Conversation: ವೃದ್ಧಾಪ್ಯರ ಸಂವಾದ ಕೇಳಿದಾಗ
Team Udayavani, Jun 1, 2024, 1:45 PM IST
ಹೀಗೆ ಒಂದು ದಿನ ಗೆಳೆಯರಿಗೆ ಕಾಯುತ್ತಾ ದೇವಸ್ಥಾನದಲ್ಲಿ ಕುಳಿತಿರುವಾಗ, ಪಕ್ಕದಲ್ಲಿಯೇ ಒಂದು ವೃದ್ಧಾಪ್ಯರ ಗುಂಪೊಂದು ಕುಳಿತಿತ್ತು. ಅವರನ್ನು ನೋಡಿದಾಗ ಅದೆಷ್ಟೋ ಅನುಭವಗಳನ್ನು ತುಂಬಿಕೊಂಡು ಕುಳಿತಿರಬಹುದು ಎಂದು ಆಸಕ್ತಿಯಿಂದ ಸುಮ್ಮನೆ ಅವರ ಸಂವಾದ ಆಲಿಸುತ್ತಾ ಕುಳಿತೆ.
ಜೀವನದಲ್ಲಿನ ಅನುಭವಗಳು ಹಾಗೂ ಅವರ ಕುಟುಂಬದ ಮೇಲಿನ ಕಾಳಜಿಯೇ ನನ್ನ ಗಮನ ಸೆಳೆಯಿತು. ವೃದ್ಧಾಪ್ಯರು ಇನ್ನೇನೂ ಕೊನೆ ಉಸಿರೆಳೆಯುವ ಸಂದರ್ಭದಲ್ಲಿಯೂ ಸಹ ಜೀವನದ ಮೇಲಿನ ಅವರ ಆಸಕ್ತಿ ಮತ್ತು ಹುಮ್ಮಸ್ಸು ನೋಡಿ ನನಗೆ ನಾಚಿಕೆಯಾಯಿತು. ಜೀವನವಿಡೀ ದುಡಿದು ದಣಿದ ದೇಹಗಳವು ಆದರೂ ಸಹ ಮತ್ತಷ್ಟು ತಮ್ಮ ಕುಟುಂಬದವರಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಆ ಕಾಳಜಿಗೆ ಸರಿಸಾಟಿಯಾದ ಬೇರೊಂದು ಕಾಳಜಿ ಇಲ್ಲ ಅಂದೆನಿಸಿತು.
ಅವರ ಸಂವಾದದಲ್ಲಿ ಜೀವನದುದ್ದಕ್ಕೂ ಮಾಡಿದ ಸಾಧನೆ ಕುರಿತಾದ ಅಹಂಕಾರವಾಗಲಿ ಉತ್ಪ್ರೇಕ್ಷೆಯಾಗಲಿ ಕಾಣಲಿಲ್ಲ. ಕೇವಲ ನಿಷ್ಕಲ್ಮಶವಾದ ಕುಟುಂಬದ ಮೇಲಿನ ಕಾಳಜಿ ಮತ್ತು ಮತ್ತಷ್ಟು ಕೊಡುಗೆ ನೀಡಬೇಕೆಂಬ ಹಂಬಲ ಕಾಣುತಿತ್ತು. ಹಾಗೂ ಅವರ ಮಕ್ಕಳು ಮಾಡಿದ ಸಾಧನೆಯ ವರ್ಣನೆ ಕೇಳಿ ಬರುತ್ತಿತ್ತು.
ಈ ಸಂವಾದ ಕೇಳಿದಾಗ ನಮ್ಮ ಪೋಷಕರು ನಮಗಾಗಿ ಜೀವನವಿಡೀ ದುಡಿದು, ತಮ್ಮ ಸುಖ ಸಂತೋಷವನ್ನು ನಮ್ಮ ಖುಷಿಯಲ್ಲಿ ಕಾಣುವ ಪ್ರೇಮ ಕಾಳಜಿ ನನ್ನ ಗಮನ ಸೆಳೆಯಿತು. ಇದಕ್ಕೆ ಪ್ರತಿಯಾಗಿ ಅವರಿಗೆ ನಾವು ಕೊಡಲು ಸಾಧ್ಯ ಎಂದು ಚಿಂತೆಯೂ ಕಾಡತೊಡಗಿತು.
ನಮ್ಮ ಚಿಕ್ಕ ವಯಸ್ಸಿನಲ್ಲಿ ಹಿರಿಯರೇ ನಮಗೆ ಪ್ರಪಂಚ ಆದರೆ ಬೆಳೆಯುತ್ತಾ ದೊಡ್ಡವರಾದಂತೆ, ಅವರ ಮುಗ್ಧ ಮನಸನ್ನು ಕಡೆಗಣಿಸಿ ಬಿಡುತ್ತೇವೆ ಎಂಬುದು ಬೇಸರದ ಸಂಗತಿ. ಹಿರಿಯರ ಮನಸ್ಸಿನ ಭಾವನೆಯನ್ನು ಸಹ ಅರಿತುಕೊಳ್ಳದೇ ವರ್ತಿಸತೊಡಗುತ್ತೇವೆ.
ಆಧುನಿಕ ಪ್ರಪಂಚದಲ್ಲಿ ಈ ಸನ್ನಿವೇಶವನ್ನು ಅನೇಕ ರೀತಿಯ ಜನರಲ್ಲಿ ಕಾಣುತ್ತೇವೆ. ಕೆಲವು ಜನರು ವಯಸ್ಸಾದವರನ್ನು ಆಶ್ರಮಗಳಲ್ಲಿ ಬಿಟ್ಟು ಹೋಗುವುದು ಮತ್ತು ಮನೆಯಿಂದ ಹೊರಹಾಕುವುದನ್ನು ಕಾಣುತ್ತೇವೆ. ಇದು ಅದೆಷ್ಟರ ಮಟ್ಟಿಗೆ ಯೋಗ್ಯ ಎಂದು ಮನಗಾನುವ ಸನ್ನಿವೇಶ ಸೃಷ್ಟಿಯಾಗಿದೆ.
ನಮ್ಮ ಹಿರಿಯರು ತಮ್ಮ ಜೀವನವಿಡೀ ಕುಟುಂಬದವರ ಶಾಂತಿ ಮತ್ತು ಸುಖಕರ ಜೀವನ ನಡೆಸಲು ದುಡಿದರೇ ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ ಎಂದು ಆ ವೃದ್ಧಾಪ್ಯರ ಸಂವಾದ ಕೇಳಿದಾಗ, ನಾವು ಕೂಡ ಮುಂದಿನ ದಿನಗಳಲ್ಲಿ ವೃದ್ಧಾಪ್ಯ ಹಂತವನ್ನು ನಾವು ತಲುಪಿದಾಗ ಅವರ ಮಹತ್ವ ಅರಿಯಬಹುದು ಎಂದು ನನ್ನ ಮನಕೆ ಕನವರಿಕೆಯಾಯಿತು. ಇದರಿಂದ ಜೀವನವಿಡೀ ನಮಗಾಗಿ ನಮ್ಮ ಏಳಿಗೆಗಾಗಿ ಶ್ರಮಿಸಿದ ನಮ್ಮ ಹಿರಿಯರಿಗೆ ಒಂದಿಷ್ಟು ಕಾಳಜಿ ವಹಿಸುವುದು ಅಗತ್ಯ ಎಂದೆನಿಸಿತು.
ಮಡು ಮೂಲಿಮನಿ,
ಧಾರವಾಡ ಕೆಯುಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.