UV Fusion: ಎಲ್ಲರೊಳಗೊಂದಾಗಿ ಹರಿಯುವ ತುಂಗಭದ್ರೆ
Team Udayavani, Sep 10, 2023, 12:53 PM IST
ವಿಷ್ಣು ವರಾಹಾವತಾರ ಧರಿಸಿ ಹಿರಣ್ಯಾಕ್ಷನನ್ನು ವದಿಸಿದ. ಯುದ್ಧದಿಂದ ಬಹಳವಾಗಿ ದಣಿದಿದ್ದ ವರಾಹರೂಪಿ ವಿಷ್ಣು, ಭೂಲೋಕಕ್ಕಿಳಿದು ಪಶ್ಚಿಮ ಘಟ್ಟದ ಒಂದು ಪರ್ವತದ ಮೇಲೆ ದಣಿವಾರಿಸುತ್ತಿದ್ದನಂತೆ ಅದುವೇ “ವರಾಹ ಪರ್ವತ’. ಅವನ ಬೆವರಿನಿಂದ ಉದ್ಭವಿಸುವ ನದಿಗಳೇ ತುಂಗಾ – ಭದ್ರ ಎಂಬುದು ಪ್ರತೀತಿ.
ದಟ್ಟ ಹರಿದ್ವರ್ಣ ಪಶ್ಚಿಮಘಟ್ಟ ತಪ್ಪಲಿನ ಸಂಸೆಯ ಗಂಗಾಮೂಲದಿಂದ ಹುಟ್ಟುವ ತುಂಗಾ – ಭದ್ರರು, ಬೇರೆ ಬೇರೆ ದಿಕ್ಕುಗಳಲ್ಲಿ ಹರಿದು ಚಿಕ್ಕಮಗಳೂರು, ಶಿವಮೊಗ್ಗಗಳಲ್ಲಿ ಬೆಳೆದು, ಮತ್ತೆ ಕೂಡಲಿಯಲ್ಲಿ ಕೂಡಿ ಇಬ್ಬರು ಒಂದಾಗಿ – ತುಂಗಾಭದ್ರೆಯಾಗಿ ನವ ಚೈತನ್ಯದೊಂದಿಗೆ ನಿತ್ಯ ಕರ್ಮದ ಹಾದಿಗೆ ಮರಳುವಳು.
ಎಲ್ಲರೂ ನನ್ನವರೆ ಎನ್ನುತ್ತಾ, ಎಲ್ಲರ ದುಃಖ-ದುಮ್ಮಾನಗಳಿಗೆ ಶಾಂತಿಯಿಂದಲೇ ಕಿವಿಯೋಡ್ಡುತ್ತ, ರೈತರ ಜಮೀನುಗಳಿಗೆ ಜೀವ ನೀಡುತ್ತ, ತನ್ನ ಮಕ್ಕಳ ಈಜಾಟ – ತುಂಟಾಟಗಳನ್ನು ಖುಷಿಯಿಂದಲೇ ಕಾಣುತ್ತಾ, ದನ ಕರುಗಳನ್ನು ಕರೆದು-ಕರೆದು ಹಾಲುಣಿಸುತ್ತ, ಜೀವ ಸಂಕುಲವನ್ನು ತನ್ನ ಒಡಲಲ್ಲೇ ಪೋಷಿಸುತ್ತಾ, ತಾಯಂದಿರ ತಾಯಾಗಿ ಹರಿಯುವಳು ತುಂಗಭದ್ರೆ.
ಬಯಲುಸೀಮೆಯವರು ಹೊಸಪೇಟೆಯಲ್ಲಿ ಅವಳಿಗೆ ಅಡ್ಡಲಾಗಿ ನಿಂತು, ಕೈಮುಗಿದು ನಮ್ಮ ಕಡೆಗೂ ಬಾರವ್ವ ಎಂದಿದ್ದಕ್ಕೆ ಮಾತೃವಾತ್ಸಲ್ಯವೇ ಮೊದಲಾಗಿ, ಜೀವನಾಡಿಯಾಗಿ ಹರಿದು ಹಾಲುಣಿಸುತ್ತಿರುವ ಮಹಾತಾಯಿ ಈ ತುಂಗಭದ್ರೆ. ಕೊಪ್ಪಳ, ರಾಯಚೂರಿನ ಜನಮನಕೆ ಎಡದಂಡೆ ಕಾಲುವೆಯಾಗಿ ಬಂದು ತಣ್ಣನೆಯ ಬದುಕು ಕಟ್ಟಿ ಕೊಟ್ಟ ಸಿರಿವಂತಳಿವಳು.
ವಿಜಯನಗರದ ಗತವೈಭವ ಕಂಡರೂ, ವಿರುಪಾಕ್ಷನ ಸಾನಿಧ್ಯದಲ್ಲಿ ಸ್ಥಾನ ಪಡೆದರೂ, ತುಂಗಭದ್ರೆ ಈಗಲೂ ಅದೇ ಶಾಂತತೆ, ಅದೆ ಸೌಮ್ಯತೆಯಿಂದ ದಾವಣಗೆರೆ, ಬಳ್ಳಾರಿ, ವಿಜಯನಗರಗಳ ಜನ – ಜೀವನಕ್ಕೆ ಜೀವ ಜಲವಾಗಿ ಸಾಗಿ, ಕರ್ನಾಟಕದ ಸರಹದ್ದನ್ನೂ ಮೀರಿ ಆಂಧ್ರವನ್ನೂ ದಾಟಿ, ತೆಲಂಗಾಣದಲ್ಲಿ ತನ್ನ ಗೆಳತಿ ಕೃಷ್ಣೆಯ ಜತೆ ಸೇರಿ ಬಂಗಾಲ ಕೊಲ್ಲಿಯ ವಿಶಾಲತೆಯಲ್ಲಿ ವಿಲೀನಳಾಗುವಳು.
ಡಿವಿಜಿಯವರು ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದಂತೆ ತುಂಗಭದ್ರಾ ಎಲ್ಲೋ ಹುಟ್ಟಿ, ಇನ್ನೆಲ್ಲೋ ಬೆಳೆದು-ಹರಿದು, ಮತ್ತೆಲ್ಲಿಗೋ ಸೇರುವ ಇವಳು ಎಲ್ಲರಲೂ ಒಂದಾಗಿಹಳು.
-ಲಿಂಗರಾಜ ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.