UV Fusion: ಋಣವನ್ನು ಎಂದಿಗೂ ಮರೆಯದಿರೋಣ

Team Udayavani, Oct 12, 2024, 1:21 PM IST

7-uv-fusion

ಪ್ರತಿಯೊಬ್ಬರ ಜೀವನದಲ್ಲಿ ನಾನು ಎಂಬ ಪಾತ್ರದೊಂದಿದೆ ಇತರರ ಪಾತ್ರವೂ ಪ್ರಮುಖವಾಗಿರುತ್ತದೆ. ನಮಗನಿಸಬಹುದು ನಾನು ಜೀವನದಲ್ಲಿ ಯಾರ ಋಣದಲ್ಲೂ ಬದುಕಿಲ್ಲ, ಯಾರ ಋಣವೂ ನನ್ನ ಮೇಲಿಲ್ಲ ಎಂದು. ಆದರೆ ಆ ಆಲೋಚನೆ ತಪ್ಪು. ಕೂಲಂಕುಷವಾಗಿ ನೋಡಿದರೆ ಒಂದಲ್ಲ ಒಂದು ರೀತಿಯಲ್ಲಿ ನಾವು ಬೇರೆಯವರ ಋಣದಲ್ಲಿ ಜೀವಿಸುತ್ತಿರುತ್ತೇವೆ.

ಋಣ ಎಂದರೆ ಹಣ ಮಾತ್ರವಲ್ಲ, ಬಾಲ್ಯದಲ್ಲಿ ನಮಗೆ ತುತ್ತು ತಿನ್ನಿಸಿದ ನೆರೆಮನೆಯ ಅಕ್ಕ, ನಾವು ಶಾಲೆಗೆ ಹೋಗುವಾಗ ನಮ್ಮನ್ನು ಕಂಡು ಬೈಕ್‌ ನಿಲ್ಲಿಸಿ ಶಾಲೆಯ ಹತ್ತಿರ ಬಿಡುವ ನೆರೆಯ ಅಣ್ಣ, ಊರಿನ ಅಂಗಡಿಯಲ್ಲಿ ಒಂದು ರೂಪಾಯಿ ಕಮ್ಮಿ ಇದ್ದರು ನಮ್ಮಿಷ್ಟದ ತಿನಿಸು ಕೊಟ್ಟ ನಗು ಮುಖದ ಅಂಗಡಿಯಣ್ಣ, ಶಾಲೆಯಲ್ಲಿ ತಂದೆಗೆ ಸಮಾನರಾಗಿ ವಿದ್ಯೆ ಕಲಿಸಿದ ಮೇಷ್ಟ್ರು, ಬಂಧುವಿನಂತೆ ಸಮಯದಲ್ಲಿ ನೆರೆವಾದ ಗೆಳೆಯರು, ಹೆಗಲಿಗೆ ಬಲ ನೀಡಿ ಬೆಳೆಸಿದ ಹಡೆದವರು, ರಕ್ತ ಹಂಚಿಕೊಂಡು ಬೆಸೆದ ಬಂದದಲ್ಲಿ ತಂದೆಯಂತೆ ಬುದ್ಧಿ ಹೇಳುವ ದೊಡ್ಡಪ್ಪ- ಚಿಕ್ಕಪ್ಪ, ನಮ್ಮಿಷ್ಟಗಳನ್ನು ಅರಿತು ಬೆರೆತು ಸಲಹುವ ಅಣ್ಣ-ತಮ್ಮ ಹೀಗೆ ನಮ್ಮ ಜೀವನ ರಾಷ್ಟ್ರ ಕವಿ ಜಿ. ಎಸ್‌. ಶಿವರುದ್ರಪ್ಪ ಹೇಳಿರುವಂತೆ ಎನಿತು ಜನ್ಮದಲಿ ಎನಿತು ಜೀವರಿಗೆ, ಎನಿತು ನಾವು ಋಣಿಯೊ ತಿಳಿದು ನೋಡಿದರೆ ಬಾಳು ಎಂಬುದಿದು, ಋಣದ ರತ್ನಗಣಿಯೊ. ಹೀಗೆ ನಮ್ಮ ಜೀವನವೇ ಒಂದು ಋಣದ ರತ್ನಗಣಿ. ಈ ಋಣವನ್ನು ಹಣ ಅಥವಾ ಉಡುಗೊರೆಯ ರೂಪದಲ್ಲಿ ತೀರಿಸಲು ಸಾಧ್ಯವಿಲ್ಲ.

ಋಣದ ಮಹತ್ವಕ್ಕೆ ಮತ್ತೂಂದು ಸಾಕ್ಷಿ ಶ್ರೀ ಕೃಷ್ಣ ಪರಮಾತ್ಮ. ಶ್ರೀಕೃಷ್ಣ ಹಿಂದಿನ ಜನ್ಮದಲ್ಲಿ ರಾಮನಾಗಿ ವನವಾಸದಲ್ಲಿದ್ದ ಸಂದರ್ಭ ನೀರಿಗಾಗಿ ಹುಡುಕುವಾಗ ನವಿಲೊಂದು ರಾಮನಿಗೆ ನೀರಿರುವ ಸ್ಥಳವನ್ನು ತೋರಿಸುವೆನೆಂದು ಕರೆದುಕೊಂಡು ಹೋಗುತ್ತದೆ. ನವಿಲು ತಾನು ಹಾರಿದರೆ ತನ್ನ ಗರಿಗಳು ಬಿದ್ದು ಸಾಯುವುದಾಗಿ ತಿಳಿದಿದ್ದರೂ ರಾಮನಿಗೆ ನೀರಿರುವ ಸ್ಥಳವನ್ನು ತೋರಿಸಿ ತನ್ನೆಲ್ಲಾ ಗರಿಗಳನ್ನು ಕಳೆದುಕೊಂಡು ರಕ್ತಸ್ರಾವದಿಂದ ಸಾವನ್ನಪ್ಪುತ್ತದೆ. ರಾಮನು ನವಿಲಿಗೆ ಮುಂದಿನ ಜನ್ಮದಲ್ಲಿ ನಿನ್ನ ಋಣವನ್ನೂ ಸ್ಮರಿಸುತ್ತೇನೆ, ನಿನ್ನ ಗರಿಯನ್ನು ನನ್ನ ಕಿರೀಟದಲ್ಲಿ ಮೆರೆಸುತ್ತೇನೆ ಎಂದು ಮಾತು ನೀಡುತ್ತಾನೆ. ಅಂತೆಯೇ ಮುಂದಿನ ಜನ್ಮದಲ್ಲಿ ಶ್ರೀಕೃಷ್ಣನಾಗಿ ಜನಿಸಿದಾಗ ತನ್ನ ಕಿರೀಟದಲ್ಲಿ ನವಿಲುಗರಿಯನ್ನು ಧರಿಸಿ ನವಿಲಿನ ಋಣವನ್ನ ಸ್ಮರಿಸುತ್ತಾನೆ.

ಇದೇ ರೀತಿ ನಾವು ಕೂಡ ಜೀವನದಲ್ಲಿ ಹಲವರಿಂದ ಒಂದಲ್ಲ ಒಂದು ರೀತಿಯಲ್ಲಿ ಋಣವನ್ನು ಹೊಂದಿರುತ್ತೇವೆ. ಅವರ ಋಣವನ್ನು ಸ್ಮರಿಸಿ ಅವರನ್ನು ಗೌರವಿಸೋಣ, ಸಮಯ ಒದಗಿದರೆ ಅವರಿಗೆ ನೆರೆವಾಗೋಣ, ಜತೆಗೆ ಸವಿ ನೆನಪುಗಳನ್ನು ಸೃಷ್ಟಿಸೋಣ. ನಮಗೆ ಜೀವನದಲ್ಲಿ ಋಣದ ಅರಿವು ನಮಗಿದ್ದರೆ ನಮ್ಮ ಗುಣವು ಕೂಡ ಒಳಿತಿನ ಹಾದಿಯಲ್ಲಿ ಸಾಗುತ್ತದೆ.

 -ಮಂಜೇಶ್‌ ದೇವಗಳ್ಳಿ

ಮೈಸೂರು

ಟಾಪ್ ನ್ಯೂಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.