UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Team Udayavani, Nov 3, 2024, 4:57 PM IST
ಆಟಿ ಅಥವಾ ಕರ್ಕಾಟಕ ಮಾಸ ಕಳೆದರೂ ಅದರ ಸೊಗಡು ನೆನಪಿನಂಗಳದಲ್ಲಿದೆ. ಈ ಅವಧಿಯಲ್ಲಿ ಕೇರಳದ ಉತ್ತರ ಮಲಬಾರ್ ಭಾಗದಲ್ಲಿ, ಪ್ರಮುಖವಾಗಿ ಕಾಸರಗೋಡು ಮತ್ತು ಕಣ್ಣೂರ್ ಈ ಭಾಗದಲ್ಲಿ ದೈವಾರಾಧನೆಗಳು ದೇವಾಲಯಗಳಲ್ಲಿ ನಡೆಯುವುದು ವಿರಳ. ಶೂನ್ಯ ಮಾಸದಲ್ಲಿ ಕೋಲಗಳನ್ನು ಕಟ್ಟಿ ಆಡಿಸುವ ಸಂಪ್ರದಾಯ ಕಡಿಮೆ.
ಕಲಶ ಮಹೋತ್ಸವದ ಬಳಿಕ ಯಾವುದೇ ಕಳಿಯಾಟಗಳು, ದೈವಕಟ್ಟುಗಳು ನಡೆಯುವುದಿಲ್ಲ. ಮುಂದಿನ ತುಲಾ 10 ಬರುವ ತನಕ. ಆದರೆ ಈ ನಡುವೆಯೂ ಕೂಡ ಒಂದು ವಿಶಿಷ್ಟವಾದ ದೈವರಾಧನೆಯೊಂದು ನಡೆಯುತ್ತದೆ. ಆದರೆ ಇದು ವಯಸ್ಕರು ಕಟ್ಟಿ ಆಡುವ ದೈವಗಳಾಗಿರದೆ ಬಾಲಕರು ಕಟ್ಟುವ ದೈವವಾಗಿರುವುದು ವಿಶೇಷ.
ಆದಿ ಮತ್ತು ವೇಡನ್ ತೆಯ್ಯಂ ಕರ್ಕಾಟಕ ಮಾಸದ ಕುಟ್ಟಿ ತೆಯ್ಯಂ ಆಗಿದೆ. ಕುಟ್ಟಿ ತೆಯ್ಯಂ ಎಂದರೆ ಬಾಲಕ ದೈವವೆಂದು ಅರ್ಥವಿದೆ. ಇದನ್ನು ಸಾಮಾನ್ಯವಾಗಿ 5 ವರ್ಷ ಮೇಲ್ಪಟ್ಟ 16 ವರ್ಷ ಒಳಗಿನ ಮಕ್ಕಳು ಕಟ್ಟುತ್ತಾರೆ.
ಕೆಂಪು ವೇಷಭೂಷಣಗಳ ಅಲಂಕಾರ, ಮುಗ್ಧ ಮುಖಗಳಿಗೆ ಕೇಸರಿ ಬಣ್ಣದ ಮುಖ ವರ್ಣಿಕೆ, ಕೈಗೊಂದು ಕಿಣಿಕಿಣಿ ಗಂಟೆ, ಕಾಲಿಗೆ ಗೆಜ್ಜೆ ಕಟ್ಟಿ ಚಂಡೆಯ ಸದ್ದಿಗೆ ಪಾಡ್ದನಗಳ ಹಾಡಿಗೆ ಹೆಜ್ಜೆ ಹಾಕಿ ಉತ್ತರ ಮಲಬಾರಿನ ಹಚ್ಚಹಸುರಿನ ಹೊಲಗಳನ್ನು ದಾಟುತ್ತಾ ಮನೆಮನೆಗಳಿಗೆ ಬರುತ್ತಾರೆ. ಆದಿ ಮತ್ತು ವೇಡನ್ ತೆಯ್ಯಂಗಳು ಮಳೆಗಾಲದ ರೋಗ ರುಚಿನಗಳನ್ನು ನಿವಾರಿಸಲು ಬರುತ್ತವೆ ಎಂಬ ನಂಬಿಕೆಯಿದೆ. ಈ ದೈವಗಳ ಜತೆಗೆ ಕಾಸರಗೋಡಿನ ಕೆಲವು ಭಾಗಗಳಲ್ಲಿ ತುಳುನಾಡಿನ ಕಳಂಜ ಕೂಡ ಕಂಡುಬರುತ್ತದೆ.
ಆದಿ ಮತ್ತು ವೇಡನ್ 2 ಭಿನ್ನ ದೈವಗಳು. ವೇಡನ್ ಶಿವನಾದರೆ ಆದಿ ಅವನ ಪತ್ನಿ ಪಾರ್ವತಿ ದೇವಿ, ಹಾಗೇ ಕಳಂಜ ಅರ್ಜುನನಾಗಿರುತ್ತಾನೆ. ಈ ಆದಿ ಮತ್ತು ವೇಡನ್ ತೆಯ್ಯಂ ಕಥೆ, ಮಹಾಭಾರತದಿಂದ ಬಂದಿದೆ ಎನ್ನಲಾಗುತ್ತದೆ. ಮಹಾಭಾರತದ ‘ವನಪರ್ವ’ ದಲ್ಲಿ ತಿಳಿಸುವಂತೆ, ಒಮ್ಮೆ ಅರ್ಜುನ ಕಠಿಣ ತಪಸ್ಸನ್ನು ಮಾಡುತ್ತಾನೆ. ಅರ್ಜುನನನ್ನು ಪರೀಕ್ಷಿಸಲು ಶಿವ ಮತ್ತು ಪಾರ್ವತಿ ದೇವಿಯು ಕಾಡುಕೋಣವಾಗಿ ಮಾರ್ಪಟ್ಟು ಅರ್ಜುನನ ತಪಸ್ಸಿನ ಸ್ಥಳಕ್ಕೆ ಬರುತ್ತಾರೆ. ಈ ಕ್ಷಣದಲ್ಲಿ ಮೂಕನೆಂಬ ರಾಕ್ಷಸನು ಕಾಡು ಹಂದಿಯ ವೇಷವನ್ನು ಧರಿಸಿ ಅರ್ಜುನನ ಧ್ಯಾನವನ್ನು ಕೆಡಿಸಲು ಮುಂದಾಗುತ್ತಾನೆ.
ಆ ಕ್ಷಣದಲ್ಲಿ ಅರ್ಜುನ ಧ್ಯಾನದಿಂದ ಏಳುತ್ತಾನೆ. ಇತ್ತ ಶಿವನು ಬೇಡರೂಪದಾರಿಯಾಗಿ ಕಾಡು ಹಂದಿಯ ಮೇಲೆ ಬಾಣವನ್ನು ಪ್ರಯೋಗಿಸಿದ ಆ ಸಮಯದಲ್ಲೇ ಅರ್ಜುನನು ಕೂಡ ಬಾಣವನ್ನು ಪ್ರಯೋಗಿಸಿದ್ದ. ಇದೇ ಸಮಯ ಅರ್ಜುನ ಮತ್ತು ಬೇಡನ ನಡುವೆ ವಾಕ್ ಸಮರವೇ ನಡೆಯುತ್ತದೆ. ಅರ್ಜುನನು ತನ್ನ ಬಾಣದಿಂದ ಹಂದಿಯು ಮೃತಪಟ್ಟಿತೆಂದು ಹೇಳಿದರೆ ಇತ್ತ ಬೇಡನು ನನ್ನಿಂದ ಎನ್ನುತ್ತಾನೆ. ಹೀಗಿರುವಾಗ ಅಲ್ಲೇ ಇದ್ದ ಶಿವಮೂರ್ತಿಗೆ ಅಡಿಗೆರೆದ ಅರ್ಜುನನಿಗೆ ಸತ್ಯದರ್ಶನವಾಗುತ್ತದೆ.
ಕಣ್ಣನ್ನು ಮುಚ್ಚಿದ ಬೇಡರೂಪದಾರಿಯಾಗಿ ಬಂದವನು ಸಾಕ್ಷಾತ್ ಪರಮ ಶಿವನೇ ಆಗಿದ್ದಾನೆ. ಕಾಡು ಕೋಣದ ರೂಪದಲ್ಲಿ ದಂಪತಿ ಬಂದದ್ದು, ಹಂದಿಯನ್ನು ಕೊಂದದ್ದು ತಿಳಿಯುತ್ತದೆ.ಹಾಗೆ ಶಿವ ನಿಜ ರೂಪ ದಾರಿಯಾಗಿ ‘ಪಾಶು ಪಥಾಸ್ತಮ್ ‘ (ಪಾಶುಪತಾಸ್ತ್ರ) ಎಂಬ ಬಾಣವನ್ನು ವರದ ರೂಪದಲ್ಲಿ ನೀಡುತ್ತಾರೆ.
ಆದಿ ಮತ್ತು ವೇಡನ್ ತೆಯ್ಯಂಗಳನ್ನು 2 ವಿಭಿನ್ನ ಸಮುದಾಯದವರು ಕಟ್ಟುತ್ತಾರೆ. ವನ್ನಾಣ್ ಸಮುದಾಯದ ಮಕ್ಕಳು ಆದಿಯಾಗಿಯೂ, ಮಲಯ ಸಮುದಾಯದ ಮಕ್ಕಳು ಬೇಡನಾಗಿಯು ದೈವವನ್ನು ಕಟ್ಟುತ್ತಾರೆ. ಕರ್ಕಾಟಕ ಮಾಸದ 7ನೇ ತಾರೀಖೀನಿಂದ ಮಾಸ ಮುಗಿಯುವ ತನಕ ಗ್ರಾಮಗಳಲ್ಲಿ ಸಂಚರಿಸುತ್ತಾರೆ. ಈ ದೈವ ಸಿಂಹ ಮಾಸದಲ್ಲಿ ಬರುವ ಓಣಂ ಹಬ್ಬವು ಶುಭದಾಯಕವಾಗಲೆಂದು ಹರಸುತ್ತದೆ.
ಈ ದೈವಗಳಿಗೆ ಮನೆಯಲ್ಲಿ ಬೆಳೆದ ತರಕಾರಿ, ಧನ ಧಾನ್ಯವ ಸಲ್ಪ ನೀಡಿ,ಒಂದಿಷ್ಟು ಆಚಾರ ಕ್ರಮಗಳನ್ನು ಮಾಡಬೇಕಾಗುತ್ತದೆ. ಆ ದೈವದ ಪಾಡ್ದನದಲ್ಲಿ ಮನೆಗೆ ಬಂದಿರುವ ಮಾರಿ ಹೊಗಲಿ ಅರ್ಥಾತ್ ಸಾಂಕ್ರಾಮಿಕ ರೋಗ ಬರದಿರಲಿ ಬಂದರೆ ನಿವಾರಣೆಯಾಗಲಿ, ಎಂದಿರುತ್ತದೆ. ಹಿಂದಿನ ವೈಭವದ ಕ್ಷಣಗಳು ತುಸು ಕಡಿಮೆಯಾದಂತೆ ತೋರಿದರೂ, ಹಳೇ ಆಚರಣೆಗಳು ಇಂದೂ ಮಲಬಾರ್ ಭಾಗದಲ್ಲಿ ಜೀವಂತವಾಗಿದೆ.
-ಗಿರೀಶ್ ಪಿ.ಎಂ., ಕಾಸರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.