Father: ಬಾಳದಾರಿಯಲ್ಲಿ ಅಪ್ಪ ಎಂಬ ಭರವಸೆ
Team Udayavani, Jun 28, 2024, 2:52 PM IST
ಅಪ್ಪ ಎಂಬ ಒಂದು ಪದ ಎರಡು ಅಕ್ಷರಕ್ಕಿರುವ ಶಕ್ತಿ ನಿಜಕ್ಕೂ ಅದ್ಭು ತವೆನಿಸುವುದು. ಅವ ಗದರಿಕೆಯೊಳಗೆ ಮೃದು ಮನಸ್ಸನ್ನು ಮರೆಮಾಚಿದ ಸರದಾರ. ಮಗನಿಗೆ ಅಮ್ಮನ ಮೇಲೆ ಒಲವಾದರೆ ಮಗಳಿಗೆ ತಂದೆಯ ಮೇಲೆ ಸ್ವಲ್ಪ ಒಲವು ಹೆಚ್ಚು. ಅನುಭವವಿಲ್ಲದಿದ್ದರೂ ಅಲ್ಪ ಸ್ವಲ್ಪ ಅರಿತವಳು ನಾ.
ಒಬ್ಬ ಮಗುವಿನ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕನಸುಗಳಿಗೆ ಸೇತುವೆಯಾಗಿ ಕೈ ಹಿಡಿದು ನಡೆಸುವ ಜಗತ್ತಿನ ಅದ್ಭುತ , ಪರಿಶುದ್ಧ ಪ್ರೀತಿಯ ಸಾಹುಕಾರರು ಅಪ್ಪ -ಅಮ್ಮ. ಜನ್ಮ ನೀಡಿದ್ದು ಜನನಿಯಾದರು ಜವಾಬ್ದಾರಿ ಹೊರುವುದು ತಂದೆ, ಕನಸುಗಳಿಗೆ ಸ್ಫೂರ್ತಿ ತಾಯಿ ತುಂಬಿದರೆ,ಬೆವರಿಳಿಸಿ ಕಾಯಕಯೋಗಿಯಾಗಿ ದುಡಿದು ಮಗುವಿನ ಸಾಧನೆಯ ಹಿಂದೆ ನಿಲ್ಲುವುದು ತಂದೆ. ಎಷ್ಟೊಂದು ಸುಂದರವಾದ ಸೇತುವೆಗಳಾಗಿ ಮಗುವಿನ ಭವಿಷ್ಯದ ಹಾದಿಗೆ ದಾರಿದೀಪವಾಗಿ ಬೆಳಗುತ್ತಾರೆ ಅಲ್ಲವೇ.
ಆದರೆ ಎಲ್ಲರ ಬದುಕು ಒಂದೇ ಪಥದಲ್ಲಿ ಸಾಗಲಾರದು, ಕೆಲವೊಮ್ಮೆ ಕೆಲವರ ಬದುಕು ಬಹು ದೊಡ್ಡ ಅನಿರೀಕ್ಷಿತ ತಿರುವು ಪಡೆದು ಸಾಗುವಂತ ಕ್ಷಣಗಳು ಬಹು ಕಹಿಯಾಗಿರುತ್ತದೆ. ಮಕ್ಕಳ ಭವಿಷ್ಯದ ರಥವು ತಂದೆ – ತಾಯಿಗಳ ಜವಾಬ್ದಾರಿಯ ದಾರಿಯಲ್ಲಿ ಸಾಗುವುದು.ಆದರೆ ವಿಧಿಯಾಟವೋ ದುರದೃಷ್ಟವೋ ಜವಾಬ್ದಾರಿಯೂ ಕೆಲವೊಮ್ಮೆ ಒಬ್ಬರ ಹೆಗಲ ಮೇಲೆ ಹೊರೆಯಾಗುವ ಸಂದರ್ಭಗಳು ಕೆಲವೊಬ್ಬರ ಜೀವನದಲ್ಲಿ ಬಂದೊದಗುವ ಪರಿಸ್ಥಿತಿಗಳು ಇವೆ . ಇದು ಅದೆಷ್ಟೋ ಜನರ ಬಾಳಿನಲ್ಲಿ ಅರಗಿಸಿಕೊಳ್ಳಲಾಗದ ನೋವು ಹೌದು.
ಅವನಿರದ ಅಪೂರ್ಣ ಬದುಕು ನನ್ನದು.
ನನ್ನ ಬಾಳ ಪುಟದೊಳಗೆ ಅವನಿಲ್ಲದ ಕ್ಷಣ – ದಿನಗಳ ಪುಟಗಳ ಅಧ್ಯಾಯವೇ ತುಂಬಿದೆ . ನೆನಪುಗಳ ಕಿರು ಹೊತ್ತಿಗೆಯೂ ಇರದೇ ಎಲ್ಲವೂ ಬರೀ ಹಾಳೆಗಳು. ಬರೆಯಬಹುದದಾರೂ ಏನು ಅವನ ನೆನಪುಗಳೇ ಇಲ್ಲದ ಅಧ್ಯಾಯವನ್ನು ಪೂರ್ಣಗೊಳಿಸುವುದಾದರು ಹೇಗೆ?
ಅಪ್ಪ ಎಂಬ ಅದ್ಬುತ ಅಧ್ಯಾಯವು ವಿಧಿಯ ಕ್ರೂರ ಆಟಕ್ಕೆ ವಿರಾಮ ಕಂಡಿರುವಾಗ .ಅರಿವಿರದ ಆ ಮುಗª ಬಾಲ್ಯ ಅವನ ಪ್ರೀತಿಯ ಆಸರೆಯಿಲ್ಲದೆ ತಾಯಿಯ ಪ್ರೀತಿಯ ಅಕ್ಕರೆಯೊಂದಿಗೆ ಸಾಗಿತ್ತು. ನೋವುಗಳು ಅರಿವಿನ ಬಿಂಬ ಮನದಲಿ ಮೂಡುವ ಮೊದಲೇ ಪುಟ್ಟ ಮನಸಿನಲಿ ಅವನಿಲ್ಲದ ಕೊರಗು ತುಂಬಿಸಿತ್ತು.ನಿರೀಕ್ಷೆಗೂ ಮೀರಿದ ಹೊಡೆತದ ನೋವು ಕರಗದೆ ಇಂದಿಗೂ ಮನಸನ್ನು ಮೂಕವಾಗಿಸಿದೆ.
ಹೆಣ್ಣು ಮಕ್ಕಳಿಗೆ ಅಪ್ಪ ಅಂದರೆ ಅದೇನೋ ಅಮ್ಮನಿಗಿಂತ ಸ್ವಲ್ಪ ಒಲವು ಅಪ್ಪನ ಕಡೆಗೆ. ಬಹುಷಃ ಅವ ನನ್ನ ಬಾಲ ದಿನಗಳಿಗೆ ಜೊತೆಯಾಗುತ್ತಿದರೆ ನನಿಗೂ ಹಾಗೇ ಅನಿಸುತಿತ್ತೋ ಏನೋ.ನನ್ನ ಪುಟಾಣಿ ಕೈಗಳಲ್ಲಿ ಅವನ ಕೈ ಹಿಡಿದು ನಡೆಯಲಿಲ್ಲ, ಅವ ಕೊಡಿಸಿದ ಕಿರುಗೆಜ್ಜೆ ಹಾಕಿ ಲಜ್ಜೆ ಇಟ್ಟು ಕುಣಿಯಲಾಗಲಿಲ್ಲ,ಬೆನ್ನ ಮೇಲೆ ಕೂತು ಆಟ ಆಡಲಿಲ್ಲ ಎಲ್ಲವೂ ತೆಳು ಪರದೆಯ ಮೇಲೆ ಅರೆ ಕ್ಷಣ ಮೂಡಿದ ಹುಸಿ ಕನಸಿಗಷ್ಟೇ ನನ್ನ ಬಾಳಲ್ಲಿ ಅವನ ನೆನಪು.
ಕನಸಿನ ಅಂಬಾರಿಯು ನಿಂತು ಕಾಯುತ್ತಿದ್ದರು. ಅವನೆಂದು ಅಂಬಾರಿಯ ಹೊತ್ತು ಸಾಗಲೇ ಇಲ್ಲ, ಆ ಅಂಬಾರಿಯೊಳಗೆ ನಾ ಕೂತು ಸವಾರಿ ಮಾಡಲೇ ಇಲ್ಲ. ಕಮರಿದ ಕನಸುಗಳು ಮುಂದೆ ನನಸಾಗುವ ಭರವಸೆ ಇರಲಿಲ್ಲವಾದರೂ, ಅಪ್ಪ ಎನ್ನುವ ನನ್ನ ಬದುಕಿನ ದೀಪ ಭರವಸೆಯ ನಂದಾದೀಪವಾಗಿ ನನ್ನೊಡನೆ ಸದಾ ಬೆಳಗಿ ಆಶೀರ್ವಾದ ಹಾರೈಕೆಯ ರಕ್ಷೆಯಾಗಿ ಕೈ ಹಿಡಿಯುವ ಬಲವಾದ ನಂಬಿಕೆ ನನ್ನದು.
ಕೈ ಹಿಡಿದು ನಡೆಸಲಿಲ್ಲವಾದರೂ ಪರೋಕ್ಷವಾಗಿ ಕೈ ಹಿಡಿದು ನಡೆಸುವವ, ಎಲ್ಲೆ ಎಡವಿದರು ಮೇಲೆತ್ತಿ ಧೈರ್ಯ ತುಂಬುವ, ನೋವ ತುಂಬಿದ ಮನಕೆ ನನ್ನೊಳಗೆ ಶಕ್ತಿ ತುಂಬುವವ ನನ್ನ ಜೊತೆಗೆ ಸದಾ ಬೆಂಗಾವ ಲಾಗಿ ಇರುವ ಭರವಸೆ ಅಪ್ಪ. ನನ್ನ ಭವಿಷ್ಯವನ್ನು ಸದಾ ಬೆಳಗುವಂತೆ ಕಾಪಾಡುವ ಜೀವ ಎಂದಿಗೂ ನನ್ನೊಂದಿಗೆ ಜೀವಂತವಾಗಿರುವುದು.
-ವಿಜಯಲಕ್ಷ್ಮೀ ಬಿ.
ವಿವೇಕಾನಂದ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.