ಪ್ರೀತಿ ಮಾಗಿದ ಹಣ್ಣಾಗಬೇಕು…ಪ್ರೀತಿ ನಾವೇ ಕಟ್ಟಿದ ಜೀವನದ ಜೋಪಡಿ
ಪ್ರೀತಿಯ ಫಲಕ್ಕೆ ಸ್ನೇಹವೇ ಮರವಾಗಿದೆ ಎಂದು ಹೇಳಲು ಯಾವುದೇ ಸಂಕೋಚವು ನಮಗಿಲ್ಲ
Team Udayavani, Feb 13, 2020, 5:36 PM IST
ಪ್ರೀತಿಯಲ್ಲಿ ಪ್ರಪೋಸ್ ಮಾಡಲೇ ಬೇಕೆಂಬ ನಿಯಮವಿದಿದ್ದರೆ ನಮ್ಮದು ಪ್ರೀತಿಯೇ ಅಲ್ಲ, ಅದೇ ಪ್ರೀತಿಯನ್ನು ಹೇಳದೆ-ಕೇಳದೆ ಅರ್ಥ ಮಾಡಿಕೊಳ್ಳಬಹುದು ಎಂದರೆ ನಮ್ಮದೊಂದು ಪ್ರೀತಿಗೆ ಉದಾಹರಣೆ. ಇಲ್ಲಿ ಸಂಗಾತಿ ಸ್ಥಾನಕ್ಕೆ ಸ್ನೇಹಿತೆಯೇ ಬಂದಿದ್ದಕ್ಕೆ ಸಾಕ್ಷಿಯೇ ಇಲ್ಲ. ಇದ್ಯಾವುದು ನಾವು ಅಂದುಕೊಂಡಿದಲ್ಲ. ಅದಾಗಿ ಅದೇ ಆಗಿದ್ದು ಎಂದರೆ ತಪ್ಪಾಗುವುದಿಲ್ಲ. ಹೀಗೆ ಎಲ್ಲಾ ಇಲ್ಲಗಳ ನಡುವೆ ಆದಂತಹ ಪ್ರೀತಿಯ ಹುಟ್ಟು ಆರಂಭದಲ್ಲಿ ನಮಗೂ ಸಹ ತಿಳಿದಿರಲೇ ಇಲ್ಲ.
ಸ್ನೇಹಿತೆಯೇ ಸಂಗಾತಿಯಾದರೆ ಅಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವ, ಅದನ್ನು ಬಣ್ಣ ಬಣ್ಣವಾಗಿ ಹೇಳುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿಯೇ ಮೊದಲೇ ಹೇಳಿದ್ದು ಪ್ರೀತಿಯಲ್ಲಿ ಪ್ರಪೋಸ್ ಮಾಡಲೇ ಬೇಕೆಂಬ ನಿಯಮವಿದ್ದರೆ ನಮ್ಮದು ಪ್ರೀತಿಯೇ ಅಲ್ಲ ಅಂತ. ನಾವಿಬ್ಬರು ಎಂದು ಪ್ರೀತಿ ನಿವೇದನೆಯನ್ನು ಮಾಡಲಿಲ್ಲ. ಹಾಗೇ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ಇಲ್ಲವೇ ನಿರಾಕರಿಸುವ ಸಂದರ್ಭವು ಎದುರಾಗಲೇ ಇಲ್ಲ. ಸ್ನೇಹದ ಮುಂದಿನ ಹಂತವಾಗಿ ಜೀವನದುದ್ದಕ್ಕೂ ಸಂಗಾತಿಗಳಾಗಿ ಸಾಗುವ ಆಲಿಖಿತ ಮತ್ತು ಆನಿರ್ಭಂದಿತ ಒಪ್ಪಂದವೊಂದಕ್ಕೆ ಸುಮ್ಮನೆ ಸಹಿಯೊಂದನ್ನು ಹಾಕಿ ಮುಂದೆ ಸಾಗುತ್ತಿದ್ದೇವೆ ಅಷ್ಷೇ.
ಸ್ನೇಹವು ಪ್ರೀತಿಗೆ ತಿರುಗುವ ಈ ಒಂದು ಪರ್ವದಲ್ಲಿ ಅರ್ಥವಾಗಿದ್ದು, ಪ್ರೀತಿಗೂ ಹಣ್ಣಿಗೂ ಯಾವುದೇ ವ್ಯತಾಸವಿಲ್ಲ ಎಂಬುದು. ಒಂದು ಕಾಯಿ ಮರದಲ್ಲಿಯೇ ಕೊನೆವರೆಗೂ ಉಳಿದು, ಅಲ್ಲೇ ಕಳೆತು ಹಣ್ಣಾದರೆ ಮಾತ್ರ ಅದರ ರುಚಿ ಜಾಸ್ತಿ ಮತ್ತು ಆರೋಗ್ಯಕ್ಕೂ ಉತ್ತಮ. ಆದರೆ ಕೆಲವು ಬಾರಿ ಮರದಲ್ಲಿ ಹಣ್ಣಾಗಿದ್ದು ದೂರದಿಂದ ನೋಡಲು ಅಷ್ಟು ಆಕರ್ಷಕವಾಗಿ ಕಾಣವುದಿಲ್ಲ. ಗಾಳಿ-ಧೂಳಿಗೆ ಸಿಲುಕಿ ಹೆಚ್ಚೇನು ಬಣ್ಣವಿರದೆ ನೇತಾಡುತ್ತಿರುತ್ತದೆ. ಆದರೆ ಅದನ್ನು ತಿನ್ನುವವರು ಕೆಲವರು ಮಾತ್ರ, ಆದರೆ ತಿಂದವರು ರುಚಿಯನ್ನು ಎಂದಿಗೂ ಮರೆಯುವುದಿಲ್ಲ. ಹೀಗೆ ಪ್ರೀತಿಯೂ ಸಹ. ಸ್ನೇಹಿತರಾಗಿ ವರ್ಷಗಳ ಕಾಲ ಪ್ರೀತಿಯ ಬಯಕೆಯೇ ಇಲ್ಲದೇ ಜೊತೆಗೆ ಇದ್ದು, ಒಬ್ಬರನ್ನೊಬ್ಬರು ಸರಿಯಾಗಿ ಅರಿತು ಕೊಂಡು, ಕಷ್ಟ-ನಷ್ಟಗಳಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದರೇ ಮಾತ್ರ ಪ್ರೇಮದ ಬಾಂಧವ್ಯದಲ್ಲಿಯೂ ಯಾವುದೇ ಕೊರತೆಯಾಗದಂತೆ ಬಾಳಲು ಸಾಧ್ಯ.
ಕೇಳಿಕೊಳ್ಳುವುದೋ, ಬೇಡಿಕೊಳ್ಳುವುದೋ, ನೀಡುವುದೋ ಪ್ರೀತಿಯಲ್ಲ. ನಮಗೆ ತಿಳಿಯದೇ ಶುರುವಾಗುವುದು, ಹೇಳದೆಯೇ ಅನುಭವಕ್ಕೆ ಬರುವುದು. ಹುಡುಕದೆಯೇ ನಮಗೆ ಸಿಕ್ಕರೆ ಮಾತ್ರ ಪ್ರೀತಿ ಕೊನೆವರೆಗೂ ಉಳಿದು ನಮ್ಮನ್ನೇ ಆಳುವ ಹಂತಕ್ಕೆ ಬರುತ್ತದೆ. ಇಲ್ಲವಾದರೆ ಮರದಿಂದ ಕಿತ್ತು ಕೆಮಿಕಲ್ ಹಾಕಿ ಮಾಡಿದ ಹಣ್ಣಿನಂತಾಗುತ್ತದೆ, ಪ್ರೀತಿ ಯಾವತ್ತು ‘ಮಾಗಿದ ಹಣ್ಣಾಗಬೇಕು ಹೊರತು ಮಾಡಿದ ಹಣ್ಣಾಗಬಾರದು’.
ಇಂದು ನೋಡಿ, ನಾಳೆ ಚಂದದ ಮಾತಾಡಿ, ನಾಡಿದ್ದು ನಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಎಂಬುವವರ ನಡುವೆ ಪ್ರೀತಿ ಹುಟ್ಟಿರುವ ಸುಳಿವು ಸಿಗದೆ ಸಾಗಿ ಬಂದ ಹಾದಿ ತೀರಾ ವಿಚಿತ್ರ. ಒಬ್ಬರಿಗೂಬ್ಬರು ವಿರುದ್ಧ ದಿಕ್ಕಿನ ಮನಸ್ಥಿತಿ – ಹಾವಭಾವಗಳು ಎಂದಾದರು ಒಂದಾಗಬಹುದೇ ಎಂಬ ಆಲೋಚನೆಯೂ ಹುಟ್ಟುಲು ಸಾಧ್ಯವಾಗದ ಸಂಬಂಧದಲ್ಲಿ ಪ್ರೀತಿ ತನ್ನಿಂದ ತಾನೆ ಬೆಳೆದು, ಜೀವನದ ಹಾದಿಯನ್ನೆ ಹೊಸದಾಗಿ ಸೃಷ್ಠಿಸಿ, ನಾಳೆಯ ಬಗೆಗಿನ ದೃಷ್ಠಿಕೋನವನ್ನು ಬದಲಿಸಿದ್ದು ವಿಸ್ಮಯವೇ ಸರಿ.
ಇಷ್ಟಾಗಿದ್ದು ಆಕೆಯಿಂದಲೇ. ಸುಮ್ಮನೆ ಆಕೆಗೆ ಕೃತಜ್ಞತೆಯನ್ನು ತಿಳಿಸುವುದು ಸರಿಯಲ್ಲ, ಇಡೀ ಜೀವನವೇ ಆಕೆ ಕೈಗಿತ್ತು ಆಡಿಸಿದಂತೆ ಆಡುವ ಗೊಂಬೆಯಾದರೂ ಚಿಂತೆಯಿಲ್ಲ, ಆಕೆಯ ನಗುವಿಗೆ ಕಾರಣವಾಗಿ ಉಳಿದರೆ ಧನ್ಯ. ಹೇಳುವುದು ಒಂದೇ ಮಾತು, ಅವಳಿಲ್ಲದ ನಾಳೆಯಲ್ಲಿ ನಾನೂ ಇಲ್ಲ.
ಇದು ಬಿಟ್ಟು ಸಾಗಿದ ಬಂದ ಹಾದಿಯಲ್ಲಿ ಅಂದಿಗೂ ಇಂದಿಗೂ ಬಹಳಷ್ಟೇನು ಬದಲಾವಣೆಗಳಿಲ್ಲವಾದರೂ, ಅಂದೂ ಹೇಳಿದ ಮಾತಿಗೆ ಇದ್ದಂತ ಬೆಲೆ ಇಂದು ಜಾಸ್ತಿ ಆಗಿದೆ. ಅದೇ ಹಾದಿಯಲ್ಲಿ ಸಾಗಿದ್ದಕ್ಕೆ ಫಲವು ದೊರಕಿದೆ. ಸಾಧ್ಯವಾಗದ ಸಾಧ್ಯತೆಯೊಂದು ನಮ್ಮ ಕಣ್ಣ ಮುಂದೆಯೇ ಸಾಕ್ಷಿಯಾಗಿ ನಿಂತಿದೆ. ಸ್ನೇಹಿತೆ ಸಂಗಾತಿಯಾಗಿದ್ದಕ್ಕೆ ಸಾಕ್ಷಿ ಸಿಕ್ಕಿದೆಯೋ ಅಥವಾ ಇಲ್ಲವೂ ಆದರೆ ನಮ್ಮ ಸ್ನೇಹವನ್ನು ಇನ್ನೊಂದು ಹಂತಕ್ಕೆ ತಂದು ನಿಲ್ಲಿಸಿದಕ್ಕೆ ಸಾರ್ಥಕತೆ ಇದೆ.
ಏನು ಇಲ್ಲದವನಿಗೆ ಪ್ರೀತಿ ಎಲ್ಲಾ ನೀಡಿದೆ, ಸ್ನೇಹಕ್ಕೂ ಮೀಗಿಲಾಗಿ ಪ್ರೇಮಕ್ಕೆ ಶಕ್ತಿ ಇದೆ ಎಂಬುದು ಮಾತಿನಲ್ಲಿ ಅಲ್ಲ, ಕೃತಿಯಾಗಿ ಜೀವನದಲ್ಲಿ ಪಾಠವನ್ನು ಕಲಿಸಿದೆ. ಇಲ್ಲಿ ಯಾರಿಗೂ ಕಾರಣ ನೀಡಬೇಕಿಲ್ಲ, ಯಾರಿಗೂ ಅರ್ಥ ಮಾಡಿಸಬೇಕಾಗಿಲ್ಲ. ಪ್ರೀತಿ ನಾವೇ ಕಟ್ಟಿದ ಜೀವನದ ಜೋಪಡಿಯಲ್ಲಿ ಜೊತೆಯಾಗಿ ನೆಮ್ಮದಿಯ ನಿದ್ದೆ ಜಾರುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇನ್ಯಾರಿಗೂ ಉತ್ತರಿಸುವ ಅಗತ್ಯವು ಇಲಿಲ್ಲ. ನಮ್ಮ ಪ್ರೀತಿಯ ಫಲಕ್ಕೆ ಸ್ನೇಹವೇ ಮರವಾಗಿದೆ ಎಂದು ಹೇಳಲು ಯಾವುದೇ ಸಂಕೋಚವು ನಮಗಿಲ್ಲ.
ಹೀಗೆ ತಿಳಿಯದೇ ಆರಂಭವಾದ ಪ್ರೀತಿಗೆ ಇನ್ನೇನು ಪ್ರಮೋಷನ್ ಬೇರೆ ಹತ್ತಿರದಲ್ಲಿಯೇ ಇದೆ. ಸ್ನೇಹಿತೆಗೆ ಸಂಗಾತಿಯ ಪಟ್ಟಾಭಿಷೇಕಕ್ಕೆ ತಯಾರಿ ಭರ್ಜರಿಯಾಗಿಯೇ ಜಾರಿಯಲ್ಲಿದೆ, ಬಾಳ ಸಂಗಾತಿಯಾಗುವ ನನ್ನಾಕೆಗೆ ನಾ ಎಂದಿಗೂ ಚಿರಋಣಿ.
ಶ್ರೀನಿಧಿ ಶ್ರೀಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.