ಟೂರ್‌ ಸರ್ಕಲ್‌ : ಹಿಮದ ಹೆಜ್ಜೆ ಹಿಮಾಲಯದತ್ತ ; ನೆನಪಿನ ಶಿಖರ ಕಟ್ಟುವ ಹಿಮಾಲಯ ಯಾತ್ರೆ


Team Udayavani, May 31, 2020, 4:46 PM IST

ಟೂರ್‌ ಸರ್ಕಲ್‌ : ಹಿಮದ ಹೆಜ್ಜೆ ಹಿಮಾಲಯದತ್ತ ; ನೆನಪಿನ ಶಿಖರ ಕಟ್ಟುವ ಹಿಮಾಲಯ ಯಾತ್ರೆ

ಒಂದು ಯಾತ್ರೆಗೆ ನೆನಪಿನ ಪರಿಮಳ ಹೆಚ್ಚು. ಅದರಲ್ಲೂ ಹಿಮಾಲಯದ ಯಾತ್ರೆಯೆಂದರೆ ಕಡಿಮೆಯೇ? ಹೇಳಿದಷ್ಟೂ ಮುಗಿಯದ, ಮೊಗೆದಷ್ಟೂ ಸಿಗುವ ನೆನಪುಗಳಿಗೆ ಬರವೇ ಇಲ್ಲ. ಅಂಥದೊಂದು ಪ್ರವಾಸ ಕಥನವಿದು!

ಬಹಳಷ್ಟು ಸಂದರ್ಭಗಳಲ್ಲಿ ನಾವು ಅಂದುಕೊಂಡದ್ದು ಈಡೇರುವುದೇ ಇಲ್ಲ. ಇದಕ್ಕಾಗಿ ಕನಸು ಕಾಣುವುದನ್ನೇ ಬಿಟ್ಟವರಿದ್ದಾರೆ.

ನನಗೂ ಕನಸು ಕಾಣುವ ಹುಚ್ಚು. ಚಿತ್ರಗಳಲ್ಲಿ ಆಕರ್ಷಕವಾಗಿ, ಮೊನಚಾಗಿ ಕಾಣುವ ಹಿಮಾಲಯ ಶಿಖರಗಳಲ್ಲಿ ಹೆಜ್ಜೆಯನ್ನು ಇಡಬೇಕು ಎಂಬ ಆದೆ ಮನದಲ್ಲಿ ಚಿಗುರಿತ್ತು. ಮನದಲ್ಲಿ ಆಸೆಗಳು ಚಿಗುರಿ ಹಲವು ವಸಂತಗಳೇ ಉರುಳಿದ್ದವು. ಕೊನೆಗೂ ಮಹದಾಸೆ ಕೈಗೂಡಿತು. ಹಾದಿ ಅತ್ಯಂತ ಕಠಿನವಾದುದೇ. ಅಷ್ಟೇ ಅದ್ಭುತ ನೆನಪುಗಳ ಮೆಲುಕಿನ ಅಕ್ಷರ ರೂಪ ಇಲ್ಲಿವೆ.

ಅದು ಬೆಳ್ಳಿ ಬೆಟ್ಟಗಳ ರಮಣೀಯ ಚೆಲುವು. ಹಿಮಾಲಯದಲ್ಲಿ ಕಾಣಸಿಗುವ ಗಿರಿ ಶಿಖರಗಳು ಅಲ್ಲಲ್ಲಿ ಬೀಳುತ್ತಿರುವ ಜಲಪಾತಗಳು, ವೇಗವಾಗಿ ಹರಿಯುವ ನದಿಗಳು ಹೀಗೆ ಪ್ರಕೃತಿ ಮಾತೆಯ ಸುಂದರ ರೂಪವೇ ಅಲ್ಲಿ ಮೂರ್ತಿವೆತ್ತಂತೆ ಭಾಸವಾಗುತ್ತದೆ.

ಹಿಮಾಲಯದ ಶ್ರೇಣಿಗಳ ಸೌಂದರ್ಯವನ್ನು ಹಾದಿಯುದ್ದಕ್ಕೂ ಪರಿಚಯಿಸುವ ಪರ್ವತದ ಅಂಚಿನ ಕಿರು ಹಾದಿ ಪಯಣದ ಗಾಂಭೀರ್ಯವನ್ನು ಇಮ್ಮಡಿಗೊಳಿಸುತ್ತದೆ. ಕಿರು ದಾರಿಯಲ್ಲಿ ಕೊಂಚ ಮೈ ಮರೆತರೂ ಅಪಾಯವೂ ಇದೆ. ಅಲ್ಲಲ್ಲಿ ಕಾಣಸಿಗುವ ಭೂ ಕುಸಿತ ರಭಸವಾಗಿ ಹರಿಯುವ ನದಿಗಳು ಇವುಗಳೆಲ್ಲ ಒಂದು ರೀತಿಯ ಭೀತಿಯನ್ನುಂಟು ಮಾಡುತ್ತವೆೆ.

ರೋಚಕ ಯಾನ

ಪ್ರಕೃತಿಯ ಅದ್ಭುತ ಸೃಷ್ಟಿಗೆ ಹೆಸರಾಗಿರುವ ಹಿಮಾಲಯದ ಕಡೆಗೆ ಕೆಳೆದ ಬೇಸಗೆಯಲ್ಲಿ ಮನಾಲಿಯಿಂದ ಬಕ್ಕಾರ್‌ ತಾಜ್‌ನೆಡೆಗೆ ನಮ್ಮ ನಡಿಗೆ ಆರಂಭವಾಯಿತು. ಹಿಮಾಚಲ ಪ್ರದೇಶದ ಮನಾಲಿಯಿಂದ ಹಿಮಾಲಯದ ಸೌಂದರ್ಯ ಸವಿಯುತ್ತ ಸಾಗುವ ಪಯಣ ಜೀವನದ ಅಮೋಘ ಕ್ಷಣಗಳಲ್ಲಿ ಬಹುಶಃ ಪ್ರಥಮವೇನೋ. ಇಲ್ಲಿ ಕೌಶಲ, ತಾಳ್ಮೆ ಹಾಗೂ ಧೈರ್ಯ ಬೇಕೇ ಬೇಕು.

ಇದಕ್ಕಿದ್ದಂತೆ ಏರುಗಳು ಅಥವಾ ಎತ್ತರದಿಂದ ಪ್ರಪಾತಕ್ಕೆ ಕಡಿದಾದ ಇಳಿಜಾರುಗಳು ಮತ್ತು ಹೇರ್‌ಪಿನ್‌ ತಿರುವುಗಳು ಎದುರಾಗುತ್ತವೆ. ಬೀಸುವ ಗಾಳಿ, ಚಳಿ, ಮಂಜು ಇಲ್ಲಿನ ವಾತಾವರಣ. ಎತ್ತರದ ಪ್ರದೇಶಗಳಿಗೆ ನಡೆಯುತ್ತಾ ಹೋದಂತೆ ಗಾಳಿಯಲ್ಲಿ ಕಡಿಮೆಯಾಗುವ ಆಮ್ಲಜನಕ ನಮ್ಮ ಉಸಿರಾಟವನ್ನು ಕಷ್ಟಗೊಳಿಸುತ್ತದೆ. ಸಮುದ್ರಮಟ್ಟದಿಂದ 14,800 ಅಡಿಗಳಿಗಿಂತ ಎತ್ತರವಿರುವ ಪ್ರದೇಶದಲ್ಲಿ ವಾಯುವಿನ ಒತ್ತಡ ಕಡಿಮೆ ಇರುತ್ತದೆ.

ಹಿಮಾಲಯದಲ್ಲಿ ಒಂದು ರಾತ್ರಿ

ಹಿಮಾಲಯದ ಪರ್ವತವೊಂದರಲ್ಲಿ ರಾತ್ರಿ ಕಳೆಯುವುದು ಒಂದು ಅಪೂರ್ವ ಅನುಭವ. ಟಿವಿ, ಕಂಪ್ಯೂಟರ್‌, ಕರೆಂಟು ಯಾವುದೂ ಇಲ್ಲಿ ಇಲ್ಲ. ಮೊಬೈಲಿದ್ದರೂ ನೆಟ್‌ವರ್ಕ್‌ ಇಲ್ಲ. ಪರ್ವತ ಶ್ರೇಣಿಯಲ್ಲಿ ಅಲ್ಲಲ್ಲಿ ಮೇಯುವ ಕುರಿಗಳ ಗಂಟೆಗಳ ನಾದ, ಝರಿಗಳು ಹರಿಯುವ ಸದ್ದು, ದಿನವಿಡಿ ಟ್ರಕ್ಕಿಂಗ್‌ ಮಾಡಿ ದಣಿದ ದೇಹಕ್ಕೆ ಸ್ಲೀಪಿಂಗ್‌ ಬ್ಯಾಗ್‌ ಒಳಗೆ ನುಸುಳಿ ನಿದ್ದೆ ಮಾಡಬಹುದು. ರಾತ್ರಿ ಟೆಂಟ್‌ನಿಂದ ಹೊರಬಂದು ಆಗಸದತ್ತ ಕತ್ತು ತಿರುವಿದರೆ ನಕ್ಷತ್ರಗಳದ್ದೇ ಕಾರುಬಾರು.

ಮರುದಿನ ಮತ್ತಷ್ಟು ಏರಿದೆವು
ನಮ್ಮ ಪ್ರವಾಸದ ಮುಂದಿನ ಎರಡು ದಿನ ಮತ್ತಷ್ಟು ಶಿಖರಗಳನ್ನು ಮೆಟ್ಟುವ ಯೋಜನೆ ಹಾಕಿಕೊಂಡೆವು. ಕಲ್ಲುಬಂಡೆಗಳ ಹಾದಿ, ಅಲ್ಲಲ್ಲಿ ತೊರೆಗಳು, ಸಣ್ಣ ಪುಟ್ಟ ಸಸ್ಯಗಳು, ಬಣ್ಣ ಬಣ್ಣದ ಪುಟಾಣಿ ಹೂವುಗಳು ಇಂತಹ ಮಾರ್ಗದಲ್ಲಿ ನಡೆಯುವುದು ಮನಸ್ಸಿಗೆ ಮುದ ತಂದಿಡುತ್ತಿತ್ತು. ಶಿಖರ ಏರುತ್ತಿದ್ದಂತೆ ಗಾಳಿಯ ಒತ್ತಡ ಕಡಿಮೆಯಾಗುವ ಅನುಭವ ವಿವರಿಸಲು ಅಸಾಧ್ಯ. ಪರ್ವತ ಏರುತ್ತಾ, ಕೆಲವೆಡೆ ಇಳಿಯುತ್ತಾ ಹೋದಾಗ ಸಿಕ್ಕದಾರ್‌ ಶಿಖರ ತಲುಪಿದೆವು. ಅಲ್ಲಿ ಒಂದಷ್ಟು ಸಮಯವನ್ನು ಕಳೆದು ಬಳಿಕ ಭಾರವಾದ ಮನಸ್ಸು ಮತ್ತು ನೆನಪುಗಳೊಂದಿಗೆ ಹಿಂತಿರುಗಿದೆವು. ಆ ನೆನಪಿನ ಬುತ್ತಿ ನನ್ನನ್ನು ಪ್ರತಿ ದಿನ ತೆರೆದಿಡುತ್ತದೆ.

ಮನಾಲಿಯ ಹೂ ಕಣಿವೆ
ಮನಾಲಿಯಲ್ಲಿ ಹೂ ಕಣಿವೆಗಳು, ಕಾಡುಗಳು ಮತ್ತು ಅನೇಕ ಹಳ್ಳಿಗಳ ನಡುವೆ ಅಲ್ಲಿನ ಜನರು ಡೇರೆಗಳಲ್ಲಿ ವಾಸಿಸುವುದನ್ನು ನಾವು ಕಾಣಬಹುದಾಗಿದೆ. ಇಲ್ಲಿನ ಹಲವಾರು ಪರ್ವತ ಶ್ರೇಣಿಗಳಲ್ಲಿ ಜನರು ಗುಡೇರಾ/ ಡೇರೆಗಳನ್ನು ಬಳಸಿ, ಪರ್ವತಗಳ ಮೇಲೆ ಆಶ್ರಯ ಪಡೆದಿದ್ದಾರೆ. ಜನಜೀವನಕ್ಕೆ ಕುದುರೆ ಕತ್ತೆಗಳ ಮೂಲಕ ವಸ್ತುಗಳನ್ನು ಸಾಗಿಸುತ್ತಾರೆ.

– ಸುಮಲತಾ, ಬಜಗೋಳಿ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.