UV Fusion: ವಿಘ್ನ ವಿನಾಯಕನಿಗೆ ನಮನ
Team Udayavani, Sep 8, 2024, 8:00 AM IST
ಶ್ರೇಷ್ಠ ಪರಂಪರೆಯ ಪುಣ್ಯ ಭೂಮಿಯೇ ಭಾರತ. ಇಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಗಣೇಶ ಹಬ್ಬವನ್ನು ಪ್ರತಿ ವರ್‌ಷದ ಬಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತ ದೆ. ಶ್ರೀ ವಿನಾಯಕನ ಜನ್ಮವು ಸಾಮಾನ್ಯ ವಾದುದಲ್ಲ ತನ್ನ ತಾಯಿಯ ಶ್ರೀ ರಕ್ಷೆಗೆ ಜನ್ಮ ತಾಳಿದವನೇ ಗಣೇಶ.
ಎಲ್ಲ ಕಡೆ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ನಾವು ಸ್ವಾತಂತ್ರ್ಯ ಸಿಗುವ ಮೊದಲೇ ಆಚರಿಸಿದ್ದೇವೆ. 1630-1680ರಲ್ಲಿ ಮರಾಠ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿಯು ಪುಣೆಯಲ್ಲಿ ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿದ್ದರು, ಆದರೇ ಬ್ರಿಟಿಷ್ ಆಳ್ವಿಕೆಯ ಬಳಿಕ ಗಣೇಶ ಹಬ್ಬದ ಆಚರಣೆಯು ರಾಜ್ಯದ ಪ್ರೋತ್ಸಾಹವನ್ನು ಕಳೆದುಕೊಂಡಿತು. ಗಣೇಶನ ಹಬ್ಬದಿಂದ ಹಿಂದೂಗಳು ಒಗ್ಗಟ್ಟಿನಲ್ಲಿ ಇರುವುದನ್ನು ತಿಳಿದು ಈ ರೀತಿ ಆದರೆ ನಮಗೆ ಉಳಿಗಾಲವಿಲ್ಲ ಎಂದು ಮನಗಂಡು ಹಬ್ಬದ ಆಚರಣೆ ಮಾಡುವಂತಿಲ್ಲ ಎಂದು ತಡೆಯುತ್ತಾರೆ.
ಆದರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾಕಾರದ ಲೋಕಮಾನ್ಯ ಬಾಲಗಂಗಾಧರ ತಿಲಕ್ 1892ರಲ್ಲಿ ತನ್ನ ಸಾರ್ವಜನಿಕ ವಿರೋಧಿ ಶಾಸನದ ಮೂಲಕ ಹಿಂದೂ ಕೂಟಗಳ ಮೇಲಿನ ನಿಷೇಧವನ್ನು ತಪ್ಪಿಸಿ ತಿಲಕರು ಪುಣೆಯಲ್ಲಿ ಪುನಃ ಉತ್ಸವವನ್ನು ಪ್ರಾರಂಭಿಸಿದರು.
ಚೌತಿ ಹಬ್ಬ ಎಲ್ಲರು ಜತೆ ಸೇರಿ ಸಂಭ್ರಮಿಸುವ ಹಬ್ಬ. ಮಣ್ಣಿನಲ್ಲಿ ಅಥವಾ ಬೆಳ್ಳಿಯಲ್ಲಿ ಗಣೇಶನ ಪ್ರತಿಮೆ ಮಾಡಿ, ಮನೆ-ಮನೆಯಲ್ಲಿ, ಮಂದಿರಗಳಲ್ಲಿ ಪ್ರತಿಮೆ ಇಟ್ಟು ವಿನಾಯಕನಿಗೆ ಇಷ್ಟವಾದ ನಾನಾ ಬಗೆಯ ಸಿಹಿ ತಿನಿಸುಗಳನ್ನು ನೈವೇದ್ಯ ಇಟ್ಟು ಪೂಜೆ ಮಾಡುತ್ತಾರೆ.
ಬಳಿಕ ಗಣಪನ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.ಈ ಸಂದರ್ಭದಲ್ಲಿ ದಾರಿಯುದಕ್ಕೂ ಮೆರವಣಿಗೆ ಹೋಗುವುದೇ ಚಂದ. ಮೆರವಣಿಗೆ ಅಂದರೆ ಹುಲಿ ವೇಷ, ಚೆಂಡೆ, ಕುಣಿತ ಭಜನೆ, ಗೊಂಬೆ ಕುಣಿತ, ನೃತ್ಯ ಹೀಗೆ ಮುಂತಾದ ಸಾಂಪ್ರದಾಯಿಕ ಪದ್ಧತಿ ಯಲ್ಲಿ ಗಣೇಶನನ್ನು ನದಿ ಅಥವಾ ಸರೋವರದ ಮಧ್ಯೆ ವಿಸರ್ಜನೆ ಮಾಡಲಾಗುತ್ತದೆ.
ಆದರೆ ಈಗ ಕಾಲ ಬದಲಾಗಿದ್ದು, ಸಂಪ್ರದಾಯದ ಹೆಸರಲ್ಲಿ ಆಚರಣೆಯ ಮಹತ್ವವನ್ನು ಅರಿಯದೆ ಎಲ್ಲೆಂದರಲ್ಲಿ ಕುಡಿದು ಕುಪ್ಪಳಿಸುವುದನ್ನು ಕಾಣಬಹುದು. ವಿಜೃಂಭಿಸುವ ಸಲುವಾಗಿ ಅಥವಾ ಇನ್ನೊಬ್ಬರಿಗಿಂತ ಮೇಲಾಗಿ ನಾನೇ ಕಾಣುವ ಸಲುವಾಗಿ ಈ ಹಬ್ಬದ ಆಚರಣೆ ಮಾಡುವುದು ಸಲ್ಲದು. ಒಗ್ಗಟ್ಟಿನಲ್ಲಿ ಬಲವಿರಲಿ ಎಂದು ಈ ಹಬ್ಬ ಮಾಡಿದರೆ ನಮ್ಮ ದೇಶದ ಕೆಲವು ಕಡೆ ಇದು ಒಂದು ಸ್ಪರ್ಧೆಯಾಗಿ ಬಿಟ್ಟಿವೆ. ಆ ಗಲ್ಲಿಗಿಂತಲೂ ನಮ್ಮ ಗಣೇಶನ ವಿಗ್ರಹ ದೊಡ್ಡದಾಗಿರಬೇಕು, ನಾವೇ ಮೊದಲು ವಿಸರ್ಜನೆ ಮಾಡಬೇಕು ಹೀಗೆ ಹಲವಾರು ಆಟಗಳು. ಹಿಂದಿನ ಕಾಲದಲ್ಲಿ ಒಂದು ಗಲ್ಲಿಗೆ ಒಂದೇ ವಿಗ್ರಹ ಇದ್ದರು ಏನೋ ಒಂದು ಖುಷಿ ಆದರೆ ಈಗ ಎಷ್ಟು ಕ್ಲಬ್ ಎಷ್ಟು ಮಂದಿರ ಇದೆ ಅಷ್ಟು ವಿಗ್ರಹ ಅಷ್ಟೇ ಸ್ಪರ್ಧೆ.
-ಕಾವ್ಯಾ
ಪೆರುವಾಡು, ಕುಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.