![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 5, 2024, 5:15 PM IST
ತನಗೆಲ್ಲ ತಿಳಿದಿದೆ ಎಂದು ಬೀಗುವವನೆ ಅಜ್ಞಾನಿ. ತನಗೇನು ಗೊತ್ತಿಲ್ಲ ಎಂದು ನುಡಿಯುವವನೆ ಜ್ಞಾನಿ!
ಅಜ್ಞಾನಿ ತನಗೇನು ಗೊತ್ತಿಲ್ಲದಿದ್ದರೂ ಎಲ್ಲವೂ ತಿಳಿದಿದೆ ಎಂದು ಬೀಗಿದರೆ ಜ್ಞಾನಿ ತನಗೆಲ್ಲ ತಿಳಿದಿದ್ದರೂ ಏನೂ ತಿಳಿಯದವನಂತೆ ಸುಮ್ಮನಿರುತ್ತಾನೆ. ಇದೇ ಜ್ಞಾನಿಗೂ ಅಜ್ಞಾನಿಗೂ ಇರುವ ವ್ಯತ್ಯಾಸ.
ಇದಕ್ಕೆ ಪೂರಕವಾಗುವಂತೆ ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ.ಎಂಬ ಒಂದು ಅದ್ಭುತವಾದ ಗಾದೆ ಮಾತಿದೆ.ಅಂದರೆ ಪೂರ್ತಿಯಾಗಿ ತುಂಬಿದ ಕೊಡ ಎಂದಿಗೂ ಬರಿದಾಗುವುದಿಲ್ಲ. ಸ್ಥಿರವಾಗೇ ಇರುತ್ತದೆ.ಆದರೆ ಅರ್ಧ ತುಂಬಿದ ಕೊಡ ತುಳುಕುತ್ತ ಬಳುಕುತ್ತ ಬರಿದಾಗುತ್ತದೆ.ಇದರರ್ಥ ಇಷ್ಟೇ.
ಎಲ್ಲವನ್ನು ಅರಿತ ಮನುಷ್ಯ ಸ್ಥಿರವಾಗಿರುತ್ತಾನೆ.ಚಂಚಲ ಮನಸ್ಥಿತಿ ಅವನಿಗಿರುವುದಿಲ್ಲ. ತನಗೆಲ್ಲವೂ ತಿಳಿದಿದೆ ನಾನೊಬ್ಬ ಮಹಾಜ್ಞಾನಿ ಎಂಬ ದುರಹಂಕಾರವು ಅವನಿಗಿರುವುದಿಲ್ಲ.ಕಲಿತಷ್ಟು ಕಲಿಯುವ ಅವನ ತುಡಿತ ಹೆಚ್ಚಾಗುತ್ತದೆ.ತಾನಿನ್ನು ಕಲಿಯಬೇಕು ಹೊಸ ಹೊಸ ವಿಷಯಗಳನ್ನ ತಿಳಿದುಕೊಳ್ಳಬೇಕು ಎಂಬ ಮಹದಾಸೆ ಜಾಸ್ತಿಯಾಗುತ್ತದೆ ಹೊರತು ಅಹಂಕಾರ ಅವನ ಹತ್ತಿರವು ಸುಳಿಯುವುದಿಲ್ಲ.ಆದರೆ ತನಗೆಲ್ಲವೂ ತಿಳಿದಿದೆ ತಾನೊಬ್ಬ ಮಹಾಜ್ಞಾನಿ ಎಂದು ಬೀಗುವವನ ಮಸ್ತಕದ ತುಂಬೆಲ್ಲ ಅಹಂಕಾರವೇ ತುಂಬಿರುತ್ತದೆ.
ಈ ಒಂದು ಗಾದೆ ಮಾತು ಪ್ರಾಯಶಃ ನಮ್ಮ ಇಂದಿನ ಜನಾಂಗಕ್ಕೆ ಬಹಳ ಚೆನ್ನಾಗಿ ಒಪ್ಪುತ್ತದೆ.ಅದರಲ್ಲೂ ಯುವಜನಾಂಗ ಹಾಗೂ ವಿದ್ಯಾರ್ಥಿಗಳಿಗೆ ಹೇಳಿ ಮಾಡಿದ ಗಾದೆ.
ಉದಾಹರಣೆಗೆ ಪರೀಕ್ಷೆಯ ಸಂದರ್ಭವನ್ನೇ ತೆಗೆದುಕೊಳ್ಳೋಣ….. ಪುಸ್ತಕದ ಎಲ್ಲ ವಿಷಯಗಳನ್ನು ಮಸ್ತಕಕ್ಕೆ ತುಂಬಿಸಿಕೊಂಡ ವಿದ್ಯಾರ್ಥಿ ಮೌನವಾಗಿದ್ದು ಹಸನ್ಮುಖೀಯಾಗಿದ್ದರೆ ಅರ್ಧಂಬರ್ಧ ಕಲಿತವನು ತನ್ನ ಮಸ್ತಕದಲ್ಲಿ ಏನೂ ತುಂಬಿಲ್ಲದಿದ್ದರೂ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿರುತ್ತಾನೆ. ಅಂದರೆ.. ಏನೂ ಗೊತ್ತಿಲ್ಲದಿದ್ದರೂ ಎಲ್ಲ ಗೊತ್ತಿರುವವರಂತೆ. ಇದಕ್ಕೆಯೇ ನಮ್ಮ ಹಿರಿಯರು ಹೇಳಿರುವುದು ಅರ್ಧ ಕಲಿತವನ ಅಬ್ಬರ ಹೆಚ್ಚು ಎಂದು.
ಎಲ್ಲವನ್ನು ತಿಳಿದುಕೊಂಡವನು ಯಾರ ತಂಟೆಗೂ ಹೋಗುವುದಿಲ್ಲ. ವಾಗ್ವಾದವನ್ನು ನಡೆಸುವುದಿಲ್ಲ. ಜಾಣ್ಮೆಯಿಂದ ಸಮಸ್ಯೆಯನ್ನ ಬಗೆಹರಿಸಿಕೊಂಡರೆ ಅರ್ಧಂಬರ್ಧ ತಿಳಿದ ಮೂಢ ವಾದ ಪ್ರತಿವಾದಗಳನ್ನ ಮಾಡಿ ಕೊನೆಗೆ ತಾನೇ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ.
ಇದೇ ಕಾರಣಕ್ಕೆ ಅಂತ ಅಲ್ಪ ಜ್ಞಾನಿಗಳಿಗೆ, ಮೂಢರಿಗೆ, ಅಹಂಕಾರಿಗಳಿಗೆ ಯಾರೂ ಬುದ್ಧಿವಾದ ಹೇಳುವ ಗೋಜಿಗೆ ಕೈ ಹಾಕುವುದಿಲ್ಲ. ಕೊಚ್ಚೆ ಎಂದು ಗೊತ್ತಿದ್ದ ಮೇಲು ಆ ಕೊಚ್ಚೆಯ ಮೇಲೆ ಕಲ್ಲು ಎಸೆದರೆ ಆ ನೀರು ರಾಚುವುದು ನಮ್ಮ ಮೈಗೆ ಅಲ್ಲವೇ?…….
–ಸುಸ್ಮಿತಾ ಕೆ. ಎನ್. ಅನಂತಾಡಿ, ಬಂಟ್ವಾಳ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.