Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ


Team Udayavani, Apr 20, 2024, 3:53 PM IST

14-fusion

ವಿಭಿನ್ನವಾದ ಶೀರ್ಷಿಕೆಯಿಂದ ಮೂಡಿಬಂದಿರುವ ಈ ಚಿತ್ರ ಆರಂಭದಿಂದ ಕೊನೆಯವರೆಗೂ ಸೀಟ್‌ನ ತುದಿ ಕೂರಿಸಿ ಹೊಟ್ಟೆ ಹುಣ್ಣು ಬರಿಸುವುದು ಸ್ಪಷ್ಟ.

ಯೋಗರಾಜ್‌ ಭಟ್‌ ಅವರ ನಿರ್ದೇಶನದ ಮೂಲಕ ಬರುವ ಸಿನೆಮಾ ಎಂದಿಗೂ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿಲ್ಲ, ಭಾವನೆಯಿಂದಾಗಲಿ, ಬಾಂಧವ್ಯ ದಿಂದಾಗಲಿ, ಭಾಷಾ ವೈಖರಿ ಯಿಂದಾಗಲಿ ಸಿನಿ ಪ್ರಿಯರನ್ನು ಬಂದಿ ಮಾಡುತ್ತದೆ. ಕಥೆಯ ಆರಂಭ ತುಂಬಾನೇ ಸರಳವಾಗಿ ಶುರುವಾದರೂ ಕಥೆಯನ್ನು ಎಲ್ಲಿಯೂ ನಿಧಾನಗತಿ ಯಾಗಿ ಎನಿಸಲಿಲ್ಲ. ಪ್ರತಿಯೊಂದು ಸನ್ನಿವೇಶವೂ ಅದರ ಹಿಂದಿನ ಪರಿಶ್ರಮ ಹಾಗೂ ಚಾಣಾಕತನ ತೋರಿಸುತಿತ್ತು. ಇಬ್ಬರು ಅನಾಥರು ಸಮಾಜದಲ್ಲಿ ಸರಿಯಾದ ಮಾರ್ಗದರ್ಶನ ಸಿಗದೇ ಸಾಗುವ ದಾರಿ, ಮಾಡುವ ಕೆಲಸ, ಎಲ್ಲವೂ ಸಿನೆಮಾದ ಹೀರೋ ಪಾತ್ರಗಳಿಗೆ ಇನ್ನಷ್ಟು ಮಸಾಲಾ ಸವರಿದೆ.

ಜೈಲಿನಿಂದ ಆಗುವ ಕತಾರಂಭ ಸಾಗುತ್ತಾ ಸಾಗುತ್ತಾ ಗ್ರಾಮೀಣ ತೀರ ತಲುಪುತ್ತದೆ. ಅಲ್ಲಿನ ಕಟ್ಟುಪಾಡು ಸ್ಥಿತಿ – ಗತಿ ಎಲ್ಲವನ್ನು ತಿಳಿಸಲಾಗಿದೆ. ಊರ ಜನರ ನಂಬಿಕೆ ರೀತಿ ರಿವಾಜು ಮಾತಿಗೆ ತಪ್ಪಾದ ಜನ ಮುಗ್ದತೆ ಹಾಗೂ ಖಳ ನಾಯಕನ ಪಾತ್ರ ಚಿತ್ರದಲ್ಲಿ ತುಂಬಾ ನೈಜವಾಗಿ ಕಂಡುಬಂದಿದೆ.

ಕಥೆಯಲ್ಲಿ ಹೇಳಬೇಕೆಂದರೆ ನಾಯಕ ನಟರು ಗ್ರಾಮಕ್ಕೆ ಹೋಗುವುದು ಆದರೂ ಯಾಕೆ? ಜೈಲರ್‌ಗೂ ನಂದಿಕೊಡು ಊರಿಗೂ ಸಂಬಂಧವೇನು? ಹಾಗೂ ಚಿತ್ರದಲ್ಲಿ 2 ವಿಭಾಗ ಕಂಡು ಬರುತ್ತದೆ,  ಹುಲು ಮಾನವ ಹುಲಿ ಮಾನವ  ಹುಲು ಮಾನವ ಎಂದರೆ ಗ್ರಾಮೀಣಸ್ತಾರು, ಹುಲಿ ಮಾನವ ಎಂದರೆ ಯಾರು? ಅವರಿಗೂ ಆ ಊರಿಗೂ ಸಂಬಂಧವೇನು?

ಅಲ್ಲಿ ಅವರು ಮಾಡುವ ಪ್ರಮಾಣಗಳು, ಅದನ್ನು ಉಳಿಸಿಕೊಳ್ಳಲು ಮಾಡುವ ಹರಸಾಹಸ ನರಗಳಲ್ಲಿ ವಿದ್ಯುತ್‌ ಸಂಚಲನಗೊಳಿಸುತ್ತದೆ. ಮುಂದೆ ಏನು ಮುಂದೆ ಏನು ಆಗಬಹುದು ಅನ್ನುವ ಪ್ರಶ್ನೆ ತಲೆಯಲ್ಲಿ ಮೂಡಿಸುತ್ತದೆ. ಇನ್ನು ಶಿವಣ್ಣನ ಜತೆಗೆ ಕಂಡು ಬಂದ ಕಥೆಯ ಇನೋರ್ವ ನಾಯಕ ಎಂದರೆ ಪ್ರಭುದೇವ್‌. ಸ್ಪಷ್ಟನೆಯ ಕನ್ನಡ ಬಾರದೇ ಹೋದರು ಅವರ ಕಷ್ಟಪಟ್ಟು ಮಾತಾಡಿದ ಶೈಲಿಯೇ ಬಲು ಸೊಗಸು.

ಉತ್ತರ ಕನ್ನಡ ಶೈಲಿಯಿಂದ ಸಾಗುವ ಕಥೆ  ನಡು ನಡುವಿನಲ್ಲಿ ಅವಾಚ್ಯನ ಶಬ್ದಗಳು ಎಷ್ಟೇ ಬಾರಿ ಬಂದರು ರಾಡಿ ಎನಿಸುವಂತೆ ತೋರಿಸಲ್ಪಟ್ಟಿಲ್ಲ. ನಾನು ಒಬ್ಬ ಕಳ್ಳ  ಎಂಬ ವಿಚಾರದಿಂದ  ಹಿಡಿದು ನಾನು ಒಬ್ಬ ಮನುಷ್ಯ  ಎನ್ನುವ ತನಕ ಕಥೆ ಸಾಗಿದ ರೀತಿ ಬೇಜಾರು ಆದಾಗ ಸಂಭಾಷಣೆಯಲ್ಲಿ ಕೊಡುವ ಎನರ್ಜಿ ಬೂಸ್ಟ್‌ ಪದಗಳು ಮತ್ತೆ ಗಮನ ಸೆಳೆಯುತ್ತದೆ. ಕರಟಕ ದಮನಕ ಚಿತ್ರವು ಕುಟುಂಬ ಸಹಿತ ನೋಡಬಲ್ಲ ಚಿತ್ರ ಎಂದು ಬಹಳ ಗಟ್ಟಿಯಾಗಿ ಹೇಳ ಬಲ್ಲೆ. ಹೀರೋಗಳು ಇಬ್ಬರನ್ನು ನರಿಗಳಂತೆ ತೋರಿಸುವಲ್ಲಿ ಯೋಗರಾಜ್‌ ಭಟ್ರು ಗೆದ್ದಿದ್ದಾರೆ.

-ರಕ್ಷಿತ್‌ ಆರ್‌. ಪಿ.

ಉಡುಪಿ

ಟಾಪ್ ನ್ಯೂಸ್

1-frr

Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್‌ ತಾತ್ಕಾಲಿಕ ಸ್ಥಗಿತ

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

1-new

Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

1-viman

Narrow Escape; ಯುಎಸ್ ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ವಿಮಾನಗಳ ದುರಂತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್‌

Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್‌

1-frr

Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್‌ ತಾತ್ಕಾಲಿಕ ಸ್ಥಗಿತ

Arrested: ಟ್ಯಾಟೂ ಆರ್ಟಿಸ್ಟ್‌ ಬಂಧನ: 2.50 ಕೋಟಿ ರೂ. ಡ್ರಗ್ಸ್‌ ಜಪ್ತಿ

Arrested: ಟ್ಯಾಟೂ ಆರ್ಟಿಸ್ಟ್‌ ಬಂಧನ: 2.50 ಕೋಟಿ ರೂ. ಡ್ರಗ್ಸ್‌ ಜಪ್ತಿ

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.