UV Fusion: ಮನೋಸ್ಥಿತಿ ಬದಲಾಗುವುದೆಂತೊ?


Team Udayavani, Feb 27, 2024, 8:15 AM IST

13-uv-fusion

ಇತ್ತೀಚಿನ ದಿನದಲ್ಲಿ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಯಾವುದು ಸರಿ ಯಾವುದು ತಪ್ಪು ಎಂಬ ಯೋಚನೆ ಕೂಡ ಮಾಡದೆ ಎಲ್ಲದಕ್ಕೂ ಸಾವೊಂದೇ ಪರಿಹಾರ ಎಂಬ ಮಟ್ಟಿಗೆ ಸಮಾಜ ರೂಪುಗೊಳ್ಳುತ್ತದೆ.

ಪರೀಕ್ಷೆ ಕಾಪಿ ಮಾಡಿದ್ದಾರೆ ಎಂಬ ಕಾರಣಕ್ಕೆ ಶಿಕ್ಷಕಿ ಬೈದರೆ, ಹೊರ ನಿಲ್ಲಿಸಿದರೆ ಅದನ್ನೇ ದೊಡ್ಡ ಅವಮಾನ ಎಂದು ಆತ್ಮಹತ್ಯೆ ನಿರ್ಧಾರ ಮಾಡುತ್ತಿದ್ದಾರೆ. ಆದರೆ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಮನೆಯೆಂಬ ಪಾಠ ಶಾಲೆಯಲ್ಲಿ ನೈತಿಕತೆಯ ಶಿಕ್ಷಣ ದೊರೆಯುತ್ತಿತ್ತು ಆಗ ಮಕ್ಕಳು ಶಿಕ್ಷಕರ ಬಗ್ಗೆ ದೂರು ಹೇಳಬಂದರೆ ಮಕ್ಕಳಿಗೆ ತಿದ್ದಿ ಬುದ್ಧಿ ಹೇಳುತ್ತಿದ್ದರು.

ಅಮ್ಮ ಮೊಬೈಲ್‌ ಮುಟ್ಟಬೇಡ ಎಂದಿದ್ದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗುವುದು, ಪ್ರೀತಿ ಪೇಮದ ವಿಚಾರಕ್ಕೆ ಒಪ್ಪಲಿಲ್ಲವೆಂದು, ಇಷ್ಟದ ವಸ್ತು ಕೊಡಿಸಿಲ್ಲವೆಂದು ಇನ್ನೂ ಅನೇಕ ಕಾರಣಕ್ಕೆ ಮಕ್ಕಳು, ಯುವ ಸಮುದಾಯ ಆತ್ಮಹತ್ಯೆ ಮಾಡಿಕೊಳ್ಳುವುದು ವಿಪರ್ಯಾಸ ಎನ್ನಬಹುದು.

ಅಧಿಕೃತ ವರದಿಯ ಪ್ರಕಾರ ಪ್ರತಿ 55 ನಿಮಿಷಕ್ಕೆ ಒಬ್ಬರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣ ಕಳೆದ ವರ್ಷ ಶೇಕಡಾ 7ರಷ್ಟು ಹೆಚ್ಚಾಗಿರುವುದು ಪ್ರಜ್ಞಾವಂತ ಸಮಾಜವನ್ನು ಕಳವಳಕ್ಕೀಡು ಮಾಡಿದೆ.

ಅಭಿಮನ್ಯು ತನ್ನ ಹದಿಮೂರನೇ ವಯಸ್ಸಿನಲ್ಲಿ ಚಕ್ರವ್ಯೂಹಕ್ಕೆ ನುಗ್ಗಿದ ಬಗ್ಗೆ ಓದಿದ್ದೇವೆ. ಚಿಕ್ಕ ವಯಸ್ಸಿನಲೇ ಆತನಲ್ಲಿ ಅಷ್ಟೊಂದು ಪ್ರಬುದ್ಧತೆ ಇತ್ತು. ರಾಮ ಲಕ್ಷ್ಮಣರು ವಿದ್ಯೆ ಅರಸಿ ಅರಮನೆ ತೊರೆದು ಕಾಡಿಗೆ ಹೋಗುವಾಗ ಇನ್ನೂ ಚಿಕ್ಕ ವಯಸ್ಸಿನವರೇ ಆಗಿದ್ದರು. ಅಷ್ಟೇಕೆ ಖ್ಯಾತ ವಿಜ್ಞಾನಿ ಐನ್‌ಸ್ಟೈನ್‌ ತನ್ನ ಹದಿನೈದನೇ ವಯಸ್ಸಿಗೆ ಪ್ರಸಿದ್ಧಿ ಪಡೆದಿದ್ದ. ಇನ್ನು ಸ್ವಾತಂತ್ರ್ಯ ಹೋರಾಟವನ್ನೇ ಗಮನಿಸಿದರೂ ಹದಿಹರೆಯದ ಅದೆಷ್ಟೋ ಹೋರಾಟಗಾರರು ನಮ್ಮ ಚರಿತ್ರೆಯ ಪುಟ ತುಂಬಿದ್ದಾರೆ. ಹಾಗಾದರೆ ಈಗಿನ ಮಕ್ಕಳ ಅವಸ್ಥೆಗೆ ಕಾರಣವೇನು ಎಂದು ಯೋಚಿಸುವ ಪ್ರಯತ್ನ ಮಾಡಬೇಡವೇ?

ಹಿಂದೆ ನಾವು ಶಾಲೆಗೆ ಹೋಗುತ್ತಿದ್ದ ಕಾಲ ನೆನಪಾಗುತ್ತಿದೆ. ಸ್ವಲ್ಪ ಎಡವಟ್ಟಾದರೂ ಬಾಸುಂಡೆ ಬರುವಂತೆ ಮನೆಯಲ್ಲಿ ಅಪ್ಪನ ಪೆಟ್ಟು. ಕಡೆಗೆ ರಾತ್ರಿ ಅಮ್ಮ ಅಪ್ಪನಿಗೆ ಗೊತ್ತಾಗದಂತೆ ಎಣ್ಣೆ ಹಚ್ಚಿದ್ದೂ ಇದೆ. ಶಾಲೆಗೆ ಹೋದರೆ ಮೇಸ್ಟ್ರ ಭಯ. ಸ್ವಲ್ಪ ತಪ್ಪಾದರೂ ಬೀಳುತ್ತಿದ್ದ ಛಡಿಯೇಟು. ಮನೆಗೆ ದೂರು ತಂದರೆ ಮನೆಯಲ್ಲಿ ಮತ್ತೆ ಪೆಟ್ಟು. ಹಾಗಾಗಿ ಶಾಲೆಯ ವಿಚಾರ ಮನೆಗೆ ಬರುತ್ತಾನೇ ಇರಲಿಲ್ಲ.

ಕೆಲವೊಮ್ಮೆ ಮಕ್ಕಳನ್ನು ಹೆದರಿಸಲು, ನಿನ್ನ ಮೇಸ್ಟರಿಗೆ ಹೇಳುತ್ತೇನೆ ಎಂದು ಹೆದರಿಸಿ ಬಾಯಿಮುಚ್ಚಿಸಿದ್ದೂ ಇದೆ. ಆಶ್ಚರ್ಯವೆಂದರೆ ಅಂತಹ ಪರಿಸ್ಥಿತಿಯಲ್ಲೇ ಬೆಳೆದು ಬಂದ ಅನೇಕ ಮಹನೀಯರು ನಮ್ಮ ಮುಂದಿದ್ದಾರೆ. ವಿಶ್ವೇಶ್ವರಯ್ಯ, ಸಿ.ವಿ.ರಾಮನ್‌,  ಗಾಂಧೀಜಿ, ಅಬ್ದುಲ್‌ ಕಲಾಂ…ಹೀಗೇ. ಇವರೆಲ್ಲಾ ಹಿಂದಿನ ಪದ್ಧತಿಯಲ್ಲೇ ಬೆಳೆದು ಖ್ಯಾತಿ ಪಡೆದವರು.

ಇತ್ತೀಚೆಗೆ ಮಕ್ಕಳ ಮೇಲಿನ ಮಮತೆ ಬಹಳ ಅತಿರೇಕವಾಗಿದೆ. ಮಕ್ಕಳು ಕೇಳಿದರೆ ಚಂದ್ರನನ್ನೂ ತರಲು ಚಂದ್ರಯಾನಕ್ಕೂ ತಯಾರಿದ್ದೇವೆ. ಬಾಯಿಬಾರದ ಮಗು ಅತ್ತಾಗ ಮೊಬೈಲ್‌ ಕೈಗಿಟ್ಟು ಸಮಾಧಾನ ಪಡಿಸಲಾಗುತ್ತಿದೆ. ಮನೆಯಲ್ಲಿರುವ ನಾಲ್ಕು ಮಂದಿ ನಾಲ್ಕು ದಿಕ್ಕಿಗೆ ಮುಖಹಾಕಿ ಮೊಬೈಲ್‌ ನಲ್ಲಿ ಬ್ಯುಸಿಯಾಗಿರುವ ಚಿತ್ರಣ ಬಹುತೇಕ ಮನೆಯದ್ದು.

ಮನೆಯ ಯಾವ ಕೆಲಸವೂ ಮಕ್ಕಳಲ್ಲಿ ಮಾಡಿಸಲಾರೆವು. ಏಕೆಂದರೆ ಅವರು ಓದಬೇಕು. ಪದವಿ ಪಡೆದ ಮಗಳಿಗೆ ಚಾಹುಡಿ ಮತ್ತು ಸಾಸಿವೆ ಇಲ್ಲವೇ ಸಕ್ಕರೆ ಮತ್ತು ಉಪ್ಪಿನ ನಡುವಿನ ವ್ಯತ್ಯಾಸ ಗೊತ್ತಿಲ್ಲವಾಗಿದೆ. ವೇದಿಕೆಯ ಹೀರೋದಂತಿರುವ ನಮ್ಮ ಮಕ್ಕಳು ಪ್ರಯೋಗಿಕವಾಗಿ ಝೀರೋಗಳಾಗುತ್ತಿದ್ದಾರೆ. Mentally strong ಆಗಬೇಕಿತ್ತು, ಆದರೆ strongly mental ಆಗುತ್ತಿದ್ದಾರೆ ಎಂದರೆ ತಪ್ಪಾಗದು.

ಇವತ್ತು ಮಕ್ಕಳಲ್ಲಿ ತರಗತಿ ಕೋಣೆ ಗುಡಿಸಲು ಹೇಳಿದರೆ ಅಪರಾಧ, ಕಸ ಹೆಕ್ಕಿಸಿದರೆ ಅಪರಾಧ, ಶುಚಿಗೊಳಿಸಿದರೆ ಅಪರಾಧ…..ಹೀಗೇ ಅಪರಾಧಗಳ ಪಟ್ಟಿಯೇ ಬೆಳೆಯುತ್ತದೆ. ಹಾಗಾದರೆ ಮಕ್ಕಳಲ್ಲಿ ಮಾಡಿಸೋ ಕೆಲಸ ಯಾವುದು?….

ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಅತ್ಯಂತ ಕ್ಲಿಷ್ಟಕರವಾದ ವೃತ್ತಿಯೆಂದರೆ ಶಿಕ್ಷಕ ವೃತ್ತಿಯಾಗಿದೆ. ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಡಿಯಿಂದ ಮುಡಿಯವರೆಗೆ ಅವ್ಯವಹಾರ, ನಕಲು ನಡೆಯಲು ಕಾರಣವೇನು?…. ಅದು ಶಾಲೆಯ ಪರೀಕ್ಷೆಯಲ್ಲಿ ಚೀಟಿ ಇಟ್ಟು ಬರೆದ ಪ್ರತಿಫ‌ಲನವಾಗಿರಬಹುದಲ್ಲವೇ?… ಪರೀಕ್ಷೆಯಲ್ಲಿ ಚೀಟಿ ಇಟ್ಟರೂ ಶಿಕ್ಷಕರು ಮೌನವಾಗಿರಬೇಕೆಂದು ಸಮಾಜದ ನಿರೀಕ್ಷೆಯೇ?….ಹಾಗಾದರೆ ಪರೀಕ್ಷೆಯೆಂಬ ನಾಟಕವೇಕೆ?….

ಹೋಮ್‌ ವರ್ಕ್‌ ಕೊಡದಿದ್ದರೆ ಮೇಲಧಿಕಾರಿಯಿಂದ ತರಾಟೆ. ಹೋಂ ವರ್ಕ್‌ ಮಾಡಿದ ಬಗ್ಗೆ ವಿಚಾರಿಸಿದರೆ ಮಕ್ಕಳಿಗೆ ಅವಮಾನ. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದರೆ ಶಿಕ್ಷಕರು ಅಪರಾಧಿಗಳು, ಮಾರ್ಕ್‌ ಹೆಚ್ಚು ಬರಲು ಪ್ರಯತ್ನಿಸಿದರೆ ಮಕ್ಕಳಿಗೆ ಒತ್ತಡ…..ಹೀಗೇ ಮಕ್ಕಳಿಗೆ ರಕ್ಷಣೆ ನೀಡುವ ವಿಪರೀತ ಪ್ರಯತ್ನ ಮಕ್ಕಳ ಒತ್ತಡ ನಿರೋಧಕ ಶಕ್ತಿಯನ್ನೇ ಕಸಿದುಕೊಂಡಿಲ್ಲವೇ?..

ನನ್ನ ಅಮ್ಮನಿಗೆ ಹದಿನಾಲ್ಕರ ಹರೆಯದಲ್ಲಿ ಮದುವೆ. ಅತ್ತೆಗೆ ಹನ್ನೆರಡರಲ್ಲೇ ಮದುವೆಯಂತೆ. ಆದರೆ ಅವರು ಸುದೀರ್ಘ‌ ಅವಧಿ ಒಟ್ಟಾಗಿ, ಒಂದಾಗಿ ಅದೆಷ್ಟು ಸುಂದರವಾಗಿ ಬದುಕಿದರು. ಆದರೆ ಪ್ರಬುದ್ಧ ವಯಸ್ಸು ಬಂದು ವಿವಾಹವಾದ ಯುವಕ ಯುವತಿಯರು ವರ್ಷ ಪೂರ್ತಿಯಾಗುವ ಮುಂಚೆ ಡೈವೋರ್ಸ್‌ ಗಾಗಿ ಅಲೆದಾಡುತ್ತಿಲ್ಲವೇ?…. ಹಾಗಂತ ವಯಸ್ಸಿಗಿಂತ ವಯಸ್ಸನ್ನು ಮಾಗಿಸುವ ವಿಧಾನ ಬದಲಾಗಬೇಕಿದೆ. ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಮನೋಸ್ಥಿತಿ ಬೆಳೆಸಬೇಕಿದೆ.

ಮಕ್ಕಳಲ್ಲಿ ನಿದ್ರಾಹೀನತೆ ಇಂದು ಅಸಹಿಷ್ಣುತೆಗೆ ಬಹುಮುಖ್ಯ ಕಾರಣಗಳಲ್ಲಿ ಒಂದು. ಖನ್ನತೆ, ಅತಿಯಾದ ಮೊಬೈಲ್‌ ಬಳಕೆಗಳಲ್ಲದೆ ಮಾದಕ ವಸ್ತುಗಳು ಮಕ್ಕಳ ಮನಸ್ಸನ್ನು ಕದಡುತ್ತಿದೆ.

ಇಂದು ಶಿಕ್ಷಕರು ಅಸಹಾಯಕರಾಗಿದ್ದಾರೆಂದರೆ ತಪ್ಪಾಗದು. ಮಕ್ಕಳನ್ನು ಯಾವ ಬಗೆಯಲ್ಲಿ ನಿರ್ವಹಿಸಬೇಕೆಂಬುವುದೇ ಯಕ್ಷಪ್ರಶ್ನೆ. ಹೇಗಿರಬೇಕೆಂದು ಹೇಳುವುದಕ್ಕೂ, ಅದನ್ನು ಕಾರ್ಯರೂಪಕ್ಕೆ ತರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.  ತರಗತಿಯಲ್ಲಿ ಮಕ್ಕಳನ್ನು ವಿಚಾರಿಸಿದಾಗ ನಾಲ್ಕು ಮಂದಿಯಲ್ಲಿ ಮೊಬೈಲ್‌ ಪತ್ತೆಯಾಯಿತು. ಮೊಬೈಲ್‌ ತೆಗೆದು ಒಳಗಿಟ್ಟೆವು.

ಆದರೆ ರಾತ್ರಿಪೂರ್ತಿ ನಿದ್ರೆಯಿಲ್ಲ. ಮಕ್ಕಳು ಏನಾದರೂ ಅನಾಹುತ ಮಾಡಿಕೊಂಡರೆ..!. ಮರುದಿನ ಗೌರವದಿಂದ ಅವುಗಳನ್ನು ಕೊಟ್ಟು ಕಳಿಸಿದೆವು. ಏಕೆಂದರೆ ನಾವು ಬದುಕಬೇಕಿತ್ತು.  ಇನ್ನು ಕೆಲವೇ ವರ್ಷಗಳಲ್ಲಿ ತೀರಾ ಹದಗೆಟ್ಟ ಪರಿಸ್ಥಿತಿ ನಮ್ಮದಾಗಬಹುದು. ಸರಿಪಡಿಸಲಾರದ ಸ್ಥಿತಿಗೆ ತಲುಪಿದಾದ ಪಶ್ಚತ್ತಾಪವೊಂದೇ ನಮ್ಮ ಮುಂದೆ ಉಳಿದ ದಾರಿಯಾಗಬಹುದು.

-ರಮೇಶ ಇಟಗೋಣಿ

ಶಿಕ್ಷಕರು, ಸಿಟಿ ಹೈಸ್ಕೂಲ್‌ ವಿಜಯನಗರ, ಹುಬ್ಬಳ್ಳಿ

ಟಾಪ್ ನ್ಯೂಸ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.