Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ


Team Udayavani, Nov 26, 2024, 4:46 PM IST

6-uv-fusion

ಇಲ್ಲಿ ಹುಟ್ಟಿದವರೆಲ್ಲರೂ ಅದೃಷ್ಟವಂತರಾಗಿರಲು ಸಾಧ್ಯವಿಲ್ಲ ಎಂದು, ತಮಗೆ ತಾವೇ ನತದೃಷ್ಟರೆಂದು ಹಿಂಜರಿಯುವ ಬಹುತೇಕ ಜನರಿದ್ದಾರೆ. ಅದೃಷ್ಟವೆಂದರೆ ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡಿರಬೇಕು, ಹತ್ತಾರು ತಲೆಮಾರು ಕೂತುಂಡರು ಕರಗದಷ್ಟು ಸಿರಿವಂತಿಕೆ ಇರುವವರಷ್ಟೇ ಭಾಗ್ಯಶಾಲಿಗಳು, ಎಂದೆಲ್ಲಾ ಕಲ್ಪನೆಗೂ ಸರಳವಾಗಿ ಸಿಕ್ಕುವ ಕಥೆಯನ್ನು ಹೇಳಿಕೊಳ್ಳುತ್ತಾ, ತನ್ನನ್ನು ತಾನೇ ಹೀಯಾಳಿಸಿಕೊಳ್ಳುವ ರೀತಿಯನ್ನು ಕರಗತ ಮಾಡಿಕೊಂಡು, ತನ್ನ ಅದೃಷ್ಟದ ಹಣೆಪಟ್ಟಿಯನ್ನು ಸ್ವತಃ ತಾನೇ ಬರೆದುಕೊಂಡು ಇಷ್ಟೇ ಜೀವನ ಎಂದುಕೊಂಡವರಿದ್ದಾರೆ.

ನಿಜಕ್ಕೂ ಅದೃಷ್ಟವಂತನೆಂದರೆ ಯಾರು? ಅದು ಹಣೆಯಲ್ಲಿ ಬ್ರಹ್ಮ ಬರೆದು ಕಳಿಸಿದರೆ, ಇದನ್ನು ಓದಿ ಹೇಳಿದವರಾರು? ಹೀಗೆ ಅದೃಷ್ಟ ರೇಖೆಯ ಬಗ್ಗೆ ಕೆದಕುತ್ತಾ ಹೋದರೆ ಪ್ರಶ್ನೆಗಳು ಸಾಲು ಸಾಲಾಗಿ ಕಣ್ಮುಂದೆ ಅಪ್ಪಳಿಸುತ್ತವೆ ವಿನಃ ಅದಕ್ಕೆ ಸೂಕ್ತ ಪರಿಹಾರ ಲಭಿಸುವ, ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳುವ ಉಪಾಯದ ಮಾರ್ಗದತ್ತ ಯಾರಾದರೂ ಗಮನಹರಿಸುವರೇ? ಬಡತನದಲ್ಲಿ ಹುಟ್ಟಿದವರೆಲ್ಲಾ ನತದೃಷ್ಟರೇ ಎಂದುಕೊಂಡಿದ್ದರೆ, ನಾವಿಂದು ಭವ್ಯ ಭಾರತದಲ್ಲಿ ಸ್ವತಂತ್ರತೆಯ ಬದುಕನ್ನು ಬದುಕುತ್ತಲೇ ಇರಲಿಲ್ಲ!

ಡಾ| ಬಿ.ಆರ್‌ ಅಂಬೇಡ್ಕರ್‌ ಬಾಲ್ಯದಲ್ಲೇ, ತಮಗೆ ಸಿಗದ ಸೌಲಭ್ಯಗಳ ವಿರುದ್ಧ ಹೋರಾಡಿ, ತಮ್ಮ ಅದೃಷ್ಟ ರೇಖೆಯನ್ನು ಹಕ್ಕುಗಳಲ್ಲಿ ಮಂಡಿಸಿ, ಮೀಸಲಾತಿಯ ಸೃಷ್ಟಿಸಿ, ಸಂವಿಧಾನದ ಶಿಲ್ಪಿಯಾದವರು. ಅವರು ಅವಕಾಶಗಳನ್ನು ಹೇಗೆ ಸೃಷ್ಟಿಸಿಕೊಂಡರೆಂಬ ಮನವರಿಕೆ ಹಾಗೂ ಅವರ ಬಾಲ್ಯ ಜೀವನ ಪ್ರತಿಯೊಬ್ಬರಿಗೂ ಪಾಠವೇ ಹೌದು.

ಬಡತನದ ಹಿನ್ನೆಲೆಯಿಂದ ಬಂದವರಾದ ಎ.ಪಿ.ಜೆ ಅಬ್ದುಲ್‌ ಕಲಾಂ ರವರು ತಮ್ಮ ಬಾಲ್ಯದಲ್ಲಿಯೇ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ದಿನಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು, ಅನಂತರ ಅವರ ಚುರುಕುತನ, ಕಠಿನ ಪರಿಶ್ರಮ, ಹಾಗೂ ಆಳವಾದ ಅಧ್ಯಯನ ಮುಂದೆ ಅವರನ್ನು ರಾಷ್ಟ್ರಪತಿಯನ್ನಾಗಿಸಿತು.

ಜೀವನದಲ್ಲಿ ಶಿಸ್ತು ಎಂಬುದು ಗುರಿಗಳು ಹಾಗೂ ಅವುಗಳ ಸಾಧನೆಯ ಮಾರ್ಗದ ನಡುವಿನ ಸೇತುವೆಯಾಗಿದೆ.

ಬೀದಿ ದೀಪಗಳ ಮಂದ ಬೆಳಕಿನಲ್ಲಿ, ತಮ್ಮ ವಿದ್ಯಾರ್ಥಿವೇತನದಿಂದಲೇ ಓದಿನ ಸಾಧನೆಗೈದವರು ಸರ್‌. ಎಂ. ವಿಶ್ವೇಶ್ವರಯ್ಯ. ಹೀಗೇ ಹೇಳುತ್ತಾ ಹೋದರೆ ಸಾವಿರಾರು ಮಹನೀಯರು, ಸಾಧಕರು ನಮ್ಮ ಕಣ್ಮುಂದೆ ಸುಳಿಯುತ್ತಾರೆ. ಆ ಕಾಲದಲ್ಲಿದ್ದ ದುಸ್ಥಿತಿಯನ್ನು ನಾವೀಗ ಅನುಭವಿಸುತ್ತಿಲ್ಲ, ಆದರೆ ಈಗ ನಮಗೆ ದೊರಕಿರುವ ಸವಲತ್ತುಗಳಲ್ಲೇ ತೃಪ್ತಿಪಟ್ಟುಕೊಳ್ಳುತ್ತಾ, ಅದೃಷ್ಟ ರೇಖೆಯ ಬಗ್ಗೆ ಚರ್ಚಿಸುತ್ತಾ ಶಿಕ್ಷಣದ ಮೌಲ್ಯ ಮರೆತುಹೋಗಿದ್ದೇವೆ. ಇಂತಹ ಮಹಾನ್‌ ಸಾಧಕರ ಪರಿಶ್ರಮದ ಬೆಲೆಯು ಅವರು ಅವಕಾಶಗಳನ್ನ ಸೃಷ್ಟಿಸಿಕೊಂಡಂತಹ ಜಾಣತನವು ನಮಗೆಲ್ಲಾ ಮಾದರಿಯಾಗಬೇಕಿದೆ.

ಅವಕಾಶಗಳನ್ನು ಹುಡುಕಿಕೊಂಡು ಹೋಗುವವ ಬುದ್ಧಿವಂತನಾದರೆ, ಅವಕಾಶಗಳು ತನ್ನಿಂದೆಯೇ ಬರುವಂತೆ ಮಾಡುವವ ಅತಿ ಬುದ್ಧಿವಂತಿಕೆಯ ಅವಕಾಶಗಳ ಸೃಷ್ಟಿಕರ್ತನಾಗುತ್ತಾನೆ

ಅವಶ್ಯಕತೆಯ ಅನುಗುಣವಾಗಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಸಾಮರ್ಥ್ಯ ಇರುವುದು ಚತುರನಿಗೆ ಮಾತ್ರ. ಒಬ್ಬ ಚತುರನಿಗೆ ನಿರ್ದಿಷ್ಟತೆ ಇರುತ್ತದೆ, ಅವನಿಗೆ ಅವನ ಸಾಮರ್ಥ್ಯದ ಬಗ್ಗೆ ಭೌತಿಕವಾಗಿ ಗೊತ್ತಿರುತ್ತದೆ. ಬುದ್ಧಿಶಕ್ತಿಯನ್ನು ಹೇಗೆ, ಎಲ್ಲಿ , ಯಾವ ಪ್ರಮಾಣದಲ್ಲಿ ವ್ಯಯಮಾಡಬೇಕೆಂಬ ಸಾಮಾನ್ಯ ಜ್ಞಾನ ಇದ್ದವನು ತನ್ನ ಗುರಿ ತಲುಪಬಲ್ಲ, ಸಾಧಿಸಬಲ್ಲ. ಇದಕ್ಕಾಗಿ ಕಠಿನ ತಪಸ್ಸು ಮಾಡಬೇಕೆಂದಿಲ್ಲ ತಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಚಂಚಲತೆಯ ಭಾವನೆಗಳು ಬಳಿ ಸುಳಿಯದಂತೆ ಎಚ್ಚರವಹಿಸಬೇಕು.

ದೊಡ್ಡ ಕೆಲಸಗಳನ್ನು ಸಾಧಿಸುವುದಕ್ಕೆ ನಾವು ಕೆಲಸ ಮಾಡಿದರೆ ಮಾತ್ರ ಸಾಲದು, ಕನಸನ್ನು ಕಾಣಬೇಕು; ಯೋಜನೆ ಹಾಕಿದರೆ ಮಾತ್ರ ಸಾಲದು, ಅದರಲ್ಲಿ ನಂಬಿಕೆಯು ಇರಬೇಕು ಎಂದು ಅನತೋಲಿ ಫ್ರಾನ್ಸ್‌ ಹೇಳಿದ್ದಾರೆ.

ಬದ್ಧತೆಯ ಬುನಾದಿಯನ್ನು ಭದ್ರಗೊಳಿಸಬೇಕು

ಒಮ್ಮೆ ಪುರಾಣದತ್ತ ಮುಖಮಾಡಿದರೆ, ಮಹಾಭಾರತದಲ್ಲಿ ಸೂತಪುತ್ರನಾದ ಕರ್ಣನನ್ನು ಅವನ ಸಾಮರ್ಥ್ಯದ ಮೇರೆಗೆ ದುರ್ಯೋಧನನು ಆಪ್ತಸ್ನೇಹಿತನನ್ನಾಗಿಸಿಕೊಳ್ಳುತ್ತಾನೆ ಹಾಗೂ ಸೂತಪುತ್ರನೆಂಬ ಕಾರಣಕ್ಕೆ ಅವಮಾನಕೀಡಾಗುವ ಅಂಗರಾಜ ಕರ್ಣನಿಗೆ ಕುರುವಂಶದ ಯುವರಾಜನ ಸ್ನೇಹದೊರಕಿದ ಕಥೆಯ ನಾವೆಲ್ಲ ಪುರಾಣದಲ್ಲಿ ಓದಿಯೋ, ದೃಶ್ಯಮಾಧ್ಯಮದಲ್ಲಿ ನೋಡಿಯೋ, ಕೇಳಿಯೋ ತಿಳಿದಿರುತ್ತೇವೆ ಮತ್ತೂ ಇಲ್ಲಿ ಅವಕಾಶಗಳನ್ನು ಅವರ ಸಾಮಾರ್ಥ್ಯದ ಅನುಸಾರದಲ್ಲಿ ಪಡೆಯಲಾಗಿರುತ್ತದೆ. ಇಲ್ಲಿನ ಕರ್ಮವೂ ಅದೇ ಹೇಳುತ್ತದೆ.

ಇಲ್ಲಿ ಉನ್ನತವಾದದ್ದನ್ನು ಪಡೆಯಬೇಕೆಂದರೆ, ದೊಡ್ಡದ್ದನ್ನು ಸಾಧಿಸಬೇಕೆಂದಿದ್ದರೆ ಮೊದಲು ಅದಕ್ಕೆ ಬೇಕಾದ ಬದ್ಧತೆಯ ಬುನಾದಿಯನ್ನು ಭದ್ರಗೊಳಿಸಬೇಕು.

ಅವಕಾಶಗಳು ನಮ್ಮತ್ತ ಧಾವಿಸುವಂತಹ ಧ್ಯೇಯವನ್ನು ಛಲವಾಗಿಸಿಕೊಳ್ಳಬೇಕಾಗುತ್ತದೆ. ಹಾಗೂ ಆಯ್ದುಕೊಂಡ ಜೀವನ ಮಾರ್ಗದಲ್ಲಿ ಗುರಿ ತಲುಪುವ ಸತತ ಯತ್ನವನ್ನು ನಿರಂತರವಾಗಿ ಪಟ್ಟಿಡಿದು ಮಾಡುತ್ತಿರಬೇಕು. ಬಡತನದಲ್ಲಿ ಬೆಳೆಯುವುದು ಪಾಠವಾದರೆ, ಅದರಿಂದ ಅದೃಷ್ಟದತ್ತ ಸಾಗುವ ಹಾದಿಯಲಿ ಅವಕಾಶಗಳನು ಸೃಷ್ಟಿಸಿಕೊಳ್ಳುವ ಚತುರತೆ ಇರುವವನು ಸಾಧಕನಾಗುತ್ತಾನೆ, ಇತಿಹಾಸ ಸೃಷ್ಟಿಸುತ್ತಾನೆ.

ದೀಪಿಕಾ ಬಾಬು

ಮಾರಘಟ್ಟ

ಟಾಪ್ ನ್ಯೂಸ್

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

ಅಡ್ಡಹೊಳೆಯಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.