ಮುಂಬಯಿ-ಕುಡ್ಲ ಪ್ರಯಾಣದ ನಡುವೆ ವಿನಾಯಕನ ದರ್ಶನ
Team Udayavani, Jun 20, 2020, 2:17 PM IST
ಮುಂಬಯಿಗೆ ತೆರಳಿದ್ದ ನನ್ನ ಮನದಲ್ಲಿ ಏನೋ ಅನ್ವೇಷಣೆಯ ತವಕ.! ಮುಂಬಯಿಗೆ ತೆರಳಿ ಬರುವಾಗ ನೇರ ಮಂಗಳೂರಿನತ್ತ ಬರುವುದು ನನಗೆ ಇಷ್ಟವಿರಲಿಲ್ಲ. ಆದರೆ ಏನು ಮಾಡುವುದು ಎಂಬ ದ್ವಂದ್ವ ನನ್ನಲ್ಲಿ ಇತ್ತು. ಕೊನೆಗೂ ಗಟ್ಟಿ ಮನಸ್ಸು ಮಾಡಿ ಉತ್ತರ ಕನ್ನಡ ಜಿಲ್ಲೆಯ ಸ್ಥಳವೊಂದಕ್ಕೆ ತೆರಳುವ ಯೋಚನೆ ಮಾಡಿದ್ದೆ. ಅದಕ್ಕೆ ಪೂರಕವಾಗಿ ಯೋಜನೆಯನ್ನು ಸಿದ್ಧಪಡಿಸಿಕೊಂಡೆ.
ಇಷ್ಟದಾಯಕ ಇಡಗುಂಜಿ ಬೆನಕ
ಕಳೆದ ಅಚಾನಕ್ ಭೇಟಿಯಲ್ಲಿ ತುಂಬಾ ಮುದ ನೀಡಿದ್ದ ಜಿಲ್ಲೆಯತ್ತ ಮತ್ತೆ ಕಾಲಿಡುವ ಮನಸ್ಸಾಯಿತು. ಈ ಬಾರಿ ಮುಂಬಯಿನಿಂದ ಬರುವಾಗ ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ದೇವಾಲಯ ಇಡಗುಂಜಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದೆ. ಪೂರ್ವ ತಯಾರಿ ನಡೆಸಿದ್ದ ನಾನು ಹೊನ್ನಾವರಕ್ಕೆ ಟಿಕೆಟ್ ಮಾಡಿಸಿದ್ದೆ. ಹೊನ್ನಾವರ ರೈಲ್ವೇ ಸ್ಟೇಷನ್‌ನಿಂದ ಹೊನ್ನಾವರ ಬಸ್ ನಿಲ್ದಾಣಕ್ಕೆ ಸ್ಥಳೀಯ ವ್ಯಾನ್ ಮೂಲಕ ತೆರಳಿದೆ. ಅಲ್ಲಿಂದ ಇಡಗುಂಜಿ ಬಸ್ ಹಿಡಿದು ತಲುಪಿದಾಗ ಗಂಟೆ ಅಪರಾಹ್ನ ಒಂದೂವರೆ. ಅಷ್ಟೊತ್ತಿಗಾಗಲೇ ಅಲ್ಲಿ ಪ್ರಸಾದ ಭೋಜನ ಶುರುವಾಗಿತ್ತು. ಪ್ರಸಾದ ಭೋಜನ ಪೂರೈಸಿದೆ. ದೇವರ ದರುಶನಕ್ಕಾಗಿ 3ಗಂಟೆ ವರೆಗೆ ಕಾದೆ. (ದೇಗುಲ ತೆರೆಯೋವರೆಗೆ) ಗಣಪನ ದರ್ಶನಕ್ಕಾಗಿ ಅದಾಗಲೇ ಹಲವು ಜನ ಕ್ಯೂ ನಲ್ಲಿದ್ದರು. ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಬೆಳ್ಳಿಯ ಕವಚಧಾರಿ ಗಣಪನ ಅಲಂಕಾರ ಅವರ್ಣನೀಯ. ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ, ವಿನಾಯಕನ ದರ್ಶನ ಪಡೆಯುತ್ತಾರೆ.
ಸುಭಾಸ್ ಮಂಚಿ, ಮಂಗಳೂರು ವಿ.ವಿ.
ಅನನ್ಯ ಅನುಭವ, ಅನೂಹ್ಯ ಪ್ರಭಾವ
ಕಾರಣಿಕದ ಇಡಗುಂಜಿ ಗಣಪನ ದರ್ಶನ ಏನೋ ಹೊಸ ಉತ್ಸಾಹ ಮೂಡಿಸಿತ್ತು. ಸೀದಾ ಸಾದಾ ಮುಂಬಯಿಯಿಂದ ಕುಡ್ಲಕ್ಕೆ ಬರಬೇಕಿದ್ದ ನಾನು ಏಕಾಂಗಿ ಪರ್ಯಟನೆಗೆ ಹೆಜ್ಜೆ ಇಟ್ಟಿದ್ದೆ. ಹೊರಗಡೆ ಧೋ… ಎಂದು ಸುರಿಯುತ್ತಿದ್ದ ವರ್ಷಧಾರೆಗೆ ಬಿಡುವೇ ಸಿಕ್ಕಿರಲಿಲ್ಲ. ಪ್ರತೀ ಬಾರಿಯ ನವ ಪಯಣ ಪ್ರೇರಣೆಯಾಯಿತು. ಆದಾಗ್ಯೂ ಹೊಸ ಊರು, ಹೊಸ ಜನರು, ಬೆಂಬಿಡದ ಮಳೆನೀರು, ಕೈಕೊಟ್ಟ ಚಾರ್ಜರು, ಕೈಬಿಡದ ದೇವರು ಸೇರಿ ಒಂದೊಳ್ಳೆ ಅನುಭವ ನೀಡಿದ್ದಂತೂ ಸತ್ಯ!
ಗಣೇಶ್ ಹೆಗಡೆ ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.