ಟಾಮ್ ಬಾಯ್ ಲವ್ ಸ್ಟೋರಿ: ಹುಡುಗನ ಹುಚ್ಚು ಪ್ರೀತಿಗೆ ಮಾರುಹೋದ ಕಥೆ


Team Udayavani, Feb 13, 2020, 6:01 PM IST

tomn

ಪ್ರೀತಿ ಎಂಬ ಹೆಸರು ಕೇಳಿದ್ರೆ ಇವಳು ಸ್ವಲ್ಪ ದೂರ ಇರ್ತಾಳೆ, ಯಾಕೆಂದರೆ ಪ್ರೀತಿಯ ಹೆಸರಲ್ಲಿ ಮೋಸ ಅನ್ನುವುದಕ್ಕಿಂತ ಅವಮಾನವನ್ನು ಅನುಭವಿಸಿದವಳು ಇವಳು. ಕಾಲೇಜಿನಲ್ಲಿ ಎಲ್ಲರ ಬಾಯಿಯಲ್ಲಿ ‘ಏ ಟಾಮ್ ಬಾಯ್’ ಅಂತ ಕರೆಯಿಸಿಕೊಂಡ ಇವಳು,  ಒಬ್ಬ ಹುಡುಗನ ಹುಚ್ಚು ಪ್ರೀತಿಗೆ ಮಾರುಹೋದ ಕಥೆ ಇದು.

ಅವಳಿಗೆ ತರಗತಿಯಲ್ಲಿ ಒಂದು ಗಂಟೆ ಕುಳಿತು ಪಾಠ ಕೇಳುವುದೆಂದರೆ ಆಗುವುದಿಲ್ಲ, ಹಾಗಾಗಿ ತರಗತಿಗಳಿಗೆ ಹೋದದ್ದು ಬಹಳ ಕಡಿಮೆ, ಪ್ರಾಧ್ಯಾಪಕರು ಇವಳ ಓದಿನ ವಿಷಯದ ಬಗ್ಗೆ ಏನು ಮಾತನಾಡಿದವರಲ್ಲ. ಯಾಕೆಂದರೆ ಪರೀಕ್ಷೆ ಅಂತ ಬಂದ್ರೆ ಕ್ಲಾಸಿಗೆ ಟಾಪರ್. ಅವಳೊಂದಿಗೆ ಯಾವತ್ತಿಗೂ ಜೊತೆಗಿರುವ ಬುಲೆಟ್ ಬೈಕ್, ಅವಳ ಆ ಬೈಕಿನ ಸದ್ದಿನಿಂದ ಎಲ್ಲರಿಗೂ ತಿಳಿಯುತ್ತಿತ್ತು ವರ್ಷಾ ಕಾಲೇಜಿಗೆ ಬಂದಳು ಅಂತ, ವರ್ಷಾಳಿಗೆ ಕಾದಂಬರಿಯ ಕಡೆ ಹೆಚ್ಚು ಒಲವು, ಸಂಜೆ ಗಟ್ಟೆಗಟ್ಟಲೆ ಗ್ರಂಥಾಲಯದಲ್ಲಿ ಕೂತು ಕಾದಂಬರಿಗಳನ್ನು ಓದುತ್ತಿದ್ದಳು. ನಂತರ ಜಿಮ್, ಬಾಸ್ಕೆಟ್ ಬಾಲ್, ವಾಲಿಬಾಲ್ ಹೀಗೆ ಕ್ರೀಡೆಯಲ್ಲಿ ತನನ್ನು ತಾನು ತೊಡಗಿಸಿಕೊಂಡು ತುಂಬಾ ಬ್ಯುಸಿ ಆಗಿದ್ದ ಇವಳು, ಡಿಗ್ರಿ ಕೊನೆಯ ವರ್ಷದ ಮೊದಲ ದಿನ ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ತಮ್ಮ ವಿಭಾಗದ ಬಗ್ಗೆ ಹೇಳಲು ಅವರ ತರಗತಿಗೆ ಹೋಗ್ತಾಳೆ. ಅಲ್ಲಿ ಇದ್ದ ಜೂನಿಯರ್ಸ್ ಅವಳಿಗೆ ಆಪ್ತರಾಗುತ್ತಾರೆ ,ಅಕ್ಕಾ ನೀವು ಕ್ಯೂಟ್ ಆಗಿದ್ದೀರಿ ,ನಿಮ್ ಡ್ರೆಸಿಂಗ್ ಸೂಪರ್  ಹಾಗೆ ಹೀಗೆ ಅಂತ ಮಾತನಾಡಿಸುತ್ತಾರೆ .

ಹೀಗೆ ಎಲ್ಲರೂ ದಿನೇ ದಿನೇ ತುಂಬಾ ಹತ್ತಿರವಾಗುತ್ತಾರೆ, ಅವರ ಗೆಳೆಯರಲ್ಲಿ ಒಬ್ಬ ಪ್ರತಿ ದಿನಾ ವರ್ಷಾಳನ್ನು ಮಾತನಾಡಿಸಲು ಅವರ ತರಗತಿ ಹತ್ರ ಬರುತ್ತಾ ಇರ್ತಾನೆ, ಆದ್ರೆ ಅವಳು ತರಗತಿಯಲ್ಲಿ ಕಾಣಲು ಸಿಗುವುದು ಅಪರೂಪ ಅಂತ ತಿಳಿದ ಮೇಲೆ ಅವಳಿದ್ದಲ್ಲಿ ಹುಡುಕಿಕೊಂಡು ಹೋಗಿ ಮಾತನಾಡಿಸುತ್ತಾನೆ. ಮುಂಜಾನೆ ಇವಳಿಗಾಗಿ ಹುಡುಕಾಟ, ಸಂಜೆ ಗ್ರಂಥಾಲಯದಲ್ಲಿ ಸುಮ್ಮನೆ ಪುಸ್ತಕದ ನೆಪ ಒಡ್ಡಿ ಅವಳೊಂದಿಗೆ ಕೂತು ಮಾತನಾಡುತ್ತಿದ್ದ. ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ಅವಳಿಗೆ ಕರೆ ಮಾಡಿ ಗಂಟೆ ಗಟ್ಟಲೆ ಮಾತನಾಡುತ್ತಿದ್ದ. ಹೀಗೆ ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗುತ್ತಾರೆ, ಆದ್ರೆ ವರ್ಷ ಎಲ್ಲರ ಜೊತೆ ಮಾತನಾಡುವ ಹಾಗೆ ಇವನ ಜೊತೆಯೂ ಮಾತನಾಡುತ್ತಿರುತ್ತಾಳೆ, ದಿನ ಕಳೆದಂತೆ ಇವನು ಪ್ರೀತಿಯ ಕಡೆ ವಾಲುತ್ತಾನೆ.

ಒಂದು ದಿನ ಇವಳಿಗೆ ಈತನ ಪ್ರೀತಿಯ ಬಗ್ಗೆ ತಿಳಿಯುತ್ತದೆ, ಅವನು ತುಂಬಾ ಹತ್ತಿರವಾಗಲು ಪ್ರಯತ್ನಿಸುತ್ತಿರುತ್ತಾನೆ, ವರ್ಷ ಅದೆಷ್ಟೇ ಅವನಿಂದ ದೂರವಿರಲು ಪ್ರಯತ್ನಿಸಿದ್ರೂ  ಅದೇನೋ ಅಕಸ್ಮಾತ್ ಆಗಿ ಇಬ್ಬರಲ್ಲೂ ಪ್ರೀತಿ ಶುರುವಾಗುತ್ತದೆ. ಅದಕ್ಕೆ ಕಾರಣ ಅವನ ಹುಚ್ಚು ಪ್ರೀತಿ. ಅವಳು ಧರಿಸಿದ ಬಟ್ಟೆಯ ಬಣ್ಣವನ್ನೇ ಕಾರ್ತಿಕ್ ಕೂಡ ಧರಿಸುತ್ತಿದ್ದ, ಮುಂಜಾನೆ ಅವಳಿಗೆ ಕರೆ ಮಾಡಿ ಬಟ್ಟೆಯ ಬಣ್ಣ ತಿಳಿದುಕೊಂಡು ಇವನು ಮನೆಪೂರ್ತಿ ಚೆಲ್ಲಾಡಿ ಅದೇ ಬಣ್ಣದ ಬಟ್ಟೆ ಹುಡುಕಿ ಹಾಕಿಕೊಂಡು ಬರುತ್ತಿದ್ದ.

ಅವನ ಮೊಬೈಲ್ ಪೂರ್ತಿ ಇವಳದೇ ಫೋಟೋ. ಅವಳ ಕಾದಂಬರಿ ಓದಿನ ಹುಚ್ಚು ಇವನಿಗೂ ತಗಲಿತು. ಜೊತೆಗೆ ಕೂತು ಊಟ, ತಿಂಡಿ ಮಾಡುತ್ತಿದ್ದರು. ಕಾರ್ತಿಕ್ ಗೆ ವರ್ಷಾಳನ್ನು ಸೀರೆಯಲ್ಲಿ ನೋಡಬೇಕೆಂಬ ಆಸೆ, ಆದರೆ ಅವಳಿಗೆ ಸೀರೆ ಎಂದರೆ ಅಲರ್ಜಿ. ಈ ಜೂನಿಯರ್ ಸೀನಿಯರ್ ಪ್ರೀತಿ ಇಡೀ ಕಾಲೇಜಿನಲ್ಲಿ ಸುದ್ದಿ ಆಯ್ತು.  ಟಾಮ್ ಬಾಯ್ ಹೇಗೆ ಇದ್ದವಳು ಹೀಗಾದಳಲ್ಲಾ! ಎಂಬಾ ಮಾತುಗಳು ಕೇಳಲಾರಂಭಿಸದವು. ಇವರಿಬ್ಬರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇಬ್ಬರು ಜೋಡಿಹಕ್ಕಿಗಳಂತೆ ಕಾಲೇಜಿನಲ್ಲಿ ಎಲ್ಲರ ಕಣ್ಣುಕುಕ್ಕುವಂತೆ ಜೊತೆ ಜೊತೆಯಾಗಿರುತ್ತಾರೆ. ಆದ್ರೆ ಎಲ್ಲರಿಗೆ ಮಾದರಿಯಾಗಿದ್ದ ಇವರ ಪ್ರೀತಿ ಹೆಚ್ಚು ಸಮಯ ಇರಲಿಲ್ಲ.

ಹೀಗೆ ಒಂದು ದಿನ ಇಬ್ಬರು ಜೊತೆಗೆ ಕಾಲೇಜಿನ ಮರದ ಅಡಿ ಕೂತು ಮಾತನಾಡುತ್ತಿರುತ್ತಾರೆ. ವರ್ಷಾ ನೀನಿರುವ  ಜೀವನಶೈಲಿಯನ್ನು ಬದಲಿಸಿಕೋ ಎಂದು ಸಲಹೆ ನೀಡುತ್ತಾನೆ ,ಎಲ್ಲರೂ ನಿನ್ನನ್ನು ಕಾಲೇಜಿನಲ್ಲಿ ಪ್ರತ್ಯೇಕವಾಗಿ ನೋಡುತ್ತಾರೆ. ಹೀಗೆ ಎಲ್ಲರಿಗಿಂತ ಭಿನ್ನವಾಗಿರಬೇಡ, ನನಗೂ ನಿನ್ನ ಜೊತೆ ಇರಲು ಕಷ್ಟವಾಗುತ್ತದೆ, ಸುಮ್ಮನೆ ಎಲ್ಲರೂ ನಿನ್ನ ವಿಷಯದ ಕುರಿತು ನನ್ನನ್ನು ಆಡಿಕೊಳ್ಳುತ್ತಿದ್ದಾರೆ. ನೀನು ಹೀಗಿದ್ರೆ ನನಗೂ ಕಷ್ಟ ಅಂತ ಹೇಳ್ತಾನೆ. ಅವನು ಹಾಗೆ ಅಂದದ್ದೇ ತಡ ,ಅವಳ ಕಣ್ಣಾಲಿಗಳು ತುಂಬಿದವು. ತಕ್ಷಣ ಎದ್ದು ಬಾಯ್ ಅಂತ ಹೇಳಿ ಅಲ್ಲಿಂದ ಹೊರಟು ತನ್ನ ಬೈಕ್ ನಲ್ಲಿ ಆಗುಂಬೆಯತ್ತ ಹೋಗುತ್ತಾಳೆ.

ಆ ಸಂಜೆ ಅವಳು ಬೇಸರದಿಂದ ಕುಗ್ಗಿದ್ದಳು ,ಆದ್ರೆ ಮಾರನೇಯ ದಿನ ಅವನನ್ನು ಹುಡುಕಿಕೊಂಡು ತರಗತಿ ಹತ್ತಿರ ಬಂದು ಒಂದಿಷ್ಟು ಮಾತು ಹೇಳಿ ಅಲ್ಲಿಂದ ಹೊರಟವಳು, ಮತ್ತೆ ಅವನತ್ತ ಮುಖ ಮಾಡಿ ನೋಡಲಿಲ್ಲ. “ಬೇರೆಯವರಿಗೋಸ್ಕರ ಬದುಕಿದವಳು ನಾನಲ್ಲ, ನನ್ನ ತನವನ್ನು ಯಾವತ್ತೂ ಯಾರಿಗೂ ಬಿಟ್ಟುಕೊಡಲಿಲ್ಲ. ಪ್ರತಿ ದಿನ ನಾನು ನನಗಾಗಿ ಬದುಕುತ್ತೇನೆ, ನನ್ನ ಜೀವನದ ಶೈಲಿಯನ್ನು ನಿನಗೋಸ್ಕರ ಬದಲಾಯಿಸುವಷ್ಟು ಮೂರ್ಖಳು ನಾನಲ್ಲ” ಗುಡ್ ಬಾಯ್ ಎನ್ನುತ್ತಾಳೆ.

ಅದೇ ಕೊನೆ ಮತ್ತೆ ಯಾವತ್ತೂ ಪ್ರೀತಿಯ ವಿಷಯದಲ್ಲಿ ಯಾರು ಏನೇ ಅಂದರು ತಲೆಕೆಡಿಸಿಕೊಳ್ಳಲಿಲ್ಲ. ಪ್ರೀತಿಯಿಂದ ದೂರ ಉಳಿದು, ತನಗಿಷ್ಟವಾದ ಕ್ರೀಡೆಯತ್ತ ಹೆಚ್ಚು ಗಮನ ಕೊಟ್ಟಳು.

-ಚೈತ್ರ ಉಜಿರೆ

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lovee

ಜೀವವೇ ಕೊಡುಗೆ

love

ಪ್ರೇಮಕವಿ

br-tdy-1

ಪ್ರೇಮಿಗಳ ದಿನ: ಗುಲಾಬಿಗೆ ಡಿಮ್ಯಾಂಡ್‌

Ratan-Tata-01-730

ಪ್ರೇಮ ವೈಫ‌ಲ್ಯದ ಕತೆ ಬಿಚ್ಚಿಟ್ಟ ರತನ್‌ ಟಾಟಾ

2-crsuh

ಟಾಲ್ ಬಾಯ್, ಶಾರ್ಟ್ ಗರ್ಲ್ ಪರ್ಫೆಕ್ಟ್ ಪೇರ್.. ಕಾಲೇಜು ಕ್ರಶ್ ಎಂಬ ಮಧುರ ಭಾವನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.