UV Fusion: ಹಚ್ಚ ಬೇಕು ನೆಮ್ಮದಿ ದೀಪವ ಬಾಳಿನ ಬೆಳಕಿಗೆ

Team Udayavani, Nov 3, 2024, 3:41 PM IST

14

ದೀಪವು ಶುಭಕರ ಸಂಕೇತ. ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳನ್ನು ಆಹ್ವಾನಿಸುತ್ತದೆ ಮತ್ತು ದುಷ್ಟ ಶಕ್ತಿಗಳು ನಾಶವಾಗಿ ಸಮೃದ್ಧಿ ಮತ್ತು ಸಂತೋಷ ನೆಮ್ಮದಿ ತರುತ್ತದೆ. ಕತ್ತಲು ಅಂದರೆ ಭಯ ಯಾರಿಗೂ ಇಷ್ಟವಾಗದು! ಪ್ರಜ್ವಲಿಸುವ ಬೆಳಕೆ ಕಣ್ಣಿಗೆ ಹಬ್ಬ. ಎಲ್ಲೆಲ್ಲೂ ಬೆಳಕು ಬಣ್ಣ ಬಣ್ಣದ ರಂಗವಲ್ಲಿ ಮಣ್ಣಿನ ಹಣತೆಗಳು, ರಂಗು ರಂಗಿನ ಚಿತ್ತಾರದ ಕಂದೀಲುಗಳ ಬೆಳಗು ದೀಪಗಳ ಸಡಗರ. ಈ ದೀಪ ನಮ್ಮ ದಿನನಿತ್ಯದ ಒಂದು ಸುಂದರವಾದ ಸಂಜೀವಿನಿ. ಬಾಳಿನ ಉದ್ದಕ್ಕೂ ಅಜ್ಞಾನ ಮತ್ತು ಅಂಧಕಾರ ತೊಲಗಿಸಲು ಜ್ಞಾನದ ದೀವಿಗೆಯ ಹಚ್ಚಬೇಕು. ಬದುಕಿನಲ್ಲಿ ಕನಸುಗಳು ನೂರಾರು ಈಡೇರುವುದು ಒಂದೊ ಅಥವಾ ಎರಡೊ, ಹಾಗೆಂದು ಕನಸು ಕಾಣುವುದನ್ನು ನಿಲ್ಲಿಸಲು ಸಾಧ್ಯವೇ ? ಇವತ್ತಲ್ಲ ನಾಳೆ ನೆರವೇರಲಿದೆ ಎಂಬ ಆಶಾ ದೀಪವನ್ನು ಹೊತ್ತು ಬದುಕಿನ ಹಾದಿಯೊಳು ಹೆಜ್ಜೆ ಇಡಬೇಕು. ಭಾವನೆಗಳ ಮಹಾಸಾಗರಕ್ಕೆ ಸುನಾಮಿ ಅಲೆ ಬಡಿಯಿತು ಎಂದು ಕುಸಿದು ಬೀಳಲು ಸಾಧ್ಯವೇ ಸಮಾಧಾನದ ಜ್ಯೋತಿಯನ್ನು ನಮ್ಮ ಮನಸ್ಸಿಗೆ ನಾವೇ ಹಚ್ಚಿಕೊಳ್ಳಬೇಕು…ಇಲ್ಲಿ ಯಾರಿಗೆ ಯಾರೂ ಇಲ್ಲ ನಾವು ಸಂತೋಷವಾಗಿದ್ದರೆ ಲೋಕವೇ ಜ್ಯೋತಿರ್ಮಯ. ನಾವು ದುಃಖದಲ್ಲಿದ್ದರೆ ಕಣ್ಣೀರ ಕಡಲು ಅದಕ್ಕೆ ಮನಸ್ಸಿನ ಮಹಾನಂದಕ್ಕೆ ನೆಮ್ಮದಿಯ ದೀಪ ಹಚ್ಚಬೇಕು.

ಗೆಲ್ಲುವ ಬೆಳಕು ಕಾಣುವೆ ಎಂಬ ಭರವಸೆ ಇದ್ದರೆ ಗೆದ್ದು ಬರುವೆ ಸೋತರು ಮುಂದೆ ಗೆಲ್ಲುವೆ ಎಂಬ ನಂಬಿಕೆಯನ್ನು ತುಂಬಿಕೊಂಡು ಮುನ್ನಡೆಯಬೇಕು. ನಮ್ಮವರಲ್ಲ ದವರು ನಮ್ಮವರು ಈ ಬದುಕಿನ ಪಾಠವ ಕಲಿಸಿ ಬಿಡುವವರು. ಒಳ್ಳೆಯದನ್ನು ಬಯಸಿದರೆ ಅವರನ್ನು ನೆನೆದು ಮನಸ್ಸಿನಲ್ಲಿ ನೆನಪಿನ ದೀಪ ಹಚ್ಚುತ್ತೇವೆ. ಅದೇ ಕೆಟ್ಟದ್ದನ್ನು ಬಯಸಿದರೆ ಮನಸ್ಸಿನ ಮನೆಯಲ್ಲಿ ಅವರ ನೆನಪನ್ನು ಅಳಿಸಿ ಮುಂದೆ ಸಾಗಬೇಕು ನಮ್ಮ ನಾಳೆಯ ಖುಷಿ ಮತ್ತು ನೆಮ್ಮದಿಗಾಗಿ. ಹಳೆಯ ಹೆಜ್ಜೆಗುರುತುಗಳು ಒಂದಷ್ಟು ಕಾಡುವ ನೆನಪುಗಳು ಅಗಣಿತವಾದ ನೋವಿದ್ದರೂ ಎಲ್ಲವ ಮರೆತು ಹೆಜ್ಜೆ ಇಡಲು ಮರೆತು ಬದುಕವ ದೀಪ ಹಚ್ಚಲೇಬೇಕು. ನಮ್ಮ ಕೈಯಲ್ಲಿ ಆಗುವಷ್ಟು ಮತ್ತೂಬ್ಬರಿಗೆ ಸಹಾಯ ಮಾಡಿ ಬದುಕುವುದು ಪಡೆದ ಪುಣ್ಯವಷ್ಟೇ ಗಳಿಸಿದ್ದು. ಪ್ರೀತಿ ಭಾವನೆಗಳಿಗೆ ತಿರಸ್ಕಾರ ಸಿಕ್ಕಿದಾಗ ನಮ್ಮನ್ನು ಕುಗ್ಗಿಸಿ ಬಿಡುತ್ತದೆ. ಹಾಗೆಂದ ಮಾತ್ರಕ್ಕೆ ಅದೇ ಕನವರಿಕೆಯಲ್ಲಿ ಕಾಲ ಕಳೆಯಲು ಸಾಧ್ಯವೇ ? ಜಗದ ಸೂರ್ಯ ದಿನವೂ ಬೆಳಗಿದಂತೆ ಮನಸ್ಸಿನ ಪರಿವರ್ತನೆ ಆಗಲೇಬೇಕು ಬದಲಾವಣೆ ಜಗತ್ತಿನ ನಿಯಮ ಅದಕ್ಕನುಗುಣವಾಗಿ ಬದಲಾಗುವುದು ಸಂದರ್ಭಗಳು. ಕಾಲಚಕ್ರ ತಿರುಗುತ್ತಿದ್ದಂತೆ ಮೇಲೆ ಇದ್ದವರು ಕೆಳಗೆ, ಕೆಳಗಿದ್ದವರು ಮೇಲೆ ಬರಲೇಬೇಕು ತಿರಸ್ಕರಿಸಿ ಹೋದವರೆ ನಮ್ಮ ಒಳ್ಳೆಯತನವನ್ನು ನೆನೆದು ಬರುವರು ಆದರೆ ಅಷ್ಟರಲ್ಲಿ ಕಾಲ ಮಿಂಚಿ ಮರೆಯಾಗಿ ಬಿಡುವುದು. ಸ್ವಾರ್ಥ-ನಿಸ್ವಾರ್ಥಗಳ ನಡುವೆ ಭಾವನೆಗಳ ಸಂಘರ್ಷ. ನಾನು ನಾನು ಎನ್ನುವ ಮೋಹ ಇರುವ ತನಕ ಇರುವುದೆಲ್ಲ ನನ್ನದೇ! ಇವತ್ತು ಒಬ್ಬರನ್ನು ನೋಯಿಸಿ ಬದುಕುತ್ತೇವೆ ಆದರೆ ಒಂದು ದಿನ ನಮಗೂ ನೋವು ಚಿಂತೆ ಕಟ್ಟಿಟ್ಟ ಬುತ್ತಿ ಅಲ್ಲವೇ? ಇದುವೇ ಜೀವನ. ದ್ವೇಷ ಅಸೂಯೆಯ ಅಂಧಕಾರವನ್ನು ತೊಲಗಿಸಿ ಬೆಳಗಬೇಕು ಬಾಳಲ್ಲಿ ನೆಮ್ಮದಿ ಶಾಂತಿ ದೀಪ.

-ವಾಣಿ, ಮೈಸೂರು

ಟಾಪ್ ನ್ಯೂಸ್

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

UV Fusion; ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.