Uv Fusion: ಅಂತರಂಗದೊಳಗೊಂದು ಸಮುದ್ರ ಮಂಥನ

Team Udayavani, Nov 3, 2023, 7:15 AM IST

6-uv-fusion

ಮನುಷ್ಯ ವಾಸ್ತವದ ಚೌಕಟ್ಟಿನೊಳಗೆ ಹೆದರಿ, ದಿಕ್ಕೆಟ್ಟು, ಕಂಗಾಲಾಗಿ ಹೈರಾಣಾಗಿ ಕುಳಿತು ಬಿಟ್ಟಿದ್ದಾನೆ. ಕಂಡ ಜೀವಂತ ದುರಂತ ಕಥೆಗಳಿಂದಲೋ, ಉಂಡ ಕಹಿ ನೆನಪುಗಳಿಂದಲೋ ಆತ ಗಾಳಿಯ ಬದಲು ಬಿರುಗಾಳಿಯೊಂದನ್ನು ಧಮನಿಸುತ್ತಿದ್ದಾನೆ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಎಂಬ ಅರಿಷಡ್ವರ್ಗಗಳು ಅಮಾಯಕ ಮಾವುತರಾಗಿ ಅವನ್ನನ್ನು ಮದಗಜವಾಗಿ ಪಳಗಿಸುತ್ತಿವೆ. ಅವನಿಗೀಗ ಎಲ್ಲದರಿಂದಲೂ ತಾತ್ಸಾರವೇ.

ಪರಿಸ್ಥಿತಿಗಳ ತಕ್ಕಂತೆ ಬಣ್ಣ ಬಣ್ಣಗಳ ಮುಖವಾಡ ಧರಿಸಿ ಓರ್ವ ಪಾತ್ರಧಾರಿಯಾಗಿ ಜೀವನವನ್ನು ಜಿವಂತಿಸುತ್ತಿದ್ದಾನೆ. ಅವನಿಗೀಗ ನಗು ಪ್ರೀತಿ ವಿಶ್ವಾಸ ಕರುಣೆ ಖುಷಿ ತೃಪ್ತಿಗಳೆಂಬ ಸಂಗತಿಗಳೆಲ್ಲ ಅಜ್ಜಿ ಹೇಳಿದ ಕಥೆಗಳಲ್ಲಿ ಬರುವ ರಾಜಕುಮಾರನ ಹಾಗೆ ಅನಿಸುತ್ತವೆ. ಅವನ ಅಂತರಂಗದ ಶಹರದಲ್ಲಿ ಪಾಳುಬಿದ್ದ ನೆಲಸಮವಾದ ಕಟ್ಟಡಗಳ ಸಂದಿಗೊಂದಿಗಳಲ್ಲಿ ಅವು ಎಂದೋ ಅವಶೇಷಗಳಾಗಿ ಕಣ್ಮರೆಯಾಗಿವೆ.

ಒಂದು ಕ್ಷಣ, ಈ ಕ್ಷಣ ಎಲ್ಲವನ್ನೂ ಮರೆತು ಒಂದು ನಿಟ್ಟುಸಿರು ಬಿಟ್ಟು ಒಳಗೆ ಅಂತರಂಗದಲ್ಲಿ ಜರಗುವ ಆಗು ಹೋಗುಗಳ ಅವಲೋಕನ ನಡೆಸಬೇಕೆಂದೆನುಸುತ್ತದೆ. ಹಾಗೇ ಅವಲೋಕನ ಸಾಗಿದಾಗ ಅದು ಕೇವಲ ಅವಲೋಕನವಾಗಿ ಉಳಿಯದೆ ಒಂದು ಕಾಳಗವಾಗಿದೆ, ಬೇಕು ಬೇಡಗಳ, ಹೌದು ಅಲ್ಲಗಳ, ನ್ಯಾಯ ಅನ್ಯಾಯದ, ಧರ್ಮ ಅಧರ್ಮದ, ದುಷ್ಟ ಶಿಷ್ಟಗಳ ನಡುವೆ ತ್ರಿವತೆಯ ಕತ್ತು ಮಸಿ ಕಾಳಗ. ಇದು ಸಮುದ್ರ ಮಂಥನದಲ್ಲಿ ಸುರರ ಹಾಗೂ ಅಸುರರ ನಡುವೆ ನಡೆದ ಹಾಲಾಹಲ ಯುದ್ಧದಂತೆ.

ಸಮುದ್ರ ಮಂಥನ, ದೇವತೆಗಳ ರಾಕ್ಷಸರ ನಡುವೆ ವಿಷ್ಣು ಕೂರ್ಮಾವತಾರವಾಗಿ ಅವತರಿಸಿ ಬೆಟ್ಟವನ್ನು ತನ್ನ ಬೆನ್ನಮೇಲೆ ಹೊತ್ತು ನಿಂತ ಕ್ಷೇರಸಾಗರ ಮಂಥನ. ಸಮುದ್ರ ಮಂಥನ ನಡೆಯುವಾಗ ಹಲವು ರತ್ನಗಳು ಹೊರಬಂದವಂತೆ. ಅವು ಹಾಲಾಹಲ, ವರುನಿ, ಉಚ್ಚೈಶ್ರವಸ್ಸು, ಕೌಸ್ತುಭ, ಚಂದ್ರ, ಲಕ್ಷ್ಮೀ, ಅಪ್ಸರೆ, ಕಾಮಧೇನು, ಪಾರಿಜಾತ, ಐರಾವತ, ಧನ್ವಂತರಿ. ಇವುಗಳನ್ನು ಸುರರು ಹಾಗೂ ಅಸುರರು ಹಂಚಿಕೊಂಡರಂತೆ.

ಈ ಅಂತರಂಗದ ರಣರಂಗದಲ್ಲಿ ಪರಿಸ್ಥಿತಿಗಳೇ ಯುದ್ಧಭೂಮಿಯಾಗಿ ದೃಷ್ಟಿಕೋನಗಳೆ ಶಸ್ತ್ರಾಸ್ತ್ರಗಳಾಗಿವೆ. ಚಂಚಲತೆಯ ಆಳದಲ್ಲಿ ಕರಗಿ ಹೋದ ಮನಸ್ಸು ಮತ್ತು ಕಟುವಾದ ಸತ್ಯವನ್ನು ದಿರಿಸಾಗಿ ಧರಿಸಿರುವ ಆತ್ಮ ಇವೆರೆಡೂ ಎರಡು ಬದಿಯ ಯುದ್ಧನಾಯಕರು.

ಒಂದು ಸಂದಿಗ್ಧ ಸ್ಥಿತಿಯಲ್ಲಿ ಜರುಗಿದ ತಪ್ಪನ್ನು ತಪ್ಪೇ ಅಲ್ಲವೆಂದು ಹುಂಬುತನದಲಿ ಸಾಧಿಸಿ ಆಂತರ್ಯದಲ್ಲಿ ಜೊರಾಗಿ ಕೂಗಿ ಕೇಕೆ ಹಾಕಿ ಅದಕ್ಕಾನುಸಾರ ಒಂದು ಹಿತವಾದ ದೃಷ್ಟಿಕೋನದ ಪರದೆ ಎಳೆದು ಪ್ರದರ್ಶನವನ್ನು ಇತ್ಯರ್ಥಗೊಳಸುತ್ತದೆ ಮನಸ್ಸು. ಆದರೂ ಆತ್ಮ ಆಂತರ್ಯದ ತೀರಾ ಖಾಸಗಿ ಹಾಗೂ ಆಪ್ತ ವಲಯದಲ್ಲಿ ತೀರಾ ಸರಳವಾಗಿ “ಒಮ್ಮೆ ನಿನ್ನ ಎದೆಯಾಳದ ಸ್ವರದೊಂದಿಗೆ ಸತ್ಯವನ್ನು ಉಸಿರಿಸಿ ಹೇಳು ನೀನು ಮಾಡಿದ್ದು ಸರಿಯೇ?’ ಎಂಬ ಕಾಡುವಂತಹ ಪ್ರಶ್ನೆಯೊಂದನ್ನು ಇಡುತ್ತದೆ.

ಈಗ ನಿನ್ನೊಳಗೆ ನಿನ್ನ ಅಂತರಂಗದೊಳಗೆ ನಡೆಯುವ ಸಮುದ್ರ ಮಂಥನದಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಅಸೂಯೆ, ಪ್ರತಿಷ್ಟೆ, ಪ್ರೀತಿ ಪ್ರೇಮ ವಿಶ್ವಾಸ ನಂಬಿಕೆ ಕರುಣೆ ಎಂಬ ಅನೇಕಾನೇಕ ರತ್ನಗಳು ಹೊರ ಬಂದಾಗ ನಿನ್ನ ಆಯ್ಕೆಯ ಅನುಸಾರ ಅವಲಂಬಿತ ನೀನು ಸುರನೋ ಅಸುರನೋ ಎಂದು.

ಅಂತರಂಗದ ಆರ್ತನಾದವನ್ನೊಮ್ಮೆ ಆಲಿಸುಛಾಯೆಗಳೊನ್ನೊಮ್ಮೆ ಒಳಗಣ್ಣಿನಿಂದ ದೃಷ್ಟಿಸು ಸವಿ ಅದರ ನೆಮ್ಮದಿ ಮಿಶ್ರಿತ ಪಾಕಗಳನು ಅಲ್ಲರಳಿದ ಕುಸುಮ ಸುವಾಸನೆಯ ಆಘ್ರಾನಿಸು ಹೊತ್ತು ತಂದ ವಿನೋದವ ಮನಸಾರೆ ಅನುಭವಿಸು ಅಂತರಂಗದ ಅಂತಃಪುರದೊಳು ಸುರನಾಗಿ ಜೀವಿಸು.

„ ಆದಿತ್ಯ ಯಲಿಗಾರ ಧಾರವಾಡ

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.