UV Fusion: ಆಕೆಗೂ ಒಂದು ಮನಸ್ಸಿದೆ
Team Udayavani, Apr 18, 2024, 2:08 PM IST
ಹೆಣ್ಣು ಸಂಸಾರದ ಕಣ್ಣು ಎಂಬ ಮಾತಿದೆ. ಹೆಣ್ಣನ್ನು ದೇವರಂತೆ ಪೂಜಿಸುವ ದೇಶ ನಮ್ಮದು. ಪ್ರೀತಿ, ಸಹನೆ, ತಾಳ್ಮೆ, ಮಮತೆ, ವಾತ್ಸಲ್ಯಕ್ಕೆ ಮತ್ತೂಂದು ಹೆಸರೇ ಹೆಣ್ಣು. ತನ್ನಲ್ಲಿರುವ ಅದೆಷ್ಟೋ ನೋವುಗಳನ್ನು ಸಹಿಸಿ, ಇತರರ ಕಣ್ಣೀರನ್ನು ತೊಡೆಯುವ, ಇತರರ ಕಷ್ಟಕ್ಕೆ ಕರಗುವ ಸಹೃದಯಿ, ಸದಾ ನಗುಮೊಗದಲ್ಲಿರುವ ಜೀವ ಅವಳು.
ಆದರೆ ಅದೆಷ್ಟೋ ಮನೆಗಳಲ್ಲಿ ಹೆಣ್ಣು ಹುಟ್ಟಿತೆಂದರೆ ಖುಷಿ ಪಡುವವರಿಗಿಂತ ನೋವೇ ಜಾಸ್ತಿ. ಹೆಣ್ಣು ಹುಟ್ಟಿದರೆ ಕಷ್ಟ ಬಂತೆಂದು ತೀರ್ಮಾನಿಸುತ್ತಾರೆ. ಆಕೆ ಹುಟ್ಟಿ ದೊಡ್ಡವಳಾಗುವ ವರೆಗೂ ಆಕೆಗೆ ಯಾವ ಸ್ವಾತಂತ್ರವನ್ನೂ ನೀಡದೆ, ಬಾವಿಯೊಳಗಿನ ಕಪ್ಪೆಯ ಹಾಗೆ ಜೀವಿಸುವಂತೆ ಮಾಡುತ್ತಾರೆ.
ಹೆಣ್ಣು ಯಾವಾಗಲೂ ಗಂಡಿನ ಅಧೀನದಲ್ಲಿರಬೇಕು ಎಂಬುದು ವೇದವಾಕ್ಯದಂತಿದೆ. ಹುಟ್ಟಿದಾಗ ತಂದೆಯ ಅಧೀನ, ಅನಂತರ ಗಂಡನ ಅಧೀನ, ವಯಸ್ಸಾದ ಮೇಲೆ ಮಕ್ಕಳ ಅಧೀನದಲ್ಲಿರಬೇಕು. ಆಕೆ ಹೊರಗಡೆ ಕಾಲಿಡಬೇಕಾದರೆ ಗಂಡಿನ ಅನುಮತಿ ಪಡೆಯಲೇಬೇಕು. ಹೀಗೆ ಮಹಿಳೆಯು ಒಂದಲ್ಲ ಒಂದು ರೀತಿಯಲ್ಲಿ ತುಳಿತಕ್ಕೆ ಒಳಪಟ್ಟವಳಾಗಿದ್ದಾಳೆ.
ಆದರೆ ಇಂತಹ ಯಾವುದೇ ಕಟ್ಟುಪಾಡು ಗಂಡಸರಿಗಿಲ್ಲ. ಗಂಡಸರು ರಾಜಾರೋಷವಾಗಿ ಸಮಾಜದಲ್ಲಿ ಓಡಾಡಬಹುದು. ಗಂಡಿನ ತಪ್ಪಿದ್ದರೂ ದೂಷಿಸುವುದು ಹೆಣ್ಣನ್ನು. ಅದಕ್ಕೆ ಹಣೆಬರಹ ಎಂಬ ಪಟ್ಟಕಟ್ಟುತ್ತದೆ ಈ ಸಮಾಜ.
ಪುರುಷಪ್ರಧಾನವಾದ ಈ ಸಮಾಜದಲ್ಲಿ ಹೆಣ್ಣು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾಳೆ. ಒಬ್ಬಂಟಿಯಾಗಿ ವಾಸಿಸಲು ಭಯಪಡುತ್ತಾಳೆ. ಕಾರಣ ನರಭಕ್ಷಕರ, ಕಾಮುಕರ ಭಯ. ಹೆಣ್ಣು ಒಂಟಿಯಾಗಿ ಜೀವಿಸುತ್ತಿದ್ದರೆ ಆಕೆಗೆ ಬೇರೆ ಏನೋ ಪಟ್ಟಕಟ್ಟಿ ಅವಳನ್ನು ಕುಗ್ಗಿಸುವಂತೆ ಮಾಡುತ್ತಾರೆ. ಏಕೆ ಅವಳಿಗೆ ಸ್ವಾವಲಂಬಿಯಾಗಿ ಬದುಕುವ ಹಕ್ಕಿಲ್ಲವೇ? ಹೆಣ್ಣೆಂಬ ಕಾರಣಕ್ಕೆ ಆಕೆ ನಾಲ್ಕು ಗೋಡೆಯ ನಡುವೆ ಬಂಧಿಯಾಗಬೇಕೇ?
ಮೊದಲಿಗಿಂತ ಈಗ ಮಹಿಳೆಯರ ಜೀವನ ಸ್ವಲ್ಪ ಮಟ್ಟಿಗೆ ಬದಲಾದರೂ ಸಂಪೂರ್ಣವಾಗಿ ಸ್ವತಂತ್ರಳಾಗಿಲ್ಲ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಛಾಪು ಮೂಡಿಸುತ್ತಿದ್ದಾರೆ. ಗಂಡಸರಿಗೆ ಪೈಪೋಟಿ ನೀಡಲು ಮುನ್ನುಗ್ಗುತ್ತಿದ್ದಾರೆ. ಆದರೂ ಮಹಿಳೆಯರನ್ನು ಅಬಲೆಯರು, ಅಸಮರ್ಥರು ಎಂದು ಪರಿಗಣಿಸಲಾಗುತ್ತಿದೆ.
ಹೆಣ್ಣನ್ನು ಕೇವಲ ಭೋಗದ ವಸ್ತು ಎಂದು ಭಾವಿಸಿ ತಮ್ಮ ದಾಹವನ್ನು ತೀರಿಸಿಕೊಳ್ಳಲು ಉಪಯೋಗಿಸುವ ಜನರು ನಮ್ಮ ಸಮಾಜದಲ್ಲಿದ್ದಾರೆ. ಅವಳೂ ಮನುಷ್ಯಳು, ಆಕೆಗೂ ಒಂದು ಮನಸ್ಸಿದೆ. ಅವಳ ಆಸೆ ಕನಸುಗಳಿಗೆ ಪ್ರೋತ್ಸಾಹಿಸಿ, ಗೌರವಿಸಿ.
-ಆಯಿಷತುಲ್ ಬುಶ್ರ
ಎಂ.ಪಿ.ಎಂ ಕಾಲೇಜು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.