ಭೂಮಿಯ ಮೇಲಿನ ಅತ್ಯಂತ ಎತ್ತರದ ಪ್ರಾಣಿಗೆ ಮುಳುವಾಗಿದ್ದು ಏನು?


Team Udayavani, Sep 28, 2020, 7:36 PM IST

girafe

ಜಿರಾಫೆ-ಉದ್ದ ಕತ್ತಿನ ಈ ಮುದ್ದಾದ ಪ್ರಾಣಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಭೂಮಿಯ ಮೇಲಿನ ಅತ್ಯಂತ ಎತ್ತರದ ಪ್ರಾಣಿ ಎನ್ನುವ ಹೆಗ್ಗಳಿಕೆ ಇದರದ್ದು.

ಉದ್ದದ ಜತೆಗೆ ಜಿರಾಫೆಯ ತಲೆಯ ಮೇಲಿನ ಕೊಂಬಿನಂತಹ ರಚನೆ ಈ ಪ್ರಾಣಿಯನ್ನು ಇನ್ನೂ ಆಕರ್ಷಕವಾಗಿಸುತ್ತದೆ. ಆದರೆ ಈ ಎರಡು ಅಂಶಗಳೇ ಅವುಗಳ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ ಎನ್ನುವುದು ಗೊತ್ತೆ? ಈ ಬಗ್ಗೆ ನಡೆದ ಸಂಶೋಧನೆಯೊಂದು ಈ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದೆ. ಅದು ಹೇಗೆ ಎನ್ನುವುದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಕಳೆದ ಫೆಬ್ರವರಿ 29ರಂದು ದಕ್ಷಿಣ ಆಫ್ರಿಕಾದ ನೈಸರ್ಗಿಕ ಉದ್ಯಾನ ರಾಕ್‌ವುಡ್‌ ಕನ್ಸರ್ವೇಶನ್‌ನಲ್ಲಿ ಮಿಂಚು ಬಡಿದು ಎರಡು ಜಿರಾಫೆಗಳು ಮರಣ ಹೊಂದಿದ್ದವು. ಈ ಸಾವಿನ ಬಗ್ಗೆ ಸಂಶಯ ಹೊಂದಿದ ಸಂಶೋಧಕರು ಅಧ್ಯಯನ ನಡೆಸಲು ಮುಂದಾದರು. ಹೊರಾಂಗಣದಲ್ಲಿ ಓಡಾಡುವ ಜೀವಿಗಳು ಮತ್ತು ಮಿಂಚಿನ ಆಘಾತಗಳ ನಡುವಿನ ಸಂಬಂಧ ಈ ಸಂಶೋಧನೆಯ ವಿಷಯವಾಗಿತ್ತು. ಈ ಅಧ್ಯಯನ ವರದಿಯಲ್ಲಿ ಕುತೂಹಲ ಸಂಗತಿಗಳು ಬಹಿರಂಗಗೊಂಡಿವೆ.

ಜಿರಾಫೆಗಳ ಸಾವಿನ ಸುತ್ತ…
ಸಿಸ್ಕ ಪಿ.ಜೆ. ಶೀಜನ್‌ ಎನ್ನುವ ರಾಕ್‌ವುಡ್‌ ಕನ್ಸರ್ವೇಶನ್‌ನ ವಿಜ್ಞಾನಿ ಜಿರಾಫೆ ಸಾವಿನ ಅಧ್ಯಯನಕ್ಕೆ ನೇತೃತ್ವ ನೀಡಿದ್ದರು. ಎತ್ತರವಾಗಿರುವುದು ಜಿರಾಫೆಗಳಿಗೆ ಮಿಂಚು ಹೊಡೆಯಲಿರುವ ಮುಖ್ಯ ಕಾರಣ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿರುವುವಂತಹದ್ದೇ. ಆದರೆ ಇದುವರೆಗೆ ಈ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆದಿರಲಿಲ್ಲ. ಎತ್ತರ ಮಾತ್ರವಲ್ಲ ಜಿರಾಫೆಗೆ ಮಿಂಚು ಹೊಡೆಯಲಿರುವ ಇನ್ನೊಂದು ಮುಖ್ಯ ಕಾರಣದ ಬಗ್ಗೆಯೂ ಸಂಶೋಧನೆ ಬೆಟ್ಟು ಮಾಡಿ ತೋರಿಸುತ್ತದೆ.

ಯಾವುದು ಆ ಅಂಶ?
ಜಿರಾಫೆಯ ತಲೆಯ ಮೇಲಿರುವ ಸಣ್ಣ ಕೊಂಬಿನಂತಹ ರಚನೆ ಮಿಂಚನ್ನು ಸೆಳೆದುಕೊಳ್ಳುತ್ತದೆ. ಶೀಜನ್‌ನ ಅಧ್ಯಯನದ ಪ್ರಕಾರ, ರಾಕ್‌ವುಡ್‌ನ‌ 5 ವರ್ಷದ ಜಿರಾಫೆ ತಲೆ ಮೇಲೆ ನೇರವಾಗಿ ಮಿಂಚು ಹರಿದು ಅದು ಸಾವನ್ನಪ್ಪಿತ್ತು. ಆ ಮೃತದೇಹದ ಸುಮಾರು ಐದು ಅಡಿ ಅಂತರದಲ್ಲಿ ನಾಲ್ಕರ ಹರೆಯದ ಇನ್ನೊಂದು ಜಿರಾಫೆಯ ನಿಶ್ಚಲ ದೇಹ ಕಂಡು ಬಂದಿತ್ತು. ನೇರವಾಗಿ ತಲೆಗೆ ಮಿಂಚು ಹೊಡೆದು ಹಿರಿಯ ಜಿರಾಫೆ ಸಾವಿಗೀಡಾಗಿತ್ತು ಎನ್ನುವುದಕ್ಕೆ ಅದರ ತಲೆ ಮೇಲಿದ್ದ ಗಾಯವೇ ಸಾಕ್ಷಿಯಾಗಿತ್ತು. ಪೋಸ್ಟ್‌ ಮೋರ್ಟ್‌ಂನಲ್ಲೂ ಇದು ಸಾಬೀತಾಗಿತ್ತು. ಪಕ್ಕದಲ್ಲಿದ್ದ ಜಿರಾಫೆಗೆ ಬದಿಯಿಂದ ಶಾಕ್‌(ಸೈಡ್‌ ಫ್ಲಾಷ್‌)ಹೊಡೆದಿದ್ದು ಅದರ ಸಾವಿಗೆ ಕಾರಣವಾಗಿತ್ತು.(ಮಿಂಚು ಹೊಡೆದ ಸಂದರ್ಭದಲ್ಲಿ ಅದರ ಶಕ್ತಿ ಪಕ್ಕಕ್ಕೂ ಪ್ರವಹಿಸುತ್ತದೆ). ತೆರೆದ ಸ್ಥಳದಲ್ಲಿ ಓಡಾಡುವ ಜಿರಾಫೆಗಳ ತಲೆ ಮೇಲಿರುವ ಕೊಂಬುಗಳು ಆ್ಯಂಟೆನಾ ರೀತಿ ಕೆಲಸ ಮಾಡಿ ಮಿಂಚನ್ನು ಆಕರ್ಷಿಸುತ್ತವೆ. ಇದು ಅವುಗಳಿಗೆ ಮಿಂಚು ಹೆಚ್ಚಾಗಿ ಹೊಡೆಯಲು ಕಾರಣ ಎಂದು ವರದಿಯಲ್ಲಿ ಶೀಜನ್‌ ವಿವರಿಸಿದ್ದಾರೆ.

ಮಿಂಚು ಹೇಗೆಲ್ಲ ಪ್ರಾಣಿಗಳನ್ನು ಕೊಲ್ಲುತ್ತದೆ ಗೊತ್ತೆ?
ಮಿಂಚಿನ ಆಘಾತ ಪ್ರಾಣಿಗಳನ್ನು ನಾಲ್ಕು ರೀತಿಯಲ್ಲಿ ಕೊಲ್ಲುತ್ತವೆ. ಮೊದಲನೆಯದಾಗಿ ಮಿಂಚು ನೇರವಾಗಿ ಹೊಡೆದು ಪ್ರಾಣಿಗಳು ಸಾಯುತ್ತವೆ. ಎರಡನೇ ರೀತಿಯಲ್ಲಿ ಪಕ್ಕದ ಪ್ರಾಣಿಗೆ ಮಿಂಚು ಹೊಡೆದು ಸೈಡ್‌ ಫ್ಲಾಷ್‌ ಆಗಬಹುದು. ಮೂರನೆಯದಾಗಿ ನೆಲದ ಮೂಲಕ ಪ್ರವಹಿಸಿ ಶಾಕ್‌ ಹೊಡೆಯಬಹುದು. ಕೊನೆಯದಾಗಿ ಮಿಂಚು ಪ್ರವಹಿಸಿದ ಯಾವುದಾದರೂ ವಸ್ತುವನ್ನು ಸ್ಪರ್ಶಿಸುವುದು ಕೂಡಾ ಮಾರಣಾಂತಿಕವಾಗುತ್ತದೆ.

 ರಮೇಶ್‌ ಬಿ., ಕಾಸರಗೋಡು 

 

 

ಟಾಪ್ ನ್ಯೂಸ್

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.