UV Fusion: ರೈತರ ಬದುಕನ್ನು ಅರಿತು ಗೌರವಿಸಿ


Team Udayavani, Sep 10, 2023, 3:37 PM IST

16-uv-fusion

ಭಾರತವು ಕೃಷಿಯಾಧಾರಿತ ದೇಶ.ಇಲ್ಲಿ ರೈತರೇ ದೇಶದ ಬೆನ್ನೆಲುಬು. ಕೃಷಿ ಕ್ಷೇತ್ರಕ್ಕೆ ಬಂದಾಗ, ಕೃಷಿಯು ಭಾರತದ ಅಭಿವೃದ್ಧಿಗೆ ಪ್ರಮುಖ ಕ್ಷೇತ್ರವಾಗಿದೆ. ಜೈ ಜವಾನ್‌,ಜೈ ಕಿಸಾನ್‌ ಎಂಬ ಮಾತಿದೆ. . ರೈತರು ಆಹಾರ ಧಾನ್ಯಗಳನ್ನು ದೇಶದ ಪ್ರತೀ ಜೀವಸಂಕುಲಕ್ಕೆ ನೀಡುವ ಮೂಲಕ ಎಲ್ಲಾ ವರ್ಗದವರ ಬದುಕಿಗೆ ಸೇವೆ ನೀಡುತ್ತಿದ್ದಾರೆ. ಗಡಿಯಲ್ಲಿ ದೇಶ ಕಾಯುವ ಸೈನಿಕರಿಗೆ ಆಹಾರ ಧಾನ್ಯ ಕೊಡುವವರು, ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಸರಕುಗಳನ್ನು ಉತ್ಪಾದಿಸುವ ಕಾರ್ಮಿಕರಿಗೂ ಕೂಡ ಆಹಾರವನ್ನು ನೀಡುವವರು ರೈತರು.

ನಮಗೆ ತಿಳಿದಿರುವಂತೆ ಭಾರತವು ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ ಆದ್ದರಿಂದ ದೇಶದ ಒಟ್ಟಾರೆ ಆರ್ಥಿಕತೆಯು ರೈತನ ಮೇಲೆ ಅವಲಂಬಿತವಾಗಿದೆ ಮತ್ತು ರೈತನನ್ನು ವಿಶ್ವದ ಅತ್ಯಂತ ಶ್ರಮಜೀವಿ ಎಂದು ಪರಿಗಣಿಸಲಾಗಿದೆ. ಕೆಲ ರೈತರಿಗೆ ಕೃಷಿ ತಂತ್ರಜ್ಞಾನದ ಬಳಕೆ ಗೊತ್ತಿಲ್ಲ, ಬರೀ ಸಾಂಪ್ರದಾಯಿಕ ವಿಧಾನಗಳಿಂದ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಾರೆ.ಸಮಾಜದ ಹಾಗೂ ದೇಶದ ಅಭಿವೃದ್ಧಿಗೆ ಸವೆಸುತ್ತಾ ಬದುಕುತ್ತಿದ್ದಾನೆ. ಎಲ್ಲರಿಗೂ ಅನ್ನ ನೀಡುವ ರೈತ ಹಸಿವಿನಿಂದ ಬಳಲುತ್ತಿದ್ದಾನೆ, ಬಡತನದಿಂದ ಮೇಲೇಳಲು ಸಾಧ್ಯವೇ ಇಲ್ಲದಂತಹ ವಾತಾವರಣದಲ್ಲಿ ಬದುಕುತ್ತಿದ್ದಾನೆ.

ರೈತನ ಕೃಷಿ ಸಂಪೂರ್ಣವಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ, ಆಗಾಗ್ಗೆ ಬರುವ ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆದ ಬೆಳೆಗಳಿಗೆ ಹಾನಿಯಾಗಿ, ಪ್ರವಾಹಕ್ಕೆ ಸಿಲುಕಿ ಬೆಳೆಗಳು ಕೊಚ್ಚಿ ಹೋಗುವುದು ಒಂದೆಡೆಯಾದರೆ ಮಂಗಗಳು, ಕ್ರಿಮಿಕೀಟಗಳಿಂದ ಹಾನಿ, ಬೆಳೆದ ಬೆಳೆಯನ್ನು ಮನೆಗೆ ಅಥವಾ ಮಾರುಕಟ್ಟೆಗೆ ತಲುಪಿಸುವುದರಲ್ಲಿಯೇ ರೈತನು ಹಲವಾರು ಶತ್ರುಗಳನ್ನು ಕಾಣುತ್ತಾನೆ. ಬೆಳೆ ಬರುವ ಮುಂಚೆ ಒಂದು ತೊಂದರೆಯಾದರೆ ಬೆಳೆ ಬಂದ ನಂತರ ಮತ್ತೂಂದು ಬಗೆಯ ತೊಂದರೆ ಎದುರಾಗುತ್ತದೆ, ಬೆಳೆ ಕೈಗೆ ಬಂದಾಗ ಮಧ್ಯವರ್ತಿಗಳಿಂದ ರೈತರಿಗೆ ವಂಚನೆ ಮಾಡುವ ದಂಧೆ ಶುರುವಾಗುತ್ತದೆ. ರೈತರು ಕಷ್ಟಪಟ್ಟು ದುಡಿದ ಆಹಾರ ಧಾನ್ಯಗಳಿಗೆ ಯೋಗ್ಯವಾದ ಬೆಲೆ ದೊರೆಯದೇ ಬಹಳ ಅಗ್ಗದ ಬೆಲೆ ನಿಗದಿಪಡಿಸುವುದು ಮತ್ತು ರೈತರಿಗೆ ವರ್ತಕರು ಇಲ್ಲಸಲ್ಲದ ಮಾಹಿತಿ ನೀಡಿ ಅವರನ್ನು ದಾರಿ ತಪ್ಪಿಸುವುದಾಗಿದೆ. ಇತರ ದೇಶಗಳಿಗೆ ಹೋಲಿಸಿದಾಗ ಭಾರತೀಯ ರೈತರು ಸಾಂಪ್ರದಾಯಿಕ ಕೃಷಿಯಲ್ಲಿ ಹೆಕ್ಟೆರ್‌ ಗೆ ಕಡಿಮೆ ಇಳುವರಿ ಬೆಳೆಯುತ್ತಾರೆ ಹಾಗಾಗಿ ಆಧುನಿಕ ವೈಜ್ಞಾನಿಕ ಯುಗದಲ್ಲಿ ಹೊಸ ಆವಿಷ್ಕಾರಗಳು ಕೃಷಿ ಕ್ಷೇತ್ರದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸುತ್ತಿದ್ದು ಕೃಷಿ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಿ ಹೊಸ ಹೊಸ ಆವಿಷ್ಕಾರಗಳನ್ನು ಪದ್ಧತಿಗಳನ್ನು ಬಳಸುವಂತೆ ರೈತರಿಗೆ ಮನವೊಲಿಸಬೇಕು ಅದು ಸರ್ಕಾರದ ಕರ್ತವ್ಯವೂ ಹೌದು. ಏಕೆಂದರೆ ದೇಶದ ಶೇ.58ರಷ್ಟು ಉದ್ಯೋಗಿಗಳನ್ನು ಕೃಷಿ ಹೊಂದಿದೆ ಹಾಗೂ ದೇಶದ ಜಿಡಿಪಿ ಗೆ ಶೇ.15ರಷ್ಟು ಕೊಡುಗೆ ನೀಡುತ್ತಿದೆ.

ಆದ್ದರಿಂದ ರೈತರ ಬದುಕನ್ನು ಹಸನಗೊಳಿಸುವಂತಹ ಹಲವಾರು ಯೋಜನೆಗಳು ಕೇಂದ್ರ, ರಾಜ್ಯ ಸರ್ಕಾರಗಳಿಂದಾಗಬೇಕು. ರೈತರನ್ನು ಮುನ್ನೆಲೆಗೆ ತರುವಂತಹ, ಕೃಷಿಯಲ್ಲಿ ಯುವಕರನ್ನು ಭಾಗಿಯಾಗಿಸುವಂತಹ ಅವಕಾಶಗಳನ್ನು ನೀಡುವಂತಾಗಬೇಕು. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ನಿಗದಿಪಡಿಸಬೇಕು, ಬೆಳೆದ ಬೆಳೆಗಳನ್ನು ಕೋಲ್ಡ್‌ ಸ್ಟೋರೇಜ್‌ ಮತ್ತು ಉಗ್ರಾಣಗಳಲ್ಲಿ ಶೇಖರಿಸಿ ಬೆಲೆ ಬಂದ ನಂತರ ಮಾರುವಂತಹ ಯೋಜನೆ ತರಬೇಕು, ರೈತರನ್ನು ಮಧ್ಯವರ್ತಿಗಳಿಂದ ತಪ್ಪಿಸಬೇಕು,ಮಾರುಕಟ್ಟೆಯ ವೆಚ್ಚವನ್ನು ತಗ್ಗಿಸಿ ರೈತರ ಆದಾಯವನ್ನು ಹೆಚ್ಚಿಸಬೇಕು, ಕೃಷಿಯಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತರಿಗೆ ಸರ್ಕಾರದಿಂದ ಬೆಂಬಲ ನೀಡಬೇಕು, ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿರ್ಧರಿಸುವ ಸಂಪೂರ್ಣ ಅಧಿಕಾರ ಹೊಂದಬೇಕು, ಬಿತ್ತನೆಯ ಮುಂಚೆಯೇ ರೈತರಿಗೆ ತಮ್ಮ ಬೆಳೆಯ ಬೆಲೆ ತಿಳಿಯುವಂತಾಗಬೇಕು, ಉತ್ಪಾದನೆಗಳ ಮಾರಾಟಕ್ಕೆ ಯಾವುದೇ ಲೇವಿಯನ್ನಾಗಲಿ, ಸಾರಿಗೆ ವೆಚ್ಚವನ್ನಾಗಲಿ ಪಾವತಿಸುವಂತಾಗಬಾರದು.

ಕಷ್ಟಪಡುತ್ತಿರುವ ರೈತರಿಗೆ ಬ್ಯಾಂಕುಗಳಿಂದ ಅತೀ ಕಡಿಮೆ ಬಡ್ಡಿದರದಲ್ಲಿ ಅಥವಾ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಬೇಕು, ರೈತರು ಬೆಳೆದ ಹಾಗೂ ರೈತರೇ ನೇರವಾಗಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ಚೌಕಾಸಿ ಮಾಡಿ ಕೊಂಡುಕೊಳ್ಳುವ ಮನಸ್ಥಿತಿ ಜನರಲ್ಲಿ ಬದಲಾಗಬೇಕು, ಈ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಸರ್ಕಾರಗಳು ರೈತನಿಗೆ ಬೆಂಬಲ ನೀಡಿ ರೈತರನ್ನು ಮೇಲೇತ್ತುವಂತಹ ಕಾರ್ಯ ಮಾಡಬೇಕಿದೆ ಮತ್ತು ರೈತರಿಗೆ ಯಾವುದೇ ರೀತಿಯಿಂದ ಅವರ ಬದುಕಿಗೆ, ಅವರು ಬೆಳೆದ ಬೆಳೆಗೆ ಸಿಗುವ ಬೆಲೆ ಕೀಳುಮಟ್ಟದ್ದಾಗಿರದಂತೆ ನೋಡಿಕೊಳ್ಳಬೇಕಿದೆ ಯಾಕೆಂದರೇ ರೈತರು ಅತೀ ಮುಗ್ಧರಾಗಿದ್ದು ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತಾರಾಗಿದ್ದಾರೆ.

ಅವರ ನಂಬಿಕೆಗೆ ದ್ರೋಹ ಮಾಡುವಂತಹ ಯಾವುದೇ ಯೋಜನೆಗಳು ಸರ್ಕಾರದಿಂದ ಹೊರಡಿಸದಿರಲಿ, ಪ್ರತೀ ಕೃಷಿ ಯೋಜನೆಗಳು ರೈತರ ಹಿತದೃಷ್ಟಿಯಿಂದ ಕೂಡಿರಲಿ, ರಾಷ್ಟ್ರದ ಪ್ರತೀ ನಾಯಕನಿಗೆ ಸಿಗುವ ಗೌರವ ಮತ್ತು ಪ್ರಾತಿನಿಧ್ಯ ರೈತನಿಗೂ ದೊರೆಯುವಂತಹ ವಾತಾವರಣ ಸೃಷ್ಟಿಯಾಗಲಿ, ರೈತನೇ ದೇಶದ ಬೆನ್ನೆಲುಬು ಎಂಬುದು ಬರೀ ಭಾಷಣದಲ್ಲಿರದೆ ಪ್ರತೀ ಮನಮನಗಳ ಭಾವದಲ್ಲಿ, ಪ್ರತೀ ನಾಲಿಗೆಯ ತುದಿಯಲ್ಲಿರಲಿ, ಬಾಹ್ಯವಾಗಿರದೆ ಆಂತರಿಕ ಹೃದಯದಲ್ಲಿರಲಿ.

ಪ್ರತಿಯೊಬ್ಬ ರೈತನು ಕೃಷಿ ಚಟುವಟಿಕೆಗಳಿಂದ ಬೇಸತ್ತು, ಸಾಲಭಾದೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸುವಂತಹ ಬಹುದೊಡ್ಡ ಕಾರ್ಯ ಸರ್ಕಾರದ್ದಾಗಿರಲಿ, ಪ್ರತೀ ರೈತನು ಆರಾಮವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಬೇಕಿದೆ, ಹಾಗೂ ವಿದ್ಯಾವಂತರೆಲ್ಲರೂ ಸಾಧ್ಯವಾದಷ್ಟು ಅನಕ್ಷರಸ್ಥ ರೈತರಿಗೆ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಕೃಷಿ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ರೈತರಿಗೆ ಗೌರವ ನೀಡುವುದು ನಮ್ಮ ನಮ್ಮ ಮನೆಯಿಂದಲೇ ಶುರುವಾಗುವಂತಹ ವಾತಾವರಣವನ್ನು ನಾವು ನೀವೆಲ್ಲರೂ ಸೃಷ್ಟಿ ಮಾಡಬೇಕಿದೆ, ರೈತನೇ ನಮ್ಮೆಲ್ಲರ ಭವಿಷ್ಯವನ್ನು ನಿರ್ಧರಿಸುವ ನಿರ್ಮಾಪಕರು ಎಂಬುದನ್ನು ನಾವು ಅರಿಯಬೇಕಿದೆ.

 ಹನುಮಂತ ದಾಸರ,

ಧಾರವಾಡ

ಟಾಪ್ ನ್ಯೂಸ್

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.