‘ಗಿಡ ನೆಡುವುದಕ್ಕಷ್ಟೇ ಮೀಸಲಾಗದಿರಲಿ ಈ ದಿನ’


Team Udayavani, Jun 6, 2020, 2:05 AM IST

Plant

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮನುಷ್ಯ ತನ್ನ ವಿಕಸನದುದ್ದಕ್ಕೂ ಪ್ರಕೃತಿಯ ಮೇಲೆ ಹಿಡಿತ ಸಾಧಿಸುವ ಹುಚ್ಚು ಆಸೆಯಲ್ಲೇ ಹೆಜ್ಹೆ ಹಾಕಿದ್ದಾನೆ.

ವಿಪರ್ಯಾಸವೆಂದರೆ ಈ ಭೂಮಿಯ ಮೇಲಿರುವ ಬೇರಾವುದೇ ಜೀವಿಗಿಂತ ಹೆಚ್ಚು ಪರಿಸರಕ್ಕೆ ಹಾನಿ ಮಾಡಿರುವ, ಮಾಡಲಿರುವ ನಾವು ವರ್ಷದಲ್ಲೊಂದು ದಿನ ಮಾತ್ರ ಪ್ರಕೃತಿಯೆಡೆಗೆ ಕಾಳಜಿ ತೋರಿಸಲು “ವಿಶ್ವ ಪರಿಸರ ದಿನ” ಆಚರಿಸುತ್ತೇವೆ. ಪ್ರತಿ ವರ್ಷ ಜೂನ್ ೫ರಂದು ನಾವು ಹೇಳುವ, ಕೇಳುವ ಮಾತುಗಳನ್ನು ಪಾಲಿಸಿದರೂ ಸಾಕು ನಮ್ಮಿಂದ ಪ್ರಕೃತಿಗಾಗುವ ಹಾನಿಯ ಪ್ರಮಾಣ‌ ಕಡಿಮೆಯಾಗಬಹುದೇನು.

ನಮ್ಮನ್ನು ತಡೆಯುವವರೇ ಇಲ್ಲವೆಂಬ ಹುಂಬತನದಲ್ಲಿದ್ದ ನಮಗೀಗ ಅತಿ ದೊಡ್ಡ ಹೊಡೆತ ಬಿದ್ದಾಗಿದೆ. ಬರಿ ಕಣ್ಣಿಗೂ ಗೋಚರಿಸದಷ್ಟು ಚಿಕ್ಕ ವೈರಾಣುವೊಂದು ಇಡೀ ಮನುಷ್ಯ ಕುಲವನ್ನೇ ಅಲುಗಾಡಿಸಿಬಿಟ್ಟಿದೆ. ಈ ವೈರಾಣುವಿನ ನೆಪದಲ್ಲಿ ಮನುಷ್ಯ ತಿಂಗಳಾನುಗಟ್ಟಲೆ ಮನೆಯೊಳಗೆ ಬಂಧಿಯಾದ ಕಾರಣ ಸುತ್ತಲಿನ ಪರಿಸರದಲ್ಲಿ ಅನೇಕ ಬದಲಾವಣೆ ಆಗಿದೆ‌ ಕೂಡ. ಬಹುಶಃ ಈ ಬಾರಿಯ ಪರಿಸರ ದಿನಾಚರಣೆಗೆ ಇದೇ ದೊಡ್ಡ ಉಡುಗೊರೆ ಇರಬಹುದು! ಆದರೆ, ಈ ಪಾಠಗಳನ್ನು(?) ನಾವು ಎಷ್ಟು ದಿನಗಳ ಮಟ್ಟಿಗೆ ನೆನಪಿನಲ್ಲಿ ಉಳಿಸಿಕೊಳ್ಳುತ್ತೇವೆ? ಈಗಾಗಲೇ ಆಗಿರುವ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ? ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕು.

ಪರಿಸರದಲ್ಲಿ ಸಹಬಾಳ್ವೆ ಬಹುಮುಖ್ಯವಾಗುತ್ತದೆ. ಪರಿಸರ ಪ್ರೇಮವೆಂದರೆ ವರ್ಷಕ್ಕೊಂದು ಗಿಡ ನೆಡೆವುದಕ್ಕಷ್ಟೇ ಸೀಮೀತವಲ್ಲ. ತೋಟದಲ್ಲಿನ ಬೆಳೆ ಕಾಪಾಡಿಕೊಳ್ಳಲು ರಾಸಾಯನಿಕ ಸಿಂಪಡಿಸಿ ಯಾವ ತೊಂದರೆಯನ್ನೂ ನೀಡದ ಜೇನು ಹುಳುಗಳ ಜೀವಕ್ಕೆ ಪರೋಕ್ಷವಾಗಿ ಕುತ್ತು ತರುವುದರಿಂದ ಹಿಡಿದು, ಸಿಡಿಮದ್ದು ತುಂಬಿದ ಹಣ್ಣನ್ನು ಆನೆಗೆ ಕೊಟ್ಟು ಕೊಲ್ಲುವ ತನಕವೂ ನಾವು ಸಹಬಾಳ್ವೆಯ ನಿಯಮವನ್ನು ಮುರಿಯುತ್ತಲೇ ಇದ್ದೇವೆ. ಪ್ರಕೃತಿಯಲ್ಲಿ ಸಮತೋಲನ ಸ್ಥಿತಿ ಉಳಿಯಬೇಕೆಂದರೆ ಪ್ರತಿಯೊಂದು ಜೀವಿಯೂ ಮುಖ್ಯ ಎಂಬುದನ್ನು ಮರೆಯಬಾರದು.

ಈ ಬಾರಿಯ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ನಮ್ಮೆದುರು ಹಲವು ಸವಾಲುಗಳೂ ಇವೆ. ಲಾಕ್‌ಡೌನ್ ನೆಪದಲ್ಲೋ ಅಥವಾ ಕೊರೊನಾ ಭಯದಿಂದಲೋ ಮನುಷ್ಯನ ಆರ್ಭಟ ಕಡಿಮೆಯಾಗಿ ತುಸು ಸುಧಾರಿಸಿರುವ ವಾತಾವರಣವನ್ನು, ಇಳಿಕೆಯಾಗಿರುವ ವಾಯುಮಾಲಿನ್ಯ ಪ್ರಮಾಣವನ್ನು, ಶುದ್ಧಗೊಂಡಿರುವ ಜಲಮೂಲಗಳನ್ನು ಮತ್ತೆ ಹಾಳಾಗದಂತೆ ಕಾಪಾಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಇದೆ.

ಕೋವಿಡ್ ತಂದೊಡ್ಡಿದ ಆರ್ಥಿಕ ಸಂಕಷ್ಟವನ್ನು ನಿಭಾಯಿಸಲು ಆಡಳಿತ ವರ್ಗದವರು ಕಾರ್ಖಾನೆಗಳಿಗೆ, ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹೋಗಿ ಅರಣ್ಯ ಪ್ರದೇಶವನ್ನೋ, ನೈಸರ್ಗಿಕವಾಗಿ ಹಲವು ಜೀವಿಗಳಿಗೆ ಆಸರೆಯಾಗಿರುವ ಬಯಲು ಜಾಗಗಳನ್ನೋ “ನಿರುಪಯುಕ್ತ” ಎಂಬ ಹೆಸರಿನಲ್ಲಿ ಉದ್ಯಮಿಗಳಿಗೆ ನೀಡಿದರೆ ಇನ್ನಷ್ಟು ಅನಾಹುತ, ಅಸಮತೋಲನ ಉಂಟಾಗುವುದು ನಿಶ್ಚಿತ. ಇಂತಹ ಸೂಕ್ಷ್ಮತೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಅಂತೆಯೇ, ಪರಿಸರ ದಿನಾಚರಣೆಯ ಹೊತ್ತಿನಲ್ಲಿ ತೆಗೆದುಕೊಳ್ಳಬೇಕಾಗಿರುವ ಇನ್ನೊಂದು ಮಹತ್ವದ ನಿರ್ಧಾರವೆಂದರೆ ರಾಜ್ಯದ  ಬಹುತೇಕ ಭಾಗಗಳಲ್ಲಿ ಸಹಜ ಅರಣ್ಯ, ಗೋಮಾಳಗಳಿದ್ದ ಜಾಗವೀಗ ಅಕೇಶಿಯಾ, ನೀಲಗಿರಿ ತೋಪುಗಳಾಗಿ ದಶಕಗಳುರುಳಿವೆ. ಈಗ ಕೆಲವೆಡೆ ಅವುಗಳನ್ನು ಖಾಸಗೀಕರಣ ಮಾಡುವ ಗಾಳಿಸುದ್ದಿಯೂ‌ ಇದೆ.

ಆದರೆ, ಸರ್ಕಾರ ಪರಿಸರ ಕಾಳಜಿ ಹೊಂದಿರುವುದೇ ಆದಲ್ಲಿ ಅದಷ್ಟೂ ಭೂಮಿಯನ್ನು ತನ್ನ ವಶದಲ್ಲೇ ಉಳಿಸಿಕೊಂಡು ಅಕೇಶಿಯಾ, ನೀಲಗಿರಿಯಂತಹ ಮರಗಳನ್ನು ತೆಗೆದು ಆಯಾ ಪ್ರದೇಶಕ್ಕೆ ಸೂಕ್ತವಾದ ಕಾಡು ವೃಕ್ಷಗಳನ್ನು, ಹಣ್ಣಿನ ಮರಗಳನ್ನು ಬೆಳೆಸುವತ್ತ ಗಮನಹರಿಸಲೇ ಬೇಕು.

ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷ ನಿಲ್ಲಬೇಕೆಂದರೆ ಕೋಟ್ಯಂತರ ರುಪಾಯಿಗಳನ್ನು ಸುರಿದು ಬೇಲಿ ಕಟ್ಟುವುದೋ, ಕಾಲುವೆ ನಿರ್ಮಿಸುವುದೋ ಮಾಡಿದರೆ ಸಾಲದು. ವನ್ಯಜೀವಿಗಳಿಗೆ ಕಾಡಿನಲ್ಲೇ ನೀರು, ಆಹಾರ ದೊರಕುವಂತೆ ಮಾಡಬೇಕಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.

ನೆಪಕ್ಕೊಂದು ಗಿಡನೆಟ್ಟು ಪರಿಸರ ದಿನಾಚರಣೆ ಆಚರಿಸಿ ಕೈ ತೊಳೆದುಕೊಳ್ಳುವ ಬದಲು. ಅರ್ಥಪೂರ್ಣ ಹಾಗೂ ಅತ್ಯವಶ್ಯಕ ಕ್ರಮಗಳನ್ನು ಕೈಗೊಂಡು ಪರಿಸರ ಕಾಳಜಿ ವ್ಯಕ್ತಪಡಿಸುವುದು ಸೂಕ್ತ.

– ಸ್ಕಂದ ಆಗುಂಬೆ, ಎಸ್‌ಡಿಎಂ ಕಾಲೇಜು ಉಜಿರೆ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ

14-uv-fusion

Bamboo: ಬಿದಿರು ಎಂದು ಮೂಗು ಮುರಿಯದಿರಿ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.