UV Fusion: ಈ ಸಮಯ ಕಳೆದು ಹೋಗುತ್ತದೆ


Team Udayavani, Feb 3, 2024, 3:12 PM IST

9-uv-fusion

ಗಾಳಿಗಿಂತ ವೇಗವಾಗಿ ಚಲಿಸುವುದು ಕಾಲ. ಅರಿವೇ ಇರದಂತೆ, ಕಳೆದುಹೋದರೂ ತಿಳಿಯದಂತೆ. ಈ ವಾಕ್ಯಗಳು ಎಷ್ಟು ಅರ್ಥ ಪೂರ್ಣವಾಗಿದೆ, ಬದುಕಿನಲ್ಲಿ ಅಮೂಲ್ಯತೆಯನ್ನು ಪಡೆದಿರುವ ಸಮಯದ ಮೌಲ್ಯವನ್ನು ತಿಳಿಸುವುದರೊಂದಿಗೆ ಅದು ಎಷ್ಟು ವೇಗವಾಗಿ ಸಾಗುತ್ತಿದೆ ಮತ್ತು ಹೇಗೆ ಸಾಗಿದೆ ಎಂಬುದನ್ನು ಮೌಲ್ಯಯುತವಾಗಿ ವಿವರಿಸಿದೆ. ಸಮಯ ಎಂಬ ಒಂದು ಪದ ಮೂರು ಅಕ್ಷರ ಹೊಂದಿರುವ ಇದು ಜಗತ್ತನ್ನೇ ತನ್ನ ಹಿಡಿತದಲ್ಲಿ ಹಿಡಿದುಕೊಂಡಿರುವಾಗ ನಾವೆಲ್ಲರೂ ಅದರ ಕೈಗೊಂಬೆಗಳೇ ತಾನೇ.

ಸಮಯ ತನ್ನ ಪಾಡಿಗೆ ಮುಂದೆ ವೇಗವಾಗಿ ಸಾಗುವುದೇ ಹೊರತು ಹಿಂದೆ ಚಲಿಸದು. ಆದರೆ ನಾವು ಸಮಯದ ಜತೆ ಸಾಗುತ್ತಲೇ ಇರಬೇಕು, ನಮ್ಮ ಕಾರ್ಯಸಿದ್ಧಿಗೆ ನಾವು ಅದರೊಂದಿಗೆ ಹೋರಾಡಲೇಬೇಕು. ಆಗ ಮಾತ್ರ ಕಾಲದ ವೇಗದೊಂದಿಗೆ ನಾವು ಸರಿ ಸಮನಾಗುವ ಪ್ರಯತ್ನದತ್ತ ಹೆಜ್ಜೆ ಹಾಕಬಹುದು.

ಪ್ರತಿಯೊಂದು ವ್ಯಕ್ತಿಯ ಬದುಕಿನಲ್ಲಿ ಸಮಯ ಬಹಳ ಮೌಲ್ಯಯುತವಾದುದು. ಸಮಯದ ಬಗ್ಗೆ ಅರಿವು ಇರಲೇಬೇಕು. ಪೌರಾಣಿಕ ಹಿನ್ನಲೆಯನ್ನು ಒಮ್ಮೆ ನೋಡಿದಾಗ ಅದು ಕೃಷ್ಣ ಮತ್ತು ಅರ್ಜುನರ ಸಂಭಾಷಣೆಯ ಮೂಲಕ ತಿಳಿಯುವುದು.

ಅರ್ಜುನನು ಕೃಷ್ಣನಲ್ಲಿ ಗೋಡೆ ಬರವಣಿಗೆಯಲ್ಲಿ ಸಂತೋಷ – ದುಃಖದ ಪ್ರಶ್ನೆಯನ್ನು ಮುಂದಿಟ್ಟಾಗ ಕೃಷ್ಣನು ಈ ಸಮಯ ಕಳೆದುಹೋಗುತ್ತದೆ ಎಂಬ ಅದ್ಭುತ ವಾಕ್ಯದೊಂದಿಗೆ ಸಮಯದ ಅಮೂಲ್ಯತೆಯನ್ನು ಸಾರಿ ಹೇಳುತ್ತಾನೆ. ಕೃಷ್ಣನ ಕೈಯಲ್ಲಿ ಮೂಡಿದ ಗೋಡೆ ಬರವಣಿಗೆಯು ಇಂದು ಏನನ್ನಾದರೂ ಸಾಧಿಸು ನಾಳೆ ಶಾಶ್ವತವಲ್ಲ ಎಂಬ ಸಂದೇಶವನ್ನು ತಿಳಿಸುವುದು.

ಸಮಯ ಎಂಬುದು ಗೋಡೆ ಮೇಲೆ ನೇತಾಡುವ ಗಡಿಯಾರವಲ್ಲ ನಮ್ಮ ಸಾಧನೆಯ ಯಂತ್ರವೇ ಹೌದು. ಸಾಧನೆಗೆ ಸಮಯ ನೀಡು, ಅದು ನಿನ್ನನು ಗುರಿಯತ್ತ ಸಾಗಿಸುವುದು ಖಂಡಿತ. ಪ್ರಯತ್ನ, ಅಭ್ಯಾಸಕ್ಕೆ ಸಮಯ ನೀಡಿದರೆ ಸಾಧನೆಯ ಮೆಟ್ಟಿಲು ಏರಬಹುದು.

ಕಾಲ ನಿಂತ ನೀರಲ್ಲ ಅದು ಸಾಗಲೇಬೇಕು. ಅದು ಕಾಲನೀತಿ ನಿಯಮ. ಆದರೆ ನಾವು ಕಾಲದೊಂದಿಗೆ ಓಡುತ್ತಿದ್ದರೆ ಮಾತ್ರ ಕನಸುಗಳತ್ತ ಸಾಗುವ ಭರವಸೆ ನಮ್ಮೊಳಗೇ ಚಿಗುರಬಹುದು . ಸಮನಾಗಿ ಸಮಯಕ್ಕೆ ಹೊಂದಿಕೊಂಡು ಸಮಯದ ಹೊಂದಾಣಿಕೆಯ ಅರಿವು ನಮಗೆ ಬಹಳ ಮುಖ್ಯ.

ವೇಗವಾಗಿ ಸಾಗುತ್ತಿರುವ ಕಾಲವನ್ನು ಹಿಡಿದು ನಿಲ್ಲಿಸುವುದು ಅಸಾಧ್ಯ. ಅದರೊಂದಿಗೆ ನಾವು ಹೊಂದಿಕೊಂಡು ಸಾಗುವುದೇ ಜೀವನ. ನಾಳೆ ಎಂಬುದು ನಮ್ಮದಲ್ಲ . ಸಮಯ ಕ್ಷಣಿಕ ನಾಳೆ ಎಂಬುದನ್ನು ಅದು ಕಾಯುವುದಿಲ್ಲ. ಇಂದು ಏನಿದೆ ಅದೇ ವಿಶೇಷ, ಅದೇ ಅದ್ಭುತ.

ಇಂದು ಏನಿದೆ ಅದು ಅಮೂಲ್ಯ. ಅದು ಕಳೆದು ಹೋದರೆ ಮತ್ತೆ ಎಂದಿಗೂ ಮರಳಿಬಾರದು. ನಮ್ಮ ಬದುಕಿನ ಸಾಗರದಲ್ಲಿ ಸಮಯದ ಹಾಗೆಯೇ ಸಂತೋಷ, ದುಃಖವೂ ಕೂಡ. ಇಂದು ಸಂತಸವಿದ್ದರೆ ನಾಳೆ ದುಃಖವಿರಬಹುದು. ಅದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಕಳೆದ ಸಮಯ ಮತ್ತೆ ಬರುವುದಿಲ್ಲ ಎಂದು ತಿಳಿದರೂ ನಾವು ಅಜಾಗರೂಕತೆ, ಆಲಸ್ಯದಿಂದ ಅದನ್ನು ವ್ಯರ್ಥ ಮಾಡುತ್ತೇವೆ. ಆದರೆ ಒಂದೊಂದು ನಿಮಿಷಗಳನ್ನು ವ್ಯರ್ಥ ಮಾಡದೆ ನಮ್ಮ ಗುರಿಗೆ ಅದನ್ನು ಮೀಸಲಿಟ್ಟರೆ ಸಮಯವು ಸಾಧನೆಗೆ ಬಹುದೊಡ್ಡ ಕೊಡುಗೆ ನೀಡಬಹುದು. ಸಮಯ ವ್ಯರ್ಥ ಮಾಡದೆ ಅದನ್ನು ಸದುಪಯೋಗಪಡಿಸಿಕೊಳ್ಳುವತ್ತ ನಾವು ಚಿತ್ತ ಹರಿಸಬೇಕಾಗಿದೆ. ಇದು ಸಾಧನೆಗೆ ದಾರಿಯಾಗುತ್ತದೆ.

-ವಿಜಯಲಕ್ಷ್ಮೀ ಬಿ. ಕೆಯ್ಯೂರು,

ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

3-ptr

Puttur: ಪೆನ್‌ ಪಾಯಿಂಟ್‌ ಕ್ರಿಕೆಟ್‌: ಸತತ 2ನೇ ಬಾರಿ ಬ್ಲೂ ಹಂಟರ್ಸ್‌ ಚಾಂಪಿಯನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.