UV Fusion: ಭಿಕ್ಷುಕನೇಕೆ ಭಿಕ್ಷುಕನಾದ?
Team Udayavani, Mar 9, 2024, 2:07 PM IST
ಮನುಷ್ಯ ಹುಟ್ಟುತ್ತಲೇ ತಾನೇನಾಗಬೇಕು ಎಂಬುದನ್ನು ನಿರ್ಧರಿಸಿ ರುವುದಿಲ್ಲ. ಮನುಷ್ಯನ ಮುಂದಿನ ಜೀವನ ನಿರ್ಧಾರ ವಾಗುವುದು ಆತನ ಹಣೆ ಬರಹ ದಿಂದಲೋ? ಅಥವಾ ಮನೆಯ ಪರಿಸ್ಥಿತಿ ಯಿಂದಲೋ? ತಿಳಿಯದು. ಆದರೆ ನನಗೆ ಕಾಡುತ್ತಿರುವ ಪ್ರಶ್ನೆ ಭಿಕ್ಷುಕ ನೇಕೆ ಭಿಕ್ಷುಕನಾದ ಎಂಬುದು.
ಸಾಮಾನ್ಯವಾಗಿ ಮನುಷ್ಯ ಬೇರೊಬ್ಬರ ಮುಂದೆ ಕೈಚಾಚಿ ಬೇಡುವುದು ಎಂದರೆ ಅದಕ್ಕಿಂತ ಕಷ್ಟವಾದ ಕೆಲಸ ಮತ್ತೂಂದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಿಕ್ಷುಕರೇ. ವಿದ್ಯಾವಂತರು ಸಹ ಕೆಲಸಕ್ಕಾಗಿ ಮತ್ತೂಬ್ಬರ ಮುಂದೆ ಕೈಚಾಚಲೇ ಬೇಕಾಗಿದೆ. ಇಂತಹ ಪ್ರಪಂಚದಲ್ಲಿ ಬಡತನದ ಬೇಗೆಯಿಂದ ಬೇಯುತ್ತಿರುವ ಹೊತ್ತಿನ ಊಟಕ್ಕೂ ಕಷ್ಟ ಪಡುವ ಜನರು ಭಿಕ್ಷೆ ಬೇಡದೆ ಇರುವರೇ?
ಬಡತನವೆಂಬುದು ಮನುಷ್ಯನ ಕೈಯಿಂದ ಯಾವ ರೀತಿ ಕೆಲಸ ಬೇಕಾದರೂ ಮಾಡಿಸುತ್ತದೆ ಎಂಬುದಕ್ಕೆ ಸಾಕ್ಷಿ ರಸ್ತೆಗಳಲ್ಲಿ, ಬಸ್ ಸ್ಟಾಂಡ್‌ಗಳಲ್ಲಿ, ಟೋಲ್‌ಗಳಲ್ಲಿ ಕೈ ಚಾಚಿ ಭಿಕ್ಷೆ ಕೇಳುವ ಭಿಕ್ಷುಕರು. ಮೂರು ಹೊತ್ತಿನ ಊಟಕ್ಕೆ ಬಟ್ಟೆಗೆ ಯಾವುದೇ ಕೊರತೆ ಇರುವುದಿಲ್ಲ.
ಆದರೆ ಕೆಲವೊಮ್ಮೆ ದುಡ್ಡಿನ ಸಮಸ್ಯೆ ಉಂಟಾಗಿರಬಹುದು. ಅಂತಹ ಜನರು ಒಮ್ಮೊಮ್ಮೆ ನಾವು ಬಡವರೆಂದು ಹೇಳಿಕೊಳ್ಳುತ್ತಾರೆ. ಅವರು ಈ ಕಡು ಬಡವರನ್ನು ನೋಡಿ ನಮ್ಮ ಕಷ್ಟ ಇವರ ಕಷ್ಟದ ಮುಂದೆ ಯಾವುದಕ್ಕೂ ಸರಿ ಹೊಂದುವುದಿಲ್ಲ ಎಂದು ಮನಸ್ಸಿಗೆ ಸಮಾಧಾನ ತೆಗೆದುಕೊಂಡಿರಬಹುದು.
ಬಿಕ್ಷುಕನಾಗಬೇಕು ಎಂದು ಯಾರು ಕನಸು ಕಂಡಿರುವುದಿಲ್ಲ ಆದರೆ ಮನೆಯ ಪರಿಸ್ಥಿತಿಯು ಒಮ್ಮೊಮ್ಮೆ ಈ ರೀತಿಯ ಕೆಲಸ ಮಾಡುವಂತೆ ಮಾಡಿರಬಹುದು. ಆದರೆ ಇಂತಹ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಎಲ್ಲರೂ ಭಿಕ್ಷೆ ಬೇಡಿಕೊಂಡೆ ಬದುಕಬೇಕೆಂಬುದೇನಿಲ್ಲವಲ್ಲ, ಇದನ್ನು ಅರಿತವರು ಕೂಲಿ ಕೆಲಸ ಮಾಡಿ ತಮ್ಮ ಊಟ ಬಟ್ಟೆಗೆ ದುಡಿದುಕೊಂಡು ಬದುಕುತ್ತಿರುವವರು ಇದ್ದಾರೆ.
ಕೆಲವರು ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡಿದರೆ ಮತ್ತೆ ಕೆಲವರು ದುಶ್ಚಟಗಳಿಗಾಗಿ ಭಿಕ್ಷೆ ಬೇಡುವರು. ಎಲ್ಲರನ್ನು ಸಮನಾಗಿ ಕಾಣಬೇಕು ಎಂದು ಭಾಷಣ ಮಾಡುವವರು ಬಿಕ್ಷುಕ ಎದುರಿಗೆ ಬಂದರೆ ಪಕ್ಕಕ್ಕೆ ಸರಿಯುವುದಾದರೂ ಯಾಕೆ? ದೂರದಿಂದಲೇ ಭಿಕ್ಷೆ ನೀಡಿ ಹೋಗು ಎಂಬ ಜನರು ಬಡವರ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವುದಾದರೂ ಯಾಕೆ ? ಎಂಬುದು ನನಗೆ ಇಂದಿಗೂ ತಿಳಿಯುತ್ತಿಲ್ಲ.
ಕೆಲವು ಕಡೆಗಳಲ್ಲಿ ಚಿಕ್ಕ ಮಕ್ಕಳು ಭಿಕ್ಷೆ ಬೇಡಿರುವುದನ್ನು ನೋಡಿಯೇ ಇರುತ್ತವೆ. ಕೆಲವೊಮ್ಮೆ ಅವರ ಮೇಲೆ ಕರುಣೆ ಮೂಡಿ ಒಂದೆರಡು ರೂಪಾಯಿ ಹೆಚ್ಚು ಕೊಟ್ಟಿದ್ದು ಉಂಟು. ಆದರೆ ಅವರು ಯಾಕೆ ಭಿಕ್ಷೆ ಬೇಡುತ್ತಿರಬಹುದು? ಎಂದು ಕೇಳುವ ತಂಟೆಗೆ ಯಾರು ಹೋಗುವುದಿಲ್ಲ. ಕೇಳಿದರೂ ನೂರಲ್ಲಿ ಒಬ್ಬರು ಅಥವಾ ಇಬ್ಬರು ಅಷ್ಟೇ. ಏಕೆಂದರೆ ಕಾರಣ ಕೇಳುವಷ್ಟು ಸಂಯಮ ಎಲ್ಲರಿಗೂ ಇರುವುದಿಲ್ಲ. ಕಾರಣ ಹುಡುಕುತ್ತಾ ಹೊರಟರೆ ಬಹಳಷ್ಟು ಬಡತನದ ಕಥೆಗಳು ದೊರೆಯುತ್ತವೆ.
ಒಟ್ಟಾರೆ ಹೇಳುವುದಾದರೆ ಕನಸುಗಳನ್ನು ಮೂಟೆ ಕಟ್ಟಿ, ಎದೆಗೂಡಿನೊಳಗೆ ನೋವುಗಳನ್ನು ಬಚ್ಚಿಟ್ಟು, ಜೀವಿಸುವ ಆಸೆಯನ್ನು ತೊರೆದು, ರಸ್ತೆ ಬದಿಯಲ್ಲಿ ಮಲಗುವ ಇವರ ಜೀವನವೇ ಬಡತನ ಸಾಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಸಾಯುವ ಜನರಿಗೆ ಇವರೇಕೆ ಮಾದರಿಯಾಗಬಾರದು.
ಸುಪ್ರೀತಾ ಎಸ್.ಕೆ.
ತುಮಕೂರು ವಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.