UV Fusion: ಮಾತಲ್ಲಿರಲಿ ಗಮ್ಮತ್ತು; ಅಳತೆ ಮೀರಿದರೆ ಆಪತ್ತು…


Team Udayavani, Nov 19, 2024, 1:03 PM IST

7-uv-fusion

ನಾವಾಡುವ ಮಾತುಗಳಿಂದ ಸಂಬಂಧಗಳನ್ನು ಬೆಳೆಸಲೂಬಹುದು ಕಳೆದುಕೊಳ್ಳಲೂಬಹುದು. ಪೂರ್ವಾಪರ ಯೋಚನೆ ಮಾಡದೆ ಆಡುವ ಮಾತುಗಳು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು. ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಏರು ಧ್ವನಿಯಲ್ಲಿ ಮಾತನಾಡಿ ಹಲವಾರು ಅವಾಂತರಗಳಿಗೆ ಈಡಾಗುವವರೆ ಹೆಚ್ಚು. ಕೆಲವರು ಬೆಣ್ಣೆಯಲ್ಲಿ ಕೂದಲನ್ನು ತೆಗೆಯುವಂತೆ ನಯನಾಜೂಕಿನಿಂದ ಮಾತನಾಡಿ ಎಂತಹ ಸಂದರ್ಭಗಳನ್ನೇ ಆಗಲಿ ತಮ್ಮಿಷ್ಟದಂತೆ ತಿರುಗಿಸಿ ಕೊಳ್ಳಬಲ್ಲರು.

ಪದಗಳನ್ನು ಬುದ್ಧಿವಂತಿಕೆಯಿಂದ ಬಳಸುವುದು ಪರಿಣಾಮಕಾರಿ ಸಂವಹನ ಮತ್ತು ಸಕಾರಾತ್ಮಕ ಸಂಬಂಧಗಳನ್ನು ಬೆಳೆಸಲು ನಿರ್ಣಾಯಕವಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ಮಾತುಗಳನ್ನಾಡುವುದು ಸಹ ಒಂದು ಕಲೆ. ಸಂಕಷ್ಟದ ಸಮಯದಲ್ಲೂ ನಮ್ಮ ಜಾಣ್ಮೆಯ ಮಾತುಗಳು ನಮ್ಮನ್ನು ಕಾಪಾಡಬಲ್ಲವು. ಕೋಪದಲ್ಲಿದ್ದಾಗ ನಮ್ಮ ಮನಸ್ಸು ಸರಿ ಹಾಗೂ ತಪ್ಪುಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ.

ಸರಿಯಾದ ಮಾತುಗಳು ನಮ್ಮ ವಿರುದ್ಧವಾಗಿಯೇ ಇವೆ ಎಂದು ಭಾಸವಾಗುತ್ತದೆ. ಅತಿಯಾದ ಮೊಬೈಲ್‌ ಗೀಳಿಗೆ ಬಿದ್ದ ತನ್ನ ಮಗನಿಗೆ ಜೋರು ಧ್ವನಿಯಲ್ಲಿ ಮೊಬೈಲ್‌ ಬಳಸಬೇಡವೆಂದು ಹೇಳಿದ್ದಕ್ಕೆ ಮಗ ಆತ್ಮಹತ್ಯೆಗೆ ಶರಣಾದ ಸುದ್ದಿ ನಾವೆಲ್ಲ ಪತ್ರಿಕೆಗಳಲ್ಲಿ ಓದಿರುತ್ತೇವೆ.ಬಸ್ಸಿನಲ್ಲಿ ಪಯಣಿಸುವಾಗ ಆಕಸ್ಮಿಕವಾಗಿ ಬೇರೆಯವರಿಗೆ ಕೈ-ಕಾಲೋ ಟಚ್‌ ಆದ ತಕ್ಷಣವೇ ಆಕಾಶ ಕಳಚಿ ಬಿದ್ದಂತೆ ರಂಪಾ ರಾಮಾಯಣ ಮಾಡುವ ಎಷ್ಟು ಜನರನ್ನು ನಾವು ನೋಡಿರುವುದಿಲ್ಲ ಹೇಳಿ.

ಇಂತಹ ಒಂದು ಸಣ್ಣ ಘಟನೆ, ಆ ದಿನದ ಖುಷಿಯನ್ನೆಲ್ಲ ನುಂಗಿ ಹಾಕಿಬಿಡುತ್ತದೆ. ಮನೆಯಲ್ಲಿ ಉಂಟಾದ ಸಣ್ಣಪುಟ್ಟ ಅಸಮಾಧಾನಗಳು ಕಚೇರಿಯÇÉೋ ಶಾಲೆಯಲ್ಲೋ ತಮ್ಮ ಪರಿಣಾಮವನ್ನು ಬೀರುತ್ತವೆ. ಘಟಕ ಪರೀಕ್ಷೆಯಲ್ಲಿ ತನ್ನ ಮಗ ಕಡಿಮೆ ಅಂಕ ಪಡೆದನೆಂದು ಒಬ್ಬ ತಾಯಿ ತರಗತಿ ಶಿಕ್ಷಕಿಯ ಎದುರೇ ತಲೆಗೆ ಮೊಟುಕಿ” ನಿನ್ನ ಯೋಗ್ಯತೆಗೆ ಇಷ್ಟೇನಾ ಅಂಕ ಪಡೆಯುವುದು, ಮುಂದೆ ನಿನ್ನನ್ನು ಡಾಕ್ಟರ್‌ಮಾಡಬೇಕೆಂದುಕೊಂಡಿರುವೆ, ಈ ತರಹ ಅಂಕಗಳನ್ನು ಪಡೆದರೆ ನಮ್ಮ ಮರ್ಯಾದೆಯ ಪ್ರಶ್ನೆ ಏನು..?

ನೋಡು ನಿನ್ನ ಸ್ನೇಹಿತ ಎಷ್ಟೊಂದು ಅಂಕಗಳನ್ನು ಪಡೆದಿದ್ದಾನೆ, ನಿನ್ನನ್ನು ಹೆತ್ತಿದ್ದು ನನ್ನದೇ ತಪ್ಪು” ಎಂದು ಶರಂಪರ ಮಾಡಿದರು. ನಿಮಗೆ ಪಾಠ ಅರ್ಥವಾಗದಿದ್ದರೆ ಎಷ್ಟು ಬಾರಿ ಬೇಕಾದರೂ ಕೇಳಿ ಹೇಳುತ್ತೇನೆ ಎನ್ನುವ ಶಿಕ್ಷಕ ಕೆಲವೊಮ್ಮೆ ವಿದ್ಯಾರ್ಥಿ ಕೇಳುವ ಪ್ರಶ್ನೆಗೆ ತಣ್ಣೀರು ಎರಚುವಂತೆ,” ಇಷ್ಟೊಂದು ಚಿಕ್ಕ ಪ್ರಶ್ನೆಯನ್ನು ಕೇಳುತ್ತಿಯಲ್ಲ, ಪಾಠ ಮಾಡಬೇಕಾದರೆ ಏನು ಮಾಡುತ್ತಿದ್ದೆ, ಕುಳಿತುಕೋ ಸುಮ್ಮನೆ” ಎನ್ನುವುದನ್ನು ಕಂಡು ಕೇಳಿರುತ್ತೇವೆ. ಈ ತರಹದ ಘಟನೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ.

ಹಾಗಾದರೆ ಏನು ಮಾಡಬೇಕು..?

ಕೋಪದಲ್ಲಿದ್ದಾಗ ಯಾವುದೇ ಪ್ರತಿಕ್ರಿಯೆ ಸಲಹೆಯನ್ನು ನೀಡಬಾರದು. ಬಿಟ್ಟ ಬಾಣ ಆಡಿದ ಮಾತು ಎಂದಿಗೂ ಹಿಂದಿರುಗುವುದಿಲ್ಲ. ಮಾತನಾಡುವ ಮುಂಚೆ ಅದರ ಪರಿಣಾಮಗಳನ್ನು ಯೋಚಿಸಿ ಮಾತನಾಡಬೇಕು. ಎದುರಿಗಿರುವವರು ಕೋಪ ಅಸಮಾಧಾನದಲ್ಲಿದ್ದಾಗ ಯಾವುದೇ ರೀತಿಯ ಮಾತುಗಳು ರುಚಿಸುವುದಿಲ್ಲ ಎನ್ನುವುದನ್ನು ತಿಳಿದುಕೊಂಡಿರಬೇಕು. ಮೇಲಿನ ಘಟನೆಗಳನ್ನು ತೆಗೆದುಕೊಂಡಾಗ, ನಮ್ಮ ಕೈಯೊ ಕಾಲೋ ಬೇರೆಯವರಿಗೆ ತಾಗಿದಾಗ, ಅಥವಾ ಅವರಿಂದ ನಮಗೆ ತಾಗಿದಾಗ ಸಾರಿ ಅಥವಾ ಒಂದು ಮುಗುಳುನಗೆ ಸಾಕು. ಮಗ ಅಥವಾ ಮಗಳು ಕಡಿಮೆ ಅಂಕಗಳನ್ನು ಪಡೆದಾಗ, ಕಾರಣಗಳನ್ನು ಹುಡುಕಿ, ನಿಧಾನವಾಗಿ ಸಮಾಧಾನ ಮಾಡುತ್ತಾ, ಮುಂದಿನ ಪರೀಕ್ಷೆಗಳನ್ನು ಎದುರಿಸಲು ಸಕಾರಾತ್ಮಕವಾಗಿ ಪ್ರೋತ್ಸಾಹಿಸುತ್ತಾ ಹುರಿದುಂಬಿಸಬೇಕು.

ಎಷ್ಟೇ ಒತ್ತಡದಲ್ಲಿದ್ದರೂ ಶಿಕ್ಷಕ ಪ್ರತಿ ವಿದ್ಯಾರ್ಥಿಯ ಪ್ರಶ್ನೆಗಳನ್ನು ಸಮಾಧಾನ ಚಿತ್ತದಿಂದ ಆಲಿಸುತ್ತ ಪರಿಹಾರಗಳನ್ನು ಸೂಚಿಸಬೇಕು. ಪ್ರಶ್ನಿಸುವ ಮನೋಭೂಮಿಕೆಯನ್ನು ಮಕ್ಕಳಿಗೆ ತಿಳಿಸುತ್ತಾ ಪ್ರೋತ್ಸಾಹಿಸಬೇಕು. ಒಮ್ಮೆ ಒಬ್ಬ ವಿದ್ಯಾರ್ಥಿಯ ಪ್ರಶ್ನಿಸುವ ಕೌಶಲವನ್ನು ಮೊಟುಕುಗೊಳಿಸಿದರೆ ಮುಂದೆಂದೂ ಆತ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸಲಾರ ಎನ್ನುವ ಕನಿಷ್ಠ ತಿಳುವಳಿಕೆಯನ್ನು ಶಿಕ್ಷಕ ಹೊಂದಿರಬೇಕಾಗುತ್ತದೆ

“”ಏನ ಬಂದಿರಿ ಹದುಳವಿದ್ದಿರೇ? ಎಂದರೆ

ನಿಮ್ಮ ಮೈಸಿರಿ ಹಾರಿ ಹೋಹುದೆ?

ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?” ಎಂಬ ಬಸವಣ್ಣನವರ ಪ್ರಶ್ನೆಯಲ್ಲಿ ಸಾಮಾನ್ಯ ದೈನಂದಿನ ವ್ಯವಹಾರಗಳಲ್ಲಿಯೂ ನಯ ವಿನಯವಿರಬೇಕೆಂಬ ಮಾರ್ಗದರ್ಶನವಿದೆ ಎಂಬುದನ್ನು ಅರಿಯೋಣ.

-ಕೆ.ಟಿ. ಮಲ್ಲಿಕಾರ್ಜುನಯ್ಯ ಸೀಗಲಹಳ್ಳಿ

ಶಿರಾ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.