ಅಂಗವೈಕಲ್ಯ ಮೆಟ್ಟಿನಿಂತ ಚಿನ್ನದ ಹುಡುಗಿ ವಿಲ್ಮಾ


Team Udayavani, Sep 22, 2020, 6:05 PM IST

wilmaaaaa

ಅಚಲ ಗುರಿ ಯೊಂದಿದ್ದರೆ ಜಗತ್ತನೆ ಗೆಲ್ಲಲ್ಲು ಅಡ್ಡಿ ಯಿಲ್ಲ ಎನ್ನುವ ಮಾತನ್ನು ನಿಜ ಮಾಡಿದ ಸಾಧಕಿ. ಈಕೆಯ ಸಾಧನೆ ಮುಂದೆ ಸ್ವತಃ ದೇವರೆ ನಾಚುವಂತಾಗಿದೆ ಹೌದು ಈ ಸಾಧಕಿ ಹೆಸರೇ ವಿಲ್ಮಾ ರುಡಾಲ್ಫ್.

ಎಡ್‌ ಮತ್ತು ಬ್ಲೆಂಚ್‌ ಎಂಬ ಅಮೆರಿಕದಲ್ಲಿ ವಾಸಿಸಿರುವ ಆಫ್ರಿಕಾದ ದಂಪತಿ. ಅವರಿಗೆ ಬಡತನೇ ಆಸ್ತಿ. ಇನ್ನು ಆಸ್ತಿಯೆಂಬಂತೆ ಈ ದಂಪತಿಗೆ 22 ಮಕ್ಕಳು. ಎಡ್‌ ರೈಲ್ವೇ ಗುಮಾಸ್ತನಾದರೆ, ಬ್ಲೆಂಚ್‌ ಮನೆಯ ಕೆಲಸ ಮಾಡಿ ಬದುಕುತ್ತಿದ್ದರು. ದುಡಿಯುವ ಕೈಗಳು ಎರಡಾದರೆ ತಿನ್ನುವ ಕೈಗಳು ಇಪ್ಪತ್ತೆರೆಡು. ಈ ಇಪ್ಪತ್ತೇರಡು ಮಕ್ಕಳ ಪೈಕಿ 20ನೇ ಮಗಳ ಸಾಧನೆಗೆ ಇಡೀ ಜಗತ್ತೇ ತಲೆದೂಗಿತ್ತು. 20ನೇಯವಳಿಗೆ ಹುಟ್ಟಿದವಳೇ ವಿಲ್ಮಾ ರುಡಾಲ್ಫ್.‌

18ನೇ ವಯಸ್ಸಿನಲ್ಲಿ ಅಂಗವೈಕಲ್ಯವನ್ನು ಮೆಟ್ಟಿನಿಂತು ಒಂದೇ ಒಲಿಂಪಿಕ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಳು.

1940 ಜೂನ್‌ 23 ರಂದು ಸೇಂಟ್‌ ಬೆಥ್ಲೆಹೆಂ ನಲ್ಲಿ ಜನಿಸಿದ ವಿಲ್ಮಾ ನಾಲ್ಕು ವರ್ಷದ ಹಸುಳೆಯಾಗಿ ದ್ದಾಗ ನ್ಯುಮೋನಿಯಾ, ಸ್ಕಾರಲೇಟ್‌ ಜ್ವರ ಜತೆಗೆ ಪೋಲಿಯೋದಿಂದಾಗಿ ಎಡಗಾಲಿನ ಶಕ್ತಿ ಕಳೆದು ಕೊಳ್ಳುತ್ತದೆ. ಅವಳು ನಡೆಯುವುದು ಕಷ್ಟವೆಂದು ವೈದ್ಯರು ಅವಳ ತಾಯಿಗೆ ಹೇಳಿದರು. ಚಿಕಿತ್ಸೆ ಮಾಡಿಸುವುದಕ್ಕೆ ಹಣವಿಲ್ಲ. ಮನೆಯ ಹಾಸಿಗೆಯಲ್ಲಿ ಒಂಟಿಯಾಗಿ ಮಲಗಿಕೊಂಡಿರುತ್ತಿದ್ದಳು. ಇತ್ತ ಅಕ್ಕಪಕ್ಕದ ಮನೆಯ ಮಕ್ಕಳು ಮೈದಾನದಲ್ಲಿ ಆಡುವುದನ್ನು ನೋಡಿ ಮನನೊಂದಳು. ನನಗೂ ಸಹ ಕಾಲಿದ್ದರೆ ಅವರಂತೆ ಆಡಬಹುದಿತ್ತೆಂದು ಮನಸ್ಸಿನಲ್ಲಿಯೇ ಕೊರಗುತ್ತಿದ್ದಳು.

ಅವಳ ತಾಯಿ ಪುಟ್ಟ ಮನಸ್ಸಿನಲ್ಲಿ ಪ್ರೋತ್ಸಾಹದಾಯಕ ನುಡಿಗಳನ್ನು ಹೇಳಿ ಅವಳಲ್ಲಿ ಆತ್ಮವಿಶ್ವಾಸ ತುಂಬಲು ಆರಂಭಿಸಿದಳು. ದೇವರು ನಿನಗೆ ಎಲ್ಲ ರೀತಿಯ ಶಕ್ತಿ ಸಾಮರ್ಥ್ಯ ನೀಡಿದ್ದಾನೆ. ಅದನ್ನು ಪ್ರಯೋಗಿಸಿ ಏನಾದರೂ ಸಾಧನೆ ಮಾಡು ಎಂಬ ಮಾತನ್ನು ಪದೇ ಪದೇ ಹೇಳಿ ಅವಳಿಗೆ ಭರವಸೆ ಹುಟ್ಟಿಸುತ್ತಿದ್ದಳು. ಒಂದು ದಿನ ಆಕೆಗೆ ಅನಿಸಿತು. ನಾನೂ ಹೀಗೆ ಎಲ್ಲರಂತೆ ಓಡಬೇಕು, ಚಿರತೆಯಂತೆ ಅತಿವೇಗದ ಓಟಗಾರ್ತಿಯಾಗಬೇಕು ! ಹೌದು ನಾನು ಹಾಗಾಗಲೇಬೇಕು ! ಆದರೆ ಅವಳಿಗೆ ನಡೆಯುವುದೇ ಕಷ್ಟವಾಗಿತ್ತು, ಇನ್ನು ಓಟಗಾರ್ತಿಯಾಗುವುದು ಹೇಗೆ? ಎಂದು ಎದೆಗುಂದಿ ಸುಮ್ಮನಾಗಿಬಿಡುತ್ತಿದ್ದಳು.

ವೈದ್ಯರ ಸಲಹೆ ಮೀರಿ ತನ್ನ ಒಂಬತ್ತನೇ ವಯಸ್ಸಿನಲ್ಲಿ ತನ್ನ ಮೊದಲ ಹೆಜ್ಜೆಯನ್ನು ನೆಲದ ಮೇಲಿರಿಸಿದಳು. ಮನೆಯ ಗೋಡೆಯನ್ನು ಹಿಡಿದು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ನಡೆಯುವುದಕ್ಕೆ ಪ್ರಯತ್ನಿಸಿದಳು. ಬಿದ್ದರೂ ಮರು ಪ್ರಯತ್ನಿಸಿ ದಿನಕ್ಕೆ ಹತ್ತಾರು ಹೆಜ್ಜೆಗಳನ್ನಿಡಲಾರಂಭಿಸಿದಳು.

ಕಾಲುಗಳು ಸೋತವು. ಆದರೆ ಪ್ರಯತ್ನವೆಂಬ ಅಸ್ತ್ರವನ್ನು ಬಿಡದೆ ಎರಡು ವರ್ಷಗಳಲ್ಲಿ ಯಾರ ಸಹಾಯವಿಲ್ಲದೆ ನಡೆಯುವುದನ್ನು, ಓಡುವುದನ್ನು ಕಲಿತಳು. ತನ್ನ 13ನೇ ವಯಸ್ಸಿಗೆ ಮೊದಲ ಬಾರಿಗೆ ಓಟದ ಸ್ಪರ್ದೆಯಲ್ಲಿ ಭಾಗವಹಿಸಿ ಕಟ್ಟಕಡೆಯವಳಾಗಿ ಎಲ್ಲರ ಪರಿಹಾಸ್ಯಕ್ಕೆ ಗುರಿಯಾದಳು. ಹದಿನೈದನೇ ವಯಸ್ಸಿನಲ್ಲಿ ವಿಲ್ಮಾಗೆ ಒಬ್ಬ ಕೋಚ್‌ ಪರಿಚಯವಾದರು. ತಾನು ವಿಶ್ವದ ಅತೀ ವೇಗದ ಓಟಗಾರ್ತಿಯಾಗಬೇಕೆಂಬ ಆಸೆಯನ್ನು ಅವರ ಮುಂದೆ ವ್ಯಕ್ತಪಡಿಸಿದಳು. ಈಕೆಯ ಆತ್ಮವಿಶ್ವಾಸದ ನುಡಿಯನ್ನು ಮನಗಂಡ ಅವರು ಸಹಾಯ ಮಾಡಲು ಮುಂದಾದರು. ಅದರಂತೆ ಕೋಚ್‌ನ ಸಲಹೆಯಂತೆ ದಿನನಿತ್ಯ ಅಭ್ಯಸಿಸಿ, ಎರಡೇ ವರ್ಷಗಳಲ್ಲಿ ವೇಗದ ಓಟಗಾರ್ತಿಯಾದಳು.

1960ರ ರೋಮ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದಿಗೂ ಸೋಲು ಕಾಣದ ಜುಟ್ಟಾ ಹೈನ್‌ ಎಂಬ ಓಟಗಾರ್ತಿಯನ್ನು 100 ಮೀ. ಓಟದಲ್ಲಿ ಹಿಂದಿಕ್ಕಿ ಮೊದಲ ಬಂಗಾರದ ಪದಕಕ್ಕೆ ಮುತ್ತಿಟ್ಟಳು. ಅನಂತರ 200 ಮೀ. ಓಟದ ಸ್ಪರ್ಧೆಯಲ್ಲಿಯೂ ಸಹಹೈನ್‌ರನ್ನು ಹಿಂದಿಕ್ಕಿ ಬಂಗಾರದ ಪದಕ ಪಡೆದಳು. ಹಾಗೇ ಮರುದಿನ 400 ಮೀ. ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಾಮಾನ್ಯವಾಗಿ ಸ್ಪರ್ಧೆಯಲ್ಲಿ ಅತಿ ವೇಗವಾಗಿ ಓಡುವವರು ಕೊನೆಯಲ್ಲಿರುತ್ತಾರೆ. ಇಲ್ಲೂ ಸಹಾ ಜುಟ್ಟಾ ಪ್ರತಿಸ್ಪರ್ಧಿ. ಓಟ ಶುರುವಾಯಿತು ಮೊದಲ ಮೂವರು ಓಟಗಾರರು ಒಬ್ಬರಿಗೊಬ್ಬರು ಕೋಲನ್ನು ಬದಲಿಸುತ್ತಾ ಓಡ ತೊಡಗಿದರು. ಸ್ಪರ್ಧೆಯ ಕೊನೆಯ ಹಂತದಲ್ಲಿ ವಿಲ್ಮಾಗೆ ಬ್ಯಾಟನ್‌ ಹಸ್ತಾಂತರಿಸುವಾಗ ಕೆಳಕ್ಕೆ ಬಿದ್ದಿತು. ಜುಟ್ಟಾ ಒಡಲಾರಂಭಿಸಿದಳು. ಕೆಲವೇ ಸೆಕೆಂಡ್‌ ಗಳಲ್ಲಿ ಹಿಂದಿಕ್ಕಿ ಮೂರನೇ ಪದಕವನ್ನು ಮುಡಿಗೇರಿಸಿಕೊಂಡರು.

ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಮೂರು ಬಂಗಾರದ ಪದಕಗಳನ್ನು ಪಡೆದ ವಿಶ್ವದ ಮೊದಲ ಓಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದಳು.

  ಹರೀಶ್‌ ಕುಮಾರ್‌ ಕೆ., ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್‌ ಕಾಲೇಜು, ಬಳ್ಳಾರಿ. 

 

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.