ಇ-ಕಾಮರ್ಸ್‌ ಉದ್ಯಮದಿಂದ ಬದುಕು ಕಟ್ಟಿಕೊಂಡ ಜುಬೈರ್‌ ರೆಹಮಾನ್‌


Team Udayavani, Aug 18, 2020, 4:58 PM IST

Jubair

ತಮಾಷೆಗೆ ಹೀಗೊಂದು ಮಾತಿದೆ, ಭಾರತದಲ್ಲಿ ಆರು ವಿದ್ಯಾವಂತರು ಢಿಕ್ಕಿ ಹೊಡೆದರೆ ಅದರಲ್ಲಿ ಕನಿಷ್ಠ 4 ಜನವಾದರೂ ಎಂಜಿನಿಯರ್‌ಗಳು ಇರುತ್ತಾರೆ ಎಂದು. 

ಅಷ್ಟು ಗರಿಷ್ಠ ಪ್ರಮಾಣದಲ್ಲಿ ಭಾರತ ಎಂಜಿನಿಯರ್‌ಗಳನ್ನು ಸೃಷ್ಟಿಸುತ್ತದೆ.

ಈ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳಗೊಂಡಿರುವುದರಿಂದ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣ ಕ್ಷೀಣಿಸುತ್ತಿದೆ ಎಂಬ ವಾದವೂ ಕೇಳಿ ಬರುತ್ತಿದೆ.

ಇದನ್ನರಿತ ಭಾರತದ ಎಂಜಿನಿಯರ್‌ಗಳು ಬಹುಮುಖವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕೇವಲ ವ್ಯಾಸಂಗ ಮಾಡಿದ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಎಂಬ ಅಲಿಖಿತ ಕಟ್ಟಳೆಯನ್ನು ಮುರಿದು ಇಂದು ಬಹುತೇಕರು ವಿಭಿನ್ನ, ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ.

ಇದಕ್ಕೆ ಸ್ಪಷ್ಟ ಮತ್ತು ಮಾದರಿ ಉದಾಹರಣೆ ಎಂದರೆ ತಮಿಳುನಾಡಿನ ತಿರುಪುರ ಯುವಕ ಜುಬೈರ್‌ ರೆಹಮಾನ್‌.

ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಈತ ಸ್ವಾವಲಂಬಿ ಜೀವನಕ್ಕೆ ಸ್ವಂತ ಇ-ಕಾಮರ್ಸ್‌ ಉದ್ಯಮ ತೆರೆದು ಇಂದು ಕೋಟ್ಯಧಿಪಧಿಯಾಗಿದ್ದಾನೆ. ಈತ ತನ್ನ ಈ ಉದ್ಯಮದ ಆರಂಭಕ್ಕೆ ಹೂಡಿದ ಬಂಡವಾಳ ಕೇವಲ 10 ಸಾವಿರ ರೂ. ಮಾತ್ರ.
10 ಸಾವಿರ ಬಂಡವಾಳದಲ್ಲಿ ಕಂಪೆನಿ ಆರಂಭಿಸಿದ ಈತ ಇಂದು ಕೋಟ್ಯಂತರ ರೂ. ವ್ಯವಹಾರ ಮಾಡುವ ಕಂಪೆನಿಯನ್ನು ಕಟ್ಟಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾನೆ. ಎಲ್ಲಿ ಸತತ ಪ್ರಯತ್ನ ಮತ್ತು ಪರಿಶ್ರಮ ಇರುತ್ತೋ ಅಲ್ಲಿ ಯಶಸ್ಸು ಇರುತ್ತೆ ಎಂಬುದಕ್ಕೆ ಈತ ಮಾದರಿಯಾಗಿದ್ದಾನೆ.

ಸಿಸಿಟಿವಿ ಆಪರೇಟರ್‌ ಆಗಿದ್ದ ಜುಬೈರ್‌
ತಿರುಪುರ ಯುವಕ ಜುಬೈರ್‌ ರೆಹಮಾನ್‌ ತನ್ನ ಎಂಜಿನಿಯರಿಂಗ್‌ ಪದವಿ ಮುಗಿದ ಬಳಿಕ ಈತ ಖಾಸಗಿ ಕಂಪೆನಿಯೊಂದರಲ್ಲಿ ಸಿಸಿಟಿವಿ ಆಪರೇಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ. ಅದೊಂದು ಸಾರಿ ತಮಿಳುನಾಡಿನ ದೊಡ್ಡ ಕಂಪೆನಿಯೊಂದಕ್ಕೆ ಸಿಸಿಟಿವಿ ಅಳವಡಿಸಲು ಹೋಗಿದ್ದ ಈತ ಅಲ್ಲಿನ ಕಾರ್ಯನಿರ್ವಾಹಕರೊಬ್ಬರು ತನ್ನ ಕಂಪೆನಿಯ ಸರಕು ಸಾಗಾಟ, ಮಾರಾಟದ ಬಗ್ಗೆ ಒಂದಿಷ್ಟು ಅನುಭವವನ್ನು ಹಂಚಿಕೊಳ್ಳುತ್ತಾನೆ. ಈ ಅನುಭವದ ಮಾತು ಜುಬೈರ್‌ ಅವರನ್ನು ಕಣ್ಣು ತೆರೆಸುತ್ತದೆ. ಇದರಿಂದ ಸ್ಫೂರ್ತಿಗೊಂಡು ಇ-ಕಾಮರ್ಸ್‌ ಕಂಪೆನಿ ಆರಂಭಿಸಲು ಮುಂದಾಗುತ್ತಾನೆ.


ವ್ಯಾಪಾರ ಮಾರ್ಗ ಅರಿತ ಜುಬೈರ್‌
ತಾನು ವಾಸಿಸುವ ತಿರುಪುರದಲ್ಲಿ ಯಾವ ಉತ್ಪನ್ನದ ಉದ್ಯಮ ಆರಂಭಿಸಿದರೆ ಒಳಿತು ಎಂಬ ಯೋಚನೆಯನ್ನು ಸತತ ಎರಡು ತಿಂಗಳು ಮಾಡಿದ ಜುಬೈರ್‌ ಕೊನೆಗೆ ಜವುಳಿ ಉದ್ಯಮದ ಮೇಲೆ ಇ-ಕಾಮರ್ಸ್‌ ಆರಂಭಿಸಿದರೆ ಯಶಸ್ವಿಯಾಗುವುದು ಖಚಿತ ಎಂದು ಅರಿತನು. ಇದಕ್ಕೆ ಪೂರಕ ವಾತಾವರಣದ ಬಗ್ಗೆ ಅಧ್ಯಯನ ಮಾಡಿ ತಿರುಪುರ ಭಾರತದ ಮಟ್ಟಿಗೆ ಉತ್ತಮ ಜವುಳಿ ಉದ್ಯಮ ಹೊಂದಿರುವ ಪ್ರದೇಶವಾಗಿದೆ. ಜವುಳಿ ರಾಜಧಾನಿ ಎಂದೇ ಪ್ರಸಿದ್ಧವಾಗಿದೆ. ಇದಕ್ಕಾಗಿ ಆತ ನಗರದ ಪ್ರಮುಖ ಜವುಳಿ ಉದ್ಯಮಿಗಳೊಂದಿಗೆ ಚರ್ಚಿಸಿದನು. ಕೊನೆಗೆ ಈ ಉದ್ಯಮವನ್ನೇ ಇ-ಕಾಮರ್ಸ್‌ ರೂಪದಲ್ಲಿ ಆರಂಭಿಸಲು ಮುಂದಾದನು. ಆಗ ರೂಪುಗೊಂಡಿದ್ದೇ ದಿ ಪ್ಯಾಶನ್‌.

ಆರಂಭದಲ್ಲಿ ಕೈ ಹಿಡಿದ ಉದ್ಯಮ
ತನ್ನ ಮೊದಲಿನ ಕೆಲಸವನ್ನು ಬಿಟ್ಟ ಜುಬೈರ್‌ ಅವರು 10 ಸಾವಿರ ರೂ. ಬಂಡವಾಳದಲ್ಲಿ 2015ರಲ್ಲಿ ದಿ ಪ್ಯಾಶನ್‌ ಎಂಬ ಇ-ಕಾಮರ್ಸ್‌ ಉದ್ಯಮವನ್ನು ಆರಂಭಿಸಿದನು. ಕಂಪೆನಿ ಆರಂಭದ ಮೊದಲಿಗೆ ಈತ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮೂಲಕ ದಿನಕ್ಕೆ ಒಂದು, ಎರಡು ಸರಕುಗಳನ್ನು ತರಿಸಿಕೊಳ್ಳುತ್ತಿದ್ದರು. ಬಳಿಕ ಇದು ಹೆಚ್ಚಾಯಿತು. ಮುಂದೆ ಇವರೇ ತಮ್ಮ ಘಟಕವನ್ನು ಆರಂಭಿಸಿದರು. ಮಕ್ಕಳು, ಯುವಕರು, ಹೆಂಗಸರು ಮತ್ತು ಗಂಡಸರ ಅಭಿರುಚಿಗೆ ತಕ್ಕಂತೆ ಬೇಕಾದ ಬಟ್ಟೆಗಳನ್ನು ತಯಾರಿಸಲು ಆರಂಭಿಸಿದರು. ಹೆಚ್ಚಿನ ಗ್ರಾಹಕರನ್ನು ಸೆಳೆದಂತೆ ಉದ್ಯವವು ಗಟ್ಟಿಗೊಂಡಿತು.

ಯಶಸ್ವಿಯತ್ತ ಉದ್ಯಮ
ಆರಂಭದಲ್ಲಿ ಕಡಿಮೆ ಬೇಡಿಕೆಯಿದ್ದ ಕಂಪೆನಿಗೆ ಸದ್ಯ ಸುಮಾರು ದಿನಕ್ಕೆ 250-300 ಆರ್ಡರ್‌ಗಳು ಬರುತ್ತವೆ. ಇದರಿಂದ ಉದ್ಯಮವೂ ಕೂಡ ಗಟ್ಟಿಯಾಗಿದೆ. ಏನಿಲ್ಲವೆಂದರೂ ತಿಂಗಳಿಗೆ ಸುಮಾರು 50 ಲಕ್ಷ ರೂ. ಆದಾಯವನ್ನು ಗಳಿಸಲು ಶಕ್ತವಾಗಿದೆ.

ಈ ಉದ್ಯಮ ಯಶಸ್ವಿಯಾಗಲು ಜುಬೈರ್‌ ರೆಹಮಾನ್‌ ಅವರ ಅಪ್ರತಿಮ ಪರಿಶ್ರಮ, ವ್ಯಾಪಾರ ಕೌಶಲತೆಯೇ ಕಾರಣ. ಹೀಗಾಗಿ ನಮಗೆ ಇವರು ಸ್ಫೂರ್ತಿಯಾಗುತ್ತಾರೆ.

ಶಿವಮಲ್ಲಯ್ಯ ಸಿಂಧನೂರು

 

 

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.