Insect World: ಕೀಟ ಜಗತ್ತಿನ ಸಹಜೀವನ


Team Udayavani, Aug 6, 2024, 5:24 PM IST

8-uv-fusion

ತಮ್ಮ ಮನೆಯ ಹೂ ಕುಂಡಗಳಲ್ಲೋ ಅಥವಾ ನೆಲದಲ್ಲಿ ನೆಟ್ಟ ಹೂವಿನ ಗಿಡ ಅಥವಾ ಹಣ್ಣಿನ ಗಿಡಗಳಲ್ಲಿ ಬಿಳಿ ಬಣ್ಣದ ತೆಪೆಯಂತೆ ಕಾಣುವ ಜೀವಿಗಳ ಸಮೂಹವನ್ನು ಎಲ್ಲರೂ ಗಮನಿಸಿರಬಹುದು. ಈ ಬಿಳಿಯ ತೇಪೆಗಳಂತೆ ಕಂಡು ಬರುವುದು ಆಫಿಡ್‌ ಕೀಟಗಳು (ಬಿಳಿ ಸಸ್ಯ ಹೇನುಗಳು). ಇವು ಸಸ್ಯಗಳ ರಸವನ್ನೇ ಆಹಾರವನ್ನಾಗಿಸಿಕೊಂಡು ಬದುಕುವ ಜೀವಿಗಳು. ಈ ಕೀಟಗಳು ಬರೀ ಸಸ್ಯಗಳ ಜೀವ ಸತ್ವವನ್ನು ಹೀರುವುದು ಮಾತ್ರವಲ್ಲ, ಹಲವು ಸಸ್ಯಗಳ ರೋಗಗಳಿಗೆ ಮೂಲವೂ ಆಗಿರುತ್ತವೆ.

ಇರುವೆಗಳಿಗೆ ಈ ಕೀಟಗಳನ್ನು ಕಂಡರೆ ಒಂದುತರಹದ ಪ್ರೀತಿ. ಇದಕ್ಕೂ ಒಂದು ಬಲವಾದ ಕಾರಣವಿದೆ. ವಿಷಯ ಏನೆಂದರೆ ಈ ಕೀಟಗಳು ಸಸ್ಯ ರಸವನ್ನು ಭಕ್ಷಿಸಿದ ಅನಂತರ ವಿಸರ್ಜಿಸುವ ‘ಹನಿಟ್ನೂ’ ಎಂಬ ಸಿಹಿ ದ್ರವವು ಇರುವೆಗಳ ಪಾಲಿನ ಪಂಚಾಮೃತ. ಹೆಸರೇ ಹೇಳುವಂತೆ ಈ ‘ಹನಿ ಟ್ನೂ’ ರುಚಿಯಲ್ಲಿ ಸಿಹಿಯಾಗಿರುವುದಲ್ಲದೇ ಇದರಲ್ಲಿರುವ ಶರ್ಕರಗಳು ಇರುವೆಗಳಿಗೆ ನೆಚ್ಚಿನ ಆಹಾರವಾಗಿದೆ. ಇದು ಇರುವೆಯ ಗುಂಪು ಹಾಗೂ ರಾಣಿ ಇರುವೆಗೆ ಶಕ್ತಿ ನೀಡುವ ಆಹಾರ ಕೂಡ ಆಗಿದೆ. ಇದೇ ಕಾರಣದಿಂದ ಈ ‘ಹನಿ ಟ್ನೂ’ವನ್ನು ಹಲವು ತಳಿಯ ಇರುವೆಗಳು ಏಫಿಡ್‌ಗಳ ಹೊಟ್ಟೆಯ ಭಾಗವನ್ನು ತನ್ನ ಮೀಸೆಗಳಿಂದ (ಆ್ಯಂಟೆನಾ) ಮೃದುವಾಗಿ ಒತ್ತುವ ಮೂಲಕ ಏಫಿಡ್‌ಗಳು ‘ಹನಿ ಟ್ನೂ’ ವಿಸರ್ಜಿಸುವಂತೆ ಮಾಡುತ್ತವೆ, ಹಾಗೂ ಈ ರಸವನ್ನು ಇರುವೆಗಳು ಸಂಗ್ರಹಿಸುತ್ತವೆ.

ತನಗೆ ಉಪಕಾರ ಮಾಡಿದ ಏಫಿಡ್‌ಗಳನ್ನು ಇರುವೆಗಳೂ ಮರೆಯುವುದಿಲ್ಲ. ತನಗೆ ಆಹಾರ ನೀಡಿದ ಏಫಿಡ್‌ಗಳನ್ನು ಇರುವೆಗಳು ಜೋಪಾನವಾಗಿ ನೋಡಿಕೊಳ್ಳುತ್ತವೆ. ಹಾಗೂ ಶತ್ರುಗಳಿಂದ ರಕ್ಷಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೇ ಎಷ್ಟೋ ಇರುವೆಗಳ ಪ್ರಜಾತಿಗಳು ಕಾಲಾನುಕಾಲಕ್ಕೆ ಏಫಿಡ್‌ಗಳನ್ನು ತಮ್ಮ ನೆಲೆಗಳತ್ತ, ಹೆಚ್ಚು ಸಸ್ಯ ರಸವನ್ನು ನೀಡಬಲ್ಲ ಸಸ್ಯಗಳತ್ತ ಹೊತ್ತೂಯ್ಯುವ ಕೆಲಸವನ್ನೂ ಮಾಡುತ್ತವೆ.

ಒಟ್ಟಿನಲ್ಲಿ ಏಫಿಡ್‌ಗಳು ಸಸ್ಯಗಳಿಗೆ ಅಪಕಾರಿಯಾದರೂ, ಇರುವೆಗಳ ಪಾಲಿಗೆ ಉಪಕಾರಿಯಾಗಿವೆ. ಈ ಮೂಲಕ ನಿಸರ್ಗದ ಜಟಿಲ ವ್ಯವಸ್ಥೆಯಲ್ಲಿ, ಪ್ರಕೃತಿ ಸೃಷ್ಟಿಸಿದ ಎಲ್ಲ ಜೀವಿಗಳು ಕೂಡ ನಿಸರ್ಗ ವ್ಯವಸ್ಥೆಗೆ ಅಗತ್ಯ ಎಂಬ ಸಂದೇಶ ನೀಡುತ್ತವೆ.

-ಅನುರಾಗ್‌ ಗೌಡ

ಮೂಡಿಗೆರೆ

ಟಾಪ್ ನ್ಯೂಸ್

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.