UV Fusion: ಬದುಕಿನ ಸುಳಿಯೊಳಗೆ…


Team Udayavani, Aug 7, 2024, 10:23 AM IST

2-uv-fusion

ಕಾಯುತ್ತಲೇ ಇರುತ್ತೇವೆ ಎಂದಾದ ರೂಂದು ದಿನ ಬದುಕು ಬದಲಾದೀತು ಎಂದು. ಕೆಲವೊಮ್ಮೆ ಕ್ಷಣಗಳನ್ನು ಯುಗಗಳಂತೆ ಕಳೆಯುತ್ತೇವೆ. ಚಿಕ್ಕ ಹೂಕುಂಡದಲ್ಲಿ ಚಿಗುರಿದ ಗಿಡ, ಅರಳಿದ ಹೂವು, ಬೀಸುವ ತಂಗಾಳಿ, ವಾಕಿಂಗ್‌ ಹೊರಟಾಗ ಎದುರಾಗುವ ಅಪರಿಚಿತ ಮುಖಗಳು, ವಿಷಯವೇ ಇಲ್ಲದಿದ್ದರೂ ಉಂಟಾಗುವ ಕಿರಿಕಿರಿ, ಯಾಕೋ ಎಲ್ಲವೂ ಬೇಜಾರು ಅನಿಸುವುದಕ್ಕೆ ಶುರವಾಗುತ್ತದೆ. ಯಾರೊಂದಿಗೂ ಮಾತನಾಡಲು ಮನವಿಲ್ಲದಂತೆ, ಬೇಕಾದವರೆಲ್ಲ ಸುತ್ತಲೇ ಇದ್ದರು ಎಲ್ಲರಿಂದ ದೂರವಾಗಿ ಪರಮ ಮೂಕರಂತೆ ಇದ್ದುಬಿಡೋಣ ಅನಿಸುತ್ತದೆ. ಯಾಕೆ ಹೀಗೆ ಬದುಕು ಕಾಡಿಸುತ್ತದೆ ಎಂದು ಅಂದುಕೊಂಡಿರುತ್ತೇವೆ. ಆದರೆ ಇದಕ್ಕೆಲ್ಲ ಆತ್ಮತೃಪ್ತಿಯ ಕೊರತೆ ಕಾರಣ ಅನ್ನುವುದನ್ನು ಮರೆತುಬಿಟ್ಟಿದ್ದೇವೆ.

ಇರುವುದೆಲ್ಲವ ಬಿಟ್ಟು ಇರದುದರೆಡೆಗಿನ ತುಡಿತ. ನಮಗಿರುವ ಯಾವ ಸವಲತ್ತುಗಳು ಸಾಲದು ಅನಿಸುತ್ತಿರುತ್ತದೆ. ಇತರರನ್ನು ನೋಡಿ ಮತ್ತೇನೋ ಹೊಸ ಹೊಸ ಬೇಕುಗಳ ಹಿಂದೆ ಓಡುತ್ತಿರುತ್ತೇವೆ. ಆದರೆ ಒಂದು ಕ್ಷಣಕ್ಕಾದರೂ ನಮಗೀಗ ದಕ್ಕಿರುವ ಬದುಕು ಎಷ್ಟೋ ಜನರ ಕನಸು ಎನ್ನುವುದು ನೆನಪಿಗೆ ಬರುವುದಿಲ್ಲ. ಕೆಲವರಿಗೆ ಒಪ್ಪೋತ್ತಿನ ಊಟ ಸಿಕ್ಕರೆ ಸಾಕು ಅನ್ನುವ ಭಾವ, ಮತ್ತೆ ಕೆಲವರಿಗೆ ಇರಲೊಂದು ಸೂರು ಮತ್ತೆ ಕೆಲವರಿಗೆ ಏಕಾಂಗಿತ ಹೋಗಲಾಡಿಸಲು ಜತೆ ನಡೆದು ಬರಲೊಂದು ಜೀವ…

ಹೀಗೆ ಬಯಕೆಗಳ ಪಟ್ಟಿಯಂತೂ ಇದ್ದದ್ದೇ, ರೂಪ ಬೇರೆ ಬೇರೆ ಅಷ್ಟೇ. ಒಟ್ಟಾರೆ ಆವಶ್ಯಕತೆ ಅನಿವಾರ್ಯತೆಗಳ ಮೇಲೆ ನೆಲೆ ನಿಂತ ಬದುಕು. ಇದೆಲ್ಲದರಿಂದ ಒಮ್ಮೆ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಡಬೇಕು ಅಂದುಕೊಳ್ಳುತ್ತಾ ಹೊಸತನದ ಹುಡುಕಾಟದಲ್ಲಿ ದಿನ ದೂಡುವಾಗಲೇ ನಾಳೆಗಳ ಕನಸು, ನಿನ್ನೆಗಳ ನೆನಪಿನ ಅಲೆಗಳ ಅಬ್ಬರದಲ್ಲಿ ಇಂದಿನ ಚೆಂದದ ಆಯಸ್ಸು ಸದ್ದೇ ಇಲ್ಲದೆ ಕರಗಿ ಹೋಗಿರುತ್ತದೆ. ಅನಿಶ್ಚಿತ ಬದುಕಿನ ಹಾದಿಯಲ್ಲಿ ಹಾದು ಹೋಗುವವರೇ ಎಲ್ಲರೂ.

ಕೊನೆಯವರೆಗೂ ಯಾರು, ಯಾವುದೂ ಜತೆ ಬರುವುದಿಲ್ಲ ಎಂಬುವುದು ಗೊತ್ತಿದ್ದರೂ, ನಿರೀಕ್ಷೆಗಳ ಮೂಟೆ ಹೊತ್ತೇ ಸಾಗುತ್ತಿರುತ್ತೇವೆ. ಅವುಗಳು ಹುಸಿಯಾದರೆ ಅಥವಾ ಕೊಂಚ ಬದಲಾವಣೆಗಳಾದರೆ ಸಾಕು ಬದುಕೇ ಮುಗಿದು ಹೋದಂತೆ ನಲುಗುತ್ತೇವೆ.

“ಅಸಲಿಗೆ ಯಾರಾದರೂ ಯಾಕೆ ನಮ್ಮ ಇಚ್ಛೆಗಳನ್ನು ಪೂರೈಸಬೇಕು? ಯಾಕೆ ನಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯಬೇಕೆಂಬ ಹಂಬಲ ಬೆಳೆಸಿಕೊಳ್ಳಬೇಕು? ನಾವು ಯಾರ ಇಚ್ಛೆಯಂತೆ ಬದುಕುತ್ತಿದ್ದೇವೆ? ಪ್ರತಿಯೊಬ್ಬ ವ್ಯಕ್ತಿಗೂ ಆತನ ನಿಯಮಿತ ಪರಿಧಿಯಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಅವರವರ ಇಚ್ಛೆಯಂತೆ ಅವರು ಬದುಕಲಿ. ನಾವು ನಾವಾಗಿರೋಣ ಅಂತ ಒಮ್ಮೆ ಗಟ್ಟಿಯಾಗಿ ಅನ್ನಿಸೋಕೆ ಆರಂಭವಾದರೆ ತಲೆಯಲ್ಲಿನ ನಿರೀಕ್ಷೆಗಳ ಭಾರ ಕಡಿಮೆಯಾಗುತ್ತದೆ ನೋಡಿ. ಆಗ ಬದುಕು ನಿಜಕ್ಕೂ ನಿರಾಳವಾಗುತ್ತಾ ಹೋಗುತ್ತದೆ. “ಆನಂದಮಯ ಈ ಜಗಹೃದಯ’ ಎಂದು ಅನಿಸುವುದು ಆಗಲೇ. ಎಲ್ಲವೂ ಸುಂದರವಾಗಿ ಕಾಣುತ್ತದೆ. ಅಲ್ಲಲ್ಲ, ಎಲ್ಲದರಲ್ಲೂ ಸೌಂದರ್ಯ ತಂತಾನೆ ಇದೆ. ನಾವು ನೋಡುವ ನೋಟ ಬದಲಾದಾಗ ಅಥವಾ ನಿಷ್ಕಲ್ಮಶವಾದಾಗ ಪ್ರತಿಯೊಂದರೊಳಗಿನ ಕದಲಿಕೆಯು ಸುಂದರವೇ.

ಬದುಕೊಂದು ಹೊಳೆಯಾದರೆ ಪರಿಸ್ಥಿತಿಯದರ ಸುಳಿಗಳು. ಅದರೊಳಗೆ ಮುಳುಗದೆ, ಬಂದ ಅಲೆಗಳೊಟ್ಟಿಗೆ ಮನದ ಹಗುರತೆಯಿಂದ ತೇಲುತ್ತಾ ಹೋದರೆ, ಅಶಾಶ್ವತ ಪಯಣದಲ್ಲಿ ಶಾಶ್ವತದ ಬಯಕೆ ಕಮ್ಮಿಯಾದರೆ ತಲುಪುವ ತೀರ ಹಸನು ಬದುಕಿನ ತಪ್ಪಲು. ಜಗದ ಜಂಜಾಟಗಳಿಂದ ಬಿಡುಗಡೆ ಹೊಂದಿ ಹೊರಡುವಾಗ, ಸಾಂದ್ರಗೊಂಡ ಭಾವಗಳು ಮನದಲ್ಲಿ ಸಂತೃಪ್ತಿಯನ್ನು ಸು#ರಿಸಿದರೆ ಅದೊಂದು ಸಾರ್ಥಕ್ಯದ ಬದುಕು. ಅಂತದೊಂದು ಚೆಂದದ ಭಾವ ನಮ್ಮೆಲ್ಲರ ಪಾಲಿಗೂ ದಕ್ಕುವಂತಾಗಲಿ. ಆ ನಿಟ್ಟಿನ ಪಯಣದೆಡೆಗೆ ನಿರಂತರ ಸಾಗುವಂತಾಗಲಿ.

-ಪಲ್ಲವಿ ಚೆನ್ನಬಸಪ್ಪ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.