UV Fusion: ಹೀಗ್ಯಾಕೆ!
Team Udayavani, Jan 15, 2024, 12:22 PM IST
ಕಾಲವು ಕಳೆಯುವುದು ಸೂರ್ಯನ ಕಿರಣ ತಾಗಿರುವ ಮಂಜು ಕರಗಿದಂತೆ. ಹಗಲಿರುಳಿದ್ದಂತೆ, ಬಾಳಲ್ಲಿ ನೋವು ನಲಿವಿದೆ, ನಿರಂತರ ಏಳು ಬೀಳಿನ ಹೋರಾಟವಿದೆ. ಇಲ್ಲಿ ಗೆಲುವು ಸೋಲಿನ ಜತೆಯಲ್ಲಿ ನಿರಂತರ ಕಾದಾಟ ಇದ್ದೇ ಇರುತ್ತದೆ.
ಬದುಕಿನ ಪುಟಗಳಲ್ಲಿ ಎಲ್ಲವೂ ಅಂದುಕೊಂಡಂತೆ ಪದಗಳ ಜೋಡಣೆ, ವಾಕ್ಯದ ರಚನೆ ಇರದು. ಇಲ್ಲಿ ನಗುವಿದೆ, ಅಳುವಿದೆ, ಜೀವನದಲ್ಲಿ ಗತಿಸುವ ಪ್ರತಿ ಸನ್ನಿವೇಶಗಳು ಅನುಭವ ಎನ್ನುವ ಆಗಸದಂಗಳದಲ್ಲಿ ಹಾರಾಡುವಂತೆ ಮಾಡುತ್ತವೆ. ಅಲ್ಲಿ ಹಾರಾಡುವ ಚಿಲಿಪಿಲಿಗುಟ್ಟುವ ಅನುಭವಗಳು ಸಂತಸದ ತೋರಣವಾಗಿರಬಹುದು, ಇಲ್ಲವೇ ದುಃಖದ ಹೊರಣವು ಆಗಿರಬಹುದು.
ಕಾಲವೇ ಪ್ರಶ್ನೆ ಕಾಲವೇ ಉತ್ತರ. ಕಾಲವೇ ಎಲ್ಲದರ ಮೂಲ. ಸುಖ ದುಃಖದ ಪ್ರಶ್ನೆಯ ಸರಣಿಗೆ ಕಾಲವೇ ಉತ್ತರಿಸುತ್ತದೆ. ಹುಟ್ಟು ಸಾವಿನ ನಡುವಿನ ಬದುಕ ಅದೆಷ್ಟೋ ನೀತಿ ನಿಯಮಗಳನ್ನು ಕಾಲದೊಂದಿಗೆ ಕಲಿತುಕೊಳ್ಳುತ್ತೇವೆ. ಇಲ್ಲಿ ಕಲಿತ ವಿಚಾರ, ಸಮಾಚಾರ, ಆಚಾರಗಳು ನಮ್ಮಯ ಬಾಳಿನ ಸಂಚಾರದಲ್ಲಿ ಸರಿ ತಪ್ಪುಗಳ ಬೇಟೆಗೆ ಸಹಕಾರಿಯಾಗುತ್ತವೆ.
ಆದದ್ದು ಆಗಿ ಹೋಗಲಿ. ಮುಂದೆ ಆಗಬೇಕಿರುವ ಬಗ್ಗೆ ಚಿಂತೆಯಿರಲಿ. ಆಗಿ ಹೋದ ಯೋಚನೆಯಲ್ಲಿಯೇ ದಿನಗಳನ್ನು ಕಳೆದು ನಿನ್ನ ಸಮಯವನ್ನು ಕೈ ಚೆಲ್ಲುವ ಬದಲು ಇಂದಿನ ದಿನಗಳಲ್ಲಿ ಏನಾಗಬೇಕೆಂದು ತಿಳಿ ಮೊದಲು. ನೆನೆದಷ್ಟು ನೆನಪಿನ ಆಳವನ್ನು ತೋಡುತ್ತಾ ಹೋಗುತ್ತದೆ.ಅದಕ್ಕೆ ಕೊನೆಯೆಂಬುದು ಇರದು. ನೆನೆದಷ್ಟು ನೆನಪುಗಳ ವ್ಯಾಪ್ತಿ ಹೆಚ್ಚಾಗಿ ನಮಗೆ ಮುಂದಿನ ದಿನಗಳಲ್ಲಿ ಏನನ್ನು ಮಾಡಬೇಕೆಂಬುದಾಗಿ ಅರಿಯಲು, ತಿಳಿಯಲು ತೊಡಕನ್ನು ಉಂಟುಮಾಡಬಹುದು. ಗತಿಸಿ ಹೋದ ಘಟನೆಗಳನ್ನು ಅಲ್ಲೇ ಬಿಟ್ಟು ಮುಂದುವರೆಯಿರಿ. ಅದರ ಸುತ್ತಲೂ ಸುಮ್ಮನೆ ತಿರುಗುವುದು ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ.
ಯೋಚನೆಗಳು ಬೆನ್ನು ಬಿಡದೆ ಕಾಡಿದಾಗ ಅದರಿಂದ ಆಗುವ ಸಂಕಟಗಳು ಹೆಚ್ಚು. ಅದರಿಂದ ಹೊರಬರಲೇಬೇಕು ಒಂದೊಮ್ಮೆ ಅದು ಅಸಾಧ್ಯವೆನಿಸಿದರೆ ಮುಂದಿನ ಒಳ್ಳೆಯ ದಿನಗಳನ್ನು ನಾವೇ ಕೈ ಚೆಲ್ಲಿಕೊಂಡಂತೆ. ಮನ ಪರಿವರ್ತನೆ ಯಾತ್ರೆ ಮನದಲ್ಲಿ ಶುರುವಾದರೆ ಮಾತ್ರ ಎಲ್ಲವೂ ಸಾಧ್ಯ. ಇಲ್ಲಿ ಯಾವುದು ಅಸಾಧ್ಯವಲ್ಲ. ತಿಳಿದು ನೋಡು, ಕಹಿ ನೆನಪ ತುಳಿದು ನೋಡು.
-ಗಿರೀಶ್ ಪಿ.ಎಂ.
ವಿವಿ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.