UV Fusion: ಇಂದೇಕೆ ಎಂಬ ಮಂದತ್ವ!

Team Udayavani, May 11, 2024, 3:34 PM IST

13-uv-fusion

ರಾಜಕಾರಣಿಗಳು ನೀಡಿದ ಭರವಸೆಯ ಮಾತುಗಳನ್ನು ಜಾರಿಗೆಗೊಳಿಸಲಿಲ್ಲ ಎಂದು ಎಷ್ಟೋ ಬಾರಿ ಎಗರಾಡುತ್ತೇವೆ. ನೆರೆಯ ಮನೆಯವನು ಕೊಟ್ಟ ಮಾತನ್ನು ತಪ್ಪಿ ನಡೆದನೆಂದು ಹತಾಶೆಗೊಳಗಾಗುತ್ತೇವೆ. ಆತ ನಂಬಿಕೆಗೂ ಅರ್ಹನಲ್ಲವೆಂದು ಅದೆಷ್ಟೋ ಬಾರಿ ಶಪಿಸಿಬಿಡುತ್ತೇವೆ. ಯಾವುದೋ ರಾಜಕಾರಣಿ, ಪಕ್ಕದ ಮನೆಯವನು ನೀಡಿದ ಆಶ್ವಾಸನೆಯನ್ನು ತರ್ಕಿಸುವ ಅವಸರದಲ್ಲಿ ನಮಗೆ ನಾವೇ ನೀಡಿದ ಆಶ್ವಾಸನೆಗಳ ಬಗೆಗೆ ಚಿಂತಿಸುವ ಸಾವಧಾನ ಮರೆಯಾಗಿಬಿಡುತ್ತದೆ ಎಂಬುದು ದಿನನಿತ್ಯ ಅರಿವಿಗೆ ಬರಬೇಕಾದ ಕಟು ಸತ್ಯ.

ದಿನದಲ್ಲಿ ಕನಿಷ್ಠ ಹತ್ತು ಬಾರಿಯಾದರೂ ನಾನು ನಾಳೆಯಿಂದ ಈ ಕೆಲಸ ಮಾಡುತ್ತೇನೆ, ಆ ಕೆಲಸ ಮಾಡುತ್ತೇನೆ ಎಂದು ಹಲವಾರು ಯೋಜನೆಗಳ ಬಗ್ಗೆ ಸಂಕಲ್ಪತೊಡುತ್ತೇವೆ. ನಾಳೆಯ ದಿನ ಪುನಃ ನಾಳೆಗೆ ಆ ಯೋಜನೆಗಳನ್ನೆಲ್ಲ ಮುಂದೂಡಿಬಿಡುತ್ತೇವೆ. ಹೀಗೆ ಈ ನಾಳೆ ಎನ್ನುವುದಕ್ಕೆ ಕೊನೆಯೇ ಇಲ್ಲದಂತೆ ಮಾಡಿಬಿಡುತ್ತೇವೆ. ಇದಕ್ಕೆ ಮುಖ್ಯ ಕಾರಣ ಮನಸ್ಸಿನ ಮೇಲೆ ಹೇಗೆ ಸಂಯಮ ಸಾಧಿಸಬಹುದೆಂಬ ಮಾರ್ಗದರ್ಷನ ನಮಗಿಲ್ಲದಿರುವುದು.

ಹಿಡಿತದೊಳಗಿರಲಿ

ನಿಜಕ್ಕೂ, ಸಾಕಷ್ಟು ಬಾರಿ ಸ್ಫೂರ್ತಿದಾಯಕ ಲೇಖನವನ್ನು ಓದಿದಾಗ, ಚಿಂತಕರ ಮಾತನ್ನು ಕೇಳಿದಾಗ ಬದಲಾಗಬೇಕೆಂದು ಬಯಸುತ್ತೇವೆ. ಆದರೆ ಬದಲಾಗುವುದಕ್ಕೆ ಸರಿಯಾದ ಮುಹೂರ್ತವೇ ನಮಗೆ ದೊರಕುವುದಿಲ್ಲ. ನಮ್ಮ ಸುಂದರ ನಾಳೆಗಳನ್ನು ರೂಪಿಸುವ ಮಹತ್ತರವಾದ ಜವಾಬ್ದಾರಿಯು ನಮ್ಮದೇ ಕೈಯಲ್ಲಿರುವುದರಿಂದ, ಯೋಜನೆಗಳನ್ನು ನೀಲನಕಾಶೆಗೊಳಿಸಿದಷ್ಟೇ ಗಂಭೀರವಾಗಿ ಅಳವಡಿಸುವ ಅಗತ್ಯತೆಯನ್ನು ಸೃಷ್ಟಿಗೊಳಿಸಬೇಕು. ನಾಳೆ ಎಂದರೆ ಮನೆಹಾಳು ಎಂಬ ಉಕ್ತಿಯನ್ನು ನೆನಪಿನಲ್ಲಿರಿಸಿ, ಹೊಸ ಯೋಜನೆಯನ್ನು ಇಂದಿನಿಂದಲೇ, ಈಗಿನಿಂದಲೇ ಜೀವನ ಶೈಲಿಯೊಳಗೆ ಪ್ರಯತ್ನಪೂರ್ವಕವಾಗಿ ಅಳವಡಿಸಿಕೊಳ್ಳಬೇಕು. ಯಾಕೆಂದರೆ ತಣ್ತೀದ ಅನುಷ್ಠಾನವಾದರೆ ಮಾತ್ರ ಸಾಧನೆ ಸಾಧ್ಯ!

ಮುಸುಕನ್ನು ಸರಿಸಿ

ಮನಸ್ಸಿನ ಸ್ಥಿತಿಗತಿಗಳು ಮಾಡುವ ಕಾರ್ಯದ ಮೇಲೆ ತೀರಾ ಪರಿಣಾಮವನ್ನು ಬೀರುತ್ತವೆ. ಹೊಸದಾದ ಕೆಲಸಕ್ಕೆ ತೊಡಗುವಾಗ ಇರುವ ಹುರುಪು ಕೊನೆಯವರೆಗೂ ಇರಬೇಕಾಗುತ್ತದೆ. ದಿನದಿಂದ ದಿನಕ್ಕೆ ಅಸಡ್ಡೆ ಬೆಳೆಯುತ್ತಾ ಹೋದರೆ, ಋಣಾತ್ಮಕ ಭಾವನೆಗಳೇ ತುಂಬಿಕೊಂಡಿದ್ದರೆ ಕಾರ್ಯ ಯಶಸ್ವಿಯಾಗುವುದಿಲ್ಲ. ನಮ್ಮ ಮಾನಸಿಕತೆಯೇ ನಮಗೆ ಮುಸಾಕಾಗಿ ಇರುವಲ್ಲಿ ಯಶಸ್ಸು ದೊರೆಯುವುದೆಂತು? ಹಾಗಾಗಿ ಪ್ರತಿದಿನವೂ ಹೊಸ ದಿನವನ್ನಾಗಿ ಅಂಗೀಕರಿಸಿ ಹೊಸ ಉತ್ಸಾಹದಿಂದ ತೊಡಗಿದರೆ ಪ್ರತಿದಿನವೂ ನಮ್ಮ ಅದೃಷ್ಟದ ದಿನವೇ!

ಶಿಸ್ತಿರಲಿ

ಸಮಯವನ್ನು ವೃಥಾ ವ್ಯರ್ಥ ಮಾಡದೆ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಬಿಡುವಿನ ಸಮಯದಲ್ಲೆಲ್ಲಾ, ರೀಲ್ಸು ಮೆಸೇಜು ಎಂದು ಮೊಬೈಲ್‌ ಒಳಗೆಯೇ ಕಾಲಹರಣ ಮಾಡದೆ, ಸೃಜನಾತ್ಮಕ ಚಟುವಟಿಕೆಗಳತ್ತ ಮುಖಮಾಡಬೇಕು. ಪ್ರತಿಯೊಂದು ಚಟುವಟಿಕೆಗಳಿಗೂ ನಿಗದಿತ ಸಮಯವನ್ನು ಗುರುತಿಸಿಕೊಳ್ಳಬೇಕು. ಇಂದು ಒಂದರ್ಧ ಗಂಟೆ ಓದಿದರೆ, ನಾಳೆಯೂ ಅದೇ ಹೊತ್ತಿನಲ್ಲಿ ಓದಲು ಕೂರಬೇಕು. ಹೀಗೆ ಪ್ರತಿನಿತ್ಯ ಆ ಸಮಯವನ್ನು ಓದಿಗಾಗಿಯೇ ಮೀಸಲಿಡಬೇಕು. ಹೀಗೆ ಒಮ್ಮೆ ಉತ್ತಮ ಹವ್ಯಾಸಗಳ ರುಚಿ ಹತ್ತಿದರೆ ಅದರಿಂದ ಬಿಡಿಸಿಕೊಳ್ಳುವುದು ಬಲುಕಷ್ಟ!

ಸೋಲಿಸಿ ಬದುಕಿ

ಪ್ರತಿ ಪರಿಸ್ಥಿತಿಯಲ್ಲೂ ನಮ್ಮ ಮನಸ್ಸು ಸ್ಪರ್ಧೆಯನ್ನು ಬಯಸುತ್ತದೆ. ಎಲ್ಲೆಲ್ಲೂ ಪೈಪೋಟಿಯನ್ನೇ ಕಾಣುವ ಬದಲು ನಮಗೆ ನಾವೇ ಸ್ಪರ್ಧೆಯನ್ನೊಡಬೇಕು. ನಿನ್ನೆಗಿಂತ ಇಂದು ಸೊಗಸಾಗಿ, ಇಂದಿಗಿಂತ ನಾಳೆ ಗೆಲುವಾಗಿ ಬದುಕಬೇಕು. ನಮ್ಮ ಜೀವನದಲ್ಲಿ ಇಂದು ಸೋಲುವವನು, ನಾಳೆ ಗೆಲ್ಲುವವನು ನಾವೇ ಆಗಿರಬೇಕು ವಿನಃ ಮತ್ತೂಬ್ಬ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶವಿರಬಾರದು.

ನಿಮಗಾಗಿ ನೀವಿರಿ

ಬದುಕೆಂಬ ಗಾಳಿಪಟದ ನಿಯಂತ್ರಣದ ದಾರವನ್ನು ನಮ್ಮ ಕೈಯಲ್ಲೆ ಹಿಡಿದಿಟ್ಟುಕೊಳ್ಳಬೇಕು. ನಿಯಂತ್ರಣ ತಪ್ಪಿದ ಗಾಳಿಪಟದಂತೆ ಆಕಾಶಮಾರ್ಗದಲ್ಲಿ ತೇಲಾಡುತ್ತಾ ಓಲಾಡುತ್ತಾ ಸಂಚರಿಸಿದಂತೆ ತಹಬದ್ದಿಗೆ ತರಬೇಕು. ಬೇರೆಯವರ ಚಿಂತನೆಯನ್ನೇ ಸರಿಯೆಂದು ಅಂಗೀಕರಿಸದೆ ನಮ್ಮ ನಮ್ಮ ಅಂತರಾತ್ಮದ ಕರೆಗೆ ಅಸ್ತು ಎನ್ನುವುದನ್ನು ಕಲಿಯಬೇಕು. ಬದುಕು ನಮ್ಮನ್ನು ಮೂಲೆಗುಂಪು ಮಾಡಲು ಬಿಡದೆ, ನಾವು ನಮ್ಮೊಟ್ಟಿಗೆ ಸಂಬಂಧವನ್ನು ಬೆಳೆಸಿಕೊಂಡು ನಾವೊಂದು ಗುಂಪಾಗಿದ್ದು, ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳುವುದು ಜಾಣತನ!

-ಪಂಚಮಿ

ಹಾವಿದ್ಯಾಲಯ ಪುತ್ತೂರು

ಟಾಪ್ ನ್ಯೂಸ್

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMW ಕಾರು, 4BHK ಫ್ಲಾಟ್ ಗಿಫ್ಟ್

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Bollywood: ಹೃತಿಕ್‌ ರೋಷನ್‌ ʼಕ್ರಿಶ್‌ -4ʼ ಬಗ್ಗೆ ಹೊರಬಿತ್ತು ಬಿಗ್‌ ಅಪ್ಡೇಟ್

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

Belagavi;ಕಾಂಗ್ರೆಸ್‌ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್‌ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು

GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ

GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ

M Chinnaswamy Stadium

M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMW ಕಾರು, 4BHK ಫ್ಲಾಟ್ ಗಿಫ್ಟ್

Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.