UV Fusion: ನಗುವಿನಿಂದ ಆರೋಗ್ಯ


Team Udayavani, Nov 3, 2024, 2:04 PM IST

7

ಅಬ್ಬಾ ಮುಂದೊಂದು ದಿನ ನಗು ಅಂದರೆ ಏನು ಅಂತಾ ಕೇಳುವ ಸ್ಥಿತಿಗೆ ಬರುತ್ತದೆಯೋ ಏನೋ? ಯಾಕೆಂದರೆ ನಮಗೆ ಸಮಯವೇ ಇಲ್ಲ ಅದೆಷ್ಟು ಒತ್ತಡದ ಬದುಕನ್ನು ಬದುಕುತ್ತಿದ್ದೇವೆಂದರೆ ಮನೆಯವರ ಜತೆಗೆ ಮನಸ್ಸು ಬಿಚ್ಚಿ ನಾವು ಮಾತನಾಡುತ್ತಿಲ್ಲ, ನಗೋದು ಕೂಡ ಸೋಶಿಯಲ್‌ ಮೀಡಿಯಾದ ಇಮೋಜಿಯಲ್ಲೇ. ಮತ್ತೆ ಪುರುಸೊತ್ತಿಲ್ಲ ಎಂದರೂ ಆಶ್ಚರ್ಯವಾಗದು. ಸದಾ ನಗುತ್ತಿರುವವರು ಆರೋಗ್ಯಪೂರ್ಣರಂತೆ ಗೋಚರಿಸುತ್ತಾರೆ. ನಗು ಒಂದು ರೀತಿಯ ಒತ್ತಡ ನಿವಾರಕವೂ ಹೌದು, ದೇಹಕ್ಕೆ ವ್ಯಾಯಾಮವೂ ಹೌದು.

ನಗುತ್ತಿರುವಾಗ ಒಬ್ಬ ವ್ಯಕ್ತಿಯ ಹೃದಯದ ಬಡಿತ ನಿಮಿಷಕ್ಕೆ 120 ತಲುಪುತ್ತದೆ. ನಗುವಿನಿಂದ ನಮ್ಮ ರಕ್ತದ ಒತ್ತಡ ಕಡಿಮೆ ಆಗಿ ರಕ್ತ ಪರಿಚಲನೆ ಹೆಚ್ಚುತ್ತದೆ. ನಗುವಿನಿಂದ ಮಾಂಸಖಂಡ ಕುತ್ತಿಗೆಯ ನರಗಳ ಬಿಗಿತ ಕಡಿಮೆಯಾಗುತ್ತದೆ. ನಗು ಶಾಸ್ವಕೋಶವನ್ನು ಹಿಗ್ಗಿಸಿ ರಕ್ತದಲ್ಲಿ ಆಮ್ಲಜನಕ ವೃದ್ಧಿಯಾಗುವಂತೇ ಮಾಡುತ್ತದೆ. ಹಾಗೆಯೇ ಶ್ವಾಸನಾಳಗಳನ್ನು ಸ್ವತ್ಛಗೊಳಿಸುತ್ತದೆ. ನಗುವುದರಿಂದ ನಮ್ಮ ಮಿದುಳಿನಲ್ಲಿ ಎಂಡಾರ್ಫಿನ್‌ ಗಳೆಂಬ ನರವಾಹಗಳು ಬಿಡುಗಡೆಯಾಗುತ್ತದೆ. ಎಂಡಾರ್ಫಿನ್‌ಗಳು ಯಾವುದೇ ಅಡ್ಡ ಪರಿಣಾಮ ಉಂಟು ಮಾಡದೇ ನಮ್ಮನ್ನು ನಿದ್ರಾಸ್ಥಿತಿಗೆ ಒಯ್ಯತ್ತವೆ. ನಗು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಸಮಾಧಾನ ನೀಡುತ್ತದೆ. ನಗುವಿನಲ್ಲಿ ಏನೋ ಒಂದು ರೀತಿಯ ಶಕ್ತಿ ಇದೆ. ನಗುವನ್ನು ಚಿಕಿತ್ಸೆಯಾಗಿ ಬಳಸಬಹುದು ಎಂದು ಪ್ರೊಫೆಸರ್‌ಮಾರ್ಕೊ ಸಫಿ ಸಲಹೆ ನೀಡಿದ್ದಾರೆ. ‘ಹೃದಯ ಕಾಯಿಲೆ ಇರುವ ಜನರನ್ನು ಹಾಸ್ಯ ಸಂಜೆಗಳಿಗೆ ಆಹ್ವಾನಿಸಬಹುದು ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮೋಜಿನ ಸಂಜೆಗಳನ್ನು ಆನಂದಿಸಲು ಪ್ರೋತ್ಸಾಹಿಸಬಹುದು’ ಎಂದು ಅವರು ಹೇಳುತ್ತಾರೆ.ಡಾ| ಆನೆಟ್‌ ಗುಡ್‌ಹಾರ್ಟ್‌ ಅವರ ಪುಸ್ತಕ, ‘ಲಾಫ್ಟರ್‌ಥೆರಪಿ’ನಲ್ಲಿ, ಇಡೀ ಅಧ್ಯಾಯವು ನಗುವಿನ ಭೌತಿಕ ಪ್ರಯೋಜನಗಳಿಗೆ ಸಮರ್ಪಿಸಲಾಗಿದೆ, ಏಕೆಂದರೆ ಇದು ದೇಹದಲ್ಲಿನ ಪ್ರತಿಯೊಂದು ಪ್ರಮುಖ ವ್ಯವಸ್ಥೆಯನ್ನು ತೊಡಗಿಸುತ್ತದೆ.

ನಗು ನಮ್ಮ ಮುಖದ ತೇಜಸ್ಸನ್ನು ಹೆಚ್ಚಿಸುತ್ತದೆ ನಗುವಿನಿಂದ ನಾವು ಜನರ ಪ್ರೀತಿ ಪ್ರೇಮವನ್ನು ಹೆಚ್ಚು ಸಂಪಾದಿಸಿಕೊಳ್ಳಬಹುದು. ನಾವು ನಗದೇ ಇದ್ದ ದಿನ ನಷ್ಟವಾದ ದಿನವೇ ಸರಿ. ಪ್ರತಿಯೊಬ್ಬರು ತಮ್ಮ ಸಿಡುಕು ಸ್ವಭಾವವನ್ನು ಕಡಿಮೆ ಮಾಡಿ ಹಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಖಂಡಿತವಾಗಿ ತಮ್ಮ ಆರೋಗ್ಯವನ್ನು ಉತ್ತಮಪಡಿಸಬಹುದು. ನಗುವುದೇ ಸ್ವರ್ಗ ಅಳುವುದೇ ನರಕ ಎಂದಿದ್ದಾರೆ ಆದ್ದರಿಂದ ಬಾಳಿನುದ್ದಕ್ಕೂ ನಾವು ನಗುತ್ತಲೇ ಇದ್ದು ನಮ್ಮ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳೋಣ.

-ರೇಷ್ಮಾ, ಕುಂದಾಪುರ

ಟಾಪ್ ನ್ಯೂಸ್

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ

1-mohali

Mohali; ಬಹುಮಹಡಿ ಕಟ್ಟಡ ಕುಸಿತ: ಹಲವರು ಸಿಲುಕಿರುವ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi: ಪಾಟ್ನಾ-ಗುಜರಾತ್‌ ಟೈ

Pro Kabaddi: ಪಾಟ್ನಾ-ಗುಜರಾತ್‌ ಟೈ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.