UV Fusion: ನಮ್ಮ ಜೀವನದ ಶಿಲ್ಪಿಗಳು ನಾವೇ

ಕಷ್ಟಗಳ ಜತೆಯಲ್ಲಿ ಜೀವನದ ಗೆಲುವು; ಕಠಿನ ಪರಿಶ್ರಮಕ್ಕಿದೆ ಯಶಸ್ಸಿನ ಫ‌ಲ

Team Udayavani, Mar 6, 2024, 2:45 PM IST

10-uv-fusion

ಜೀವನ ಎಂದ ಮೇಲೆ ಕಷ್ಟಗಳು ಕಟ್ಟಿಟ್ಟ ಬುತ್ತಿ. ಕಷ್ಟಗಳಿಲ್ಲದ ಜೀವನದ ಸಾರ ರುಚಿಯಿಲ್ಲದ ಊಟದಂತೆ. ಜೀವನದಲ್ಲಿ ಕಷ್ಟಗಳು ಕಲಿಸುವ ಪಾಠವನ್ನು ಯಾವ ಶಿಕ್ಷಕನೂ ಕಲಿಸಲಾರ. ಉಳಿಪೆಟ್ಟು ತಿನ್ನದೆ ಯಾವ ಶಿಲೆಯೂ ಮೂರ್ತಿಯಾಗುವುದಿಲ್ಲ. ಹಾಗೆಯೇ ಜೀವನದಲ್ಲಿಯೂ ಸಹ ನಮ್ಮ ನಿಜವಾದ ಸಾಮರ್ಥ್ಯ ನಮಗೆ ತಿಳಿಯಬೇಕಾದರೆ, ನಮ್ಮಲ್ಲಿನ ಅದ್ಭುತ ಶಕ್ತಿ ಹೊರ ಬಂದು ಇಡೀ ಜಗತ್ತಿನಲ್ಲಿ ಪ್ರಕಾಶಿಸಬೇಕೆಂದರೆ ಕಷ್ಟ ನಷ್ಟಗಳು ಎಂಬ ಉಳಿಪೆಟ್ಟುಗಳು ಬೀಳಲೇಬೇಕು. ಆಗಲೇ ನಾವು ಜೀವನದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗುತ್ತದೆ.

ಯಾವುದೇ ಒಂದು ಕೆಲಸವೂ ಸುಖಾ ಸುಮ್ಮನೆ ಆಗುವುದಿಲ್ಲ, ಪ್ರಯತ್ನವೆಂಬ ಆಯುಧವಿರಬೇಕು. ಹಿರಿಯರು ಹೇಳುತ್ತಾರೆ, ನಡೆಯುವವನು ಎಡುವುದಲ್ಲದೇ ಕುಳಿತವನು ಎಡವಲು ಸಾಧ್ಯವೇ ಎಂದು. ಯಾಕೆಂದರೆ ನಡೆಯಲು ಪ್ರಯತ್ನಿಸುವವನಿಗೆ ಅದರ ಅನುಭವ ತಿಳಿಯುತ್ತದೆ. ಸುಮ್ಮನೆ ಕುಳಿತವನಿಗೆ ಅದರ ಅನುಭವವಿರುವುದಿಲ್ಲ. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯು ಉದ್ಧಾರವಾಗುವುದು ಅವನ ಕೈಯಲ್ಲಿದೆ. ಅವನ ಜೀವನದ ಕಥೆಗೆ ಅವನೇ ನಿರ್ದೇಶಕನಾಗಿರುತ್ತಾನೆ.

ಸೋಲೋ ಗೆಲುವೋ ನಾವು ಸದಾ ನಗುನಗುತ್ತಾ ಇರಬೇಕು. ನಮ್ಮ ನಗು ಹೇಗಿರಬೇಕೆಂದರೆ ನಮ್ಮನ್ನು ನೋಡುವವರಲ್ಲಿ ಆತ್ಮ ಶಕ್ತಿ, ಅಂತರಾತ್ಮದ ಶಕ್ತಿ ಗೋಚರಿಸುವಂತಿರಬೇಕು. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ನಾವು ಅಳಬಾರದು, ನಗಬೇಕು ಆ ನಗು ಹೇಗಿರಬೇಕೆಂದರೆ

ನಗಬೇಕು ಮನವೇ ನಗಬೇಕು

ಪ್ರತಿಯೊಬ್ಬರಲ್ಲೂ ಸ್ವಾಭಿಮಾನ ಹುಟ್ಟಿಸುವಂತೆ

ನಗಬೇಕು ಮನವೇ ನಗಬೇಕು

ಸಾರ್ಥಕತೆಯಿಂದ ಜೀವನ ನಡೆಸುವಂತೆ

ನಗುನಗುತ್ತಾ ಇರಬೇಕು ಮನವೇ

ನಿನ್ನ ಕಂಡು ನಕ್ಕವರೆಲ್ಲಾ

ನನ್ನಲ್ಲೊಮ್ಮೆ ನಸುನಗಲೆಂದು ಹಾತೊರೆಯುವಂತೆ

ನಗುನಗುತ್ತಲೇ ಜಗವ ಜಯಿಸಬೇಕು ಮನವೇ

ಲೋಕವೇ ನಿನಗೆ ಮುಗುಳ್ನಗುವಂತೆ

ಬದುಕಿನ ಗುರಿಯ ಬೆನ್ನಟ್ಟುವಂತೆ

ನಗುವೆ ಬಾಳಿಗೆ-ಲೋಕಕೆ ಅಮರವು

ನಗುನಗುತ್ತಾ ಬಾಳುವುದ ಕಲಿಯೋ- ಮುದ್ದುಮನುಜ

ಹೀಗೆ ನಗುತ್ತಾ ಜೀವನದಲ್ಲಿ ಕಷ್ಟಕೋಟಲೆಗಳನ್ನು ಗೆದ್ದವರು ನಮ್ಮ ಸಮಾಜದಲ್ಲಿ ಸಾವಿರಾರು ಜನರಿದ್ದಾರೆ. ಅದರಂತೆಯೇ ನಾವೂ ಸಹ ನಮ್ಮ ಜೀವನದಲ್ಲಿ ಕಣ್ಣೀರಿನ ಮಳೆಗೈದರೂ ನಾವು ನಗುನಗುತ್ತಲೇ ಪರಹಿತ ಬಯಸುತ್ತಾ, ನಮ್ಮ ಜೀವನದ ಗುರಿಯ ನಾವು ಮುಟ್ಟಬೇಕು ಆಗಲೇ ಅಲ್ಲವೇ ಜೀವನ ಸಾರ್ಥಕ.

ನಿಲ್ಲದಿರು ಗುರಿಮುಟ್ಟುವ ತನಕ, ಅವಮಾನ ಮಾಡಿರುವವರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟುವ ತನಕ. ನಿನ್ನಿಂದ ಈ ಕೆಲಸ ಆಗದು, ನೀನಿಷ್ಟೇ ಎಂದು ಹೀಯಾಳಿಸಿದವರ ಮುಂದೆ ಹೆಮ್ಮರವಾಗಿ ಬೆಳೆಯಬೇಕು, ಜೀವನದಲ್ಲಿನ ನೋವು ಅವಮಾನಗಳನ್ನು ದಾಟಿ ಅವಮಾನ ಮಾಡಿದವರ ಮುಂದೆಯೇ ದಕ್ಷತೆಯಿಂದ ಬಾಳುವ ಬಾಳು ನಮ್ಮದಾಗಬೇಕು. ಎಷ್ಟೇ ಸಮಸ್ಯೆಗಳಿದ್ದರೂ ಎದುರಿಸುತ್ತಾ ನಾಳೆಯು ನನ್ನದೇ ಎಂಬ ಭರವಸೆಯಿಂದ ಸಾಗಬೇಕು.

ನಿನ್ನ ಸಾಮರ್ಥ್ಯ ನಿನಗೆ ಅರಿವಾದಷ್ಟು ಬೇರೆಯವರಿಗೆ ಅರಿವಾಗದು, ನೀನೊಬ್ಬ ಅಸಮಾನ್ಯ. ನಿನ್ನನ್ನು ಮತ್ತೂಬ್ಬರಿಗೆ ಹೋಲಿಸಿಕೊಳ್ಳಬೇಡ, ಅವರೇ ಬೇರೆ ನೀನೇ ಬೇರೆ. ನಿನ್ನಲ್ಲಿರುವ ಸಾಮರ್ಥ್ಯವನ್ನು, ಬುದ್ಧಿಶಕ್ತಿಯನ್ನು, ಕೌಶಲವನ್ನು ಬಳಸಿಕೊಳ್ಳಬೇಕಾದವನು ನೀನೇ ಹೊರತು ಬೇರೆಯವರಲ್ಲ. ಜಗತ್ತಿನಲ್ಲಿ ಯಾವುದೂ ಅಸಾಧ್ಯವಾದುದಲ್ಲ. ನಮ್ಮ ಸಾಮರ್ಥ್ಯದ ಇತಿಮಿತಿಯಲ್ಲಿ ಸಾಧಿಸಬೇಕೆಂಬ ತುಡಿತವಿರಬೇಕು. ಗೆಲುವು ನಿಧಾನವಾಗಿ ದೊರೆತರೂ ಸರಿಯೇ ನಮ್ಮ ಸ್ವಂತ ಪರಿಶ್ರಮ ಸಾಮರ್ಥ್ಯ ಹಾಗೂ ಸ್ವಾಭಿಮಾನದ ಗೆಲುವಾಗಿರಬೇಕು, ಸತತ ಪರಿಶ್ರಮ, ಆತ್ಮ ವಿಶ್ವಾಸದಿಂದ ಮುನ್ನಡೆದರೆ, ಯಶಸ್ಸು ಖಂಡಿತ ನಮ್ಮದಾಗುತ್ತದೆ. ಹಾಗಾಗಿ ವಿಶ್ವಾಸದಿಂದ ಮುನ್ನಡೆಯುವ ನಡೆ ನಮ್ಮದಾಗಬೇಕು.

ಯಾರ ನೆಚ್ಚಿಕೆಗಾಗಿಯೂ ಕಾಯಬೇಡ. ಯಾರ ಹಂಬಲವನ್ನೂ ಕಾದು ಕೂರಬೇಡ. ನಮ್ಮ ಜೀವನದ ಶಿಲ್ಪಿಗಳು ನಾವೇ ಹೊರತು ಬೇರೆಯವರಲ್ಲ. ಬದುಕಿನ ಬಂಡಿ ನಡೆಸುವ ಚಾಲಕರು ನಾವೇ ಇದನರಿತು ನಡೆದಾಗ ಬದುಕು ಬಂಗಾರವಾದೀತು  ಜೀವನ ಸುಂದರವಾದೀತು.

-ಭಾಗ್ಯ ಜೆ.

ಮೈಸೂರು

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.