UV Fusion: ಅನಿವಾರ್ಯವೆಂಬ ಆತಂಕ
Team Udayavani, Nov 13, 2024, 5:02 PM IST
ಅವನೊಬ್ಬ ಚಿಕ್ಕ ಹುಡುಗ. ಐದನೇ ವರ್ಷಕ್ಕೆ ಕಾಲಿಟ್ಟಿದ್ದ. ಹಾಗಾಗಿ ಅವನನ್ನು ಹೆತ್ತವರು ಶಾಲೆಗೆ ಸೇರಿಸಿದರು. ಮನೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸ್ವೇಚ್ಛೆಯಿಂದ ಇದ್ದವನು ನಾಲ್ಕು ಗೋಡೆಗಳ ಮಧ್ಯದ ಶಾಲೆಯಲ್ಲಿ ದಿನಗಳನ್ನು ಕಳೆಯುವಂತಾಯಿತು. ಆತನಿಗೆ ಒಳಗೊಳ ಹಿಂಸೆ. ಆದರೆ ಹೆತ್ತವರು ಕೂಡಾ ಶಾಲೆಯೇ ಮುಖ್ಯ ಅಂತ ತಳ್ಳಿಬಿಡುತ್ತಿದ್ದರು.
ನೀನು ಸಾಧನೆ ಮಾಡಬೇಕು ಅಂದರೆ ಶಾಲೆಗೆ ಹೋಗಲೇಬೇಕು ಎನ್ನುವ ಮಾತುಗಳು. ಇಷ್ಟವೋ, ಕಷ್ಟವೋ ಆತ ಶಾಲೆಗೆ ಹೋಗಲೇಬೇಕು. ಅಲ್ಲಿ ಬೇರೆ ಯಾವುದೇ ಆಯ್ಕೆಗಳಿಲ್ಲದೆ ಶಾಲೆಗೆ ಹೋಗಬೇಕೆನ್ನುವ ಅನಿವಾರ್ಯತೆಯೊಂದು ಸೃಷ್ಟಿಯಾಗಿಬಿಟ್ಟಿತ್ತು.
ಆ ಮರದ ತುಂಬಾ ಹೂವುಗಳು. ಅರಳಿದ ಹೂವುಗಳಿಗೆ ಹೊತ್ತು ಕಳೆದಂತೆ ಬೇಸರ. ಹೂವು ಬಾಡಿ, ಕಾಯಿಯಾಗಿ, ಬಲಿತು ಹಣ್ಣಾಗುವುದೆಂದರೆ ತಮ್ಮ ಪರಿಮಳವನ್ನು ಕಳೆದುಕೊಂಡು ಕೊರಡಾಗುತ್ತೇವೆಂಬ ಕೊರಗು. ಆದರೆ ಪ್ರಕೃತಿಯ ನಿಯಮಕ್ಕೆ ಕಟ್ಟುಬಿದ್ದು ಮಾಗಲೇಬೇಕು. ಭವಿಷ್ಯದಲ್ಲಿ ಹಣ್ಣಾಗಲು, ದೀರ್ಘಕಾಲ ಆಯುಷ್ಯವನ್ನು ಪಡೆಯಲು ಹೂವು ಈ ಕ್ಷಣದ ಸಂತೋಷವನ್ನು ಬಲಿಕೊಡಬೇಕು. ಹೂವಿಗೆ ಅದು ಅನಿವಾರ್ಯತೆಯೇ!
ಮಹಾಭಾರತದಲ್ಲಿ ಉಲ್ಲೇಖೀಸಲ್ಪಟ್ಟ ಪಾಂಡು ಪುತ್ರ ಅರ್ಜುನನಿಗೂ ಕೌರವರೊಂದಿಗೆ ಯುದ್ಧ ಮಾಡುವುದು ಇಷ್ಟವಿರಲಿಲ್ಲ. ಆದರೆ ಅಲ್ಲಿ ಅಧರ್ಮದ ವಿರುದ್ಧ ಧರ್ಮ ಜಯಿಸಬೇಕಾದರೆ ಯುದ್ಧ ಅನಿವಾರ್ಯವಾಗಿತ್ತು. ಹಾಗಾಗಿ ಆತನೂ ಅನಿವಾರ್ಯತೆಯೆಂಬ ಅಲಗಿನಲ್ಲಿ ಸಿಲುಕಿದ, ಯುದೊನ್ಮುಖೀಯಾಗಿ ವಿಜಯಿಯಾದ. ಹೀಗೆ ಯಾರೇ ಅಥವ ಯಾವುದೇ ಆಗಲಿ ದೂರದೃಷ್ಟಿಯನ್ನಿಟ್ಟುಕೊಂಡು ಅನಿವಾರ್ಯತೆಯ ಬದುಕಿಗೆ ತಮ್ಮನ್ನು ತಾವು ಒಡ್ಡಿಕೊಂಡವರು.
ಅದನ್ನೇ ತಮ್ಮ ದುರಾದೃಷ್ಟವೆಂದು ಹಳಿದುಕೊಂಡವರು. ಬದುಕಿನಲ್ಲಿ ಅನಿವಾರ್ಯತೆ ಎಂಬುದು ಸೃಷ್ಟಿಯಾಗದಿದ್ದರೆ, ಎಲ್ಲವೂ ಇಷ್ಟದ ಅನುಸಾರವಾಗಿಯೇ ನಡೆದುಬಿಡುತ್ತಿತ್ತೇನೋ?
ಅನಿವಾರ್ಯತೆಯ ಸಂದರ್ಭದಲ್ಲಿ ವ್ಯಕ್ತಿಯ ಮನಸ್ಸು ಎಷ್ಟು ಪ್ರಫುಲ್ಲವಾಗಿ ಪಾಲ್ಗೊಳ್ಳುತ್ತದೆ ಎನ್ನುವುದು ಕಾರ್ಯದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಪಂಕೈರ್ವಿನಾ ಸರೋ ಭಾತಿ ಸದಃ ಖಲಜನೈರ್ವಿನಾ
ಕಟುವಣೈìರ್ವಿನಾ ಕಾವ್ಯಂ ಮಾನಸಂ ವಿಷಯೈರ್ವಿನಾ
(ಕೆಸರಿಲ್ಲದ ಸರೋವರವೂ ಖಳರಿಲ್ಲದ ಸಭೆಯೂ ಒರಟಾದ ಅಕ್ಷರಗಳಿಲ್ಲದ ಕಾವ್ಯವೂ ಶೋಭಿಸುತ್ತದೆ. ವಿಷಯವಾಸನೆಗಳಿಲ್ಲದಿದ್ದಲ್ಲಿ ಮನಸ್ಸು ಶೋಭಿಸುತ್ತದೆ.) ಅನಿವಾರ್ಯತೆ ಒದಗಿತೆಂದು ಹಳಿದುಕೊಳ್ಳುತ್ತಾ ಬದುಕನ್ನು ಸವೆಸುವುದಕ್ಕೂ, ಭರದಿಂದ ಅಪ್ಪಿಕೊಂಡು ಅನಿವಾರ್ಯತೆಯನ್ನು ಎದುರಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ವ್ಯಕ್ತಿ ವಿವಿಧ ಮುಖಗಳನ್ನು ತೆರೆದುಕೊಳ್ಳುವಾಗ, ವಿವಿಧತೆಯನ್ನು ಅನುಸರಿಸುವುದೇ ಜೀವಿಸುವ ಕೌಶಲ್ಯ.
ಇಷ್ಟವನ್ನು ಬಿಟ್ಟು, ಬದುಕು ಒಡ್ಡುವ ಅನಿವಾರ್ಯತೆಗೆ ಜೀವ ಒಗ್ಗಲೇಬೇಕು. ಶಾಲೆಗೆ ಹೋಗುವ ಎಳೆಯ ಪೋರನಿಂದ ತೊಡಗಿ, ಪ್ರತಿಯೊಬ್ಬರಿಗೂ ಅಥವ ಪ್ರತಿಯೊಂದಕ್ಕೂ ತಮಗೆ ಒಪ್ಪುವಂತಹ ಅಂಶವಿದ್ದರೂ, ಇಲ್ಲದಿದ್ದರೂ ಸಂದರ್ಭಗಳಿಗನುಗುಣವಾಗಿ ಸ್ಪಂದಿಸುವಂತೆ ಮನಸ್ಸು ಮಾಗಬೇಕು.
ಅನಿವಾರ್ಯ ಎಷ್ಟೇ ಆತಂಕಕಾರಿಯಾದರೂ, ಅದೇ ಆದ್ಯತೆಯಾಗಿರುವಾಗ ಅನಿರೀಕ್ಷಿತ ತಿರುವುಗಳನ್ನು ಎದುರಿಸುವ ಛಲವಿರಬೇಕು. ಅನಿವಾರ್ಯವೆಂದು ನಮ್ಮ ಸಿದ್ಧಾಂತವನ್ನು ಬಿಟ್ಟುಬಿಡುತ್ತೇವೆ ಎಂದರ್ಥವಲ್ಲ, ಸಂದರ್ಭಗನುಗುಣವಾಗಿ ಸಿದ್ಧಾಂತದಲ್ಲೂ ಮಾರ್ಪಾಡಗುತ್ತದೆ ಎಂದರ್ಥ. ಹಳೆಯ ದಿನಗಳ ಜೊತೆಗೆ ಹೊಸ ದಿನಗಳ ಹೊಸ ಅನುಭವಗಳು ಸೇರಿ ರಸಪಾಕವಾದಾಗ ಬದುಕು ಬೆಳಗುತ್ತದೆ.
– ಪಂಚಮಿ ಬಾಕಿಲಪದವು
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
BPL Card: ಪಡಿತರ ಚೀಟಿ ರದ್ದು ಮತ್ತು ಡಿಜಿಟಲೀಕರಣ “ಅಳಿಯ ಅಲ್ಲ ಮಗಳ ಗಂಡ..!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.