UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ
Team Udayavani, Apr 18, 2024, 9:14 AM IST
ದೇವರನ್ನು ಕಾಣುವ ಶಕ್ತಿ ಕಣ್ಣಿಗೆ ಇಲ್ಲದೆ ಇದ್ದರೂ ಬೇಡುವ ಮನಸ್ಸಿಗೇನು ಯಾರದ್ದು ಹಿಡಿತವಿಲ್ಲ. ಮಗು ಬಿ¨ªಾಗ ಅಮ್ಮ ಎಂದು ಹೇಗೆ ಕರೆಯುತ್ತದೆಯೋ ಹಾಗೆಯೇ ಕಷ್ಟದ ಸಮಯದಲ್ಲಿ ಇಷ್ಟ ದೇವರ ಮನಸಾರೆ ನೆನೆಸಿ ಕೊಂಡು ಕಾಪಾಡಪ್ಪ ಎಂದು ಪ್ರತಿಯೊಬ್ಬನು ಬೇಡುತ್ತಾನೆ. ಇನ್ನೂ ದೇವರನ್ನು ದ್ವೇಷಿಸುವವನ ಬಾಯಲ್ಲಿ ಕೂಡ ಅಪರೂಪಕ್ಕಾದರೂ ದೇವರ ನಾಮ ಬರುತ್ತದೆ ಎಂದರೆ ನಂಬದೇ ಇರಲು ಸಾಧ್ಯವಿಲ್ಲವೆಂದು ಅಘಿìವಲ್ಲವೇ.?
ನಿತ್ಯವು ದವಾಖಾನೆಗಳಲ್ಲಿ ಜನರು ಮೈ ಉಷಾರಿಲ್ಲದೆ ದಾಖಲಾಗುತ್ತಾರೆ. ಹಾಗೇಯೇ ಒಂದಷ್ಟು ಜನರು ಸಾವಿನ ಬಾಗಿಲು ತಟ್ಟುತ್ತಾರೆ . ಈ ಸಂದರ್ಭದಲ್ಲಿ ಕಣ್ಣಿಗೆ ಕಾಣುವ ದೇವರೆಂದರೆ ವೈದ್ಯರು ಮತ್ತು ದಾದಿಯರು. ಜನರ ಬಾಯಲ್ಲಿ ಮಾತ್ರವಲ್ಲದೆ ದವಾಖಾನೆಗಳ ಗೋಡೆಯು ಕೂಗುತ್ತಿರುತ್ತದೆ ರಕ್ಷಿಸು ಎಂದು. ಪ್ರಾಘಿìನೆ ಕೇಳಿ ಕೇಳಿ ದವಾಖಾನೆಯ ಗೋಡೆಗಳಿಗೆ ಅಭ್ಯಾಸವಾಗಿ ಹೋಗಿರುತ್ತದೆ ಹಾಗಾಗಿ ಪ್ರತಿಯೊಂದು ರೋಗಿ ಬಂದಾಗ ತಲೆ ಎತ್ತಿ ನಿಲ್ಲುತ್ತದೆ.
ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರು ಕೆಲವೊಂದು ಬಾರಿ ನನ್ನ ಪ್ರಯತ್ನ ಮಾಡಿರುವೆ ಆದರೆ ಇನ್ನೇನು ಇದ್ದರೂ ಮೇಲಿರುವ ದೇವರು ದೃಷ್ಟಿ ಇಡಬೇಕೆಂದು ಹೇಳುತ್ತಾರೆ. ಆ ಕ್ಷಣ ಕೆಲವರಿಗೆ ಅನ್ನಿಸಬಹುದು ಕೇವಲ ದೇವರಿಂದ ಸಾಧ್ಯವಾಗುತ್ತದೆ ಎಂದಿದ್ದರೆ ಯಾತಕ್ಕಾಗಿ ಹಣವನ್ನು ವೈದ್ಯರಿಗೆ ಸುರಿಬೇಕೆಂದು. ಇಲ್ಲಿ ನಮಗೆ ಏನು ಅಘಿìವಾಗುತ್ತದೆ ಅಂದರೆ ಹಣವಿಲ್ಲದೆ ಯಾವ ಕಾರ್ಯವು ನಡೆಯುದಿಲ್ಲವೋ ಅದೇ ರೀತಿ ದೇವರ ಪ್ರಾಘಿನೆ ನಂಬಿಕೆ ಇರದಿದ್ದರೆ ಜೀವನವನ್ನು ನಡೆಸಲು ಸಾಧ್ಯವಿಲ್ಲವೆಂದು.
ದೇವರು ಮತ್ತು ಸಾವು ಎಲ್ಲರಿಗೂ ಒಂದೇ, ಒಬ್ಬೊಬ್ಬರಿಗೊಂದೊಂದು ರೂಪದಲ್ಲಿ ಕಾಣಿಸಿಕೊಳ್ಳಬಹುದಷ್ಟೇ. ದೇವರ ಹೆಸರಲ್ಲಿ ಕಟ್ಟಿಕೊಂಡ ಸಮಾಜವನ್ನು ಸ್ವಾಘಿìಕ್ಕಾಗಿ ಉಳಿಸಿಕೊಳ್ಳಲು ಹಂಬಲಿಸುತ್ತಿದ್ದೇವೆ.ಮೇಲೆ ಸ್ವರ್ಗ ಇದೆ ಎಂದರೆ ಇಲ್ಲಿಯೇ ಸ್ವರ್ಗ ಹುಡುಕುವವರದ್ದು ನಾಟಕದ ಜೀವನ. ಸ್ವರ್ಗ ನರಕ ನಮ್ಮೊಳಗೆ ಇದೆ ಅರಿವಿಗೆ ಬನ್ನಿ, ಪ್ರಶಾಂತ ಮೌನ ನೆಮ್ಮದಿ ತರುತ್ತದೆ.ದೇವರು ನಮಗೆ ಎÇÉಾ ರೀತಿಯಿಂದಲೂ ತಿಳಿದು ಕೊಳ್ಳುವ ಶಕ್ತಿಯನ್ನು ಕೊಟ್ಟಿರುತ್ತಾನೆ .ಆದರೆ, ಕೆಲವೊಂದು ಸಂದರ್ಭದಲ್ಲಿ ಏನೂ ಮಾಡದೇ ಇರುವ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿ ಬಿಡುತ್ತಾನೆ .. ಎಷ್ಟು ವಿಚಿತ್ರ ಅಲ್ವಾ ?
ದೇವರ ಸೃಷ್ಟಿಯ ಮುಂದೆ ನಾವೆಲ್ಲ ಆಟದ ಗೊಂಬೆಗಳಷ್ಟೇ. ಹುಟ್ಟು ಸಾವು ಅವನ ಸೃಷ್ಟಿಯಾಗಿರಬೇಕಾದರೆ ಸಂತೋಷವಿ¨ªಾಗ ಆತನ ನೆನಪಿಸಿಕೊಳ್ಳದೆ ಕಷÒ ಬಂದಾಗ ಧ್ವನಿ ಬಿಡದೆ ಭೋರ್ಗರೆಯುವ ನಾವು ಅರಿತ್ತಿದ್ದೇವಾ ಸಾವು ಬಿಡುವುದಿಲ್ಲ ಎಂದು.
ನಾಟಕದ ಜೀವನ ನಡೆಸಿ ಸಮಾಜದೊಳಗೆ ವಂಚಿಸುವಾಗ ಭಯವಾಗದು, ಆದರೆ ದೇಹಕ್ಕೆ ಉಷಾರಿಲ್ಲ ಎಂದಾಗ ಭಯಗೊಂಡು ಆ ಭಗವಂತನನ್ನೇ ಕರೆಯುತ್ತೇವೆ ಅಲ್ವಾ. ಮಾನವ ಜೀವಿ ಎಷ್ಟು ಕ್ರೂರಿ ಅಲ್ಲವೆ.?
ಯಾವ ದೇವರಿಗೆ ಏನು ಹರಕೆ ಹೊತ್ತರು ಕಡೆಗೆ ಕೆಲವರ ಜೀವನದಲ್ಲಿ ಜನರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿ ಉಳಿದುಬಿಡುತ್ತದೆ.
-ಅನನ್ಯ ಎಚ್. ಸುಬ್ರಹ್ಮಣ್ಯ
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.