Deepavali Festival: ಬೆಳಕಿನೊಂದಿಗೆ ಸಂತೋಷ ಹರಡಲಿ


Team Udayavani, Nov 3, 2024, 3:56 PM IST

15

ಅ‌ಲ್ಲೊಂದೆಡೆ ಮಳೆಯಾಗಿ, ಇನ್ನೊಂದೆಡೆ ಅತಿ ಶಾಖವಾಗಿ, ಮನಸಿನಲ್ಲಿ ಗೊಂದಲವಿದ್ದರೂ ಸಂಭ್ರಮದಿಂದ ದೀಪ ಹಚ್ಚಿ ಜೀವನದ ಬೆಳಕನ್ನು ನಿಮ್ಮದಾಗಿಸಿಕೊಳ್ಳಿ. ಈ ಹಬ್ಬ ಬೆಳಕಿನೊಂದಿಗೆ ಸಂತೋಷವನ್ನು ಹರಡಲಿ ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು!

ಒಂದು ಹಣತೆಯಿಂದ ಇನ್ನೊಂದು ಹಣತೆ ಹಚ್ಚುವ ವಿಧಾನವೇ ಎಷ್ಟು ಸೊಗಸಲ್ಲವೇ. ಒಬ್ಬರ ಬಾಳನ್ನು ಇನ್ನೊಬ್ಬರು ಬೆಳಗುವಂತೆ. ಜೀವನ ಎಷ್ಟೇ ಕಷ್ಟವೆನಿಸಿದರು ಹಬ್ಬ ಬಂದಾಗ ಎಲ್ಲವನ್ನೂ ಮರೆತು ಸಂಭ್ರಮದಿಂದ ಆಚರಿಸುತ್ತೇವೆ ಅದಕ್ಕೆ ಅಲ್ವೇ ಹಿರಿಯರು ಹಬ್ಬ – ಹರಿ ದಿನಗಳನ್ನು ತಿಂಗಳಿಗೊಮ್ಮೆಯಾದರು ಇಟ್ಟಿರೋದು.

ಪ್ರತಿ ಹಬ್ಬದ ಹಿಂದೆ ಪುರಾಣ ಕಥೆಗಳು ಇದ್ದೆ ಇರುತ್ತವೆ ನಾವು ಕೇಳಿರುವ ಹಾಗೆ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೇ ದೀಪಾವಳಿ ಆಚರಣೆ. ಒಂದೊಂದು ದಿನಕ್ಕೂ ಅರ್ಥವಿದೆ, ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ನರಕ ಚತುರ್ದಶಿ.

ಮರುದಿನ ಅಮವಾಸ್ಯೆ ಅನಂತರ ಬಲಿಪಾಡ್ಯಮಿ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಸೂಚಿಸುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೆಟ್ಟತನದ ಮೇಲೆ ವಿಜಯವನ್ನು ಆಚರಿಸಲಾಗುತ್ತದೆ ಹಾಗೂ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ.

ಹಬ್ಬದ ಸಂಭ್ರಮ ಸಡಗರ ನಿಮ್ಮ ಮನೆಯಲ್ಲಿ ಹೇಗಿರುತ್ತೆ? ನಮ್ಮ ಮನೆಯಲ್ಲಂತೂ ದೀಪಗಳದ್ದೇ ಹಾವಳಿ, ದೀಪಾವಳಿ ಹಬ್ಬದ ದಿನಕ್ಕಿಂತ ಹಿಂದಿನ ದಿನವೇ ಹೆಚ್ಚು ಚಂದ! ಮನೆಗೆ ಬೇಕಿರುವ ಎಲ್ಲಾ ಸಾಮಗ್ರಿಗಳನ್ನು ಪಟ್ಟಿ ಮಾಡಿ ಅಪ್ಪ ದಿನಸಿ ಅಂಗಡಿಗೆ ಹೋಗಿ ಬರುತ್ತಾರೆ ಇನ್ನೊಂದೆಡೆ ಮಕ್ಕಳೆಲ್ಲ ಪಟಾಕಿ ಬಾಕ್ಸ್‌ಗಾಗಿ ಕಾಯುತಿರುತ್ತೇವೆ ಬರುತ್ತಾ ಅಪ್ಪ ಇದ್ದಷ್ಟು ಹಣದಲ್ಲೆ ಒಂದಷ್ಟು ಸುರಸುರ ಬತ್ತಿ, ಭೂಚತ್ರ, ಹೂಕುಂದ ಕೆಲವು ಹಸುರು ನೀಲಿ ಬಣ್ಣದ ಸಿಡಿಯುವ ಪಟಾಕಿಗಳನ್ನು ತಂದಿರುತ್ತಾರೆ. ಅಷ್ಟನ್ನೇ ಬೀದಿಯಲ್ಲಿವ ಸ್ನೇಹಿತರಿಗೆ ತೋರಿಸುತ್ತಾ ಯಾರ ಬಾಕ್ಸ°ಲ್ಲಿ ಎಷ್ಟಿದೆ? ಎಂದು ಲೆಕ್ಕ ಹಾಕುತ್ತೇವೆ. ಅಷ್ಟರಲ್ಲಿ ಅಮ್ಮ ಮನೆಯೊಳಗಿಂದ ಪಟಾಕಿ ನಾಳೆಗೆ ಇವತ್ತಿಗಲ್ಲ! ಎಂದು ಗದರುತ್ತಾಳೆ. ಮರುದಿನ ಎದ್ದು ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು, ಕೈ ತುಂಬ ಗಲ ಗಲ ಬಳೆ ತೊಟ್ಟು ಮನೆಯಲ್ಲ ಓಡಾಡುವುದೇ ಸಂಭ್ರಮ.

ಅಮ್ಮ ಅಡುಗೆ ಮನೆಯಲ್ಲಿ ಸಿಹಿ ಹೋಳಿಗೆ ಮಾಡುತ್ತಿ‌ದ್ದಾರೆ, ಅಪ್ಪ ಮಾವಿನ ತೋರಣ ಕಟ್ಟುತ್ತಿರುತ್ತಾರೆ. ಅಜ್ಜಿ ಎಲ್ಲ ಸರಿ ಇದೀಯ ಇಲ್ವಾ ನೋಡ್ತಾ ಇರ್ತಾರೆ, ನಾವು ಊಟ ಮಾಡಿ ರಾತ್ರಿಗಾಗಿ ಕಾಯ್ತಾ ಇರ್ತೀವಿ. ಸಂಜೆ ಮುಗಿದು ರಾತ್ರಿಯಾದ ಕೂಡಲೇ ಮನೆಯ ಅಂಗಳದಿಂದ ಹಿಡಿದು ದೇವರ ಕೋಣೆಯ ವರೆಗೂ ಬೆಳಕಿನ ಸಂಭ್ರಮ, ಹೆಜ್ಜೆ ಹೆಜ್ಜೆಗೂ ಸಿಗುವ ದೀಪಗಳು ಮುಂದಿನ ಜೀವನದ ಬೆಳಕನ್ನು ಸೂಚಿಸುತ್ತಿರುತ್ತವೆ. ಇಲ್ಲೊಂದೆಡೆ ಮಕ್ಕಳೆಲ್ಲಾ ಪಟಾಕಿ ಬಾಕ್ಸ್‌ ತಗೊಂಡು ಓಡಿಬಿಡುತ್ತಾರೆ, ಬೀದಿಯಲ್ಲಾ ಹಬ್ಬದ ಸಂಭ್ರಮ. 3 ದಿನದ ದೀಪಾವಳಿಯಲ್ಲಿ ಒಂದು ದಿನವಾದರೂ ದೇವಸ್ಥಾನಕ್ಕೆ ಹೋಗಿ ಬರದಿದ್ದರೆ ಮನೆಯವರಿಗೆ ಸಮಾಧಾನವಿಲ್ಲ. ಇಷ್ಟೆಲ್ಲಾ ಹಬ್ಬದ ನೆನಪು ಬಾಲ್ಯದಿಂದ ಇಲ್ಲಿಯವರೆಗೂ ಅಚ್ಚುಳಿದು ಬಿಟ್ಟಿದೆ. ಜೀವನ ಎಂಬ ಜಂಜಾಟದಲ್ಲಿ ಎಷ್ಟೋ ವಿಷಯಗಳನ್ನು ಕೂಡ ಲೆಕ್ಕಿಸದೆ ಜೀವನದ ಬಗ್ಗೆ ಕಂ‌ಪ್ಲೆಂಟ್ ಮಾಡ್ತಾ ಬದುಕುವುದು ಎಷ್ಟು ಸರಿ! ಇಷ್ಟೆಲ್ಲಾ ಸೊಗಸಾದ ಹಬ್ಬವನ್ನು ದಿವಾಳಿ ಎಂದು ಹೇಳಿ ದೀಪದ ಹಸ್ತಿತ್ವವನ್ನು ಮರೆಮಾಡುವುದು ಖಂಡಿತ ಸರಿಯಿಲ್ಲ. ಅದಕ್ಕೆ ಒಟ್ಟಿಗೆ ಎಲ್ಲರೂ ಹೇಳ್ಳೋಣ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

-ವರ್ಷಾ ಟಿ.ಎಂ., ಎಟಿಎಂಇ ಎಂಜಿನಿಯರಿಂಗ್‌ ಕಾಲೇಜು, ಮೈಸೂರು

ಟಾಪ್ ನ್ಯೂಸ್

1-CT

C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Sathish-jarakhoili

Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

1-allu

Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು

1-modi-bg

Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-CT

C.T.Ravi; ನನ್ನ ಬಂಧನ ನ್ಯಾಯಾಂಗ ತನಿಖೆಯಾಗಲಿ…ಈಗಲೂ ಜೀವ ಬೆದರಿಕೆ ಇದೆ

Pro Kabaddi: ಪಾಟ್ನಾ-ಗುಜರಾತ್‌ ಟೈ

Pro Kabaddi: ಪಾಟ್ನಾ-ಗುಜರಾತ್‌ ಟೈ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ

G.parameshwar

C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್‌

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.