UV Fusion: ನಿಜವಾದ ಗೆಳೆತನಕ್ಕೆ ಅಂತ್ಯವಿಲ್ಲ
Team Udayavani, Nov 20, 2024, 4:17 PM IST
ವ್ಯಕ್ತಿ ಸ್ವತಂತ್ರವಾಗಿ ಹುಟ್ಟುತ್ತಾನೆ. ಆದರೆ ಬೆಳೆಯುತ್ತಾ ಆತ ಸಂಬಂಧಗಳಲ್ಲಿ ಬಂಧಿಯಾಗುತ್ತಾನೆ ಎನ್ನುತ್ತಾರೆ ಖ್ಯಾತ ತತ್ತ್ವಶಾಸ್ತ್ರಜ್ಞ ಪ್ಲೇಟೋ. ಈ ಮಾತು ಅದೆಷ್ಟು ಸತ್ಯ ಅಲ್ವಾ? ಯಾವುದೇ ವ್ಯಕ್ತಿಗೆ ಸ್ನೇಹಿತರಿಂದ ಸಿಗುವ ಬೆಂಬಲ, ಆತ್ಮೀಯತೆ, ಪ್ರೀತಿ, ಅಪ್ಪುಗೆ, ರಕ್ಷಣೆ ಬಹುಶಃ ಯಾರಿಂದಲೂ ಸಿಗಲು ಸಾಧ್ಯವಿಲ್ಲ.
ಶಾಲೆಯಿಂದ ಆರಂಭವಾಗುವ ಸ್ನೇಹ ಆಲದ ಮರದಂತೆ ಜೀವನದುದ್ದಕ್ಕೂ ವಿಶಾಲವಾಗಿ ಹರಡು ತ್ತದೆ. ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠಕ್ಕಿಂತ ಮೊದಲು ಗೆಳತನವೇ ಹೆಚ್ಚು ಆತ್ಮೀಯ ವಾಗಿರುತ್ತದೆ. ಅದು ಅಮೂಲ್ಯವೂ ಆಗಿರುತ್ತದೆ. ಗೆಳೆತನ ನಿಜವೇ ಆಗಿದ್ದರೆ ಅದನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಯಾವುದೇ ವ್ಯಕ್ತಿಗೂ ಮೊದಲ ಗೆಳೆತನವನ್ನು ಮರೆಯಲು ಸಾಧ್ಯವಿಲ್ಲ. ಬದುಕಿನಲ್ಲಿ ಯಾವುದೇ ಸಂದರ್ಭದಲ್ಲೂ ನೆನಪಾಗುವ ವ್ಯಕ್ತಿಯೇ ಆ ಗೆಳೆಯ ಅಥವಾ ಗೆಳತಿ.
ತಂದೆ-ತಾಯಿಗಿಂತಲೂ ಹೆಚ್ಚಾಗಿ ಯಾವುದೇ ವಿಷಯವನ್ನು, ಮುಕ್ತವಾಗಿ, ಮುಜುಗರವಿಲ್ಲದೇ, ಹಿಂಜರಿಕೆ ಪಡದೆ ಗೆಳೆಯ- ಗೆಳತಿಯರಲ್ಲಿ ಹೇಳಿ ಹಗುರಾಗುತ್ತೇವೆ. ಗೆಳೆಯ ಅಥವಾ ಗೆಳತಿ ಇಲ್ಲದ ಬದುಕನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವರೊಂದು ರೀತಿಯಲ್ಲಿ ಬದುಕಿನ ಟಾನಿಕ್ ಇದ್ದ ಹಾಗೆ.
ಗೆಳೆತನ ಕೇವಲ ಹಣ, ಸಂಪತ್ತು ಮತ್ತು ಆಸ್ತಿ ಇದ್ದಾಗ ಇರುವಂತಹದ್ದಲ್ಲ. ಕಷ್ಟ, ಸುಖ ಎಲ್ಲ ಸಂದರ್ಭಗಳಲ್ಲೂ ಜತೆಗೆ ನಿಲ್ಲುವ ಏಕೈಕ ಜೀವ ಅದು. ಬದುಕಿನ ಪ್ರತೀ ಹಂತದಲ್ಲೂ ಗೆಳೆಯರು ಬೇಕೇ ಬೇಕು. ಗೆಳೆಯ ಜತೆಗಿದ್ದರೆ ವ್ಯಕ್ತಿ ಧೈರ್ಯದಲ್ಲೇ ಬದುಕಿನ ಸಂಧ್ಯಾಕಾಲದಲ್ಲೂ ನಗುತ್ತಲೇ ಜೀವನ ಸಾಗಿಸುತ್ತಾನೆ.
ಬದುಕಿನ ಯಾವುದೇ ಸಂದರ್ಭದಲ್ಲೂ ಯಾವುದೇ ಫಲಾಪೇಕ್ಷೆ ಇಲ್ಲದೇ ಜತೆಗೆ ನಿಲ್ಲುವವನೇ ನಿಜವಾದ ಗೆಳೆಯ. ಕಷ್ಟದ ಸಮಯದಲ್ಲಿ ಪ್ರೀತಿಯ ಅಪ್ಪುಗೆ ನೀಡಿ, ಧೈರ್ಯ ಹೇಳಿ, ಸಮಾಧಾನ ಮಾಡುವ ಒಬ್ಬ ಗೆಳೆಯ ಇದ್ದರೆ ಬದುಕಿನ ಬಂಡಿಯನ್ನು ಸರಾಗವಾಗಿ ಸಾಗಿಸಬಹುದು. ಅಂತಹ ಗೆಳೆತನ ಎಂದಿಗೂ ಕೈ ಜಾರಿ ಹೋಗುವುದಿಲ್ಲ.
ಸಣ್ಣ ಕೋಪ, ಪ್ರೀತಿಯ ಭಾವನೆ, ಒಂದಿಷ್ಟು ಕಾಳಜಿ, ಕೆಲವೊಂದಷ್ಟು ಸುಳ್ಳು, ನೂರಾರು ಬೈಗುಳ ಇದೆಲ್ಲ ಇದ್ದರೆ ಮಾತ್ರ ಗೆಳೆತನ ಎನ್ನಿಸಿಕೊಳ್ಳಲು ಸಾಧ್ಯ. ನಮ್ಮ ಸಂತೋಷಕ್ಕೆ ಕಾರಣವೇ ಈ ಗೆಳೆಯರು. ನನಗೂ ನನ್ನ ಜೀವನದಲ್ಲಿ ಒಳ್ಳೆ ಗೆಳೆಯರು ಸಿಕ್ಕಿದ್ದಾರೆ. ಅಷ್ಟರಮಟ್ಟಿಗೆ ನಾನು ಕೂಡ ಅದೃಷ್ಟಶಾಲಿ. ಯಾವತ್ತೂ ಯಾವ ಸಂದರ್ಭದಲ್ಲೂ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದವರಲ್ಲ ಅವರು.
ಗೆಳೆಯರಿಂದ ಕಲಿತ ಪಾಠಗಳು ಸಾವಿರಾರು. ಪ್ರೀತಿಯಲ್ಲಿ ಸೋತು ನಿಂತಾಗಲೂ ಹೆಗಲು ಕೊಟ್ಟು ನಿಂತಿದ್ದಾರೆ. ಕೆಲವೊಮ್ಮೆ ಬದುಕು ಇಷ್ಟೇ ಎಂದು ಬೈದು ಬುದ್ಧಿ ಹೇಳಿದ್ದೂ ಇದೆ. ಅದೇ ರೀತಿ ಗೆಳೆಯರ ಜತೆ ಸೇರಿ ಮಾಡಿದ ತುಂಟಾಟಗಳಿಗೇನೂ ಕಡಿಮೆ ಇಲ್ಲ. ಗೆಳೆತನ ಎಂದರೇನೇ ಹಾಗೆ. ಯಾವುದೇ ಸ್ವಾರ್ಥವಿಲ್ಲದ್ದು, ನಿಷ್ಕಲ್ಮಶ ಅನುಭೂತಿ. ಅದನ್ನು ಪಡೆದವನೇ ನಿಜವಾದ ಶ್ರೀಮಂತ.
ಸ್ನೇಹ ಎನ್ನುವುದು ಬಡವ-ಶ್ರೀಮಂತ, ಜಾತಿ-ಧರ್ಮ, ಯಾವುದೇ ಹಂಗಿಲ್ಲದೆ ಬೆಳೆಯುತ್ತದೆ. ಪ್ರತೀ ವ್ಯಕ್ತಿಗೆ ಧೈರ್ಯ ತುಂಬುವ, ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಸ್ನೇಹಿತರ ಬಳಗ ಆನಂದದ ಸಾಗರವನ್ನೇ ಸೃಷ್ಟಿಪಡಿಸುತ್ತದೆ. ನೀವೂ ಅಷ್ಟೇ, ನಿಮ್ಮ ನಿಜವಾದ ಗೆಳೆತನ ಹಾಗೂ ಗೆಳೆಯ ಅಥವಾ ಗೆಳತಿಯನ್ನು ಎಂದಿಗೂ ಕಳೆದುಕೊಳ್ಳದಿರಿ.
- ವಿಧೀಕ್ಷಿತಾ
ಮಂಗಳೂರು ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.