NEW YEAR: ಹೊಸ ವರುಷದ ಹೊಸ್ತಿಲಲ್ಲಿ ನಾವೆಲ್ಲರೂ
Team Udayavani, Jan 6, 2024, 2:45 PM IST
ನಿಮಿಷ ಕಳೆದಿದೆ, ದಿನಗಳು ಉರುಳಿವೆ, ತಿಂಗಳುಗಳು ಸಾಗಿ ಮತ್ತೆ ಹೊಸ ವರುಷ ಬಂದಿದೆ. ಇವು ನಿಂತ ನೀರಲ್ಲಾ ಹರಿಯೋ ನದಿ ಇದ್ದ ಹಾಗೆ. ಅದೇನೆ ಇರಲಿ ಮತ್ತೆ ಹೊಸ ವರುಷದ ಹೊಸ್ತಿಲಲ್ಲಿ ನಾವಿದ್ದೇವೆ. ಹಳೆಯ ದಿನದ ನೆನಪಿನಲ್ಲಿ ಹೊಸ ದಿನದ ಆಲೋಚನೆಯಲ್ಲಿ ನಾವೆಲ್ಲರೂ ಇದ್ದೇವೆ.
ಆದರೂ ಹೊಸ ವರ್ಷ ಎಂಬುದು ಹೊಸತನದ ರೂಢಿಯಲ್ಲಿರಬೇಕು. ಕ್ಯಾಲೆಂಡರಿನ ಬದಲಾವಣೆಗೆ ಮಾತ್ರ ಸೀಮಿತವಾಗಿಯಲ್ಲ. ದಿನ ದಿನವೂ ಹೊಸ ಬದಲಾವಣೆಗಳು ಜೀವನದಲ್ಲಿ ಹಾಸುಹೊಕ್ಕಾಗಿರಬೇಕು. ಪ್ರತೀ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮುಂದಿನ ವರ್ಷದ ಆಲೋಚನೆ ಜನವರಿಯಿಂದ ಎಲ್ಲವನ್ನು ಎಲ್ಲ ಕೆಲಸವನ್ನು ಹಾಗೆ ಮಾಡುತ್ತೇನೆ.
ಹೀಗೆ ಸರಿ ಮಾಡುತ್ತೇನೆ ಎಂಬೆಲ್ಲಾ ಆಡಂಬರದ ಆಲೋಚನೆಗಳ ಸರಮಾಲೆ ಎಲ್ಲರ ತಲೆಯಲ್ಲಿ ಸುಳಿದಾಡುತ್ತಿರುತ್ತದೆ. ಆದರೆ ಪ್ರತೀ ವರುಷ ಅದೇ ಹಾಡು, ಅದೇ ರಾಗ ನಮ್ಮ ರೆಸೊಲ್ಯೂಷನ್ ಮತ್ತೆ ಮತ್ತೆ ನೆನಪಾಗೋದು ಡಿಸೆಂಬರ್ ಅಲ್ಲಿ ಮಾತ್ರ.
ಹೇಗಿರಲಿ ಈ ವರ್ಷ
ಸಿಹಿ ಕಹಿಗಳ ಮಿಶ್ರಣವೇ ಜೀವನ. ಅದನ್ನು ನಾವು ಯಾವ ರೀತಿಯಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೆವೆ ಎಂಬುದೆ ನಮ್ಮ ಮುಂದಿರುವ ಆಯ್ಕೆಯಾಗಿದೆ. ಬಂದಿದ್ದು ಬರಲಿ ದೇವರ ದಯೆಯೊಂದಿರಲಿ ಎಂದು ಮುಂದೆ ಸಾಗಬೇಕು. ಈ ವರ್ಷದ ಕೆಲಸ ಕಾರ್ಯಗಳು ಈ ವರ್ಷರಂಭದ ಯೋಚನೆ ಯೋಜನೆಗಳು ಸಂಪೂರ್ಣವಾಗುವ ನಿಟ್ಟಿನಲ್ಲಿ ಸಾಗಬೇಕಾಗಿದೆ.
ಒಂದಿಷ್ಟು ಒಳ್ಳೆಯ ನಿರ್ಧಾರಗಳ ಜತೆ, ಕೆಟ್ಟ ಭಾವನೆಗಳು ನಮ್ಮಿಂದ ದೂರವಾಗಲಿ. ದಿನ ದಿನವೂ ಹೊಸತಾಗಿರಬೇಕು. ದಿನದ ಮುಂಜಾವೂ ಕೂಡ ಹೊಸ ತನದಲ್ಲಿ ಕೂಡಿದ್ದರೆ ಪ್ರತೀ ದಿನ, ತಿಂಗಳು, ವರ್ಷವೂ ಹಸನಾಗಿರುತ್ತದೆ. ಹಾಗೆಯೆ ಇದು ಕ್ಯಾಲೆಂಡರ್ ಬದಲಾವಣೆಯ ಈ ಸಂದರ್ಭ ಕೂಡ ಹೊಸ ರೀತಿಯಲ್ಲಿ ಹೊಸ ತನದಲ್ಲಿ ಪ್ರಾರಂಭವಾಗಲಿ. ಎಲ್ಲರ ಬದುಕು ಈ ವರ್ಷ ಹಸಿರಾಗಲಿ.
ಒಂದು ವರ್ಷದಲ್ಲಿ ಮುನ್ನೂರ ಅರವತೈದು ದಿನಗಳು ಅವು ಯಾಂತ್ರಿಕವಾಗಿ ಸಾಗದೆ ಸತ್ವಯುತವಾಗಿರಬೇಕು. ಇಂದಿನ ಕಾಲಮಾನದಲ್ಲಿ ಎಲ್ಲರೂ ಬ್ಯುಸಿಯಾಗಿಬಿಟ್ಟಿದ್ದಾರೆ. ಹಣ ಮಾಡುವ ಸಲುವಾಗಿಯೊ ಅಥವಾ ಕೆಲಸದ ಒತ್ತಡದಲ್ಲಿಯೊ ಇಂದಿನ ಯೋಚನೆ ಮತ್ತು ಯೋಜನೆ ಹೇಗೆ ಎಂದರೆ ನಾನು ಈ ವರ್ಚ ಒಂದಷ್ಟು ಹಣ ದುಡಿಯುತ್ತೇನೆ ಎನ್ನುವುದಾಗಿ ಬಿಟ್ಟಿದೆ. ಆದರೆ ಮತ್ತೆ ಬರುತ್ತಿರೊ ಹೊಸ ವರ್ಷ ಹೊಸತನದಲ್ಲಿರಲಿ.
ಹೇಗೆಂದರೆ ಅದು ಹಣಕ್ಕಿಂತ ಹೆಚ್ಚಿನ ಮೌಲ್ಯಯುತವಾದ ಜೀವನ ನಮ್ಮದಾಗಬೇಕು. ಅಂದರೆ ಹಣ ಕೊಟ್ಟರೂ ಸಿಗದ ಆಸ್ತಿಗಳಾದ ನಗು, ಪ್ರೀತಿ, ಸ್ನೇಹ, ಕುಟುಂಬ. ಅವುಗಳ ಬೆಲೆ ತಿಳಿಯುವಂತಾಗಲಿ. ಮೌಲ್ಯಯುತವಾಗಿರಲಿ ಬರುವ ದಿನಗಳಲ್ಲಿ ಕುಟುಂಬದ ಜತೆ ನಮ್ಮ ಬಾಂಧವ್ಯ ಇನ್ನೂ ಗಟ್ಟಿಯಾಗಲಿ, ನಗು ಮನೆಯಲ್ಲಿ ಮೊಳಗಲಿ, ಸಂತೋಷ ದಿನ ದಿನವೂ ಚಿಮ್ಮಬೇಕಿದೆ. ಹೀಗೆ ಹೊಸ ವರ್ಷ ಹಸನಾಗಬೇಕಿದೆ.
ಹೊಸ ವರ್ಷ ಬಂದಾಗ ಮಾತ್ರ ನೆನಪಾಗದೇ ದಿನ ದಿನವೂ ಹೊಸ ವರ್ಷದ ಉತ್ಸಾಹದಲ್ಲಿ ನಾವೆಲ್ಲರೂ ಇರಬೇಕಿದೆ.
ನೆನಪಿನ ಬುತ್ತಿಗೆ ಮತ್ತೂಂದು ಹಳೆ ವರುಷ ಜಾರುತಲಿದೆ. ಹೊಸ ವರ್ಷ ಸೇರ್ಪಡೆಯಾಗಲಿದೆ ಅದು ಕಹಿಯೇ ಆಗಿರಲಿ, ಸಿಹಿಯೇ ಆಗಿರಲಿ, ಅದು ಈ ವರ್ಷದ ಚೀಲದಲ್ಲಿ ಭದ್ರವಾಗಿ ಇರುತ್ತದೆ. ಮುಂದಿನ ದಿನಗಳನ್ನು ನಮ್ಮ ಜೋಳಿಗೆಯಲ್ಲಿ ಹೊಸತನದ ನಗು ತುಂಬಿಸುವ ಕೆಲಸ ನಮ್ಮದು ಅದರ ಕತೃìರೂ ನಾವೇ ಆಗಿದ್ದೇವೆ ಹಾಗಾಗಿ ಬರುವ ಹೊಸ ಕ್ಯಾಲಂಡರ್ ವರ್ಷವನ್ನು ಪ್ರೀತಿಯಿಂದ ಬರಮಾಡಿಕೊಂಡು ಹೊಸ ಕೆಲಸಗಳಿಗೆ ಹೊಸ ರೀತಿಯಲ್ಲಿ ಚಾಲನೆ ಸಿಗುವಂತಾಗಲಿ.
ಬಂದಿದೆ ಹೊಸ ವರುಷ
ತರುತಿದೆ ಸಂತೋಷ
ವರುಷ ಹಸಿರಾಗಲಿ
ಹರುಷ ಮನೆ ತುಂಬಲಿ.
-ದಿವ್ಯಾ ಹೆಗಡೆ
ಎಸ್.ಡಿ.ಎಂ., ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.