ಆಗುಂಬೆ ಘಾಟಿ ರಸ್ತೆಯಲ್ಲೊಂದು ‘ಜಾಲಿ ರೈಡ್
Team Udayavani, Jun 20, 2019, 8:06 PM IST
ಆಗುಂಬೆ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಈ ಘಾಟಿಯಲ್ಲಿ ಪ್ರಯಾಣಿಸುವುದೇ ಒಂದು ರೋಚಕ ಅನುಭವ. ನಮ್ಮ ರಾಜ್ಯದಲ್ಲಿರುವ ಘಾಟಿಗಳಲ್ಲಿಯೇ ಆಗುಂಬೆ ಘಾಟಿ ರಸ್ತೆ ಕಿರಿದು ಮತ್ತು ಕಡಿದಾದ ಮಾರ್ಗವನ್ನು ಹೊಂದಿದೆ. ಇನ್ನು ಆಗುಂಬೆ ಘಾಟಿ ರಸ್ತೆ ಮಧ್ಯದಲ್ಲಿ ಸಿಗುವ ‘ಸೂರ್ಯಾಸ್ತಮಾನ ಕೇಂದ್ರ’ದಲ್ಲಿ ನಿಂತು ಭಾಸ್ಕರ ಪಡುಗಡಲಲ್ಲಿ ನಿಧಾನವಾಗಿ ಮುಳುಗುವುದನ್ನು ಕಣ್ತುಂಬಿಕೊಳ್ಳುವ ಆನಂದವೇ ಬೇರೆ. ಕಳೆದ ಮಳೆಗಾಲದಲ್ಲಿ ಆಗುಂಬೆ ಘಾಟಿಯ ರಸ್ತೆ ಭಾಗ ಕುಸಿದು ಈ ಭಾಗದ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಇದೀಗ ಆಗುಂಬೆ ರಸ್ತೆ ದುರಸ್ತಿಗೊಂಡು ಈ ಬಾರಿಯ ಮಳೆಗಾಲವನ್ನು ಎದುರಿಸಲು ಸಿದ್ಧವಾಗಿದೆ. ಹಾಗಾದರೆ ಬನ್ನಿ ಆಗುಂಬೆ ಘಾಟಿಯ ಹೊಸ ರಸ್ತೆಯಲ್ಲೊಂದು ‘ರೈಡ್’ ಹೋಗುತ್ತಾ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯೋಣ.