಾರೆ. ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತ ಅಲ್ಪ ಖುಷಿ ಕಾಣುತ್ತಾರೆ, ಆದರೆ ಏನೂ ಬದಲಾಗುವುದಿಲ್ಲ. ಕಾರಿಡಾರ್‌ನ ಶಬ್ದ ಎಂದಿಗೂ ಶಾಂತವಾಗುವುದಿಲ್ಲ.

ನಮ್ಮಲ್ಲಿ ಹೊಸ ಬಂಧಗಳನ್ನು ಬೆಸೆಯುವುದೇ ಈ ಕಾರಿಡಾರ್‌ಗಳು. ಹಾಗೇ ನಡೆದು ಹೋಗುವಾಗ ಎದುರಿಗೆ ಬರುವ ಖಾಯಂ ಮುಖ ನೀಡುವ ಮುಗುಳುನಗೆ ಹೊಸ ಬಾಂಧವ್ಯಕ್ಕೆ ಬುನಾದಿಯಾಗುತ್ತದೆ. ರಕ್ತ ಸಂಬಂಧವೇ ಇಲ್ಲದ ಯಾರೋ ಸಹೋದರನಾಗುತ್ತಾನೆ, ಸಹೋದರಿಯಾಗುತ್ತಾಳೆ, ಬೆಂಚಿನ ಮೇಲೆ ಒಟ್ಟಿಗೆ ಕೂರದವರು ಇಲ್ಲಿ ಸ್ನೇಹಿತರಾಗುತ್ತಾರೆ. ಕದ್ದು ಕೇಳಿದ ಕಿವಿಗಳು ಗುಟ್ಟು ಬಿಟ್ಟುಕೊಡದ ಆಪ್ತರಾಗುತ್ತಾರೆ. ಸದ್ದೇ ಇಲ್ಲದ ಮುಗ್ಧ ಹೃದಯಗಳಲ್ಲಿ ಜಿನುಗಿದ ಸಾಕಷ್ಟು ಪಿಸುದನಿಗಳು ಕಾರಿಡಾರ್‌ನ ಅಂಚಿನಲ್ಲಿ ಮರೆಯಾಗಿ ಹೋಗಿ ಬಿಡುತ್ತದೆ. ಪರೀಕ್ಷೆ ನಡೆಯುವಾಗ ಕಾರಿಡಾರ್‌ ಶಾಂತವಾಗಿದ್ದರೂ ಮುಗಿದ ಮರುಗಳಿಗೆಯಲ್ಲೇ ಮತ್ತೆ ಸದ್ದು ಮಾಡುತ್ತದೆ. ನಮಗೆ ತಿಳಿದೋ ತಿಳಿಯದೆಯೋ ಕಾರಿಡಾರ್‌ನ ಮೌನವನ್ನು ನಾವು ಸಹಿಸುವುದಿಲ್ಲ. ಒಂದು ದಿನ ಕಾರಿಡಾರ್‌ನಲ್ಲಿ ಜನರ ಸಂಖ್ಯೆ ಕಡಿಮೆ ಇದ್ದರೂ ಸಾಕು ಅದೇನೋ ಒಂದು ಖಾಲಿತನ.

ವಾಸ್ತವಕ್ಕೆ ಕಾರಿಡಾರ್‌ನಲ್ಲಿ ಏನೂ ಇಲ್ಲ. ಆದರೆ ಎಲ್ಲೂ ಸಿಗದ ಒಂದು ಸುಂದರ ನೆಮ್ಮದಿ ಅಲ್ಲೇ ಸಿಗುವುದು. ಅಲ್ಲೊಂದು ಜೀವಂತಿಕೆಯ ಸೆಲೆಯಿದೆ. ಲೆಕ್ಕಾಚಾರವಿಲ್ಲದೇ ಆಡಿದ ಮಾತುಗಳ ನೆನಪುಗಳಿವೆ. ಮುಖವಾಡವೇ ಇಲ್ಲದೇ ಬದುಕಿದ ಬದುಕಿನ ಒಂದಿಷ್ಟು ಗಳಿಗೆಗಳಿವೆ. ಕಾಲೇಜಿನ ಅಂತಿಮ ವರ್ಷ ಮುಗಿದ ತತ್‌ಕ್ಷಣ ಕಾರಿಡಾರ್‌ ಖಾಲಿ ಅನಿಸಲು ಶುರುವಾಗುತ್ತದೆ. ಅಲ್ಲಿ ಮೊದಲಿದ್ದ ಗಿಜಿ ಗಿಜಿ ಇರುವುದಿಲ್ಲ. ಇದ್ದರೂ ಅದರಲ್ಲಿ ನಾವು ಇರುವುದಿಲ್ಲ. ಅಲ್ಲಿ ನಿಂತು ಕಿರುಚಾಡಿದ ಗಳಿಗೆಗಳೆಲ್ಲಾ ಕೇವಲ ಚಿತ್ರಪಟಗಳಾಗಿರುತ್ತದೆ. ಅಲ್ಲಿ ಜಗಳವಾಡಿದ ಶತ್ರುವೂ ಇರುವುದಿಲ್ಲ, ಕೈ ಹಿಡಿದು ನಡೆಸಿದ ಮಿತ್ರನೂ ಇರುವುದಿಲ್ಲ. ಬದುಕ ರಂಗದಲ್ಲಿ ಮುದ್ದಾದ ನೆನಪುಗಳನ್ನು ಕೊಟ್ಟ ಕಾರಿಡಾರ್‌ ಮಾತ್ರ ಮೌನವಾಗಿ ನಿಂತಿರುತ್ತದೆ.

ಶಿಲ್ಪಾ ಪೂಜಾರಿ

ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ

ಟಾಪ್ ನ್ಯೂಸ್

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

County Championship: Umpires objected to Shakib Hasan’s bowling style

County Championship: ಶಕಿಬ್‌ ಹಸನ್‌ ಬೌಲಿಂಗ್‌ ಶೈಲಿ ಬಗ್ಗೆ ಅಂಪೈರ್‌ ಗಳ ಆಕ್ಷೇಪ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

17-

Social Media: ಸಾಮಾಜಿಕ ಜಾಲತಾಣದ ಮೂಲಕ ಗ್ರಾಮದ ಅಭಿವೃದ್ಧಿ ಸಾಧ್ಯವೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

Session:ನ.25- ಡಿ.20- ಸಂಸತ್‌ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?

13

Malpe ಫಿಶರೀಸ್‌ ಕಾಲೇಜು: ದುರ್ವಾಸನೆಯಲ್ಲೇ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.