Devotion: ಭಕ್ತಿಯ ಅರ್ಥವಾದರೂ ಏನು?


Team Udayavani, Apr 27, 2024, 10:37 AM IST

3-uv-fusion

ಸರ್ವವೂ ನಿನ್ನದೇ ಸಕಲವು ನಿನ್ನದೇ ಎಂಬ ಸಮರ್ಪಣ ಭಾವಕ್ಕೆ ಭಕ್ತಿಯೆಂಬ ಹೆಸರಿರಬಹುದೇ ಹೌದಲ್ಲ ದೇವರೆಂಬುವ ಆ ಅನಾದಿ ಅಚಿಂತ್ಯ ರೂಪನಿಗೆ ನಮ್ಮ ಸಮರ್ಪಣ ಭಾವವೇ ಭಕ್ತಿಯೆನ್ನಬಹುದೇನೋ, ಭಕ್ತಿಗೆ ಅರ್ಥವಾಗಲಿ ವ್ಯಾಖ್ಯಾನವಾಗಲಿ ಇದೇ ಎಂದು ಹೇಳುವುದು ಅಸಾಧ್ಯವೇ ಸರಿ.

ಒಂದೊಂದು ಮತದಲ್ಲಿ ಒಂದೊಂದು ನಂಬಿಕೆ ಆಚರಣೆ ಎಲ್ಲ ಬೇರಾಗಿ ಹರಿವ ನದಿಯಾದರೂ ಕೊನೆಗೆ ಸೇರುವ ಸಾಗರ ಆ ಭಗವಂತನ ಶರಣಾಗತಿಯೊಂದೆ ಅದಕ್ಕೆ ಬಹುಬಗೆಯ ಪದಗಳಾದರು ಎಲ್ಲವೂ ಸೇರಿಸಿ ಭಕ್ತಿಯೆನ್ನಬಹುದೇನೋ, ಶ್ರೀಮದ್‌ ಭಗವತ್‌ ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ತನ್ನ ತಂದೆ ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ.

ಹರಕೆಯೆಂಬ ಆಡಂಬರದ ಆಸೆ ತೋರಿ ದೇವರಿಂದ ಏನನ್ನೋ ಪಡೆಯುವ ಆಸೆಗೆ ಭಕ್ತಿಯೆಂಬ ಹೆಸರಿಟ್ಟುಕೊಂಡು ಬಿಟ್ಟಿದ್ದೇವೆ, ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸದಾ ನಮ್ಮ ಮೋಜು ಮಸ್ತಿಯಲ್ಲಿ ಕಾಣದ ದೇವರ ಭಕ್ತಿ ಸೋತಾಗ ನೊಂದಾಗ ಮಾತ್ರ ನೆನಪಾಗುವಂತಾಗಿದೆ.

ಭಕ್ತಿಯೆಂದರೆ ಏನು ಅಲ್ಪಾಯುಷಿ ಮಾರ್ಕಂಡೇಯ ಶಿವ ಭಕ್ತಿಯಿಂದ ಸಾವನ್ನೇ ಗೆದ್ದು ಚಿರಂಜೀವಿಯಾದನಲ್ಲವೇ ಅದು ಭಕ್ತಿ ತಾನೆ? ಭಕ್ತಿಯೆಂದರೆ ಸಮರ್ಪಣ ಭಾವವೆಂದಿಟ್ಟುಕೊಂಡರೆ ಭಕ್ತನ ಭಾವ ಹೇಗಿರಬೇಕು ಬರಿ ಬಯಸುವ ಇಂದಿನ ಆಸೆಗಿಟ್ಟ ಇನ್ನೊಂದು ಹೆಸರಲ್ಲ ತಾನೆ?

ಭಕ್ತನೆಂದರೆ ಹೇಗಿರುತ್ತಾನೆಂದು ನಮ್ಮಂತೆ ಅಂದು ಕೃಷ್ಣನ ಆತ್ಮೀಯ ಸ್ನೇಹಿತ ಉದ್ದವನೂ ಕೇಳಿದ್ದ ಉದ್ಧವನ ಪ್ರಶ್ನೆಗೆ ಉತ್ತರಿಸುತ್ತಾ ಶ್ರೀಕೃಷ್ಣ ಹೇಳುತ್ತಾನೆ “ಭಕ್ತನಾದವನು ಕೃಪೆಯ ಮೂರ್ತಿಯಾಗಿರುತ್ತಾನೆ. ಆತ ಯಾವ ಪ್ರಾಣಿಯಲ್ಲಿಯೂ ವೈರಭಾವವನ್ನು ಹೊಂದಿರುವುದಿಲ್ಲ. ಸತ್ಯವೇ ಅವನ ಜೀವಾಳವಾಗಿರುತ್ತದೆ. ಬಹುದೊಡ್ಡ ದುಃಖವನ್ನೂ ಆತ ಸಂತಸದಿಂದಲೇ ಸ್ವೀಕರಿಸುತ್ತಾನೆ. ಯಾವ ವಿಧದ ಪಾಪವಾಸನೆಯೂ ಅವನ ಮನಸ್ಸಿನಲ್ಲಿ ಹುಟ್ಟುವುದಿಲ್ಲ.

ಅಲ್ಲದೆ ಆತ ಸಮದರ್ಷಿಯಾಗಿದ್ದು, ಎಲ್ಲರಿಗೂ ಒಳಿತನ್ನೇ ಮಾಡುವವನಾಗಿರುತ್ತಾನೆ. ಆತನ ಬುದ್ಧಿಯನ್ನು ಕಾಮನೆಗಳು ನಿಯಂತ್ರಿಸುವುದಿಲ್ಲ. ಸಂಯಮಿಯೂ ಮೃದುಸ್ವಭಾವದವನೂ, ಆಗಿರುತ್ತಾನೆ. ಸಂಗ್ರಹಪರಿಗ್ರಹಗಳಿಂದ ದೂರವಿರುತ್ತಾನೆ. ಮಿತವಾದ ಆಹಾರ ಸೇವನೆ ಮಾಡುವವನೂ ಶಾಂತಮನದವನೂ ಸ್ಥಿರವಾದ ಬುದ್ಧಿಯವನೂ ಆಗಿರುತ್ತಾನೆ.

“ಎಂದು ಆದರೆ ಇಂದು ಭಕ್ತಿಯ ಹಾಗಿಲ್ಲ, ಭಕ್ತ ಸಹ ಹಾಗಿಲ್ಲ ಇವತ್ತು ನನಗೆ ಆ ಕೆಲಸ ಕೊಡಿಸು ದೇವರೆ ನಿನಗೆ ನಾನು ಬಂಗಾರ ಮಾಡಿಸುತ್ತೇನೆ ಬೆಳ್ಳಿಯ ಕಿರೀಟ ತೊಡಿಸುತ್ತೇನೆ ಅನ್ನುವ ಮಟ್ಟಕ್ಕೆ ದೇವರಿಗೆ ಆಸೆ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವ ದೇವರನ್ನೇ ಭ್ರಷ್ಟಾಚಾರಕ್ಕೆಳೆಯುವ ಹುಚ್ಚುತನಕ್ಕಿಳಿದಿದ್ದೇವೆ.

ಇಷ್ಟೆಲ್ಲ ದೇವರಿಗೆ ಕೊಟ್ಟು ಪಡೆಯುವ ವ್ಯಾವಹಾರಿಕ ಭಕ್ತಿಗಿಳಿದಿರೋ ನಾವು ಯಾಕೆ ಯೋಚಿಸುತ್ತಿಲ್ಲ ನಮ್ಮ ಹೆತ್ತಮ್ಮ ಎಂದಾದರು ನಾವೇನೋ ಕೊಡುವ ಆಸೆಯಲ್ಲೋ ಏನನ್ನೋ ಪಡೆಯುವ ಆಸೆಯಲ್ಲೋ ನಮ್ಮನ್ನ ಸಾಕಿ ಸಲಹಿದಳೇ? ನೋವಲ್ಲಿ ಸಾಂತ್ವನ ನೀಡಿದಳೆ? ಇಲ್ಲವೆಂದ ಮೇಲೆ ದೇವರು ಯಾಕೆ ನಮ್ಮ ಕಾಗದದ ನೋಟಿಗೂ ಯಾವುದೋ ಬಣ್ಣದ ಧಾತುವಿನ ಮೋಹಕ್ಕೋ ನಮ್ಮ ಆಸೆ ಪೂರೈಸುತ್ತಾನೆ ಎಂದು ಕೊಳ್ಳುತ್ತೇವೆ?

ಇನ್ನು ಸಮರ್ಪಣೆ, ಸಮರ್ಪಣೆಯ ಅರ್ಥ ನಮಗೆಲ್ಲಿದೆ ನಾವೇ ನಮಗೆ ಒಂದಿಷ್ಟು ಕಲ್ಪನೆಯ ಗೆರೆ ಹಾಕಿ ನಮ್ಮದೇ ಒಂದು ಕಾಲ್ಪನಿಕ ಪ್ರಪಂಚದೊಳಗೆ ಉಳಿದು ಬಿಟ್ಟಿದ್ದೇವೆ, ನಮಗೆ ಈಗ ಭಕ್ತಿ ಅರ್ಥವಾಗಬೇಕಾದರೆ ಬಸವಣ್ಣ ಕನಕದಾಸರಂತಹ ಮಹಾನ್‌ ದಾಸರ, ಶರಣರ ಪರಿಚಯವಾಗಬೇಕಿದೆ ಓದು ನಮ್ಮ ಹವ್ಯಾಸವಾಗಬೇಕಿದೆ.

-ದೇವಿಪ್ರಸಾದ ಶೆಟ್ಟಿ

ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.