UV Fusion: ಹಿರಿಜೀವಗಳ ಕಾಳಜಿ ವಹಿಸಿ
Team Udayavani, Nov 20, 2024, 3:48 PM IST
ಹಿರಿಯ ನಾಗರಿಕರು ಒಂದು ತಲೆಮಾರಿನ ಹಿಂದಿನ ವರೆಗೂ ತಮ್ಮ ಕುಟುಂಬ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ನೊಗ ಹೊತ್ತವರು. ದುಡಿಯುವ ಶಕ್ತಿ ಕುಂಠಿತಗೊಂಡರೂ ಅವರು ಯಾವತ್ತಿದ್ದರೂ ದೇಶದ ಆಸ್ತಿ. ಯುವಜನರು ಸಂಪಾದನೆಯ ಬೇಟೆಗೆ ಬಿದ್ದು ಊರು ತೊರೆದು ಹೋಗುವ ಅಥವಾ ಸಂಗಾತಿಯ ಮಾತಿಗೆ ಕಟ್ಟುಬಿದ್ದು ಕುಟುಂಬ ತೊರದು ಹೋಗುವ ಪ್ರವೃತ್ತಿ, ಪರಿಸ್ಥಿತಿ ಇಂದು ಹೆಚ್ಚುತ್ತಿದೆ. ಇದರಿಂದ ಬಾಧಿತರಾಗಿರುವ ವೃದ್ಧರ ಗೋಳನ್ನು ವಿವರಿಸುವುದು ಕಷ್ಟಸಾಧ್ಯ.
ಸುಮಾರು 4-5 ದಶಕಗಳ ಹಿಂದೆ ಹಿರಿಯರಿಗೆ ಕುಟುಂಬದಲ್ಲಿ, ಸಮಾಜದಲ್ಲಿ ಬಹಳ ಗೌರವವಿತ್ತು. ಮನೆಯ ಎಲ್ಲ ಕೆಲಸ ಕಾರ್ಯಗಳು ಹಿರಿಯರ ಅನುಮತಿ ಇಲ್ಲದೆ ನಡೆಯುತ್ತಿರಲಿಲ್ಲ. ಕುಟುಂಬದ ಪ್ರತಿಯೊಬ್ಬರು ತಮ್ಮ ಏಳಿಗೆಗಾಗಿ ತಂದೆ ತಾಯಿ ಹಾಗೂ ಅಜ್ಜ ಅಜ್ಜಿಯರ ಅನುಮತಿ, ಆಶೀರ್ವಾದವನ್ನು ಪಡೆಯುತ್ತಿದ್ದರು. ಆಗ ಕುಟುಂಬದ ಹಿರಿಯರಿಗೆ ಕುಟುಂಬದಲ್ಲಿ ತಮಗೂ ಒಂದು ಸ್ಥಾನವಿದೆ, ತಮ್ಮ ಇಡೀ ಜೀವನವನ್ನು ಧಾರೆ ಎರೆದಿದ್ದಕ್ಕೂ ಸಾರ್ಥಕವಾಯಿತು ಎಂದು ಭಾವಿಸುತ್ತಿದ್ದರು.
ಆದರೆ ಇಂದು ದೇಶದ ವೃದ್ಧರ ಪರಿಸ್ಥಿತಿಯನ್ನು ಕಂಡರೆ ನಿಜಕ್ಕೂ ಕಣ್ಣೀರು ಉಕ್ಕಿ ಬರುತ್ತದೆ. ನಾಗರಿಕತೆಯ ನಾಗಾಲೋಟದಲ್ಲಿ ಮಾನವ ಅನಾಗರಿಕನಾಗುತ್ತಿದ್ದಾನೆ. ನಾಗರಿಕತೆ ಬೆಳೆದಂತೆ ಮಾನವ ಹೆಚ್ಚು ಕ್ರೂರಿಯಾಗುತ್ತಿದ್ದಾನೆ. ತನ್ನ ಮಾತಿಗೆ ವಿರೋಧ ವ್ಯಕ್ತಪಡಿಸಿದರೆಂದು ತಂದೆ ತಾಯಿಯನ್ನೇ ಕೊಲ್ಲುವ ಮನುಜರನ್ನು ನಾವಿಂದು ಕಾಣುತ್ತಿದ್ದೇವೆ. ನಮ್ಮ ಹಿಂದೂ ಧರ್ಮದಲ್ಲಿ ವೃದ್ಧರಿಗೆ ಹೆಚ್ಚಿನ ಗೌರವವಿದೆ. ನಮ್ಮ ಸಂಸ್ಕೃತಿಯಲ್ಲಿ ತಂದೆ ತಾಯಿ ಸಕಲ ದೇವರಿಗಿಂತಲೂ ಹೆಚ್ಚು ಎಂದು ಪೂಜಿಸುವವರಿದ್ದಾರೆ. ಅದೇ ರೀತಿ ವಯೋವೃದ್ಧರಿಗೆ ಬೇಕಾದ ಎಲ್ಲ ಅನುಕೂಲಗಳನ್ನು ಒದಗಿಸುವುದು ಹಾಗೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಸೂಕ್ತ ಚಿಕಿತ್ಸೆಯನ್ನು ಕೊಡಿಸುವುದು ಮಕ್ಕಳ ಮೂಲಭೂತ ಕರ್ತವ್ಯವೇ ಸರಿ.
ವಯಸ್ಸಾದ ಅನಂತರ ಹಿರಿಯರಿಗೆ ಕಾಡುವ ದೊಡ್ಡ ಸಮಸ್ಯೆ ಎಂದರೆ ಏಕಾಂಗಿತನ. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಿದ್ದು ಅಲ್ಲಿ ಹಿರಿಯರ ಜತೆ ಮೊಮ್ಮಕ್ಕಳು ಇರುತ್ತಿದ್ದರು. ಮಕ್ಕಳ ಜತೆ ಆಟವಾಡುತ್ತಾ ಹಿರಿಯರಿಗೆ ಸಮಯ ಕಳೆಯುತ್ತಿರುವುದೇ ಗೊತ್ತಾಗುತ್ತಿರಲಿಲ್ಲ. ಹಾಗೆ ತಮಗೆ ಬೇಕಾದ ಚಿಕ್ಕ ಪುಟ್ಟ ಕೆಲಸಗಳನ್ನು ಮೊಮ್ಮಕ್ಕಳ ಕೈಯಿಂದ ಮಾಡಿಸಿಕೊಳ್ಳುತ್ತಿದ್ದರು. ಈಗ ಅವಿಭಕ್ತ ಕುಟುಂಬಗಳು. ಇದಲ್ಲದೆ ಮಕ್ಕಳನ್ನು ರೆಸಿಡೆನ್ಸಿಯಲ್ ಸ್ಕೂಲ್‌ಗಳಿಗೆ ಕಳಿಸುವುದರಿಂದ ವೃದ್ಧರಿಗೆ ಮೊಮ್ಮಕ್ಕಳ ಜತೆ ಇರುವ ಅವಕಾಶವೂ ಇಲ್ಲವಾಗಿದೆ.
ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನಾಗಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ. ವಿಶ್ವಸಂಸ್ಥೆ ವರದಿಯೊಂದರ ಪ್ರಕಾರ 2050ರ ವೇಳೆಗೆ ವಿಶ್ವಾದ್ಯಂತ ಹಿರಿಯ ನಾಗರಿಕ ಸಂಖ್ಯೆ 150 ಕೋಟಿ ತಲುಪುವ ಸಾಧ್ಯತೆಯಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೃದ್ಧರು ಇರುವುದರಿಂದ ಅವರ ಮೂಲಭೂತ ಅಗತ್ಯಗಳಿಗೆ ಅನುಕೂಲ ಮಾಡಿಕೊಡುವಂಥ ವ್ಯವಸ್ಥೆಯನ್ನು ನಿರ್ಮಿಸುವುದು ಕೂಡ ಅತ್ಯಗತ್ಯವಾಗಿದೆ. ಏಕೆಂದರೆ ಎಲ್ಲ ವೃದ್ಧರೂ ಕೂಡ ತಮ್ಮ ಕೊನೆಗಾಲದಲ್ಲಿ ನೆಮ್ಮದಿಯಿಂದ ಇರುತ್ತಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಅವರ ಮಕ್ಕಳು, ಮೊಮ್ಮಕ್ಕಳ ಆಸರೆ ಸಿಗಬಹುದು. ಈ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ತಮ್ಮ ಮಕ್ಕಳಿಗಾಗಿ ಜೀವನ ಪೂರ್ತಿ ದುಡಿದು, ಉಳಿತಾಯದ ಹಣ ಇಲ್ಲದೇ ವೃದ್ಧಾಪ್ಯಕ್ಕೆ ಕಾಲಿಟ್ಟವರೇ ಬಹುತೇಕರು. ಹಣಕಾಸು ಸಮಸ್ಯೆ ಮಾತ್ರವಲ್ಲ ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಯೂ ಬಹಳವಾಗಿ ಕಾಡುತ್ತದೆ. ಜತೆಗೆ, ದೈಹಿಕ ಮತ್ತು ಮಾನಸಿಕ ದೃಢತೆ ಕಳೆದುಕೊಂಡ ವೃದ್ಧರು ಬಹಳ ಸುಲಭವಾಗಿ ದೌರ್ಜನ್ಯಕ್ಕೆ ತುತ್ತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಜೀವಗಳಿಗೆ ಭದ್ರತೆ ಒದಗಿಸುವ ಬಲಿಷ್ಠ ವ್ಯವಸ್ಥೆ ನಿರ್ಮಾಣವಾಗಬೇಕು ಮತ್ತು ನಿರ್ಮಾಣವಾಗುವುದು ಅಗತ್ಯ ಕೂಡ.
ನಮಗಾಗಿ ತಮ್ಮಿಡೀ ಜೀವನ ಮೀಸಲಿಟ್ಟ ವೃದ್ಧರಿಗೆ ಪ್ರೀತಿ, ಗೌರವ, ಕಾಳಜಿ ತೋರುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ದಿನಗಳು ವೃದ್ಧರ ಜತೆ ಸೆಲ್ಫಿ ತೆಗೆದುಕೊಂಡು ಸೋಷಿಯಲ್ ಮೀಡಿಯಾಗೆ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತವಾದರೆ ಅದಕ್ಕೆ ಅರ್ಥವಿಲ್ಲ. ನೀವು ವರ್ಷದ 365 ದಿನವೂ ನಿಮ್ಮ ಕುಟುಂಬದ ಹಿರಿಯ ಜೀವಗಳ ಜತೆ ಕಳೆಯುತ್ತಿದ್ದೀರಿ ಎಂದಾಂದರೆ ಅದು ನಿಮ್ಮ ಸೌಭಾಗ್ಯವೇ ಸರಿ. ನಿಮ್ಮ ಅಜ್ಜ ಅಜ್ಜಿ, ಅಪ್ಪ ಅಮ್ಮನಿಗಾಗಿ ಸಮಯ ಮೀಸಲಿಡಿ. ಅವರಿಗೆ ಖುಷಿ ಕೊಡುವ, ನೆಮ್ಮದಿ ತರುವ ಕೆಲಸವನ್ನು ಮಾಡಿ.
ಅವರ ಮಾತನ್ನು ಆಲಿಸಿ. ಅವರಿಗೆ ಒಂದು ನೋಟಿನ ಕಂತೆ ಕೊಡುವುದಕ್ಕಿಂತ ಈ ಕೆಲಸಗಳು ಹೆಚ್ಚು ಅರ್ಥಪೂರ್ಣ. ಹಿರಿಯರ ಗತಗಾಲದ ಅನುಭವಗಳಿಂದ ಇವತ್ತಿನ ವರ್ತಮಾನ ನಡೆಯುತ್ತಿರುವುದು. ಹಾಗಾಗಿ ಹಿರಿಯರನ್ನು ಕೇವಲ ನಾಗರಿಕ ದಿನಕ್ಕೆ ಸೀಮಿತರನ್ನಾಗಿಸದೆ ಅವರು ನಿರುಪಯುಕ್ತರಲ್ಲ ಎಂದು ಭಾವಿಸಿ ಬದುಕೋಣ.
-ತನುಶ್ರೀ ಶೆಟ್ಟಿ
ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.