UV Fusion: ತನ್ನಂತೆ ಇತರರ ಬಗೆದೊಡೆ…
Team Udayavani, Nov 3, 2024, 1:34 PM IST
ನಮಗೆ ನಮ್ಮ ಕುರಿತು, ನಮ್ಮ ಮಕ್ಕಳು, ಕುಟುಂಬದ ಕುರಿತು ಇನ್ನಿಲ್ಲದ ಅಭಿಮಾನ, ಪ್ರೀತಿ. ನಮ್ಮ ಕುರಿತಾಗಿ ನಮಗೆ ಅತ್ಯಂತ ಹೆಮ್ಮೆ, ಬಿಗುಮಾನ. ನಮಗೆ ಏನಾದರೂ ಅವಘಡ ಸಂಭವಿಸಿದರೆ ಇನ್ನಿಲ್ಲದ ಆತಂಕ, ಅಪನಿಂದನೆಗೆ ಒಳಗಾಗದರೆ ಕೋಪ, ದ್ವೇಷ, ಅಪಮಾನಿಸಿದರವರ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕ. ಇದೆಲ್ಲವೂ ಒಂದಷ್ಟು ಅಗತ್ಯವೇ. ಇತರರು ಎಂದರೆ ಒಂದಷ್ಟು ತಾತ್ಸಾರ ಭಾವ. ನಿರ್ಲಕ್ಷ್ಯ, ಅವರು ಕಷ್ಟ-ನೋವು, ಸಂಕಟಗಳಿಗೆ ಒಳಗಾದರೆ ನಮಗೆ ಸಂಬಂಧವಿಲ್ಲದಂತೆ ಇದ್ದು ಬಿಡುತ್ತೇವೆ. ಯಾರಾದರೂ ಇತರ ಮೇಲೆ ಹರಿಹಾಯ್ದಾಗ ನಾವು ನಮಗೆ ಸಂಬಂಧವಿಲ್ಲದಿದ್ದರೂ ಮೂಗು ತೂರಿಸಿ ಕ್ಷಣ ಕಾಲವಾದರೂ ಸಂತಸ ಪಡುವ ಭಾವ ನಮಗರಿವಿಲ್ಲದಂತೆ ಇಣುಕತೊಡಗುತ್ತದೆ. ಖಂಡಿತವಾಗಿಯೂ ಇದೊಂದು ಒಪ್ಪಿತವಲ್ಲದ ನಡೆಯೇ ಸರಿ. ಇಂತಹ ನಮ್ಮ ವರ್ತನೆಗಳು ನಮಗಿರಿವಲ್ಲದಂತೆ ನಮ್ಮ ಸಲ್ಲದ ವರ್ತನೆಗಳು ಇತರೆದರು ನಮ್ಮ ವ್ಯಕ್ತಿತ್ವಕ್ಕೆ ಹಾನಿಯನ್ನುಂಟು ಮಾಡುತ್ತವೆ.
ಒಂದೊಮ್ಮೆ ಮಕ್ಕಳಿರದ ರಾಜನೊಬ್ಬ ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಸಮರ್ಥರಾದ ತನ್ನ ರಾಜ್ಯದ ಕೆಲವು ಪ್ರಜೆಗಳಿಗೆ ಆಮಂತ್ರಣ ನೀಡಿದ. ರಾಜನಾಗುವ ಮಹದಾಸೆ ಹೊತ್ತು ರಾಜನ ಆಸ್ಥಾನಕ್ಕೆ ಬಹಳಷ್ಟು ಜನರು ಆಗಮಿಸಿದ್ದರು. ಬಂದವರಿಗೆಲ್ಲ ರಾಜ ಕೆಲವು ಪರೀಕ್ಷೆ ಏರ್ಪಡಿಸಿದ. ಪರೀಕ್ಷೆಗಳಲ್ಲಿ ಆಯ್ಕೆಯಾದ ಕೆಲವರನ್ನು ಮಾತ್ರವೇ ತನ್ನ ಆಸ್ಥಾನಕ್ಕೆ ಆಮಂತ್ರಿಸಿದ. ಅವರಿಗೆ ನಿಮ್ಮ ವಿಶೇಷ ಸಾಮರ್ಥಯಗಳನ್ನು ಓರೆಗೆ ಹಚ್ಚುವ ಕೆಲವು ಸಂಗತಿಗಳನ್ನು ನನ್ನೆದುರು ಹೇಳಿ ಎಂದ. ಒಬ್ಬ ಹೇಳಿದ, ನಾನು ಬಹಳಷ್ಟು ದೂರದಿಂದಲೇ ನಾಯಿ ಮತ್ತು ನರಿಗಳ ನಡುವಿನ ವ್ಯತ್ಯಾಸವನ್ನು ನಿಖರವಾಗಿ ಗುರುತಿಸಬಲ್ಲೆ. ಮತ್ತೂಬ್ಬ ಹೇಳಿದ, ನಾನು ಅತ್ಯಂತ ದೂರದಿಂದಲೇ ಆಲದಮರ ಮತ್ತು ಅರಳಿಮರಗಳನ್ನು ವಿಂಗಡಿಸಬಲ್ಲೆ. ಹೀಗೆಯೇ ಕೆಲವರು ಹಲವು ವಿಭಿನ್ನ ಉತ್ತರಗಳನ್ನು ನೀಡಿ ತಮ್ಮ ವಿಶೇಷ ಸಾಮರ್ಥಯಗಳನ್ನು ಪರಿಚಯಿಸಿದರು. ಕೊನೆಗೆ ಒಬ್ಬ ಹೇಳಿದ, ಯಾರೋ ಅಪರಿಚಿತರೂ ನನಗೆ ಭೇಟಿಯಾದರೂ ಅವರನ್ನು ನನ್ನ ಮನೆಯವರಂತೆಯೇ ಕಾಣಬಲ್ಲೆ. ಕೊನೆಯ ಪ್ರಜೆ ನೀಡಿದ ಉತ್ತರದಿಂದ ರಾಜ ಸಂತಸ ಪಟ್ಟ. ಅವನನ್ನೇ ತನ್ನ ಉತ್ತರಾಧಿಕಾರಿಯಾಗಿಸಲು ಅವನು ನಿರ್ಧರಿಸಿದ.
ನಮ್ಮಂತೆ ಇತರರನ್ನೂ ಕೂಡ ಬಗೆಯುವುದು ಅತ್ಯಂತ ಮೌಲ್ಯಯುತವಾದ ಸಂಗತಿ. ಇದು ಬದುಕಿನ ಬಹುದೊಡ್ಡ ಸಂತಸಕ್ಕೆ ದಾರಿತೋರಬಲ್ಲ ಸಾಮರ್ಥ್ಯ ಹೊಂದಿರುವಂತದ್ದು. ಇದು ಇತರರೆದುರು ನಮ್ಮನ್ನು ತುಂಬ ಎತ್ತರಕ್ಕೇರಿಸುವ ಬಹು ದೊಡ್ಡ ಸಾಧನವಾಗಿದೆ. ನಮ್ಮ ವ್ಯಕ್ತಿತ್ವಕ್ಕೆ ಬಹುದೊಡ್ಡ ಘನತೆಯನ್ನು ಇದು ತಂದುಕೊಡಬಲ್ಲುದು. ಸರ್ವಜ್ಞನ ಮಾತಿನಂತೆ ತನ್ನಂತೆ ಇತರರ ಬಗೆದೊಡೆ ಕೈಲಾಸವದು ಬಿನ್ನಾಣವಕ್ಕು. ಸಾಧ್ಯವಾದಷ್ಟು ಇಂಥದೊಂದು ಅಪರೂಪದ ಗುಣ ನಮ್ಮದಾಗಿಸಿಕೊಳ್ಳುವ ಪ್ರಯತ್ನವನ್ನು ಜಾರಿಯಲ್ಲಿರಿಸೋಣ.
-ಮಹಾದೇವ ಬಸರಕೋಡ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.