Friendship: ಚಿರಕಾಲ ಈ ಸ್ನೇಹ ನಮ್ಮದಾಗಿರಲಿ
Team Udayavani, Jul 9, 2024, 7:34 PM IST
ನಲ್ಮೆಯ ಸ್ನೇಹಿತನಿಗೆ , ಮರೆತರೂ ನೆನಪಿರುವ , ದೂರವಾದರೂ ಜತೆಗಿರುವ ನನ್ನ ಆತ್ಮೀಯ ಸ್ನೇಹಿತರೆ ನೀವೆಲ್ಲಾರೂ ನನ್ನ ಮನದಾಳದಲ್ಲಿ ಎಂದಿಗೂ ಸಿಹಿ ನೆನಪಾಗಿ ಉಳಿಯುತ್ತಿರಾ. ನಿಮ್ಮೊಂದಿಗೆ ಕಳೆದ ಆ ಸವಿ ನೆನಪುಗಳು ಎಂದೂ ಮರೆಯಲಾಗದು.
ಬಾಲ್ಯ ಎಂಬುದು ಪ್ರತಿಯೊಬ್ಬರ ಜೀವನದ ಅಮೂಲ್ಯವಾದ ಮತ್ತು ಎಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ಸಿಹಿ ನೆನಪು. ಬಾಲ್ಯದಲ್ಲಿ ಸ್ನೇಹಿತರೊಂದಿಗಿನ ತರ್ಲೆ-ತುಂಟಾಟ, ಅಮ್ಮನ ಮಾತು ಕೇಳದೆ ಅವಳಿಂದ ಬಂದ ಬೈಗುಳದ ಮಾತುಗಳು, ಶಾಲೆಯನ್ನು ಬಿಟ್ಟು ಹೊರಗೆ ಹೊಗಿದ್ದು ಎಲ್ಲವು ಒಂದು ಸಿಹಿ ಕನಸಾಗಿ ಉಳಿದು ಬಿಟ್ಟಿದೆ. ಇವಾಗ ನಾವೆಲ್ಲರೂ ದೊಡ್ಡವರಾಗಿ ನಮ್ಮದೇ ಆದ ಜವಬ್ದಾರಿಯನ್ನು ನಿರ್ವಹಿಸುತ್ತ ನಮ್ಮ ಕನಸುಗಳನ್ನು ಸಾಕಾರಗೊಳಿಸುವತ್ತ ನಿರತರಾಗಿದ್ದೇವೆ.
ಸಮಯ ಕಳೆಯುತ್ತಾ ಹೋದಂತೆ ನಾವು ಅದರಲ್ಲಿ ಎಷ್ಟರ ಮಟ್ಟಿಗೆ ಮುಳುಗಿ ಹೋಗಿದ್ದೇವೆ ಎಂದರೆ ನಮ್ಮನ್ನೇ ನಾವು ಮರೆತು ಹೋಗಿದ್ದೇವೆ. ಗೆಳೆಯರನ್ನು ಭೇಟಿ ಮಾಡುವ ಸಮಯ ಯಾವಾಗ ಬರುತ್ತೋ ಅಂತ ಕಾಯುತ್ತಾ ಕುಳಿತಿದ್ದ ನನಗೆ ಇಂದು ಬಹಳಷ್ಟು ಸಂತೋಷವಾಗಿದೆ. ಸುಮಾರು ವರ್ಷಗಳ ಅನಂತರ ನನ್ನ ಎಲ್ಲ ಸ್ನೇಹಿತರನ್ನು ಭೇಟಿಯಾಗುವ ಸಂದರ್ಭ ಬಂದಿದೆ.
ಬದುಕಿನ ಅನಿರ್ವಾಯಕ್ಕಾಗಿ ನಾವೆಲ್ಲರೂ ದೂರವಿದ್ದರೂ ಸಹ ಹೃದಯದ ಪೂರ್ವಕವಾಗಿ ನಾವೆಲ್ಲ ಆಗಾಗ ಕರೆ ಮಾಡಿ ಮಾತನಾಡುತ್ತಿದ್ದೆವು ನಮ್ಮ ಸಂತೋಷ ಮತ್ತು ದುಃಖದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ನಾನು ನಿಮ್ಮೊಂದಿಗೆ ನನ್ನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಪತ್ರ ಬರೆದು ನಿಮಗೆ ಕಳುಹಿಸಿದ್ದು ಉಂಟು.
ಸ್ನೇಹವಿಲ್ಲದೇ ಸಂಬಂಧವೇ ಇಲ್ಲ ಎನ್ನು ಗಾದೆ ಮಾತಿದೆ. ನಾನು ಕಾಲೇಜಿನಲ್ಲಿ ಹಲವಾರು ಸ್ನೇಹಿತರೊಂದಿಗೆ ಕೂಡಿ ಆಡಿದ್ದೇನೆ. ತರ್ಲೆ ತುಂಟಾಟ ಮಾಡಿದರು ನಿಮ್ಮೊಂದಿಗಿನ ನೆನಪುಗಳು ಎಲ್ಲಕಿಂತ ದೊಡ್ಡದಾಗಿವೆ. ನಾನು ಬಿದ್ದಾಗ ಮೇಲಕ್ಕೆತ್ತಿ ಸೋತಾಗ ಬೆನ್ನುತಟ್ಟಿ ನನ್ನೊಂದಿಗೆ ಸದಾ ಬೆಂಗಾವಲಾಗಿ ನಿಂತವರು ನೀವು. ಜೀವನದ ಕೇಲವು ಜವಬ್ದಾರಿಗಳನ್ನು ನಿಭಾಯಿಸುತ್ತಾ ನಾವೆಲ್ಲರೂ ಬೇರೆಯಾಗುವ ಸನ್ನಿವೇಶಗಳು ಎದುರಾದವು.
ಆದರೆ ಇಂದು ನಾವೆಲ್ಲರೂ ಒಂದೆಡೆ ಸೇರಿದ್ದೇವೆ, ಹರಟೆ ಹೊಡೆಯೋಣ ಮಜಾ ಮಾಡುತ್ತಾ ನಾವು ಕಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕೋಣ. ಆ ದಿನಗಳಲ್ಲಿ ಎಲ್ಲ ಗೆಳೆಯರು ಸೇರಿ ಯಾವೂದೇ ಭೇದ-ಭಾವವಿಲ್ಲದೆ ವಿಜೃಂಭಣೆಯಿಂದ ಆಚರಿಸುತ್ತಿದ್ದ ಸ್ನೇಹಿತರ ದಿನ ನನಗೆ ಸದಾ ಕನಸಿಲ್ಲಿ ಕಾಡುತ್ತದೆ. ಆ ದಿನ ನಾವಿಲ್ಲ ಶುಭ್ರವಾದ ಹೊಸ ಬಟ್ಟೆ ತೊಟ್ಟು, ಹೊಳೆಯುತ್ತಿದ್ದ ಆ ಮುಗ್ಧ ಮನಸ್ಸುಗಳು ಈಗಲೂ ನನ್ನ ಕಣ್ಮುಂದೆ ಬರುತ್ತದೆ.
ಅಂಗೈಯಿಂದ ಮುಂಗೈವರೆಗೂ ಕಟ್ಟಿಸಿಕೊಂಡ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ನಮ್ಮ ಸ್ನೇಹದ ಬಂಧನವನ್ನು ಇನಷ್ಟು ಗಟ್ಟಿಗೊಳಿಸಿದವು. ಹೀಗೆ ನೆನೆಯುತ್ತಾ ಹೋದರೆ ಹಲವಾರು ಘಟನೆಗಳು ಕಣ್ಮುಂದೆ ಬರುತ್ತವೆ. ಆದರೆ ಒಂದು ಕಣ್ಣೊರೆಸುವ ಮತ್ತು ತಲೆ ಸವರುವ ಕೈಗಳು, ಬಿದ್ದಾಗ ಮೇಲೆತ್ತುವ ಭುಜಗಳು, ಉತ್ತೇಜಿಸುವ, ಸಂತೈಸುವ ಒಳ್ಳೆಯ ಮನಸ್ಸು ನಿಮ್ಮದು.
ಗೆಳೆಯ ಎದ್ದಾಗ ಸಂಭ್ರಮಿಸುವ, ದಾರಿ ತಪ್ಪಿದಾಗ ಕೈ ಹಿಡಿದು ತಿದ್ದುವ, ದೇಹ ಎರಡು, ಆತ್ಮವೊಂದೇ ಎಂಬಷ್ಟರ ಮಟ್ಟಿಗೆ ನಮ್ಮ ಸ್ನೇಹ ಇದು. ಜೀವನ ಅದೆಷ್ಟು ಸುಂದರ ಎಂಬ ಭಾವನೆಯನ್ನು ನಮಗೆ ಬೊಗಸೆಯಲ್ಲಿ ಕಟ್ಟಿಕೊಡುವ ನೆರಳು ಪಡೆದು ನೆರಳು ನೀಡುವ ಆ ಗೆಳೆತನದ ವೃಕ್ಷಗಳು ನಮ್ಮ ಸ್ನೇಹ. ಯಾರೇ ಬಂದರು ಯಾರೇ ಹೋದರು ಚಿರಕಾಲ ಹೀಗೆ ಇರಲಿ ನಮ್ಮ ಸ್ನೇಹ ಎಂದು ಆ ದೇವರಲ್ಲಿ ನಾನು ಬೇಡಿಕೊಳ್ಳುತ್ತೇನೆ.
- ಶೃತಿ ಬೆಳ್ಳುಂಡಗಿ
ವಿಜಯಪುರ (ಕನ್ನೂರ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.