UV Fusion: ನನ್ನ ಅಳಲನ್ನು ಕೇಳುವವರಾರು?
Team Udayavani, Dec 11, 2024, 1:09 PM IST
ಮಾನವ, ನಿನಗೆ ಮಾತ್ರ ಬಂಧು ಬಳಗ ಕುಟುಂಬ, ನಮಗೆ ಯಾರು ಇಲ್ಲ, ಭಾವನೆಗಳೇ ಇಲ್ಲ ಎಂದು ತಿಳಿದಿದ್ದೀಯಾ? ನಿನಗೆ ಹೇಗೆ ಮನಸ್ಸು ಇದೆಯೋ ಹಾಗೆ ನಮಗೂ ಮನಸ್ಸು ಇದೆ. ಆದರೆ ನಿನ್ನ ಮನಸ್ಸು ಮಾತ್ರ ಕಲ್ಲಿನದು.
ನೀನು ನಿನ್ನ ನೋವನ್ನು ಮಾತಿನ ಮೂಲಕ ವ್ಯಕ್ತ ಪಡಿಸುತ್ತೀಯಾ? ನಾವು ಮೂಖ ಪ್ರಾಣಿಗಳೆಂದು ನೋವೇ ಆಗುವುದಿಲ್ಲ ಎಂದು ಭಾವಿಸಬೇಡ. ವಾಹನದಲ್ಲಿ ವೇಗವಾಗಿ ಚಲಿಸುವುದು ನಿನಗೆ ಖುಷಿ ಕೊಡಬಹುದು. ಆದರೆ ನಿನ್ನ ಮೋಜು ಮಸ್ತಿಗೆ ನಮ್ಮಂತ ಮುಗ್ದ ಪ್ರಾಣಿಗಳನ್ನು ಏಕೆ ಬಲಿತೆಗೆದುಕೊಳ್ಳುತ್ತಿರುವೆ.
ನೀನು ಕೇವಲ ನಿನ್ನ ಸುಖವನ್ನು ಮಾತ್ರ ಯೋಚಿಸುವೆ, ನಾವು ನಿನ್ನಿಂದ ರಕ್ತದಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಹಾಗೆ ಕಂಡು ಕಾಣದಂತೆ ಹೋಗುವೆ. ನಾವು ಸತ್ತರೆ ನಿನಗೇನು, ನಮ್ಮಿಂದ ನಿನಗೆ ಯಾವ ಲಾಭವಿಲ್ಲವಲ್ಲ. ಪ್ರತಿಯೊಂದರಲ್ಲೂ ಲಾಭ ಹುಡುಕುವ ಸ್ವಾರ್ಥಿ ನೀನು.
ಏನೋ ತಿಳಿಯದೆ ನಾವು ನಿನ್ನ ವಾಹನಕ್ಕೆ ಅಡ್ಡಿಯಾದರೆ. ಇದೊಂದು ಪ್ರಾಣಿ ಎಂದು ಶಾಪ ಹಾಕುವೆ. ನಮಗೆ ಬುದ್ಧಿ ಇಲ್ಲ ಎಂದು ಒಪ್ಪಿಕೊಳ್ಳುವೆ. ಆದರೆ ನೀನು ಬುದ್ಧಿಜೀವಿ ಆದರೂ ನಿನ್ನ ಮುರ್ಖತನದಿಂದ ನನ್ನವರನ್ನೆಲ್ಲ ಕೊಂದು ನನ್ನನು ಏಕಾಂಗಿಯಾಗಿ ದಿನೆ ದಿನೆ ಸಾಯಿಸುತ್ತಿರುವೆಯಲ್ಲ.
ಅದಲ್ಲದೆ ಇತ್ತೀಚೆಗೆ ನಮಗೆ ಮಲೆನಾಡಿಗರ ನೆಮ್ಮದಿ ಕೆಡುಸುತ್ತಿರುವೆವು ಎಂಬ ಹಣೆಪಟ್ಟಿ ಬೇರೆ. ದಿನೇ ದಿನೇ ಮಂಗನ ಕಾಯಿಲೆ ಉಲ್ಬಣವಾಗುತ್ತಿದೆ. ಇದಕ್ಕೆ ಬಲಿಯಾಗುತ್ತಿರುವುದು ನನ್ನಂತ ಬಡಜೀವಿ ಹಾಗೂ ನೀನು. ನಿನ್ನ ದುರಾಸೆಗೆ ಕಾಡನ್ನೆಲ್ಲಾ ನಾಶ ಮಾಡಿ ನಮ್ಮ ಹೊಟ್ಟೆ ಒಡೆಯುತ್ತಿರುವೆ. ನನ್ನ ಬರುವಿಕೆ ಕಂಡಾಕ್ಷಣ ಎಲ್ಲಿ ತನ್ನ ಬೆಳೆಯನ್ನು ನಾಶ ಮಾಡುತ್ತೇವೆಯೋ ಎಂದು ನಮ್ಮನ್ನು ಓಡಿಸುತ್ತಿದೆ. ಆದರೆ ಈಗ ನನ್ನ ನೋಡಿದ ತತ್‌ಕ್ಷಣ ಬೆಳೆಹಾಳಾದರೆ ಹಾಳಾಗಲಿ ಈ ಮಂಗನಿಂದ ನಮಗೆ ಮಂಗನ ಕಾಯಿಲೆ ಬರದಿದ್ದರೆ ಸಾಕು ಎಂದು ಕಾಲು ಕೀಳುತ್ತಿರುವೆ.
ನೀನು ಈ ಮಂಗನ ಕಾಯಿಲೆಗೆ ತುತ್ತಾದರೆ ನಿನ್ನ ಕುಟುಂಬದವರೆಲ್ಲ ಆಸ್ಪತ್ರೆಗೆ ಸೇರಿಸಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾರೆ. ಆದರೆ ಈ ಕಾಯಿಲೆಯಿಂದ ನನ್ನವರ ಮರಣ ಸಂಖ್ಯೆ ವೃದ್ಧಿಸುತ್ತಿದೆ. ನಾವು ಸತ್ತರೆ ಕೇಳುವವರು ಯಾರೂ ಇಲ್ಲ. ನನಗೆ ಜನ್ಮ ನೀಡಿದ ತಾಯಿ, ನನ್ನ ಜತೆ ಒಡಹುಟ್ಟಿದವರು, ನನ್ನ ಜತೆಗೆ ಮರದಿಂದ ಮರಕ್ಕೆ ಹಾರುತ್ತಿದ್ದ ನನ್ನ ಕತೆಗಾರರು ನನ್ನವರು ಎಂದು ನನ್ನ ಬಳಿ ಯಾರು ಇಲ್ಲ. ನಾನೊಬ್ಬ ಏಕಾಂಗಿ. ಹೇ ಬುದ್ಧಿಜೀವಿ ಮಾನವ ನೀನು ಬದುಕಿ ನಮ್ಮ ವಾನರ ಕುಲವನ್ನು ರಕ್ಷಿಸು ಬಾ… ಭಾವನಾ ಡಿ.ವಿ. ದುಗ್ಗಿನಕೊಡ್ಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.