Yugadi: ಯುಗಾದಿ


Team Udayavani, Apr 25, 2024, 11:31 AM IST

6-fusion

ಸಿಹಿ ಕಹಿಗಳೆರಡೂ ಜೀವನದಲ್ಲಿ ಸಮಾನವಾಗಿರಬೇಕು. ಯುಗಾದಿ ಅಥವಾ ಯುಗಾದಿ ಚೈತ್ರ ಮಾಸದ ಮೊದಲನೆಯ ದಿನವಾಗಿದೆ ಇದು ನಮ್ಮ ಭಾರತದ ಅನೇಕ ಕಡೆಗಳಲ್ಲಿ ಈ ದಿನವನ್ನು ಹೊಸ ವರ್ಷದ ಮೊದಲನೆಯ ದಿನವೆಂದು ಹೇಳುತ್ತಾರೆ.

ಈ ಒಂದು ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುತ್ತಾರೆ. ಹುಣಸೆ ಹಣ್ಣು ಬೆಲ್ಲ ಮಾವಿನಕಾಯಿ ಉಪ್ಪು ಮೆಣಸು ಬೇವು ಇತ್ಯಾದಿಗಳನ್ನ ಬಳಸಿಕೊಂಡು ಕೆಲವೊಂದು ತಿಂಡಿ ತಿನಿಸುಗಳನ್ನ ಮಾಡುತ್ತಾರೆ.

ಬೆಳಗ್ಗೆ ಎದ್ದು ತಳಿರು ತೋರಣವನ್ನು ಮನೆಯ ಬಾಗಿಲಿಗೆ ದೇವರ ಮನೆಯ ಬಾಗಿಲಿಗೆ ಕಟ್ಟುತ್ತಾರೆ. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕುತ್ತಾರೆ. ನಂತರ ಎಣ್ಣೆ ಸೀಗೆಕಾಯಿಂದ ತಲೆಯನ್ನು ತೊಳೆದುಕೊಂಡು ಕೆಲವೊಂದು ಪುಣ್ಯಹ ಮಂತ್ರವನ್ನು ಹೇಳಿಕೊಳ್ಳುತ್ತಾ ಮಾವಿನ ಎಲೆಯಿಂದ ಮನೆಯ ಎಲ್ಲಾ ಕಡೆ ಕಳಸದ ನೀರನ್ನ ಹಾಕುತ್ತಾರೆ ನಂತರ ಸ್ನಾನ ಮಾಡಿ ಹೊಸ ಬಟ್ಟೆಯನ್ನ ಧರಿಸಿಕೊಂಡು ಪಂಚಾಂಗವನ್ನು ಮನೆಯ ಹಿರಿಯರು ಎಲ್ಲರೂ ಓದುತ್ತಾರೆ.

ಹಬ್ಬದ ದಿನ ವಿಶೇಷ ತಿಂಡಿಗಳನ್ನು ಮಾಡುವುದರ ಜೊತೆಗೆ ಒಬ್ಬಟ್ಟು ಹೋಳಿಗೆ ಅದರಲ್ಲಿಯೂ ಕಡಲೆ ಅಥವಾ ತೊಗರಿ ಬೆಳೆಯ ಹೂರಣದಲ್ಲಿ ಮಾಡುತ್ತಾರೆ. ವಿಶೇಷವಾಗಿ ಯುಗಾದಿಯ ದಿನದ ಸಂಕೇತವಾಗಿ ಬೇವುಬೆಲ್ಲವನ್ನು ಸ್ವೀಕರಿಸುತ್ತಾರೆ. ಬೇವು ಕಷ್ಟದ ಸಂಕೇತವನ್ನು ಮತ್ತು ಬೆಲ್ಲವನ್ನು ಸಿಹಿಯ ವಿಚಾರವನ್ನು ಎರಡನ್ನು ಒಟ್ಟಿಗೆ ಬೆರಸಿ ಸಮಾನವಾಗಿ ಸ್ವೀಕರಿಸಬೇಕೆನ್ನುವದು ಇದರ ಉದ್ದೇಶವಾಗಿದೆ.

ಪ್ರಮುಖವಾಗಿ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕ್ಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ ಎನ್ನುವ ರೀತಿಯಲ್ಲಿ ಹಾಡಿನ ಮೂಲಕ ಮನೆಯ ಕೆಲವೊಂದು ಕೃಷಿಗೆ ಸಂಬಂಧಪಟ್ಟ ವಸ್ತುಗಳಿಗೆ ಪೂಜೆಯನ್ನು ಮಾಡುತ್ತಾರೆ. ಯುಗಾದಿ ಎಂದರೆ ಯುಗ +ಆದಿ ಅಂದ್ರೆ ಹೊಸ ಯುಗದ ಆರಂಭ ಅಂತ.

ಮುಖ್ಯವಾಗಿ ಬೇವು ಬೆಲ್ಲನೆ ಯಾಕೆ ಕೊಡ್ತಾರೆ ಗೊತ್ತಾ ಜೀವನದ ಸಿಹಿಕಹಿ ಗಳೆರಡನ್ನು ಪಡೆಯಬೇಕೆಂದು ಮತ್ತು ಅವುಗಳನ್ನು ನೆನಪಿಸಿಕೊಳ್ಳಲು ಬೇವು ಬೆಲ್ಲನ ಬೆಲ್ಲಗಳನ್‌ ಬೇವು ಬೆಲ್ಲಗಳ ಮಿಶ್ರಣವನ್ನು ಮಾಡಲಾಗುತ್ತದೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು, ಕಷ್ಟಾನು ಸುಖಾನು ಇರೋವಷ್ಟು ದಿನ ಎಲ್ಲವನ್ನು ಸಮಾನವಾಗಿ ಹಂಚಿಕೊಂಡು ಬಾಳ್ಳೋಣ.

  -ಪ್ರಿಯಾ

 ಎಂ.ಜಿ.ಎಂ. ಕಾಲೇಜು ಉಡುಪಿ

ಟಾಪ್ ನ್ಯೂಸ್

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.