UV Fusion: ಕಣ್ಮರೆಯಾಗುತ್ತಿರುವ ಪರಂಪರಾನುಗತ ವೃತ್ತಿಗಳು
Team Udayavani, Oct 22, 2024, 4:49 PM IST
ಪ್ರತಿಯೊಂದು ಸುಮುದಾಯದವರೂ ಬಹಳ ಹಿಂದಿನಿಂದಲೂ ಒಂದೊಂದು ವೃತ್ತಿಯನ್ನು ಅವಲಂಬಿಸಿ ಕೊಂಡು ಬಂದು ಅದರಲ್ಲೇ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ ಕೆಲವೊಂದು ವೃತ್ತಿ ಆ ಸಮುದಾಯಕ್ಕೆ ಮೀಸಲು ಎನ್ನುವ ಹಾಗೆ. ಹಿರಿಯರು ಮಾಡಿಕೊಂಡು ಬಂದ ವೃತ್ತಿಯನ್ನೇ ಕೆಲವರು ಇನ್ನು ಮುಂದುವರಿಸುತ್ತಿದ್ದಾರೆ. ಇನ್ನು ಕೆಲವರು ಬೇರೆ ಬೇರೆ ವ್ಯಕ್ತಿಯನ್ನು ಹಿಡಿದಿದ್ದಾರೆ. ಇದರಲ್ಲಿ ಹೆಚ್ಚಿನವರು ಗುಡಿ ಕೈಗಾರಿಕೆಗಳನ್ನೇ ಅವಲಂಬಿಸುದನ್ನು ಕಾಣಬಹುದು. ಅಕ್ಕಸಾಲಿಗ ಬಡಗಿ, ಚಮ್ಮರ, ಕೌÒರಿಕ ಇತ್ಯಾದಿ ವೃತ್ತಿಗಳು.
ಗುಡಿ ಕೈಗಾರಿಕೆಗಳು ನಮ್ಮ ನಾಗರಿಕತೆಯಷ್ಟೇ ಪುರಾತನವಾದದ್ದು. ಪ್ರಾರಂಭದಲ್ಲಿ ಬೇಟೆಗಾಗಿ ಆಯುಧಗಳ ತಯಾರಿಕೆಗೆ ಪ್ರಾರಂಭವಾದ ಈ ಕಲೆ ಮುಂದೆ ವೃತ್ತಿಯಾಯಿತು. ಮೊದಲೆಲ್ಲಾ ಅಲ್ಲಲ್ಲಿ ಹಿಟ್ಟಿನ ಗಿರಣಿಗಳು ಕಾಣುತ್ತಿದ್ದವು. ಅಪ್ಪ ಅದನ್ನು ನೆಡೆಸುತ್ತಿದ್ದರೆ. ಅವರ ಕಾಲದ ನಂತರ ಮಗ ಅದನ್ನೆ ಮುಂದುವರೆಸಿಕೊಂಡು ಹೋಗುತ್ತಿದ್ದ. ಆದರೆ ಈಗ ಗಿರಣಿಗಳು ಕಣ್ಮರೆಯಾಗುತ್ತಿದೆ. ತಮಗೆ ಬೇಕಾದ ವಸ್ತುಗಳು ಪ್ಯಾಕೆಟ್‌ನಲ್ಲಿ ಸಿದ್ಧವಾಗಿ ಬರುವಾಗ ಈ ಹಿಟ್ಟಿನ ಗಿರಣಿಗಳ ಆವಶ್ಯಕತೆ ಏಕೆ ಅಲ್ಲವೇ?
ಮಣ್ಣಿನ ದೀಪಗಳು ಹಿಂದೆ ಬಹಳ ಪ್ರಸಿದ್ಧಿ ಪಡೆದಿದ್ದವು. ಆದರೆ ಈಗ ಪ್ಲಾಸ್ಟಿಕ್‌ನಿಂದ, ಗಾಜಿನಿಂದ ಮಾಡುವ ದೀಪ ಬಂದ ಮೇಲೆ ಆ ಕೆಲಸವು ಕಡಿಮೆಯಾಗುತ್ತಿದೆ. ಹಿಂದಿನ ದೀಪಗಳು ಮಣ್ಣಿನಿಂದ ಮಾಡುತ್ತಿದ್ದರಿಂದ ಅವು ಪರಿಸರಕ್ಕೂ ಸ್ನೇಹಿಯಾಗಿದ್ದವು. ಅದನ್ನು ಬಳಸುತ್ತಿದ್ದವರು ಆರೋಗ್ಯವಾಗಿರುತ್ತಿದ್ದರು. ನಮ್ಮ ಅಜ್ಜನ ಕಾಲದಲ್ಲಿ ತೆಂಗಿನಕಾಯಿಗಳನ್ನು ಗಿರಣಿಗೆ ಕೊಟ್ಟು ತೆಂಗಿನ ಎಣ್ಣೆ ಮಾಡಿಸುತ್ತಿದ್ದರು. ಅದು ಬಹಳ ಪರಿಮಳ ಬಿರುತ್ತಿತ್ತು ಮತ್ತು ಆರೋಗ್ಯಕ್ಕೂ ಉತ್ತಮವಾಗಿತ್ತು. ಆದರೆ ಈಗ ಬೇರೆ ಬೇರೆ ವಿಧಾನದ ಮೂಲಕ ಮಾಡುತ್ತಿದ್ದಾರೆ. ಅದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ.
ಇನ್ನು ಚನ್ನಪಟ್ಟಣದ, ತಂಜಾವೂರಿನ ಗೊಂಬೆಗಳ ಬಗ್ಗೆ ನಮಗೆಲ್ಲ ತಿಳಿದಿದೆ. ಆದರೆ ಈಗ ಚೀನದ ಅನೇಕ ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಆಟಿಕೆಗಳು ಬಂದು ಮನಸ್ಸು ಬೇಗ ಅದಕ್ಕೆ ವಾಲುವಂತೆ ಮಾಡಿದೆ. ತೆಂಗಿನ ಪೊರಕೆ, ನೆಲಹಾಸು, ಹಗ್ಗ ತಯಾರಿಕೆ. ಗಂಧದ ಕಡ್ಡಿ, ಮೇಣದ ಬತ್ತಿ, ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು ಕಾಣಿತ್ತಿದ್ದವು. ಈಗ ಕಾಂಕ್ರೀಟ್ ರಸ್ತೆ, ಸಿಮೆಂಟ್‌ಗಳ ರಾಶಿ ನಡುವೆ ಕಾಣದಂತಾಗಿದೆ ಗುಡಿ ಕೈಗಾರಿಕೆಗಳು.
ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಂತೆ ಗುಡಿ ಕೈಗಾರಿಕೆಗಳು ಪತನವಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗ ಚrಠಿಜಿfಜಿcಜಿಚl ಜಿnಠಿಛಿllಜಿಜಛಿncಛಿ ಬಂದಿದೆ. ಮನುಷ್ಯ ಮಾಡುವ ಕೈಗಾರಿಕೆ ಕೆಲಸವನ್ನೆಲ್ಲ ಮಿಷನ್ ಮಾಡುತ್ತಿದೆ. ಇಂದಿನ ಯುವ ಪೀಳಿಗೆಗೆ ಬಹುತೇಕ ಪೂರ್ವಜರು ವೃತ್ತಿ ಎಂದು ಮಾಡಿಕೊಂಡು ಬಂದ ಕುಲಕಸುಬುಗಳನ್ನು, ಗುಡಿ ಕೈಗಾರಿಕೆಗಳ ಮೇಲಿನ ನಿರಾಸಕ್ತಿಯೂ ಇವುಗಳ ಕಣ್ಮರೆಗೆ ಕಾರಣವೆನ್ನಬಹುದು. ಹೀಗಾಗಿ ಪೂರ್ವಜರು ಮಡಿದ ಮೇಲೆ ಕೆಲವು ಕಸುಬುಗಳು ಅಲ್ಲೇ ಅವರೊಂದಿಗೆ ಕೊನೆಯಾಗುತ್ತಿದೆ. ನಮ್ಮ ಸಮಾಜವೂ ಕೂಡ ಬಹುತೇಕ ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಿದೆ. ಇದರ ನಡುವೆ ಇದನ್ನು ವೃತ್ತಿ ಎಂದು ಬದುಕುತ್ತಿರುವ ಕೆಲವರು ಕೈಗಾರಿಕೆಗಳು ಕಾಣೆಯಾಗುತ್ತಿರುದರಿಂದ ಕಂಗಾಲಾಗಿದ್ದಾರೆ.
ಇತ್ತೀಚಿನ ದಿನದಲ್ಲಿ ಕೆಲವು ವೃತ್ತಿ ಸಂಸ್ಥೆಗಳಲ್ಲಿ ಕುಶಲ ಕಲೆಗಳು, ಗುಡಿ ಕೈಗಾರಿಕೆಗಳ ಬಗ್ಗೆ ತರಬೇತಿ ನೀಡುವ ಕಾರ್ಯಕ್ಕೆ ಮುಂದಾಗಿದೆ. ಸರಕಾರವು ಗ್ರಾಮೀಣ ಗುಡಿ ಕೈಗಾರಿಕೆಗಳ, ಕಸುತಿ ಕಲೆಗಳ ಉತ್ತೇಜನಕ್ಕಾಗಿ ವಿವಿಧ ಸೌಲಭ್ಯ ಯೋಜನೆಗಳನ್ನು ರೂಪಿಸಿದಾಗ ನಮ್ಮ ಹಿರಿಯರು ಪ್ರಾಚೀನ ಪಾರಂಪರಿಕವಾಗಿ ಮಾಡಿಕೊಂಡು ಬಂದ ವೃತ್ತಿಯನ್ನು, ಕಲೆಯನ್ನು, ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಸಾಧ್ಯ.
- ಸುಜಯ ಶೆಟ್ಟಿ , ಹಳ್ನಾಡು
ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.