ನಾನು ನನ್ನ ಕನಸು: ಹಾಡಿನ ಸಾಲುಗಳಲ್ಲೇ ಜನರೊಂದಿಗೆ ಮಾತನಾಡಬೇಕು
Team Udayavani, Jul 27, 2020, 8:00 AM IST
ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ಹಲವಾರು ಕನಸುಗಳಿರುತ್ತವೆ. ಹಾಗೆಯೇ ಗಗನಯಾತ್ರಿ ಯಾಗಬೇಕೆಂಬುದು ನನ್ನ ಕನಸಾಗಿತ್ತು.
ಭೂಮಿಯಾಚೆಗಿನ ಪ್ರಪಂಚದ ಬಗ್ಗೆ ತಿಳಿಯುವ ಬಯಕೆ. ಇದು ಒಮ್ಮೆ ಮಾತ್ರ. ಯಾಕೆಂದರೆ ಕಾಲಕ್ಕೆ ತಕ್ಕಂತೆ ಕನಸೂ ಬದಲಾಗುತ್ತಲೇ ಇತ್ತು. ಕವಿ, ಬರಹಗಾರ್ತಿ, ಶಿಕ್ಷಕಿ, ನರ್ತಕಿ… ಹೀಗೆ ಏನೇನೋ ಆಗಬೇಕೆಂದು ಕಲ್ಪಿಸುತ್ತಿದ್ದೆ.
ನಾನೇನಾಗಬೇಕು ಎಂಬುದರ ಸ್ಪಷ್ಟ ಕಲ್ಪನೆ ಆಗಿನ್ನೂ ಮೂಡಿರಲಿಲ್ಲ. ನನ್ನಮ್ಮನ ಬಯಕೆ ನಾನು ಗಗನಯಾತ್ರಿ ಆಗಬೇಕು ಎಂದೇ ಆಗಿತ್ತು. ಆದರೆ ಬೆಳೆಯುತ್ತಾ ನಾನು ಆ ಬಗೆಗಿನ ಆಸಕ್ತಿ ಕಳೆದುಕೊಂಡಿದ್ದಾರೆ.
ಅಮ್ಮ ಯಾವಾಗಲೂ ನೆನಪಿ ಸುತ್ತಿದ್ದಳು. ಆಗೆಲ್ಲ ನಾನು, “ಅಮ್ಮಾ ಅದು ನನ್ನ ಕನಸು, ನಿನ್ನದಲ್ಲ’ ಎನ್ನುತ್ತಿದ್ದೆ. ವರ್ಷಗಳು ಉರುಳಿದವು. ನಾನೇನಾಗಬೇಕೆಂಬ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ.
ನನಗೆ ಹಾಡುವುದರಲ್ಲಿ ಆಸಕ್ತಿ ಇದ್ದರೂ ಅದನ್ನು ಕನಸು ಅಥವಾ ಗುರಿ ಅಂದುಕೊಂಡಿರಲಿಲ್ಲ. ನನಗೆ ಪಾಶ್ಚಾತ್ಯ ಸಂಗೀತದ ಮೇಲೆ ಹೆಚ್ಚಿನ ಒಲವು. ಹೀಗಾಗಿ ನಾನು ಹತ್ತನೆಯ ತರಗತಿಯಲ್ಲಿರುವಾಗ ಕವನಗಳನ್ನು ಬರೆಯಲಾರಂಭಿಸಿದೆ. ನನ್ನ ಖುಷಿ-ದುಃಖ ಗಳು ಅಕ್ಷರದ ರೂಪದಲ್ಲಿ ಈ ಕವನಗಳಲ್ಲಿ ಮೂಡುತ್ತಿದ್ದವು.
ಹೀಗಿರುವಾಗ 2018ರಲ್ಲಿ ಕೊರಿಯಾದ ಪಾಪ್ ಗಾಯನ ತಂಡ ಬಿ.ಟಿ.ಎಸ್.(ಆಖಖ)ಬಗ್ಗೆ ತಿಳಿದುಕೊಂಡೆ. ಇದು ಏಳು ಜನರ ತಂಡವಾಗಿತ್ತು. ಮೂರು ಜನ ರಾಪರ್ ಹಾಗೂ ನಾಲ್ಕು ಮಂದಿ ಗಾಯಕರು. ಅದರಲ್ಲಿ ಒಬ್ಬ ಗಾಯಕನಂತೂ ನನ್ನನ್ನು ತುಂಬಾ ಆಕರ್ಷಿಸಿದ್ದ. ಅವನೇ ಮಿನ್ ಯೂಂಗಿ. ಅವನು ಸಾಲುಗಳನ್ನು ಗೀಚುತ್ತಾ ಸಂಗೀತ ಲೋಕವನ್ನೇ ಸೃಷ್ಟಿಸಿದ್ದ. ಮಿನ್ ಯೂಂಗಿ ಬಡ ಕುಟುಂಬದಿಂದ ಬಂದವನು. ಆತನ ಹೆತ್ತವರು ಅವನ ಆಸಕ್ತಿಗೆ ಪ್ರೋತ್ಸಾಹ ನೀಡುವ ಬದಲಾಗಿ ಅವನ ಬರಹಗಳನ್ನೇ ಹರಿದು ಎಸೆಯುತ್ತಿದ್ದರು.
ಆತನ ಬರಹಗಳು ಮಾನಸಿಕ ಆರೋಗ್ಯ, ಜೀವನದ ಗುರಿ, ಸಮಾಜ.. ಹೀಗೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿದ್ದವು. ಇದೇ ಕಾರಣಕ್ಕೆಇರಬೇಕು ಅವನ ಹಾಡು, ಬರಹಗಳು ನನಗೆ ಇಷ್ಟವಾಗುತ್ತಿ ದ್ದುದು. ಇವನ ಬಗ್ಗೆ ಯಾಕಿಷ್ಟು ಹೇಳಿದೆ ಅಂದರೆ ನನ್ನಲ್ಲೀಗ ಹೊಸ ಕನಸು ಮೂಡಿದೆ. ನನ್ನ ಕನಸು, ಬದುಕು ಏನಿದ್ದರೂ ಸಂಗೀತ ಎಂದೇ ಅನಿಸಿಬಿಟ್ಟಿದೆ. ಮಿನ್ ಯೂಂಗಿ ಸಾಧನೆ ನನ್ನ ಕನಸಿನ ದೀಪಕ್ಕೆ ತೈಲವಿದ್ದಂತೆ.
ಎಲ್ಲರ ಮನಮುಟ್ಟುವಂತೆ ಹಾಡುವ ಬಯಕೆ ಒಂದೆಡೆಯಾದರೆ ಎಲ್ಲರನ್ನೂ ತಲುಪುವಂಥ ಹಾಡು ಬರೆಯುವ ಬಯಕೆ ಮತ್ತೂಂದೆಡೆ. ಹಾಡಿನ ಸಾಲುಗಳನ್ನೇ ಜನರೊಂದಿಗೆ ಮಾತ ನಾಡುವ ಆಸೆ. ಸದ್ಯಕ್ಕೆ ಇದು ನನ್ನ ಕನಸು. ನನ್ನ ಕನಸನ್ನು ನನಸಾಗಿಸಲೇ ಬೇಕೆಂಬ ಛಲ, ಹುಮ್ಮಸ್ಸು ಈಗ ಮೂಡಿದೆ.
- ಅಶ್ವಿನಿ ರಾವ್, ಗೋವಿಂದ ದಾಸ ಕಾಲೇಜು, ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.