Father: ಅಪ್ಪನ ನೀತಿ ನಮ್ಮ ಬದುಕಿನ ರೀತಿ


Team Udayavani, Jul 5, 2024, 4:10 PM IST

16-father

ಅಪ್ಪ ಎನ್ನುವ ಪದ ಕೇವಲ ಎರಡಕ್ಷರದ ಪದವಲ್ಲ ಒಂದು ಮನೆ ಮನಸುಗಳ ಜೀವಾಳ… ಮಕ್ಕಳ ಭಾವಂತರಾಳ. ನನ್ನಪ್ಪ ನನ್ನಯ ಜೀವನದ ಮೊದಲ ದೇವರು, ದೇವರೆಂದರೆ ಸರ್ವವನ್ನು ಒಳಗೊಂಡಿರುವ ಸಂಪೂರ್ಣ ಆಕಾರ. ನನ್ನಪ್ಪ ನನ್ನ ದೃಷ್ಟಿಯ ಪರಿಪೂರ್ಣ ವ್ಯಕ್ತಿತ್ವ.

ಮಗಳಿಗೆ ಅಪ್ಪಂನೆಂದರೆ ಎಲ್ಲಿಲ್ಲದ ಅಕ್ಕರೆ, ಪ್ರೀತಿ, ನಂಬಿಕೆ ಹಾಗೆಯೇ ನನಗೂ ಕೂಡ. ನನ್ನಪ್ಪ ನನ್ನೆಲ್ಲಾ ರೀತಿ ನೀತಿಯ ರೂವಾರಿ, ಸಲಹೆಗಾರ. ಅಂತಹ ನನ್ನಪ್ಪನೊಂದಿಗೆ ನಾನಿರುವುದು ಮಲೆನಾಡಿನ ಒಂದು ಪುಟ್ಟ ಊರು.

ಇಲ್ಲಿನ ಮಳೆಗಾಲವಂತು ಹೇಳತೀರದು. ವಾರಗಟ್ಟಲೆ ಇಲ್ಲದ ವಿದುತ್‌, ಉಕ್ಕಿ ಹರಿವ ನದಿಗಳು, ಬಿಡದೇ ಸುರಿವ ಮಳೆ, ರಕ್ತ ಹೀರುವ ಜಿಗಣೆ, ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳು ಇದೆಲ್ಲದರೊಂದಿಗೆ ನಮ್ಮ ಬಾಲ್ಯದ ಬದುಕಿತ್ತು.

ಇಂತಹ ಅದಮ್ಯ ಸ್ಥಿತಿಯಲ್ಲಿ ಒಂದು ದಿನವೂ ಕೂಡ ನಮ್ಮನ್ನ ಶಾಲೆಗೆ ರಜೆ ಹಾಕಲು ಬಿಡದೆ ಎತ್ತಿಕೊಂಡೆ ಹೋಗಿ ಶಾಲೆಗೆ ಬಿಡುತ್ತಿದ್ದರು ಅಪ್ಪ. ಒಂದು ವೇಳೆ ಮೇಷ್ಟ್ರು ಬರ್ಲಿಲ್ಲ ಅಂದ್ರೆ ಸಂಜೆ ಅಪ್ಪನೇ ಮೇಷ್ಟ್ರಾಗಿ ವರ್ಣಮಾಲೆಯಿಂದ ಗುಣಕಾರದ ವರೆಗೂ ಎಲ್ಲವನ್ನು ಬಿಟ್ಟುಬಿಡದೆ ಹೇಳಿಕೊಡುತ್ತಿದ್ದರು ನನ್ನಪ್ಪ. ಚಿಕ್ಕಂದಿನಿಂದಲೇ ಅಪ್ಪನೊಂದಿಗೆ ಕಲಿತ ಜೀವನ ಪಾಠಗಳು ಇಂದಿನ ಜೀವನಕ್ಕೆ ನಾಂದಿಯಾಗಿವೆ.

ಆಗ ಕೇವಲ ಐದನೇ ತರಗತಿಯವರೆಗಷ್ಟೇ ನಮ್ಮೂರಲ್ಲಿ ಶಾಲೆಯಿತ್ತು ಮುಂದಿನ ದಿನಗಳನ್ನು ಅಂದಿನಿಂದ ಇಂದಿನ ವರೆಗೂ ಹಾಸ್ಟೆಲ್ನಲ್ಲಿಯೇ. ಆಗ ಮನೆಯಲ್ಲಿ ಏನೇ ಮಾಡಿದ್ರು ಅಪ್ಪ ನಮಗೆ ತೊಗೊಂಡು ಬಂದು ಬಿಡ್ತಿದ್ರು. ಏನಿಲ್ಲಾ ಅಂದ್ರು ರೊಟ್ಟಿನಾದ್ರು ಮಾಡಿÕ ತರೋರು ಅಪ್ಪ. ಅಪ್ಪನ ಪ್ರೀತಿ ಅಕ್ಕರೆಯ ಮುಂದೆ ಬೇರೇನೂ ಹೆಚ್ಚು ಎಂದು ಇಂದಿನವರೆಗೂ ಅನಿಸಲೇ ಇಲ್ಲ.

ಅಪ್ಪ ಹೆಚ್ಚೆನೂ ಓದಿಲ್ಲವಾದರೂ ಅಂದಿನ ಕಾಲದಲ್ಲಿಯೇ ಪಿಯುಸಿ ಓದಿದ್ದರೂ ಮನೆಯಲ್ಲಿನ ಸಮಸ್ಯೆಗಳಿಂದಾಗಿ ಮುಂದೆ ಓದಲಿಲ್ಲವಾದರೂ ಇಂದಿನ ಉನ್ನತ ಪದವಿ ಪಡೆದವರಿಗಿಂತ ಏನೂ ನನ್ನಪ್ಪ ಕಡಿಮೆ ಇಲ್ಲ.

ಮುಂದೆ ಸಾವಿರ ಜನ ಇದ್ದರೂ ಧೈರ್ಯವಾಗಿ, ಸ್ಪಷ್ಟವಾಗಿ, ಸರಳವಾಗಿ ತಮ್ಮ ಮಾತಿನ ಮೂಲಕ ಅವರನ್ನೆಲ್ಲ ಮಂತ್ರಮುಗªವಾಗಿಸಬಲ್ಲರು. ಅಪ್ಪನಲ್ಲಿ ಇರುವ ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ ಎಲ್ಲವೂ ಒಂದು ರೀತಿಯ ಅದ್ಭುತವೆನಿಸುತ್ತದೆ. ನನ್ನಪ್ಪನನ್ನು ನೋಡಿದಾಗೆಲ್ಲ ನನಗನ್ನಿಸುವುದು ಒಂದೇ, ಛಲವೊಂದಿದ್ದರೆ ವಿದ್ಯೆ ಯಾರಪ್ಪನ ಸ್ವತ್ತು ಅಲ್ಲ ಎಂಬುದು.

ನನ್ನಪ್ಪ ಕ್ರಿಯಾಶೀಲ ವ್ಯಕ್ತಿತ್ವದ ಸರಳ ವ್ಯಕ್ತಿ. ನಾನು ಪದವಿಯಲ್ಲಿ ಕಲಿತಿದ್ದಕ್ಕಿಂತ ನನ್ನಪ್ಪನನ್ನು ನೋಡಿ ಕಲಿತದ್ದೇ ಹೆಚ್ಚು. ಅಪ್ಪ ಒಂದು ದಿನವೂ ಕೂಡ ತನ್ನ ಕಷ್ಟವನ್ನು ನೇರವಾಗಿ ನಮ್ಮೊಂದಿಗೆ ಹೇಳುತ್ತಿರಲಿಲ್ಲ ಆದರೆ ತನ್ನ ಮಕ್ಕಳಿಗೆ ಕಷ್ಟದ ಪರಿಚಯವಿಲ್ಲದೆ ಬೆಳೆಸಬಾರದೆಂಬ ತಿಳುವಳಿಕೆಯಿತ್ತಾದ್ದರಿಂದ ಒತ್ತಡವಾಗದಂತೆ ಅರ್ಥೈಸುತ್ತಿದ್ದರು. ನನ್ನಪ್ಪ ಲತ್ತೆಯ ಏಟನ್ನು ಕೊಟ್ಟದ್ದಕಿಂತ ಬುದ್ಧಿಮಾತಿನ ಏಟನ್ನು ಕೊಟ್ಟದ್ದೇ ಜಾಸ್ತಿ. ಆ ಏಟುಗಳೇ ಇಂದು ನಮಗೆ ಎಲ್ಲವನ್ನು ಎದುರಿಸುವ ಶಕ್ತಿಯನ್ನು ನೀಡಿವೆ ನಮ್ಮೆಲ್ಲ ಹೆಜ್ಜೆಗೆ ಭದ್ರ ಬುನಾದಿಯಾಗಿವೆ. ಇಂದಿಗೂ ಕೂಡ ನನ್ನಪ್ಪ ಹೇಳುವ ಮಾತುಗಳೆ ವೇದವಾಕ್ಯ ಎನಿಸುತ್ತದೆ.

ಅಂದಿನಷ್ಟೇ ಅಕ್ಕರೆ, ಪ್ರೀತಿ, ವಿಶ್ವಾಸ, ನಂಬಿಕೆ, ದೃಢತೆ ಅಪ್ಪನಲ್ಲಿದೆ. ಈ ಎಲ್ಲ ಗುಣಗಳೇ ಇಂದು ಅವಕಾಶಗಳು ಅಪ್ಪನನ್ನು ಹುಡುಕಿಬರುವಂತೆ ಮಾಡಿವೆ. ಇಂದಿಗೂ ಕೂಡ ಅಪ್ಪನ ತತ್ವಗಳು ಬದಲಾಗಿಲ್ಲ. ಬದುಕಿನ ರೀತಿ ಕಾಲಕ್ಕೆ ತಕ್ಕಂತೆ ಬದಲಾದರು ನೀತಿ ಎಂದಿನಂತೆಯೇ ಇದೆ. ಅವೇ ನಮ್ಮ ಜೀವನಕ್ಕೂ ಆದರ್ಶವಾಗಿವೆ. ಅಪ್ಪ ಪದಗಳಿಗೆ ಸಿಗಲಾರದಷ್ಟು ಅನಂತದ ಆನಂದ. ಅಪ್ಪ ವರ್ಣನೆಗೆ ಸಿಗಲಾರದ ಬದುಕಿನ ಕಲಾಕಾರ.

-ದೀಕ್ಷಾ ತಿಮ್ಮಪ್ಪ

ಇಂದಿರಾ ಗಾಂಧಿ ಸರಕಾರಿ

ಕಾಲೇಜು ಸಾಗರ

ಟಾಪ್ ನ್ಯೂಸ್

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.