UV Fusion: ಭಯವೇತಕೆ..?; ಅದರಿಂದ ಪಾರಾಗಲು ಸೂಕ್ತ ಪರಿಹಾರ
Team Udayavani, Nov 3, 2024, 2:28 PM IST
ಭಯ ಯಾರನ್ನೂ ಬಿಟ್ಟಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಭಯ ಇದ್ದೆ ಇರುತ್ತೆ. ಚಿಕ್ಕಂದಿನಲ್ಲಿ ಗುಮ್ಮನ ಭಯದಿಂದ ಆರಂಭವಾಗಿ ವಯಸ್ಸಿಗೆ ಬಂದಾಗ ಉದ್ಯೋಗ, ಹಣಕಾಸು ಮದುವೆ ಮಕ್ಕಳು ಹೀಗೇ ಮುಪ್ಪಾದಾಗ ಆರೋಗ್ಯ, ಕುಟುಂಬ ಇತ್ಯಾದಿ ಚಿಂತೆಯೊಂದಿಗೆ ಎಲ್ಲಿ ಏನಾಗಿ ಬಿಡುತ್ತದೆಯೋ ಎಂಬ ಭಯ ಇದ್ದೆ ಇರುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯ ಭಯ, ಹೊಸತಾಗಿ ಹಾಕಿದ ಯೋಜನೆಯನ್ನು ಕಾರ್ಯರೂಪ ಗೊಳಿಸಲು ಭಯ. ಗುರಿ ತಲುಬೇಕೆಂಬ ಹಂಬಲವಿದ್ದರೂ ಭಯ ಮಾತ್ರ ಬಿಡಲ್ಲ. ಹಾಗಾದರೆ ಭಯ ಉದ್ಭವವಾಗಲು ಕಾರಣಗಳೇನು ಮತ್ತು ಅದರಿಂದ ಪಾರಾಗಲು ಸೂಕ್ತ ಪರಿಹಾರವೇನು ಎಂಬುವುದನ್ನು ತಿಳಿದುಕೊಳ್ಳೋಣ.
ಆತ್ಮ ವಿಶ್ವಾಸದ ಕೊರತೆ, ಗುರಿಯ ಕುರಿತು ಅನಿರ್ದಿಷ್ಟತೆ, ಅಭ್ಯಾಸದ ಕೊರತೆ,ಪೂರ್ವಾನುಭವಗಳು, ಕಹಿ ಅನುಭವಗಳು, ಅತಿಯಾದ ಆಲೋಚನೆಗಳು, ಅತಿಯಾಗಿ ಯೋಜನೆ ರೂಪಿಸುವುದು ಮುಂತಾದ ಕಾರಣಗಳು ನಮ್ಮ ಮನಸ್ಸಿನಲ್ಲಿ ಭಯ ಸೃಷ್ಟಿ ಮಡುತ್ತವೆ. ಹಾಗಾದರೆ ಇದಕ್ಕೆ ಸೂಕ್ತ ಪರಿಹಾರವೇನು?
ಭಯವನ್ನು ಹೋಗಲಾಡಿಸುವ ಮಾರ್ಗಗಳು
ಒಪ್ಪಿಕೊಳ್ಳುವಿಕೆ. ಕೇವಲ ನಮಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ತಮ್ಮದೇ ಅದ ಭಯಗಳಿವೆ ಅನ್ನೋದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತೆ. ಅದಲ್ಲದೆ ಭಯಪಡುವುದರಿಂದ ಯಾವುದೇ ಲಾಭವಿಲ್ಲ. ಸೋಲು ಗೆಲುವು, ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುವುದನ್ನು ನಾವು ಅರ್ಥಮಾಡಿಕೊಂಡು ಮುಂದೆ ಸಾಗಿದರೆ ಒಳ್ಳೆಯದು.
ನಿರ್ದಿಷ್ಟವಾದ, ನಿಖರವಾದ ಗುರಿ ಮತ್ತು ಧ್ಯೇಯ. ಜೀವನದಲ್ಲಿ ನಾವು ಏನನ್ನು ಮಾಡಬೇಕೋ, ಏನನ್ನು ಸಾಧಿಸಬೇಕೋ ಅದರ ಕುರಿತು ನಿಖರವಾದ ಮಾಹಿತಿ ಗುರಿ ಹಾಗೂ ಮುಂದಾಲೋಚನೆ ಇಟ್ಟುಕೊಂಡರೆ ಭಯ ತಂತಾನೆ ಓಡಿಹೋಗುತ್ತದೆ.
ಓದುವುದು. ನಮ್ಮಲ್ಲಿ ಅನುಭವಗಳು ಕಡಿಮೆ ಆದ್ದರಿಂದ ಸಾಧಕರ, ಮಹಾನ್ ವ್ಯಕ್ತಿಗಳ ಆತ್ಮ ಕಥೆಗಳು, ಪುಸ್ತಕಗಳನ್ನು ಓದಿದರೆ ನಮಗೆ ಹೊಸ ದಾರಿಯೊಂದಿಗೆ ಜೀವನಕ್ಕೆ ಸ್ಪೂರ್ತಿಯು ಸಿಗುತ್ತದೆ. ಭಯ ಕಡಿಮೆ ಆಗುತ್ತದೆ.
ಲಿಖೀತ ರೂಪದಲ್ಲಿ ಗುರಿ, ಧ್ಯೇಯ. ನಮ್ಮ ಗುರಿಯನ್ನು ಕನಸನ್ನು ಲಿಖೀತ ರೂಪದಲ್ಲಿ ಬರೆಯುದು ಅತ್ಯಂತ ಉಪಯುಕ್ತ. ಲಿಖೀತ ರೂಪದಲ್ಲಿರುವುದು ನಮ್ಮನ್ನು ವಾಸ್ತವತೆಗೆ ಕೊಂಡೊಯ್ಯುತ್ತದೆ.
ನಿರಂತರ ಅಭ್ಯಾಸ, ಮಾರ್ಗದರ್ಶನ. ನಮ್ಮ ಕನಸನ್ನು ನನಸಾಗಿಸಲು ನಿರಂತರ ಪ್ರಯತ್ನ ಸರಿಯಾದ ರೀತಿಯಲ್ಲಿ ತಿಳಿದವರಿಂದ ಮಾರ್ಗದರ್ಶನ ಪಡೆದುಕೊಂಡಲ್ಲಿ ಸೋಲಿನ ಪ್ರಮಾಣ ಕಡಿಮೆಯಾಗಿ ಭಯ ನಿವಾರಣೆ ಆಗುತ್ತದೆ.
ಇವುಗಳೊಂದಿಗೆ ಪ್ರಾಮಾಣಿಕ ಪ್ರಯತ್ನ ಹಾಗೂ ಪರಿಶ್ರಮದಿಂದ ಜೀವನ ಸಾಗಿಸಿದರೆ ಭಯ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ಭಯ ಎಂದಿಗೂ ಧೀರ್ಘಕಾಲಿಕ ಸಮಸ್ಯೆ ಅಲ್ಲ. ಹಾಗಾಗಿ ಧೈರ್ಯದಿಂದ ಮುಂದೆ ಸಾಗಿ.
-ಚೈತನ್ಯ ಆಚಾರ್ಯ, ಕೊಂಡಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.