She: ಎಲ್ಲರಂತಲ್ಲ ಅವಳು…

Team Udayavani, May 31, 2024, 10:07 AM IST

6-uv-fusion

“ದಕ್ಷಿಣ ಭಾರತದಲ್ಲಿ ಒಂದಿಷ್ಟು ಬಿರುಸಿನ ಬಿಸಿ ಗಾಳಿ’, “ಉಷ್ಣಾಂಶ 42 ಡಿಗ್ರಿ, ಹೊರಗಡೆ ಹೋಗಲೇ ಬ್ಯಾಡಿ’, “ಇನ್ನು ನಾಲ್ಕು ದಿನ ಉರಿತಾಪ’

ಉಫ್ ಈ ಬೇಸಗೆ ನಿಜಕ್ಕೂ ನಮ್ಮೆಲ್ಲರನ್ನು ಸುಸ್ತಾಗಿಸಿಬಿಟ್ಟಿದೆ. ಬಿಸಿಲಿನಿಂದ ರಕ್ಷಣೆಗೆ ಹಿಡಿದಿರುವ ಛತ್ರಿ ಕಾದ ಹಪ್ಪಳದಂತಾಗುತ್ತಿದೆ. ಕುಡಿದ ನೀರು ಅರೆಕ್ಷಣದಲ್ಲಿ ಜೀರ್ಣವಾಗುತ್ತಿದೆ. ಅದರ ನಡುವೆ “ಫ್ರಿಡ್ಜ್ ನ ತಂಪು ನೀರು ಸೇವಿಸಲೇಬೇಡಿ’ ಎಂದು ಬಿತ್ತರವಾಗುತ್ತಿರುವ ಒಂದಷ್ಟು ಸುಳ್ಳು ಸುದ್ದಿಗಳು. ಅಂತೂ ಬೇಸಗೆಯಲ್ಲಿ ಜನರನ್ನು ಕುಳಿತಲ್ಲಿ ತಲೆದೂಗಲು ಬಿಡುತ್ತಿಲ್ಲ.

ಕಾಲೇಜಿನಲ್ಲಿ ತರಗತಿಗೆ ಪ್ರವೇಶವಾದ ತತ್‌ಕ್ಷಣ ನನ್ನದೊಂದು ಹಳೇ ಚಾಳಿ. ಸುತ್ತಲಿನ ಕಿಟಕಿಯನ್ನು ತೆರೆಯುವುದು ಹಾಗೂ ನನಗೆ ಅನುಕೂಲವಾಗಿ ಗಾಳಿ ಬೀಸುವ ಫ್ಯಾನಿಗೆ ಜೀವ ತುಂಬುವುದು. ಇದನ್ನೆರಡನ್ನು ಮಾಡದೆ ಹೋದರೆ ಖಂಡಿತ ನನಗೆ ತೃಪ್ತಿ ಎನಿಸದು. ಅಷ್ಟಕ್ಕೂ ಇಂದು ಎಲೆಕ್ಟಿವ್‌ ತರಗತಿ. ನಮ್ಮದಲ್ಲದ ವಿಭಾಗದ ತರಗತಿಯಲ್ಲಿ, ನಮ್ಮದಲ್ಲದ ವಿಭಾಗದ ಪಠ್ಯವನ್ನು ಅವಲೋಕಿಸುವುದು ಇದರ ರೂಢಿ. ತರಗತಿ ಬೇರೆಯಾದರೇನು?

ನಿತ್ಯದ ಚಾಳಿಯನ್ನು ಮರೆಯಲುಂಟೇ ! ಮೂರ್ನಾಲ್ಕು ವಿದ್ಯಾರ್ಥಿಗಳು ಮೊದಲೇ ಬಂದು ಕುಳಿತಿದ್ದರು. ತರಗತಿ ಆರಂಭವಾಗಲು ಇನ್ನೂ ಹದಿನೈದು ನಿಮಿಷಗಳು ಬಾಕಿ ಉಳಿದಿದೆ. ನಿಧಾನವಾಗಿ ತರಗತಿ ಒಳಗೆ ಹೊಕ್ಕಿದವನು ರೂಮಿನ ಸ್ವಿಚ್‌ ಆನ್‌ ಮಾಡಿ, ನೇರವಾಗಿ ಆ ತರಗತಿ ಮೂಲೆಯಲ್ಲಿದ್ದ ಕಿಟಕಿಯ ಕಡೆ ಧಾವಿಸಿದೆ. ಬಹುಶಃ ತೆರೆಯದ ಕಿಟಕಿ ಆಗಿದ್ದಿರಬೇಕು. ನನ್ನ ಸಂಪೂರ್ಣ ಶಕ್ತಿ ಉಪಯೋಗಿಸಿ ಆ ಜಾರಿಸುವ ಕಿಟಕಿಯ ಬಾಗಿಲುಗಳನ್ನು ಒಂದಿಷ್ಟು ಪ್ರಯತ್ನದಿಂದ ತೆರೆದೆ; ಅಬ್ಟಾ ಮಹಾನ್‌ ಸಾಧನೆಯೇ ಸರಿ.

ಆಲಿಪ್ತವಾಗಿ ಬೀಸುವ ತಣ್ಣನೆಯ ಗಾಳಿ. ಕಿವಿಗಳಿಗೆ ತಂಪನೆ ಬಡಿಯುವ ನಯವಾದ ಗಾಳಿಯ ಸದ್ದು. ಅದರ ಜತೆಗೆ ಪ್ರಕಾಶಮಾನವಾಗಿ ಕಂಗೊಳಿಸುವ ಸೂರ್ಯ, ಬೇಸಗೆಯ ನೆನಪನ್ನು ಮತ್ತೆ ನೆನಪಿಸಿದ್ದಾನೆ. ಕಿಟಕಿಯ ಅತ್ತ ಕಡೆ ಗಡಸಾಗಿ ನಿಂತಿರುವ ಪ್ರತ್ಯೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗ‌ಳು. ಈ ಹೊತ್ತಿನಲ್ಲಿ ವಿದ್ಯಾರ್ಥಿಗಳು ಅವಸರವಾಗಿ ಕಾಲೇಜಿಗೆ ಹೊರಡಲು ತಯಾರಾಗೋದು ಇದ್ದೇ ಇರುತ್ತೆ. ಎಲ್ಲರಂತೆ ಅವಳೂ ತರಾತುರಿಯಲ್ಲಿ ಇದ್ದಾಳೆ.

ಹಾಸ್ಟೆಲಿನ ದಿವ್ಯಾಹ್ನ ಛತ್ರದಲ್ಲಿ ಬೆಳಗಿನ ಉಪಾಹಾರವನ್ನು ಮುಗಿಸಿ ಹೊಟ್ಟೆಯನ್ನು ತಣ್ಣಗಿರಿಸಿ, ಕೈಗಳನ್ನು- ತಟ್ಟೆಯನ್ನು ತೊಳೆದು ಎಲ್ಲರಂತೆ ಅವಳಿಗೂ ತನ್ನ ಕೆಲಸದತ್ತ ಮೋರೆ ಹಾಕಬಹುದಿತ್ತು. ಆದರೆ ಅವಳು ಎಲ್ಲರಂತೆ ಖಂಡಿತ ಅಲ್ಲ; ತಾನು ಉಂಡ ಆಹಾರದ ತಟ್ಟೆಯನ್ನು ಶುಭ್ರವಾಗಿ ತೊಳೆದು, ಆ ತಟ್ಟೆ ಪೂರ್ತಿ ಶುಭ್ರವಾದ ನೀರು ತುಂಬಿ ಉದ್ಯಾನವನದ ಮೂಲೆಯತ್ತ ಸಾಗುತ್ತಿದ್ದಾಳೆ.

ಅವಳು ಮುಂದೆ ನಿಧಾನವಾಗಿ ಸಾಗುತ್ತಿದ್ದಾಳೆ. ಆ ನೀರನ್ನು ಅವಳು ಎಲ್ಲಿಗೆ ಹಾಕಬಹುದು ಎಂದು ನಾನು ವೀಕ್ಷಿಸುತ್ತಲೇ ಇದ್ದೆ. ಅದು ಅವಳು ನೆಟ್ಟ ಗಿಡಗಳಿಗಾಗಿದ್ದಿರಬಹುದೇ ಇಲ್ಲ. ಧೂಳಿನಿಂದ ಲೇಪನವಾಗಿದ್ದ ಅವಳ ಚಪ್ಪಲಿಯನ್ನು ತೊಳೆಯಲು ಆಗಿದ್ದಿರಬಹುದೇ? ಅಥವಾ ಯಾವುದೋ ಗೋಡೆಗೆ ತಾಗಿದ ಮಣ್ಣು ಒರೆಸಲು ಆಗಿದ್ದಿರಬಹುದೇ ? ಅಥವಾ ತನ್ನ ಗೆಳತಿಗೆ ನೀರೆರೆಚಲು ಆಗಿದ್ದಿರಬಹುದೇ !

ನೇರವಾಗಿ ಉದ್ಯಾನವನದ ಮೂಲೆಗೆ ಧಾವಂತದಿಂದ ಧಾವಿಸಿದ ಅವಳು ತೆಂಗಿನ ಗೆರಟೆಯನ್ನು ಕೈಗೆತ್ತಿಕೊಂಡಳು. ಗೆರಟೆಯ ಕಸ ಕಡ್ಡಿ ಹೊರತೆಗೆದು ನಿಧಾನವಾಗಿ ತಟ್ಟೆಯ ಬಸುರಿನಿಂದ ಆ ಗೆರಟೆಗೆ ನೀರು ಸುರಿಸುತ್ತಿದ್ದಾಳೆ. ತಟ್ಟೆಯಿಂದ ಗೆರಟೆಗೆ ತರ್ಜುಮೆಗೊಳ್ಳುತ್ತಿರುವ ನೀರಿನ ಸದ್ದಿಗೆ, ಇನಿತು ದೂರದಲ್ಲಿದ್ದ ಎರಡು ಬೀದಿ ನಾಯಿಗಳು ಕಿವಿಯನ್ನು ಕಂಪಿಸುತ್ತಿವೆ. ಮೂಗು ಆಘ್ರಾಣಿಸುತ್ತಿದೆ. ಪಿಳಿ ಪಿಳಿ ಕಣ್ಣು ಅದೇ ಹೆಣ್ಣು ಮಗಳನ್ನು ದಿಟ್ಟಿಸಿ ಪ್ರೀತಿಯಿಂದ ನೋಡುತ್ತಿದೆ. ಮೆತ್ತಗೆ ಅವಳು ಹಿಂದಡಿ ಇಟ್ಟಳು.

ಒಮ್ಮೆ ಸುತ್ತಲೂ ತಿರುಗಿದಳು. ಬಹುಶಃ ಪಕ್ಷಿಗಳಿವೆಯೇ ಎಂದು ಆ ಜೀವ ಹುಡುಕಾಡಿತ್ತೇನೋ ? ಮೆತ್ತಗೆ ಹಿಂದಡಿ ಇಟ್ಟಳು. ಅವಳ ನಿತ್ಯದ ಕಾಯಕಗಳತ್ತ ಚಿತ್ತ ಹರಿಸುವ ಸಲುವಾಗಿ ಏನೋ. ದೂರದಿಂದಲೇ ಇಣುಕುತ್ತಿದ್ದ ನಾಯಿಗಳೆರಡು ನಾಲಿಗೆಯನ್ನು ಹೊರಚಾಚಿ ಸುಸ್ತಾದ ಮತಿಯಿಂದಲೇ ಗೆರಟೆಯ ಪಕ್ಕ ಬಂದಿದೆ. ಒಂದಾದ ಅನಂತರ ಮತ್ತೂಂದು ಎಂಬಂತೆ ಎರಡು ನಾಯಿ ಮರಿಗಳೂ ನೀರನ್ನು ಕುಡಿದು, ಲಟ ಲಟನೆ ಮೈಯನ್ನು ಅಲುಗಿಸಿ ನೀಳವಾಗಿ ನನ್ನತ್ತ ದೃಷ್ಟಿ ಹಾಯಿಸಿ ನಮಸ್ಕಾರ ಹಾಕಿತು.

ಎರಡೇ ಹೆಜ್ಜೆಯಲ್ಲಿ ಪಕ್ಕದ ಮರದ ಬುಡದಲ್ಲಿ ದೊಪ್ಪನೆ ಮಲಗಿಕೊಂಡಿತು. ಖಂಡಿತ ತೃಷೆ ನೀಗಿಸಿಕೊಂಡ ಆ ಶ್ವಾನಗಳೆರಡೂ ಅವಳನ್ನು ನೆನಪು ಮಾಡಿಕೊಳ್ಳುತ್ತಲೇ ನಿಧಾನವಾಗಿ ನಿದ್ರೆಗೆ ಜಾರಿದೆ. ಖಾಲಿಯಾದ ಗೆರಟೆ ಮತ್ತೆ ಯಾರಾದರೂ ನೀರು ಹಾಕಿಯಾರೇ ಎಂದು ಮರ್ಮರಿಸುತ್ತಿರಬಹುದು. ಹೌದು ಆ ಕಿಟಕಿಯ ಕಡೆ ಹೋದಾಗಲೆಲ್ಲಾ ಮೂಕ ಜೀವಿಗಳ ರೋಧನ ಎರಡನೇ ಮಹಡಿಯಿಂದಲೇ ನಿಂತಿರುವ ನನ್ನನ್ನು ಬಡಿಯುತ್ತಿದೆ. ಆದರೂ ಅವಳು ಎಲ್ಲರಂತಲ್ಲ. ಪರಿಸರದ ಸೂಕ್ಷ್ಮತೆಯನ್ನು ಅರಿತಿರುವ ಅವಳು ಮೂಕ ಜೀವಿಗೆ ಜೀವವಾಗಲು ಮುಂದಾಗಿದ್ದಾಳೆ. ಹೌದು ಅವಳು ನಮಗೆ ಮಾದರಿಯಾಗಿದ್ದಾಳೆ; ಇನ್ನೇನಿದ್ದರೂ ನಾವು ಕಾರ್ಯಪ್ರವೃತ್ತರಾಗಬೇಕಿದೆ. ಬಿಸಿಲಿನ ಬಗೆಗೆ ತೃಷೆ ನೀಗಿಸಲು ಪ್ರಕೃತಿಯಲ್ಲಿರುವ ಪ್ರಾಣಿ ಪಕ್ಷಿ ಸಂಕುಲಗಳಿಗೆ ನಾವು ನೆರವಾಗಬೇಕಿದೆ.

-ಸಮ್ಯಕ್ತ್ ಜೈನ್‌ ಕಡಬ

ಎಸ್‌.ಡಿ.ಎಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Mumbai: ಭಯೋತ್ಪಾದಕ ದಾಳಿ ಸಾಧ್ಯತೆ-ಗುಪ್ತಚರ ಇಲಾಖೆ: ಮುಂಬೈನಲ್ಲಿ‌ ಬಿಗಿ ಪೊಲೀಸ್ ಭದ್ರತೆ

Belagavi; Letter to CM on division of Belgaum district after Dussehra: Hebbalkar

Belagavi; ದಸರಾ ಬಳಿಕ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂಗೆ ಪತ್ರ: ಹೆಬ್ಬಾಳಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

Koderi

World Tourism Day: ಪ್ರವಾಸೋದ್ಯಮಕ್ಕೆ ಸಿಗಲಿ ಉತ್ತೇಜನ

16-cinema

UV Fusion: Cinema- ದಿ ರೆಡ್ ಬಲೂನ್, ಅಮೋರ್

15-uv-fusion

UV Fusion: ಬ್ಯಾಗ್‌ ಹಿಡಿದವರಿಗೊಂದು ಥ್ಯಾಂಕ್ಸ್‌

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್‌ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

ಭಾರತದಲ್ಲಿ ಪಾಕ್‌ ಸಿನಿಮಾ ದ ಲೆಜೆಂಡ್‌ ಆಫ್‌ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ

eshwarappa

Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.